AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಜ್ವರ ಇದ್ರೂ ಆಫೀಸಿಗೆ ಹೋದೆ; ಸಿಕ್ ಲೀವ್ ತೆಗೆದುಕೊಳ್ಳುವ ವಿಷ್ಯದಲ್ಲಿ ಕಿವಿ ಮಾತು ಹೇಳಿದ ಯುವತಿ

ಸಾಮಾನ್ಯವಾಗಿ ಆರೋಗ್ಯ ಕೈ ಕೊಟ್ಟಾಗ ರಜೆ ತೆಗೆದುಕೊಂಡು ರೆಸ್ಟ್ ಮಾಡೋದು ಸಹಜ. ಆದರೆ ಇಲ್ಲೊಬ್ಬ ಯುವತಿ ಜ್ವರ ಬಂದಾಗಲು ಕೆಲಸ ಮಾಡಿ, ಸ್ನೇಹಿತೆಯ ಬರ್ತ್ಡೇ ಸೆಲೆಬ್ರೇಶನ್ ಗೆ ಸಿಕ್ ಲೀವ್ ರಜೆಯನ್ನು ತೆಗೆದುಕೊಂಡಿದ್ದಾಳೆ. ಈ ವಿಚಾರದಲ್ಲಿ ಉದ್ಯೋಗಿಗಳಿಗೆ ಕೆಲ ಕಿವಿ ಮಾತುಗಳನ್ನು ಹೇಳಿದ್ದಾಳೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Video: ಜ್ವರ ಇದ್ರೂ ಆಫೀಸಿಗೆ ಹೋದೆ; ಸಿಕ್ ಲೀವ್ ತೆಗೆದುಕೊಳ್ಳುವ ವಿಷ್ಯದಲ್ಲಿ ಕಿವಿ ಮಾತು ಹೇಳಿದ ಯುವತಿ
ವೈರಲ್‌ ವಿಡಿಯೋImage Credit source: Instagram
ಸಾಯಿನಂದಾ
|

Updated on: Sep 29, 2026 | 5:28 PM

Share

ಕೆಲಸ ಅಂದ್ರೆ ಹಾಗೆನೇ, ಕತ್ತೆ ತರಹ ದುಡಿದ್ರೂ ಬೆಲೆ ಇಲ್ಲ. ಹುಷಾರಿಲ್ಲ ಅಂದ್ರು ರಜೆ ಸಿಗೋದೇ ಇಲ್ಲ. ಎಷ್ಟೋ ಉದ್ಯೋಗಿಗಳು (employee) ಹೇಳೋದು ಹೀಗೆಯೇ. ಆದರೆ ಇಲ್ಲೊಬ್ಬ ಯುವತಿ ರಜೆ ತೆಗೆದುಕೊಳ್ಳುವಾಗ ಸ್ವಲ್ಪ ಯೋಚಿಸಿ ಎಂದು ಹೇಳಿದ್ದಾಳೆ. ತನಗೆ ಜ್ವರ ಇದ್ರೂ ಕೆಲಸ ಮಾಡಿದ್ದು, ಆ ರಜೆಯನ್ನು ಸ್ನೇಹಿತೆಯ ಬರ್ತ್ಡೇ ಸೆಲೆಬ್ರೇಶನ್‌ಗೆ ತೆಗೆದುಕೊಂಡಿದ್ದಾಳೆ. ಹೀಗಾಗಿ ಈ ಅನಾರೋಗ್ಯ ರಜೆಯನ್ನು ಯಾವಾಗ ಬಳಸಿಕೊಳ್ಳಬೇಕು ಎಂಬುದು ನಿಮಗೆ ತಿಳಿದಿರಲಿ ಎಂದು ಉದ್ಯೋಗಿಗಳಿಗೆ ಸಲಹೆ ನೀಡಿದ್ದಾಳೆ.

ರಜೆ ವಿಷ್ಯದಲ್ಲಿ ಉದ್ಯೋಗಿಗಳಿಗೆ ಯುವತಿಯ ಕಿವಿ ಮಾತು

ಮುಸ್ಕಾನ್ (muskan.y20) ತನ್ನ ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಂಡು, ಹುಷಾರಿಲ್ಲದಾಗ ಬಳಸಲು ಸಿಕ್ ಲೀವ್‌ ಉಳಿಸುತ್ತಿಲ್ಲ. ನಾನು ಕೆಲಸದಿಂದ ಸುಸ್ತಾದಾಗ ಅದನ್ನು ಬಳಸಲು ಉಳಿಸುತ್ತಿದ್ದೇನೆ ಎಂದು ಶೀರ್ಷಿಕೆಯಲ್ಲಿ ಬರೆದುಕೊಂಡಿದ್ದಾಳೆ.

ವೈರಲ್ ವಿಡಿಯೋ ಇಲ್ಲಿದೆ

View this post on Instagram

A post shared by Muskan😇 (@muskan.y20)

ಹುಷಾರಿಲ್ಲ ಅಂದ್ರು ರಜೆ ಮಾತ್ರ ಹಾಕಲಿಲ್ಲ

ಈ ಕ್ಲಿಪಿಂಗ್‌ನಲ್ಲಿ ನನ್ನ ಮೆದುಳಿನಲ್ಲಿ ಏನೋ ಸಮಸ್ಯೆ ಇದೆ ಅನ್ನಿಸುತ್ತೆ. ಸಿಕ್ ಲೀವ್‌ ವಿಚಾರದಲ್ಲಿ ನಾನು ಯೋಚಿಸುವ ರೀತಿ ಸ್ವಲ್ಪ ವಿಚಿತ್ರವಾಗಿದೆ. ಇತ್ತೀಚೆಗೆ ನನಗೆ ತುಂಬಾ ಆರೋಗ್ಯ ಸಮಸ್ಯೆಯಿತ್ತು. ತಲೆನೋವು, ಸುಸ್ತು, ಹಾಸಿಗೆಯಿಂದ ಎದ್ದೇಳಲೂ ಆಗುತ್ತಿರಲಿಲ್ಲ. ಈ ವೇಳೆ ಆಫೀಸ್‌ಗೆ ಹೋಗಿ ಯಾರು ಕೆಲಸ ಮಾಡ್ತಾರೆ ಎಂದೆನಿಸುವುದು ಸಹಜ. ಆಫೀಸ್‌ಗೆ ಫೋನ್ ಮಾಡಿ ನನಗೆ ಹುಷಾರಿಲ್ಲ, ಬರಲು ಆಗುವುದಿಲ್ಲ ಎಂದು ಹೇಳಿ ಸಿಕ್ ಲಿವ್ ತೆಗೆದುಕೊಳ್ತಾರೆ, ಆದ್ರೆ ನಾನು ಮಾತ್ರ ಈ ರಜೆ ತೆಗೆದುಕೊಳ್ಳಲಿಲ್ಲ ಎಂದು ಯುವತಿ ಹೇಳಿದ್ದಾಳೆ.

ಸಿಕ್ ಲೀವ್ ಹೀಗೆ ಬಳಸುವುದನ್ನು ಕಲಿಯಿರಿ

ಆರೋಗ್ಯ ಸಮಸ್ಯೆಯಿದ್ರೂ ರಜೆ ಹಾಕದೇ ಆಫೀಸ್‌ಗೆ ಹೋದೆ. ಎರಡು ನ್ಯೂರೋಫೆನ್‌ ಮಾತ್ರೆ ತೆಗೆದುಕೊಂಡೆ. ನಾನು ತಿಳಿದಿರುವಂತೆ ಸಿಕ್  ಲೀವ್‌ ಅನ್ನೋದು ಕೇವಲ ಅನಾರೋಗ್ಯವಾದಾಗ ಬಳಸುವುದಕ್ಕಲ್ಲ. ನನ್ನ ಮನಸ್ಸಿನಲ್ಲಿ ಸಿಕ್ ಲೀವ್‌ ಅಂದ್ರೆ ಉಳಿಸಿಕೊಳ್ಳಬೇಕಾದ ಹೂಡಿಕೆಯಾಗಿದೆ. ಅದನ್ನು ನಾನು ಈ ರೀತಿ ಉಳಿಸಿಕೊಂಡೆ ಎಂದಿದ್ದಾಳೆ.

ಫ್ರೆಂಡ್ ಬರ್ತ್ಡೇಗೆ ಸಿಕ್ ಲೀವ್ ತೆಗೆದುಕೊಂಡ ಯುವತಿ

ನನ್ನ ಮೆದುಳಲ್ಲಿ ಏನೋ ಸಮಸ್ಯೆ ಇದೆ ಎಂದು ಇದಕ್ಕೆ ಹೇಳಿದ್ದು. ಆರೋಗ್ಯ ಸರಿಯಿಲ್ಲದಾಗ ಆಫೀಸ್‌ನಲ್ಲಿ ಕೆಲಸ ಮಾಡಿ ಈಗ ರಜೆ ತೆಗೆದುಕೊಂಡೆ. ಸೋಮವಾರ ಇದೆಲ್ಲಾ ನಡೆಯಿತು. ಶುಕ್ರವಾರ ನನ್ನ ಸ್ನೇಹಿತೆಯ ಹುಟ್ಟುಹಬ್ಬಕ್ಕೆ ನಾನು ಸಿಕ್ ಲಿವ್ ತೆಗೆದುಕೊಂಡೆ. ಅದೇ ದಿನವೇ ನಂಗೆ ಸಂಬಳ ಆಯ್ತು. ಗೆಳತಿಯ ಬರ್ತಡೇ ಪಾರ್ಟಿಯನ್ನು ಎಂಜಾಯ್ ಮಾಡುತ್ತಿದ್ದ ನನಗೆ ತುಂಬಾ ಖುಷಿಯಾಯಿತು. ಆದರೆ ಈಗ ಯೋಚಿಸಿದರೆ ನಾನು ತಪ್ಪು ಮಾಡಿದ್ದೇನೆ ಅನ್ನಿಸುತ್ತಿದೆ. ಏಕೆಂದರೆ ನನ್ನ ತಲೆನೋವು ಎರಡು ದಿನಗಳಾದರೂ ಕಡಿಮೆ ಮಾತ್ರ ಆಗಲಿಲ್ಲ. ಆದರೆ ಅಂದು ನಾನು ಮನೆಯಲ್ಲೇ ಇದ್ದಿದ್ದರೂ ಏನು ಮಾಡುತ್ತಿದ್ದೆ? ಪರವಾಗಿಲ್ಲ ಬಿಡಿ, ಎಲ್ಲವೂ ಚೆನ್ನಾಗಿತ್ತು ಕೊನೆಗೆ ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾಳೆ.

ಇದನ್ನೂ ಓದಿ: ನಮ್ಮ ಕಂಪನಿಯಲ್ಲಿ ಈ ರಾಜ್ಯಗಳ ಪುರುಷರಿಗೆ ನೀಡಲ್ಲ ಜಾಬ್; ಚರ್ಚೆಗೆ ಕಾರಣವಾಯ್ತು ಬೆಂಗಳೂರಿನ ಸಿಇಒ ಪೋಸ್ಟ್

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ನೀವು ಯೋಚಿಸುವ ರೀತಿ ವಿಭಿನ್ನ ಎಂದಿದ್ದಾರೆ. ಇನ್ನೊಬ್ಬರು, ನಿಮ್ಮ ಸಲಹೆ ಒಂಥರ ಚೆನ್ನಾಗಿದೆ ಎಂದು ಹೇಳಿದ್ದಾರೆ. ಮತ್ತೊಬ್ಬರು, ಸಿಕ್ ಲೀವ್ ಕೊಡೋದೇ ಕಷ್ಟ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಸಾಯಿನಂದಾ
ಸಾಯಿನಂದಾ

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More
ಮಳೆಗಾಲದಲ್ಲಿ ಕೆಸರುಮಯ ರಸ್ತೆ, ಆಟದ ಮೈದಾನವೂ ಇಲ್ಲ
ಮಳೆಗಾಲದಲ್ಲಿ ಕೆಸರುಮಯ ರಸ್ತೆ, ಆಟದ ಮೈದಾನವೂ ಇಲ್ಲ
ಸಿದ್ದರಾಮಯ್ಯ ಪ್ರತಿಮೆ ತೆರವುಗೊಳಿಸಿದ್ದಕ್ಕೆ ಸಿಡಿದೆದ್ದ ಕುರುಬ ಸಮುದಾಯ
ಸಿದ್ದರಾಮಯ್ಯ ಪ್ರತಿಮೆ ತೆರವುಗೊಳಿಸಿದ್ದಕ್ಕೆ ಸಿಡಿದೆದ್ದ ಕುರುಬ ಸಮುದಾಯ
ತುಂಗಭದ್ರಾ ಡ್ಯಾಮ್‌ನಿಂದ ಕಾರ್ಖಾನೆಗಳಿಗೆ ಅನಧಿಕೃತ ನೀರು ಸರಬರಾಜು
ತುಂಗಭದ್ರಾ ಡ್ಯಾಮ್‌ನಿಂದ ಕಾರ್ಖಾನೆಗಳಿಗೆ ಅನಧಿಕೃತ ನೀರು ಸರಬರಾಜು
ಸಚಿವ ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತಕ್ಕೆ ದೂರು
ಸಚಿವ ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತಕ್ಕೆ ದೂರು
ಚಿತ್ರದುರ್ಗದಲ್ಲಿ ಮಹಾಗಣಪತಿ ಉತ್ಸವಕ್ಕೆ ನಗರ ದೇವತೆಗಳ ಮೆರುಗು
ಚಿತ್ರದುರ್ಗದಲ್ಲಿ ಮಹಾಗಣಪತಿ ಉತ್ಸವಕ್ಕೆ ನಗರ ದೇವತೆಗಳ ಮೆರುಗು
ಬೆಂಗಳೂರಿನ ಮಟನ್ ಶಾಪ್‌ನಲ್ಲಿ ನಡೀತಿತ್ತು ಡ್ರಗ್ಸ್ ಮಾರಾಟ! ಇಬ್ಬರ ಬಂಧನ
ಬೆಂಗಳೂರಿನ ಮಟನ್ ಶಾಪ್‌ನಲ್ಲಿ ನಡೀತಿತ್ತು ಡ್ರಗ್ಸ್ ಮಾರಾಟ! ಇಬ್ಬರ ಬಂಧನ
ಕಾಮನ್‌ವೆಲ್ತ್ ಪವರ್‌ಲಿಫ್ಟಿಂಗ್: ಕನ್ನಡಿಗ ಸಚಿನ್ ಸಾಳುಂಕೆಗೆ ಬೆಳ್ಳಿ ಪದಕ
ಕಾಮನ್‌ವೆಲ್ತ್ ಪವರ್‌ಲಿಫ್ಟಿಂಗ್: ಕನ್ನಡಿಗ ಸಚಿನ್ ಸಾಳುಂಕೆಗೆ ಬೆಳ್ಳಿ ಪದಕ
ಧಾರಾಕಾರ ಮಳೆಗೆ ಮಂಡ್ಯ, ಹನೂರು ತತ್ತರ: ಎಂ.ಎಂ. ಹಿಲ್ಸ್‌ನಲ್ಲಿ ಗುಡ್ಡ ಕುಸಿತ
ಧಾರಾಕಾರ ಮಳೆಗೆ ಮಂಡ್ಯ, ಹನೂರು ತತ್ತರ: ಎಂ.ಎಂ. ಹಿಲ್ಸ್‌ನಲ್ಲಿ ಗುಡ್ಡ ಕುಸಿತ
ಬೆಂಗಳೂರಿನ ಅಂಚೆಪಾಳ್ಯದಲ್ಲಿ ಚಿರತೆ ಪ್ರತ್ಯಕ್ಷ
ಬೆಂಗಳೂರಿನ ಅಂಚೆಪಾಳ್ಯದಲ್ಲಿ ಚಿರತೆ ಪ್ರತ್ಯಕ್ಷ
Live: ಹೆಚ್.ಡಿ. ಕುಮಾರಸ್ವಾಮಿ ಸುದ್ದಿಗೋಷ್ಠಿ ನೇರಪ್ರಸಾರ
Live: ಹೆಚ್.ಡಿ. ಕುಮಾರಸ್ವಾಮಿ ಸುದ್ದಿಗೋಷ್ಠಿ ನೇರಪ್ರಸಾರ