Trending Post : ‘ಎ ಪ್ಯಾರ್ ಮೊಹಬ್ಬತ್ ಕೀ ಬಾತ್‘ ಅದಕ್ಕೆ ತುರ್ತು ರಜೆ ಬೇಕೆಂದ ಕ್ಲರ್ಕ್

Leave Letter : ಇಲ್ಲಿ ಎರಡು ರಜಾ ವಿನಂತಿ ಪತ್ರಗಳಿಗೆ. ಎರಡೂ ಪ್ರಾಮಾಣಿಕವೇ. ಆದರೆ ನೀವು ಹೇಗೆ ಇವುಗಳನ್ನು ಗ್ರಹಿಸುತ್ತೀರಿ? ಓದಿ ನೋಡಿ.

Trending Post : ‘ಎ ಪ್ಯಾರ್ ಮೊಹಬ್ಬತ್ ಕೀ ಬಾತ್‘ ಅದಕ್ಕೆ ತುರ್ತು ರಜೆ ಬೇಕೆಂದ ಕ್ಲರ್ಕ್
ಶಂಸಾದ್ ಬರೆದ ರಜಾಪತ್ರ
Follow us
TV9 Web
| Updated By: ಶ್ರೀದೇವಿ ಕಳಸದ

Updated on: Aug 05, 2022 | 4:38 PM

Trending : ಕಾನ್ಪುರದ ಸರ್ಕಾರಿ ಕಚೇರಿಯಲ್ಲಿ ಕೆಲಸ ಮಾಡುತ್ತಿರುವ ಕ್ಲರ್ಕ್​ ತನ್ನ ಮೇಲಧಿಕಾರಿಗೆ ಬರೆದ ಪತ್ರ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕ್ಲರ್ಕ್​ನ ಪ್ರಾಮಾಣಿಕತನಕ್ಕೆ ಅಧಿಕಾರಿಯು ಮನಸೋತು ರಜೆ ನೀಡಿದ್ದನ್ನು ಇಂಡಿಯಾ ಟುಡೇ ವರದಿ ಮಾಡಿದೆ.  ಪ್ರಾಮಾಣಿಕತೆ ಇದ್ದಲ್ಲಿ ದಿಟ್ಟತೆ ಇರುತ್ತದೆ ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿ. ಕ್ಲರ್ಕ್ ಶಂಸಾದ್ ಅಹಮ್ಮದ್ ಪ್ರೇಮ್​ ನಗರ ಬ್ಲಾಕ್​ ಡೆವಲಪ್​ಮೆಂಟ್​ ಆಫೀಸರ್​ ಅವರಿಗೆ ತನಗೆ ತುರ್ತಾಗಿ ಎರಡು ದಿನಗಳ ರಜೆ ಬೇಕೆಂದು ಪತ್ರ ಬರೆದಿದ್ದಾರೆ. ಅವರು ರಜೆಯ ಕಾರಣವನ್ನು ವಿವರಿಸಿದ ರೀತಿಯೇ ಅತ್ಯಂತ ಹೃದಯಸ್ಪರ್ಶಿಯಾಗಿದೆ. ಅಧಿಕಾರಿ ರಜೆ ಕೊಡದೇ ಬೇರೆ ದಾರಿಯೇ ಇರಲಿಲ್ಲ. ಏನಿತ್ತು ಅಂಥ ಕಾರಣ ಅದರಲ್ಲಿ?

‘ತನ್ನ ಪತ್ನಿ ಜಗಳವಾಡಿಕೊಂಡು ಮಕ್ಕಳೊಂದಿಗೆ ತವರಿಗೆ ತೆರಳಿದ್ದಾಳೆ. ಇದು ಪ್ರೀತಿ ಪ್ರೇಮಕ್ಕೆ ಸಂಬಂಧಿಸಿದ ವಿಷಯ. ನನಗೆ ಬಹಳ ನೋವಾಗಿದೆ. ಪರಸ್ಪರ ಮಾತನಾಡಿಕೊಂಡು ಅವಳನ್ನು ಮನವೊಲಿಸಿ ವಾಪಾಸು ಕರೆತರಬೇಕಿದೆ. ಹಾಗಾಗಿ ನನಗೆ ಎರಡು ದಿನಗಳ ರಜೆಯನ್ನು ಮಂಜೂರು ಮಾಡಿ’ ಎಂದು ರಜಾಪತ್ರದಲ್ಲಿ ಶಂಸಾದ್ ತಮ್ಮ ಮೇಲಧಿಕಾರಿಯನ್ನು ವಿನಂತಿಸಿಕೊಂಡಿದ್ದಾರೆ.

ಇದನ್ನೂ ಓದಿ
Image
Trending : ಒಂದು ಸೇತುವೆ ನಿರ್ಮಿಸಲು ಸರ್ಕಾರಕ್ಕೆ ಪುರುಸೊತ್ತಿಲ್ಲ ಅಲ್ಲವೆ?
Image
Trending : ಐಶ್ವರ್ಯ ಆಮ್​, ಸಚಿನ್ ಆಮ್​ ನಂತರ ಸುಷ್ಮಿತಾ ಆಮ್​ ಮತ್ತು ಅಮಿತ್ ಷಾ ಆಮ್
Image
Trending : ಕದ್ದು ತಿನ್ನೋ ರುಚಿ ನಿಮಗಿಂತ ಮೊದಲು ನಮಗೇ ಗೊತ್ತು!
Image
Trending: ಮದ್ಯ ಸೇವನೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ ಅಗ್ರಸ್ಥಾನ, ಜಿಲ್ಲೆಯಲ್ಲಿ ಮದ್ಯದ ಅಂಗಡಿ ಸಂಖ್ಯೆಯಲ್ಲೂ ಹೆಚ್ಚಳ

ಶಂಸಾದರ ಮನವಿ ಸೂಕ್ಷ್ಮತೆಯುಳ್ಳ ಅಧಿಕಾರಿಗೆ ತಲುಪಿದ್ದು ಅದೃಷ್ಟವೆಂದೇ ಹೇಳಬೇಕು. ಅವರು ತಕ್ಷಣವೇ ರಜೆ ನೀಡಿದ್ದಾರೆ. ಇನ್ನು ಶಂಸಾದ ಪ್ಯಾರ್ ಮೊಹಬ್ಬತ್​ ಕೀ ಬಾತ್​ ಅನ್ನು ಸಮಾಧಾನದಿಂದ ಪರಿಹರಿಸಿಕೊಳ್ಳಲು ಹೆಂಡತಿಯ ತವರಿಗೆ ತೆರಳಬಹುದೇನೋ.

ಈ ಪತ್ರ ವೈರಲ್ ಆಗುತ್ತಿದ್ದಂತೆ ರಜೆಯ ಅರ್ಜಿ ಕುರಿತು ಅನೇಕರು ತಮ್ಮ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಸಾಹಿಲ್ ಎಂಬುವವರು, ‘ನನ್ನ ಜ್ಯೂನಿಯರ್ಸ್​ ಬಹಳ ಸ್ವೀಟ್. ಸಂದರ್ಶನಕ್ಕೆ ಹಾಜರಾಗಬೇಕೆಂದು ರಜೆ ಕೇಳುತ್ತಿದ್ದಾರೆ’ ಎಂದು ಕ್ಯಾಪ್ಷನ್​ ಹಾಕಿ ಟ್ವಿಟರ್ ಪೋಸ್ಟ್ ಮಾಡಿದ್ದಾರೆ. ಅರ್ಜಿ ಹೀಗಿದೆ, ‘ಆತ್ಮೀಯ ಸರ್, ಶುಭೋದಯ. ಇನ್ನೊಂದು ಕಂಪನಿಯಲ್ಲಿ ಸಂದರ್ಶನಕ್ಕೆ ಹಾಜರಾಗಲು ನನಗೆ ಇಂದು ರಜೆಯ ಅಗತ್ಯವಿದೆ. ಇ-ಮೇಲ್ ಮೂಲಕ ನಿಮಗೆ ಪತ್ರ ಕಳಿಸುತ್ತಿದ್ದೇನೆ. ದಯವಿಟ್ಟು ರಜೆಯನ್ನು ಮಂಜೂರು ಮಾಡಿ ಎಂದು ವಿನಂತಿಸಿಕೊಳ್ಳುತ್ತೇನೆ.’

ಇನ್ನಷ್ಟು ಇಂಥ ಟ್ರೆಂಡಿಂಗ್​ ನ್ಯೂಸ್​ ಓದು ಇಲ್ಲಿ ಕ್ಲಿಕ್ ಮಾಡಿ 

Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು