AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ನಿನ್ನ ಕಂಪನಿ ಎಂದು ಭಾವಿಸಿ ಇಲ್ಲಿ ಕೆಲಸ ಮಾಡು; ಸಿಇಒ ಮಾತಿಗೆ ತಿರುಗೇಟು ನೀಡಿದ ಜೆನ್ ಝೆಡ್ ಉದ್ಯೋಗಿ

ಉದ್ಯೋಗಿಗಳು ಎಷ್ಟೇ ಕೆಲಸ ಮಾಡಿದ್ರು ಕಡಿಮೆಯೇ. ಕೆಲವೊಮ್ಮೆ ಕೆಲಸದ ವಿಚಾರವಾಗಿ ಕಿರಿಕಿರಿ ಮಾಡೋದಿದೆ. ಇದೀಗ ಇಲ್ಲೊಬ್ಬ ಜೆನ್ ಝೆಡ್ ಉದ್ಯೋಗಿಗೆ ಸ್ಟಾರ್ಟ್‌ಅಪ್‌ವೊಂದರ ಸಿಇಒ, ನೀವು ಈ ಕಂಪನಿಯನ್ನು ತನ್ನದೇ ಸಂಸ್ಥೆಯಂತೆ ಭಾವಿಸಿ ಕೆಲಸ ಮಾಡಬೇಕು ಎಂದು ಸಲಹೆ ನೀಡಿದ್ದಾರೆ. ಇದಕ್ಕೆ ಜೆನ್ ಝೆಡ್ ಉದ್ಯೋಗಿ ನೀಡಿದ ಉತ್ತರಕ್ಕೆ ನೆಟ್ಟಿಗರು ಶಾಕ್ ಆಗಿದ್ದಾರೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Viral: ನಿನ್ನ ಕಂಪನಿ ಎಂದು ಭಾವಿಸಿ ಇಲ್ಲಿ ಕೆಲಸ ಮಾಡು; ಸಿಇಒ ಮಾತಿಗೆ ತಿರುಗೇಟು ನೀಡಿದ ಜೆನ್ ಝೆಡ್ ಉದ್ಯೋಗಿ
ಸಾಂದರ್ಭಿಕ ಚಿತ್ರImage Credit source: Getty Images
ಸಾಯಿನಂದಾ
|

Updated on: Sep 30, 2026 | 11:46 AM

Share

ಕೆಲಸದ ಸ್ಥಳದಲ್ಲಿ ಎಷ್ಟೇ ಒತ್ತಡವಿದ್ರೂ ಅನಿರ್ವಾಯ ಕಾರಣಕ್ಕೆ ಎಲ್ಲವನ್ನು ಸಹಿಸಿಕೊಂಡು ಹೋಗ್ತಾರೆ. ಆದರೆ ಜೆನ್ ಝೆಡ್ ಉದ್ಯೋಗಿ (Gen Z Employee) ಸಿಇಒ ಮಾತಿಗೆ ತಿರುಗೇಟು ನೀಡಿದ್ದಾರೆ. ಉದ್ಯೋಗಿಯೊಬ್ಬನ ದಿನಚರಿ ಸಿಇಒಗೆ ಕಿರಿಕಿರಿ ಉಂಟು ಮಾಡಿದೆ. ಆಫೀಸ್ ಟೈಮಿಂಗ್ಸ್ ಪಾಲಿಸುವ ಉದ್ಯೋಗಿಗೆ ಈ ಕಂಪನಿಯನ್ನು ತನ್ನದೇ ಸಂಸ್ಥೆಯಂತೆ ಭಾವಿಸಿ ಹಗಲಿರಳು ದುಡೀಬೇಕು ಸಿಇಒ ಹೇಳಿದ್ದಾರೆ. ಇದಕ್ಕೆ ಖಡಕ್ ಪ್ರತಿಕ್ರಿಯೆ ನೀಡಿದ ಉದ್ಯೋಗಿ ಕಂಪನಿಯಲ್ಲಿ ಶೇ.50ರಷ್ಟು ಷೇರು ನೀಡಿದ್ರೆ ಮಾತ್ರ ನೀವು ಹೇಳಿದ್ದಂತೆ ಕೆಲಸ ಮಾಡುತ್ತೇನೆ ಎಂದು ಉತ್ತರ ನೀಡಿದ್ದಾನೆ. ಈ ಪೋಸ್ಟ್ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಬಾಸ್‌ಗೆ ತಿರುಗೇಟು ನೀಡಿದ ಉದ್ಯೋಗಿ

ಮರಿಯೋ ಪಿಟಿ (Mario PT) ಹೆಸರಿನ ಎಕ್ಸ್ ಖಾತೆಯಲ್ಲಿ ಸಹೋದ್ಯೋಗಿಯೊಬ್ಬನ ಕುರಿತು ಪೋಸ್ಟ್ ಹಂಚಿಕೊಂಡಿದ್ದಾರೆ. ಈ ಪೋಸ್ಟ್‌ನಲ್ಲಿ ನನ್ನ ಜೆನ್‌ ಝೆಡ್‌ ಸಹೋದ್ಯೋಗಿಯೊಬ್ಬನ ದಿನಚರಿಯು ನಮ್ಮ ಸಿಇಒಗೆ ತೀವ್ರ ಕಿರಿಕಿರಿ ಉಂಟುಮಾಡುತ್ತದೆ. ಪ್ರತಿದಿನ ಸಂಜೆ 4:50 ರ ಹೊತ್ತಿಗೆ ತನ್ನ ಕೆಲಸ ಮುಗಿಸಿ ಕಂಪ್ಯೂಟರ್ ಆಫ್ ಮಾಡುತ್ತಾನೆ. 5:00 ಗಂಟೆಗೆ ಆಫೀಸಿನಿಂದ ಹೋಗುತ್ತಾನೆ. ಬೆಳಗ್ಗಿನ ವೇಳೆ ಅಷ್ಟೇ ನಿಖರವಾಗಿ ಸಮಯವನ್ನು ಪಾಲಿಸುತ್ತಾನೆ. ಕೆಲಸದ ಅವಧಿ ಬೆಳಿಗ್ಗೆ 9:00 ಗಂಟೆಗೆ ಪ್ರಾರಂಭವಾಗುತ್ತದೆ. ಹೀಗಾಗಿ ಪ್ರತಿದಿನವೂ 9 ಗಂಟೆಗೂ ಮುಂಚಿತವಾಗಿಯೇ  ಹಾಜರಿರುತ್ತಾನೆ ಎಂದು ಬರೆದುಕೊಂಡಿದ್ದಾರೆ.

ವೈರಲ್ ಪೋಸ್ಟ್ ಇಲ್ಲಿದೆ

50 ಪರ್ಸೆಂಟ್ ಷೇರು ಕೊಡ್ತೀರಾ ಎಂದ ಉದ್ಯೋಗಿ

ಇದೆಲ್ಲವನ್ನು ಗಮನಿಸಿದ ಸಿಇಒ ನೀನು ಇಲ್ಲಿ ಉನ್ನತ ಸ್ಥಾನಕ್ಕೇರಬೇಕೆಂದರೆ, ಕೇವಲ ಒಬ್ಬ ಉದ್ಯೋಗಿಯಂತೆ ಯೋಚಿಸುವುದನ್ನು ಬಿಟ್ಟು, ಮಾಲೀಕನಂತೆ ಯೋಚಿಸಲು ಪ್ರಾರಂಭಿಸಬೇಕು. ಇದಕ್ಕೆ ನನ್ನ ಸಹೋದ್ಯೋಗಿ ಪ್ರತಿಕ್ರಿಯಿಸಿದ್ದು, ಏನಿದರ ಅರ್ಥ. ಕಂಪನಿಯಲ್ಲಿ ಶೇ.50ರಷ್ಟು ಷೇರು ನೀಡಿದರೆ ಮಾತ್ರ ಸ್ವಂತ ಕಂಪನಿಯಂತೆ ದುಡಿಯುತ್ತೇನೆ. ಇಲ್ಲದಿದ್ದರೆ ತಾನು ಉದ್ಯೋಗಿಯಾಗಿದ್ದು, ತನ್ನ ಕೆಲಸದ ಸಮಯ ಮುಗಿದ ಬಳಿಕ ಹೊರಡುತ್ತೇನೆ ಎಂದು ಪ್ರತಿಕ್ರಿಯೆ ನೀಡಿದ್ದಾನೆ.

ಇದನ್ನೂ ಓದಿ: ಜ್ವರ ಇದ್ರೂ ಆಫೀಸಿಗೆ ಹೋದೆ; ಸಿಕ್ ಲೀವ್ ತೆಗೆದುಕೊಳ್ಳುವ ವಿಷ್ಯದಲ್ಲಿ ಕಿವಿ ಮಾತು ಹೇಳಿದ ಯುವತಿ

ಸೆಪ್ಟೆಂಬರ್ 29 ರಂದು ಹಂಚಿಕೊಳ್ಳಲಾದ ಈ ಪೋಸ್ಟ್ 1.8 ಮಿಲಿಯನ್ ಗೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಪ್ರಾಫಿಟ್ ಮಾತ್ರ ಬಾಸ್ ಗೆ ಹೋಗುತ್ತದೆ ಎಂದಿದ್ದಾರೆ. ಇನ್ನೊಬ್ಬರು, ಕಡಿಮೆ ಸಂಬಳ ನೀಡಿ ಈ ರೀತಿ ನಿರೀಕ್ಷಿಸುವುದು ತಪ್ಪು ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಕಟ್ಟೆ ತರಹ ದುಡಿದ್ರೂ ಕೆಲಸ ಮಾತ್ರ ಗ್ಯಾರಂಟಿ ಇರಲ್ಲ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಸಾಯಿನಂದಾ
ಸಾಯಿನಂದಾ

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More