Trending : ಕದ್ದು ತಿನ್ನೋ ರುಚಿ ನಿಮಗಿಂತ ಮೊದಲು ನಮಗೇ ಗೊತ್ತು!

Gorilla : ಅಣ್ಣಗೋರಿಲ್ಲಾ ಮಲಗಿರುವಾಗ ತಮ್ಮಗೋರಿಲ್ಲಾ ಅದರ ತಿಂಡಿಯನ್ನು ಕದಿಯಲು ಪ್ರಯತ್ನಿಸುತ್ತಿದೆ. ಮುಂದೆ ಏನಾಗುತ್ತದೆ ಎನ್ನುವುದನ್ನು ವೀಕ್ಷಿಸಿ.

Trending : ಕದ್ದು ತಿನ್ನೋ ರುಚಿ ನಿಮಗಿಂತ ಮೊದಲು ನಮಗೇ ಗೊತ್ತು!
ನಂಗೂ ತಿಂಡಿ ಬೇಕು
Follow us
TV9 Web
| Updated By: ಶ್ರೀದೇವಿ ಕಳಸದ

Updated on:Aug 04, 2022 | 10:26 AM

Trending :  ಅಣ್ಣ ತಮ್ಮ ಅಕ್ಕ ತಂಗಿಯೊಂದಿಗೆ ಚಿಕ್ಕಂದಿನಲ್ಲಿ ತಿಂಡಿಯನ್ನು ಹಂಚಿಕೊಂಡು ತಿನ್ನುವುದಕ್ಕಿಂತ ಕಿಡಿಗೇಡಿತನದಿಂದ ಕದ್ದು ತಿನ್ನುವುದೇ ಹೆಚ್ಚು ರುಚಿ ಎನ್ನಿಸಿರುತ್ತದೆ ಅಲ್ಲವೆ? ಅದೊಂದು ಆಟ. ಸಣ್ಣಪುಟ್ಟ ಆಸೆ, ಖುಷಿ. ಆದರೆ ನಾವು ಪ್ರಾಣಿವರ್ಗದ ಮೂಲದಿಂದಲೇ ಬಂದಿರುವುದು ಎನ್ನುವುದನ್ನು ಮರೆಯಬಾರದು. ಆಟ, ತಂತ್ರ ಎನ್ನುವುದು ಮನುಷ್ಯನಿಂದಲೇ ಸೃಷ್ಟಿಯಾಗಿದ್ದಲ್ಲ. ಪ್ರಕೃತಿಯಲ್ಲಿಯೇ, ಪ್ರಾಣಿ ಮತ್ತು ಜೀವಿಗಳಲ್ಲಿ ಮೂಲದಲ್ಲಿಯೇ ಇರುವಂಥದ್ದು. ಹಾಗಾಗಿ ತಂತ್ರ ಎನ್ನುವುದು ಪ್ರತೀ ಜೀವಿಯ ಬದುಕಿನಲ್ಲಿ ಸಹಜವಾಗಿ ಹಾಸುಹೊಕ್ಕಿರುವಂಥದ್ದು. ಆಯಾ ವಯಸ್ಸಿನ ನಿರೀಕ್ಷೆಗೆ ತಕ್ಕಂತೆ ಇದು ಒಳಗೊಳ್ಳುತ್ತಾ ಹೋಗುತ್ತದೆ. ಮನುಷ್ಯ ಬುದ್ಧಿಯುಳ್ಳ ಜೀವಿಯಾಗಿದ್ದರಿಂದ ಇದಕ್ಕೆ ನಾನಾ ಅರ್ಥಗಳು ಹೊಮ್ಮುತ್ತವೆ ಎನ್ನುವುದು ಬೇರೆ ಮಾತು. ಈಗ ಈ ವಿಡಿಯೋವನ್ನೇ ಗಮನಿಸಿ. ಅಣ್ಣಗೋರಿಲ್ಲಾ ತನ್ನ ಪಾಡಿಗೆ ತಾನು ಮಲಗಿದೆ. ತಮ್ಮಗೋರಿಲ್ಲಾಗೆ ಅದು ತಂದಿಟ್ಟುಕೊಂಡಿರುವ ತಿಂಡಿಯ ಮೇಲೆ ಕಣ್ಣುಬಿದ್ದಿದೆ. ಅದನ್ನು ಕೇಳಿದರೆ ಅಣ್ಣ ಕೊಡಬಹುದಾ? ಗೊತ್ತಿಲ್ಲ. ಆದರೆ ತನಗದು ಬೇಕು. ತಮ್ಮಗೋರಿಲ್ಲಾ ಈ ಸಮಯವನ್ನೇ ಸಾಧಿಸಿಕೊಂಡು ತಿಂಡಿಯನ್ನು ಕದಿಯಲು ಪ್ರಯತ್ನಿಸುತ್ತಿದೆ.

3.97 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್​ ಹೊಂದಿದ ಈ ಇನ್​ಸ್ಟಾಗ್ರಾಂ ಪುಟದಲ್ಲಿ ಈ ವಿಡಿಯೋ ಹಂಚಿಕೆಯಾಗಿದೆ. ಗೋರಿಲ್ಲಾಗಳು ಮತ್ತು ಮನುಷ್ಯರ ನಡೆವಳಿಕೆಗಳ ಮಧ್ಯೆ ಅಂಥಾ ವ್ಯತ್ಯಾಸವೇನಿಲ್ಲ ಎನ್ನುವುದನ್ನು ಇಲ್ಲಿ ಕಾಣಬಹುದು. 7,600 ಹೆಚ್ಚೂ ಲೈಕ್​ಗಳನ್ನು ಇದು ಪಡೆದುಕೊಂಡಿದೆ.

ಇದನ್ನೂ ಓದಿ
Image
ಆಗಾಗ ಅರುಂಧತಿ : ನನ್ನ ಶ್ರೀಮಂತ ತಂದೆತಾಯಿಯ ನೆರಳು ಸೋಕದಷ್ಟು ಸ್ವತಂತ್ರಳಾಬೇಕು
Image
ಆಗಾಗ ಅರುಂಧತಿ: ಕಟಕರೊಟ್ಟಿ ಬೆಳ್ಳುಳ್ಳಿ ಖಾರ ಮತ್ತು ಬ್ಲ್ಯಾಕ್​ ಟೀ ಹಂಬಲ
Image
ಆಗಾಗ ಅರುಂಧತಿ: ಮಗುವನ್ನು ಚಿವುಟುವವನು ಅವನೇ, ತೊಟ್ಟಿಲನ್ನು ತೂಗುವವನೂ ಅವನೇ
Image
ಆಗಾಗ ಅರುಂಧತಿ: ಫೋನ್​ ಸಂಭಾಷಣೆಗೆ ತನ್ನ ಹೆಂಡತಿ ಸಾಕ್ಷಿಯಾಗಿದ್ದಾಳೆ ಎಂದು ಆ ಲಂಪಟನಿಗೆ ತಿಳಿದಿಲ್ಲ!

ಈ ವಿಡಿಯೋದಲ್ಲಿ ಒಬ್ಬರು, ‘ಇವರು ನಮ್ಮಂತೆಯೇ ಇದ್ದಾರೆ’ ಎಂದಿದ್ಧಾರೆ.

ಪಾಪ, ಮನುಷ್ಯನ ಸ್ವಭಾವ ಎಲ್ಲವೂ ತಾನೇ ತನ್ನಿಂದಲೇ ತನಗಾಗಿಯೇ ಎಂದುಕೊಳ್ಳುವುದು!

Published On - 10:11 am, Thu, 4 August 22

ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ