ಹೆಲ್ಮೆಟ್ ಧರಿಸದೇ ಸ್ಕೂಟರ್ ಓಡಿಸಿದ ವಧು; ಪೋಲಿಸರಿಂದ ಸಿಕ್ತು ಬಂಪರ್ ಬಹುಮಾನ
ಮದುವೆಯ ದಿನ ಯುವತಿಯೊಬ್ಬಳು ಹೆಲ್ಮೆಟ್ ಧರಿಸದೇ ಸ್ಕೂಟರ್ ಓಡಿಸಿ ಸಖತ್ ಆಗಿ ರೀಲ್ಸ್ ಮಾಡಿ ಸೋಶಿಯಲ್ ಮೀಡಿಯಾಗಳಲ್ಲಿ ಶೇರ್ ಮಾಡಿದ್ದಾಳೆ. ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದ್ದಂತೆ ಆಕೆಯ ವಿಡಿಯೋಗೆ ದೆಹಲಿ ಪೋಲಿಸರು ಪ್ರತಿಕ್ರಿಯಿಸಿ ಬಂಪರ್ ಬಹುಮಾನ ನೀಡಿದ್ದಾರೆ.
ಮದುವೆಯ ದಿನ ಯುವತಿಯೊಬ್ಬಳು ಹೆಲ್ಮೆಟ್ ಧರಿಸದೇ ಸ್ಕೂಟರ್ ಓಡಿಸಿ ಸಖತ್ ಆಗಿ ರೀಲ್ಸ್ ಮಾಡಿ ಸೋಶಿಯಲ್ ಮೀಡಿಯಾಗಳಲ್ಲಿ ಶೇರ್ ಮಾಡಿದ್ದಾಳೆ. ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದ್ದಂತೆ ಆಕೆಯ ವಿಡಿಯೋಗೆ ದೆಹಲಿ ಪೋಲಿಸರು ಪ್ರತಿಕ್ರಿಯಿಸಿ ಬಂಪರ್ ಬಹುಮಾನ ನೀಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಯುವ ಪೀಳಿಗೆಯಲ್ಲಿ ರೀಲ್ಸ್ ಮಾಡುವ ಹುಚ್ಚು ಹೆಚ್ಚಾಗಿ ಬಿಟ್ಟಿದೆ. ಇಲ್ಲೊಬ್ಬಳು ಯುವತಿ ತನ್ನ ಮದುವೆಯ ದಿನದಂದು ಅದ್ದೂರಿಯಾಗಿ ರೆಡಿಯಾಗಿ ಸ್ಕೂಟಿಯಲ್ಲಿ ರೈಡ್ ಹೊರಟ್ಟಿದ್ದಾಳೆ. ಆದರೆ ಹೆಲ್ಮೆಟ್ ಧರಿಸದೇ ಇದ್ದಿದ್ದರಿಂದ ಈ ವಧು ಭಾರೀ ಸುದ್ದಿಯಾಗಿದ್ದಾಳೆ.
ಈ ವಿಡಿಯೋವನ್ನು ಹಂಚಿಕೊಂಡಿರುವ ದೆಹಲಿ ಪೊಲೀಸರು ಸಂಚಾರ ನಿಯಮದ ಬಗ್ಗೆ ಜನರಿಗೆ ಜಾಗೃತಿ ಮೂಡಿಸಿದ್ದಾರೆ. ಜತೆಗೆ ಹೀಗೆ ನಿಯಮ ಉಲ್ಲಂಘಿಸಿದರೆ ಅದರ ಅಡ್ಡ ಪರಿಣಾಮಗಳನ್ನೂ ಎದುರಿಸಬೇಕಾದೀತು. ಜೊತೆಗೆ ಆಕೆಯ ಮೇಲೆ ದಂಡ ವಿಧಿಸಿರುವುದನ್ನು ಪೊಲೀಸರು ಹಂಚಿಕೊಂಡಿರುವ ವಿಡಿಯೋದಲ್ಲಿ ಕಾಣಬಹುದು.
ವೀಡಿಯೊವನ್ನು ಇಲ್ಲಿದೆ ನೋಡಿ:
Going ‘Vaari Vaari Jaaun’ on the road for a REEL makes your safety a REAL WORRY!
Please do not indulge in acts of BEWAKOOFIYAN! Drive safe.@dtptraffic pic.twitter.com/CLx5AP9UN8
— Delhi Police (@DelhiPolice) June 10, 2023
ಇದನ್ನೂ ಓದಿ: ‘ಮೈಬಗ್ಗಿಸಿ ದುಡಿದರೆ ನೀವು ಗಂಡಸರಾಗುತ್ತೀರಿ’ ಗೇ ಜನರಿಗೆ ಹೀಗೆ ಹೇಳಿದ್ದನೇ ಚೆ ಗುವಾರ್?
ವೀಡಿಯೊದ ಮೊದಲ ಭಾಗವು ವಧು ತನ್ನ ಮದುವೆಯ ಬಟ್ಟೆ ಮತ್ತು ಆಭರಣಗಳನ್ನು ಧರಿಸಿ ಸ್ಕೂಟರ್ ಓಡಿಸುತ್ತಿರುವುದನ್ನು ಮತ್ತು ಆಕೆಯ ಮೇಲೆ ದಂಡ ವಿಧಿಸಿರುವ ಚಲನ್ ಅನ್ನು ಕೂಡ ಕಾಣಬಹುದು. ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರಿಂದ ಸಾಕಷ್ಟು ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.
ಮತ್ತಷ್ಟು ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 3:42 pm, Wed, 14 June 23