AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: 3 ಕಿ.ಮೀ ನಡೆದು ಫುಡ್ ಡೆಲಿವರಿ ಮಾಡುತ್ತಿದ್ದನಿಗೆ ಹೊಸ ಕೆಲಸ ಕೊಡಿಸಿದ ನೆಟ್ಟಿಗರು

Swiggy : ''ನಾನೊಬ್ಬ ಬಿ.ಟೆಕ್​ ಪದವೀಧರ. ನನ್ನ ಫ್ಲ್ಯಾಟ್​ಮೇಟ್​ನಿಂದಾಗಿ ನಾನು ಆರ್ಥಿಕ ಸಂಕಷ್ಟಕ್ಕೆ ಬಿದ್ದೆ. ಒಂದು ಡೆಲಿವರಿಗೆ ರೂ. 20-25 ಪಡೆಯುತ್ತಿದ್ದೇನೆ. ವಾರದಿಂದ ನೀರು, ಚಹಾದ ಮೇಲೆ ಬದುಕುತ್ತಿದ್ದೇನೆ.'' ಸಾಹಿಲ್​ ಸಿಂಗ್​

Viral: 3 ಕಿ.ಮೀ ನಡೆದು ಫುಡ್ ಡೆಲಿವರಿ ಮಾಡುತ್ತಿದ್ದನಿಗೆ ಹೊಸ ಕೆಲಸ ಕೊಡಿಸಿದ ನೆಟ್ಟಿಗರು
ಲಿಂಕ್ಡ್​ ಇನ್​ ಸಮುದಾಯದ ಮೂಲಕ ಹೊಸ ಕೆಲಸ ಪಡೆದ ಸಾಹಿಲ್​ ಸಿಂಗ್​
ಶ್ರೀದೇವಿ ಕಳಸದ
ಶ್ರೀದೇವಿ ಕಳಸದ|

Updated on:Jun 15, 2023 | 5:11 PM

Share

Delivery Agent: ನಿಗದಿತ ಸಮಯಕ್ಕಿಂತ ತಡವಾಗಿ ಫುಡ್​ ಡೆಲಿವರಿಯಾದಾಗ ಗ್ರಾಹಕರು ಅನುಮಾನದಿಂದ ಸ್ವಿಗ್ಗಿ ಡೆಲಿವರಿ ಏಜೆಂಟ್​ನನ್ನು (Swiggy) ವಿಚಾರಿಸಿದ್ದಾರೆ. ಆಗ ಆತ, ಕ್ಷಮಿಸಬೇಕು, ತನ್ನ ಬಳಿ ಓಡಾಟಕ್ಕೆ ದ್ವಿಚಕ್ರವಾಹನ ಇಲ್ಲವೆಂದೂ ಮತ್ತು ತಾನು ಈ ಡೆಲಿವರಿಗಾಗಿ 3 ಕಿ.ಮೀ ನಡೆದುಕೊಂಡು ಬಂದಿದ್ದೇನೆ ಎಂದು ಹೇಳಿದ್ದಾನೆ. ಆಗ ಗ್ರಾಹಕರು ಅವನ ಬಗ್ಗೆ ಕಾಳಜಿವಹಿಸಿ ಅವನ ಪೂರ್ವಾಪರದ ಬಗ್ಗೆ ಕೇಳಿದ್ಧಾರೆ. ಅಷ್ಟೇ ಅಲ್ಲ ಹೊಸ ಉದ್ಯೋಗವನ್ನು ಪಡೆಯುವಲ್ಲಿ ಸಹಾಯವನ್ನೂ ಮಾಡಿದ್ದಾರೆ.

ಫ್ಲ್ಯಾಶ್​ ಎಂಬ ಟೆಕ್​ ಕಂಪೆನಿಯ ಮಾರ್ಕೆಟಿಂಗ್​ ಮ್ಯಾನೇಜರ್​ ಪ್ರಿಯಾಂಶಿ ಚಂದೇಲ್, ಸ್ವಿಗ್ಗಿ ಮೂಲಕ ಐಸ್ಕ್ರೀಮ್ ಆರ್ಡರ್ ಮಾಡಿದ್ದಾರೆ. ಆಗ ಡೆಲಿವರಿ ಏಜೆಂಟ್​ ಸಾಹಿಲ್​ ಸಿಂಗ್​ ಬಹಳ ತಡವಾಗಿಯೇ ಅದನ್ನು ತಲುಪಿಸಿದಾಗ ಕಾರಣವನ್ನು ಕೇಳಿದ್ದಾರೆ. ತನ್ನ ಫ್ಲ್ಯಾಟ್​ಮೇಟ್​ನಿಂದಾಗಿ ನಾನು ಸಾಲಕ್ಕೆ ಬಿದ್ದು ಆರ್ಥಿಕ ಸಂಕಷ್ಟದಲ್ಲಿದ್ದೇನೆ. ಹಾಗಾಗಿ ನಾನೀಗ ನಡೆದುಕೊಂಡೇ ಫುಡ್ ಡೆಲಿವರಿ ಮಾಡುತ್ತಿದ್ದೇನೆ ಎಂದಿದ್ದಾನೆ. ಅವನ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿದ ಆಕೆ, ಅವನಿಗೆ ಹೊಸ ಕೆಲಸ ಕೊಡಿಸುವ ಬಗ್ಗೆ ಆಲೋಚಿಸಿದ್ಧಾರೆ.

ಇದನ್ನೂ ಓದಿ : Viral Video: ಅಗ್ನಿಶಾಮಕ ಸಿಬ್ಬಂದಿ ಇವರನ್ನೆಲ್ಲ ಒದ್ದು ಬೀಳಿಸುತ್ತಿರುವುದು ಈ ಕಾರಣಕ್ಕೆ

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

‘ಬಿ.ಟೆಕ್ ಪದವೀಧರನಾದ ನಾನು ಬೈಜೂಸ್ (Byju’s)​ ಮತ್ತು ನಿಂಜಾಕಾರ್ಟ್​ನ (Ninjacart) ಹಳೆಯ ಉದ್ಯೋಗಿ. ಅಲ್ಲಿ ಕೆಲಸ ಕಳೆದುಕೊಂಡ ನಂತರ ಸ್ವಿಗ್ಗೀ ಕಂಪೆನಿಯಲ್ಲಿ ಡೆಲಿವರಿ ಏಜೆಂಟ್​ನಾಗಿ ಸೇರಿಕೊಂಡೆ. ನಂಬಿದರೆ ನಂಬಿ ಬಿಟ್ಟರೆ ಬಿಡಿ ಒಂದು ಡೆಲಿವರಿಗೆ ರೂ. 20-25 ಕಮೀಷನ್​ ಪಡೆಯುತ್ತಿದ್ದೇನೆ. ನನ್ನ ಬಳಿ ಬೈಕ್​ ಕೂಡ ಇಲ್ಲ. ವಾರದಿಂದ ನಾನು ಊಟ ಮಾಡದೆ ಕೇವಲ ನೀರು ಮತ್ತು ಚಹಾದ ಮೇಲೆ ಬದುಕುತ್ತಿದ್ದೇನೆ. ಈ ಮೊದಲು ನಾನು ತಿಂಗಳಿಗೆ ರೂ. 25,000 ಗಳಿಸುತ್ತಿದ್ದೆ. ನನಗೀಗ 30 ವರ್ಷ. ನನಗೂ ವಯಸ್ಸಾದ ತಂದೆತಾಯಿಯರಿದ್ದಾರೆ. ಅವರಿಂದ ಹಣ ಕೇಳುವುದು ಸಾಧ್ಯವಿಲ್ಲ’ ಎಂದಿದ್ದಾನೆ.

ಇದನ್ನೂ ಓದಿ : Rahul Gandhi: ಅಮೆರಿಕನ್​ ಟ್ರಕ್ ಯಾತ್ರಾ; ವಾಷಿಂಗ್ಟನ್​ ಡಿಸಿಯಿಂದ ನ್ಯೂಯಾರ್ಕ್​ಗೆ ರಾಹುಲ್ ಪ್ರಯಾಣ

ಆಗ ಪ್ರಿಯಾಂಶಿ ಸಾಹಿಲ್​ಗೆ ಕುಡಿಯಲು ನೀರು ಕೊಟ್ಟು ರೂ. 500 ಕೈಗಿಟ್ಟಿದ್ದಾರೆ. ನಂತರ ಅವರು, ‘ಆಫೀಸ್ ಬಾಯ್, ಅಡ್ಮಿನ್, ಕಸ್ಟಮರ್​ ಸಪೋರ್ಟ್​ ಇತ್ಯಾದಿ ಕೆಲಸಗಳಿಗೆ ಅವಕಾಶವಿದ್ದರೆ ದಯವಿಟ್ಟು ಇವರಿಗೆ ಸಹಾಯ ಮಾಡಿ’  ಎಂದು ಲಿಂಕ್ಡ್​ಇನ್​ನಲ್ಲಿ ಪೋಸ್ಟ್ ಹಾಕಿದ್ಧಾರೆ. ಜೊತೆಗೆ, ಆತನ ಭಾವಚಿತ್ರ, ರೆಸ್ಯೂಮ್​ ಮತ್ತು ಶೈಕ್ಷಣಿಕ ಅಂಕಪಟ್ಟಿಗಳ ಪುರಾವೆಗಳನ್ನೂ ಲಗತ್ತಿಸಿದ್ದಾರೆ.

ಇದನ್ನೂ ಓದಿ : Viral Video: ಸೋರುತಿಹುದು ರೈಲುಮಾಳಿಗೀ; ”ವಂದೇಭಾರತ್”ನ ಪ್ರಯಾಣಿಕರಿಗೆ ಉಚಿತ ಶವರ್

ಈ ಪೋಸ್ಟ್​ಗೆ ಸುಮಾರು 14,000 ದಷ್ಟು ಪ್ರತಿಕ್ರಿಯೆಗಳು ಒದಗಿವೆ. 300ಕ್ಕೂ ಹೆಚ್ಚು ಜನರು ಈ ಪೋಸ್ಟ್​ ಅನ್ನು ಮರುಹಂಚಿಕೆ ಮಾಡಿಕೊಂಡಿದ್ದಾರೆ. ನಂತರ ಸಾಹಿಲ್​ಗೆ ಕೆಲಸ ಸಿಕ್ಕಿದೆ, ಸಹಾಯ ಮಾಡಿದ ಲಿಂಕ್​ಡಿನ್​ ಸಮುದಾಯಕ್ಕೆ ಧನ್ಯವಾದ ಎಂದು ಪ್ರಿಯಾಂಶಿ ಮತ್ತೊಂದು ಪೋಸ್ಟ್​ ಅಪ್​ಡೇಟ್​ ಮಾಡಿದ್ದಾರೆ.

ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​​ಗಾಗಿ ಕ್ಲಿಕ್ ಮಾಡಿ

Published On - 5:06 pm, Thu, 15 June 23

Follow Us
'ಪೆಲೆಟ್ ಗನ್ ದಾಳಿ ನಡೆದೇ ಇಲ್ಲ'; ರಾಹುಲ್ ಗಾಂಧಿಗೆ ಬಿಜೆಪಿ ಸಂಸದ ತಿರುಗೇಟು
'ಪೆಲೆಟ್ ಗನ್ ದಾಳಿ ನಡೆದೇ ಇಲ್ಲ'; ರಾಹುಲ್ ಗಾಂಧಿಗೆ ಬಿಜೆಪಿ ಸಂಸದ ತಿರುಗೇಟು
ಕರ್ನಾಟಕ ಸಂಪುಟ ವಿಸ್ತರಣೆ ಬಗ್ಗೆ ಕೈ ಹೈಕಮಾಂಡ್ ನಾಯಕರು ಹೇಳಿದ್ದಿಷ್ಟು!
ಕರ್ನಾಟಕ ಸಂಪುಟ ವಿಸ್ತರಣೆ ಬಗ್ಗೆ ಕೈ ಹೈಕಮಾಂಡ್ ನಾಯಕರು ಹೇಳಿದ್ದಿಷ್ಟು!
ರಾಹುಲ್ ಸಭೆ ಅಂತ್ಯ, ಬೆಂಗಳುರಿನತ್ತ ಡಿಕೆಶಿ: ಸಂಪುಟ ವಿಸ್ತರಣೆ ಕಥೆ ಏನಾಯ್ತು
ರಾಹುಲ್ ಸಭೆ ಅಂತ್ಯ, ಬೆಂಗಳುರಿನತ್ತ ಡಿಕೆಶಿ: ಸಂಪುಟ ವಿಸ್ತರಣೆ ಕಥೆ ಏನಾಯ್ತು
ತಾಯಿ ನೆನಪಿಗಾಗಿ ಹೊಸ ವಾಚ್ ರೆಡಿ ಮಾಡಿಸಿದ ಪುತ್ರ ಕುಮಾರಸ್ವಾಮಿ
ತಾಯಿ ನೆನಪಿಗಾಗಿ ಹೊಸ ವಾಚ್ ರೆಡಿ ಮಾಡಿಸಿದ ಪುತ್ರ ಕುಮಾರಸ್ವಾಮಿ
ಅತ್ತೆ ಚೆನ್ನಮ್ಮರ ಜೊತೆಗಿನ ನೆನೆಪು ಹಂಚಿಕೊಂಡ ಸೊಸೆ ಭವಾನಿ ರೇವಣ್ಣ
ಅತ್ತೆ ಚೆನ್ನಮ್ಮರ ಜೊತೆಗಿನ ನೆನೆಪು ಹಂಚಿಕೊಂಡ ಸೊಸೆ ಭವಾನಿ ರೇವಣ್ಣ
ಕಾವೇರಿ ಹೋರಾಟ: ಚಿತ್ರರಂಗದ ಒಗ್ಗಟ್ಟು ಪ್ರಶ್ನಿಸಿದ್ದಕ್ಕೆ ರಾಕ್​ಲೈನ್ ಗರಂ
ಕಾವೇರಿ ಹೋರಾಟ: ಚಿತ್ರರಂಗದ ಒಗ್ಗಟ್ಟು ಪ್ರಶ್ನಿಸಿದ್ದಕ್ಕೆ ರಾಕ್​ಲೈನ್ ಗರಂ
ರೈತರ ಪರ ಚಿತ್ರರಂಗ ಇದ್ದೇ ಇರುತ್ತೆ: ಫಿಲಂ ಚೇಂಬರ್ ಅಧ್ಯಕ್ಷೆ ಜಯಮಾಲ
ರೈತರ ಪರ ಚಿತ್ರರಂಗ ಇದ್ದೇ ಇರುತ್ತೆ: ಫಿಲಂ ಚೇಂಬರ್ ಅಧ್ಯಕ್ಷೆ ಜಯಮಾಲ
ರಾಜ್ಯದ ಮೇಲ್ಮನವಿ ತಿರಸ್ಕರಿಸಿದ CWMA, ಕರ್ನಾಟಕ ಬಂದ್ ಎಚ್ಚರಿಕೆ
ರಾಜ್ಯದ ಮೇಲ್ಮನವಿ ತಿರಸ್ಕರಿಸಿದ CWMA, ಕರ್ನಾಟಕ ಬಂದ್ ಎಚ್ಚರಿಕೆ
ವಿಜಯ್ ಅವರೇ ಬಲವಂತವಾಗಿ ನೀರು ಪಡೆಯಬೇಡಿ: ಪ್ರಥಮ್
ವಿಜಯ್ ಅವರೇ ಬಲವಂತವಾಗಿ ನೀರು ಪಡೆಯಬೇಡಿ: ಪ್ರಥಮ್
Cauvery Dispute: ಕಾವೇರಿ ನೀರು ವಿವಾದ; ವಾಣಿಜ್ಯ ಮಂಡಳಿಯಲ್ಲಿ ಮಹತ್ವದ ಸಭೆ
Cauvery Dispute: ಕಾವೇರಿ ನೀರು ವಿವಾದ; ವಾಣಿಜ್ಯ ಮಂಡಳಿಯಲ್ಲಿ ಮಹತ್ವದ ಸಭೆ