Har Ghar Tiranga: ಸ್ಥಳೀಯ ಅಂಚೆ ಕಚೇರಿಗಳಲ್ಲಿ ಕಡಿಮೆ ಬೆಲೆಗೆ ರಾಷ್ಟ್ರಧ್ವಜ ಮಾರಾಟ; ಖರೀದಿಸುವ ವಿಧಾನ ಇಲ್ಲಿದೆ

ಭಾರತದ ಸ್ವಾತಂತ್ರ್ಯ ದಿನಾಚರಣೆ ಅಮೃತಮಹೋತ್ಸವದ ಪ್ರಯುಕ್ತ ಅಂಚೆ ಕಚೇರಿಗಳು ಹರ್ ಘರ್ ತಿರಂಗಾ ಅಭಿಯಾನದ ಮೂಲಕ ದೇಶದಾದ್ಯಂತ ರಾಷ್ಟ್ರಧ್ವಜಗಳನ್ನು ಮಾರಾಟ ಮಾಡುತ್ತಿವೆ. ಧ್ವಜ ಖರೀದಿಸುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ.

Har Ghar Tiranga: ಸ್ಥಳೀಯ ಅಂಚೆ ಕಚೇರಿಗಳಲ್ಲಿ ಕಡಿಮೆ ಬೆಲೆಗೆ ರಾಷ್ಟ್ರಧ್ವಜ ಮಾರಾಟ; ಖರೀದಿಸುವ ವಿಧಾನ ಇಲ್ಲಿದೆ
ಸಾಂಕೇತಿಕ ಚಿತ್ರ
Follow us
TV9 Web
| Updated By: Rakesh Nayak Manchi

Updated on: Aug 04, 2022 | 11:05 AM

ಭಾರತದ ಸ್ವಾತಂತ್ರ್ಯ ದಿನಾಚರಣೆ ಅಮೃತಮಹೋತ್ಸವದ ಪ್ರಯುಕ್ತ ಅಂಚೆ ಕಚೇರಿಗಳು ಹರ್ ಘರ್ ತಿರಂಗಾ ಅಭಿಯಾನದ ಮೂಲಕ ದೇಶದಾದ್ಯಂತ ರಾಷ್ಟ್ರಧ್ವಜಗಳನ್ನು ಮಾರಾಟ ಮಾಡುತ್ತಿವೆ. ಅಂಚೆ ಇಲಾಖೆಯು ಇ-ಪೋಸ್ಟ್ ಆಫೀಸ್ ಪೋರ್ಟಲ್ www.epostoffice.gov.in ಮೂಲಕ ಧ್ವಜಗಳ ಆನ್‌ಲೈನ್ ಮಾರಾಟವನ್ನು ಈಗಾಗಲೇ ಅರಂಭಿಸಿದ್ದು, ಕನಿಷ್ಠ ಸಮಯದಲ್ಲಿ ಧ್ವಜಗಳನ್ನು ತಲುಪಿಸಲು ಇಲಾಖೆಯು ಅಂಚೆ ಕಚೇರಿಗಳಿಗೆ ಆದೇಶಿಸಿದೆ. ನಾಗರಿಕರ ಮನೆಗಳಲ್ಲಿ ಹಗಲು ರಾತ್ರಿ ಭಾರತೀಯ ಧ್ವಜವನ್ನು ಹಾರಿಸಲು ಸರ್ಕಾರವು ಭಾರತದ ಧ್ವಜ ಸಂಹಿತೆಗೆ ತಿದ್ದುಪಡಿ ತಂದಿದೆ. ಹೀಗಿದ್ದಾಗ ನಿಮ್ಮ ಮನೆಗಳಲ್ಲಿ ಧ್ವಜವನ್ನು ಹಾರಿಸಲು ಹೆಚ್ಚಿನ ಮೊತ್ತವನ್ನು ಪಾವತಿಸಿ ಧ್ವಜವನ್ನು ಖರೀದಿಸುವ ಅವಶ್ಯಕತೆ ಇಲ್ಲ. ಅಂಚೆ ಮೂಲಕ ಕೇವಲ 25 ರೂಪಾಯಿಗಳಲ್ಲಿ ಖರೀದಿಸಬಹುದು. ಖರೀದಿ ಹಂತಗಳು ಈ ಕೆಳಗಿನಂತಿವೆ.

ಭಾರತೀಯ ಧ್ವಜವನ್ನು ಹೇಗೆ ಖರೀದಿಸುವುದು?

ಅಂಚೆ ಇಲಾಖೆಯು ಇತ್ತೀಚೆಗೆ ಇ-ಪೋಸ್ಟ್ ಆಫೀಸ್ ಪೋರ್ಟಲ್ www.epostoffice.gov.in ಮೂಲಕ ರಾಷ್ಟ್ರೀಯ ಧ್ವಜಗಳ ಆನ್‌ಲೈನ್ ಮಾರಾಟವನ್ನು ಪ್ರಕಟಿಸಿದೆ. ಈ ವೆಬ್​ಸೈಟ್​ಗೆ ಭೇಟಿ ಕೊಡಬೇಕು. ePostoffice ಪೋರ್ಟಲ್ ಮುಖಪುಟದಲ್ಲಿ ಭಾರತದ ರಾಷ್ಟ್ರಧ್ವಜದ ಚಿತ್ರದ ಮೇಲೆ ಕ್ಲಿಕ್ ಮಾಡಿ. ನಂತರ ವಿತರಣೆಯ ವಿಳಾಸ, ಧ್ವಜಗಳ ಪ್ರಮಾಣ (ಗ್ರಾಹಕರಿಗೆ ಆರಂಭಿಕವಾಗಿ ಗರಿಷ್ಠ 5 ಧ್ವಜಗಳು) ಮತ್ತು ನಿಮ್ಮ ಮೊಬೈಲ್ ಸಂಖ್ಯೆಯನ್ನು ನಿರ್ದಿಷ್ಟಪಡಿಸಿ. ಖರೀದಿ ಪ್ರಕ್ರಿಯೆಯಲ್ಲಿ ಇತ್ತೀಚಿನ ಧ್ವಜದ ನಿಯಮಗಳನ್ನು ಅನುಸರಿಸಲು ನಿಮ್ಮನ್ನು ಕೇಳಲಾಗುತ್ತದೆ. ಆರ್ಡರ್ ಅನ್ನು ಪೂರ್ಣಗೊಳಿಸಲು ಪಾವತಿ ಮಾಡಬೇಕು.

ಧ್ವಜದ ಬೆಲೆ ಮತ್ತು ಗಾತ್ರ

ಭಾರತೀಯ ಧ್ವಜದ ಗಾತ್ರವು 20 x 30 ಇಂಚುಗಳಷ್ಟು ಗಾತ್ರ ಇರುತ್ತದೆ. ತ್ರಿವರ್ಣ ಧ್ವಜದ ಮಾರಾಟ ಬೆಲೆ ಪ್ರತಿ ಧ್ವಜಕ್ಕೆ 25 ರೂಪಾಯಿ ಆಗಿದೆ. ಗಮನಿಸಬೇಕಾದ ಅಂಶವೆಂದರೆ ಧ್ವಜದ ಮೇಲೆ ಜಿಎಸ್‌ಟಿ ಇರುವುದಿಲ್ಲ. ಒಂದೊಮ್ಮೆ ನೀವು ಆರ್ಡರ್ ಮಾಡಿದ ನಂತರ ಅದನ್ನು ರದ್ದು ಮಾಡುವ ಅವಕಾಶ ಇರುವುದಿಲ್ಲ. ನೀವು ಆರ್ಡರ್ ಮಾಡಿದ ನಂತರ ಹತ್ತಿರದ ಅಂಚೆ ಕಚೇರಿಯಿಂದ ಉಚಿತವಾಗಿ ನೀಡಲಾಗುತ್ತದೆ.

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ