AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ವಿಶಿಷ್ಟ ಚಿಪ್ಪನ್ನು ಹೊಂದಿದ ಬಸವನಹುಳುವನ್ನು ಗುರುತಿಸುವಿರಾ?

Optical Illusion : ನನಗಿದು ಅರ್ಥವೇ ಆಗುತ್ತಿಲ್ಲ. ನೀಲಿ ಬಣ್ಣದ ಚಿಪ್ಪನ್ನು ಹೊಂದಿದ್ದು ವಿಶೇಷ ಬಸವನಹುಳುವೆ? ಆರನೇ ಸಾಲಿನಲ್ಲಿರುವ 5ನೇ ಬಸವನಹುಳು ಹೌದೆ? ಅಯ್ಯೋ ಇದು ನಿಜಕ್ಕೂ ಕಷ್ಟಕರವಾಗಿದೆ... ಎನ್ನುತ್ತಿದ್ದಾರೆ ನೆಟ್ಟಿಗರು. ನೀವು?

Viral: ವಿಶಿಷ್ಟ ಚಿಪ್ಪನ್ನು ಹೊಂದಿದ ಬಸವನಹುಳುವನ್ನು ಗುರುತಿಸುವಿರಾ?
ವಿಶಿಷ್ಟವಾದ ಚಿಪ್ಪು ಹೊಂದಿದ ಬಸವನಹುಳುವನ್ನು ಗುರುತಿಸಿ
TV9 Web
| Edited By: |

Updated on:Jun 16, 2023 | 1:36 PM

Share

Brain Teaser : ಹದ್ದಿನ ಕಣ್ಣನ್ನು ಉಳ್ಳವರು ಮಾತ್ರ ಈ ಬ್ರೇನ್​ ಟೀಸರ್ ಬಿಡಿಸಲು ಸಾಧ್ಯ. ಇಷ್ಟೊಂದು ಬಸವನಹುಳುಗಳ ಮಧ್ಯೆ ವಿಶೇಷವಾದ ಚಿಪ್ಪನ್ನು ಹೊಂದಿರುವ ಬಸವನ ಹುಳು ನುಸುಳಿದೆ. ಇದನ್ನು ನೋಡಿದ ಫೇಸ್​ಬುಕ್ಕಿಗರು ಗೊಂದಲಕ್ಕೆ ಬಿದ್ದು ತಲೆ ಕೆರೆದುಕೊಳ್ಳುತ್ತಿದ್ದಾರೆ. ನೀವು ಅತೀ ಚುರುಕು ಎನ್ನುವುದು ಗೊತ್ತಿದ್ಧೆ ಈ ಚಿತ್ರವನ್ನು ಇಲ್ಲಿ ಕೊಡಲಾಗಿದೆ. ಎಂದಿನಂತೆ ಗೆರ್ಗೆಲಿ ಡುಡಾಸ್ (Gergely Dudas) ಎಂಬ ಚಿತ್ರಕಲಾವಿದರು ಇದನ್ನು ರಚಿಸಿದ್ಧಾರೆ.

ಇಲ್ಲಿರುವ ಬಸವನಹುಳುಗಳು ಒಂದೊಂದು ಬಗೆಯ ಬಣ್ಣದ ಚಿಪ್ಪನ್ನು ಹೊಂದಿವೆ. ಇವುಗಳಲ್ಲಿ ಒಂದು ಮಾತ್ರ ಅತ್ಯಂತ ವಿಶೇಷ ಚಿಪ್ಪನ್ನು ಹೊಂದಿದೆ. ಅದನ್ನು ಕಂಡುಹಿಡಿಯುವುದೇ ನಿಮಗೀಗ ಕೆಲಸ. ಸಮಯದ ಮಿತಿ ಏನೂ ಇಲ್ಲ. ನೀವೀಗ ಊಟ ಮಾಡುತ್ತ ಕಣ್ಣಿಗೂ ಮೆದುಳಿಗೂ ವಿಶ್ರಾಂತಿ ಕೊಡುವುದೇ ಈ ಚಟುವಟಿಕೆಯ ಉದ್ದೇಶ. ಬಹುಶಃ ಇಷ್ಟು ದಿನದ ಚಟುವಟಿಕೆಗಳಲ್ಲಿ ಇದು ಅತ್ಯಂತ ಸರಳವೆಂದು ನಮ್ಮ ಅನಿಸಿಕೆ.

ಇದನ್ನೂ ಓದಿ : Viral: ಕತ್ರೀನಾರನ್ನೇ ಸೋಲಿಸಿದಿರಿ ಮೇಡಮ್​! ಸಲ್ಮಾನ್​ ಭಾಯ್​ ಈ ಕಡೆ ಸ್ವಲ್ಪ ನೋಡಿ ಎನ್ನುತ್ತಿರುವ ನೆಟ್ಟಿಗರು

ಈ ಪೋಸ್ಟ್​ಗೆ 300ಕ್ಕೂ ಹೆಚ್ಚು ಜನರು ಇಷ್ಟಪಟ್ಟಿದ್ದಾರೆ. 30ಕ್ಕೂ ಹೆಚ್ಚು ಜನರು ಉತ್ತರ ಕಂಡುಕೊಳ್ಳಲು ಪ್ರಯತ್ನಿಸಿದ್ದಾರೆ. 60ಕ್ಕೂ ಹೆಚ್ಚು ಜನರು ಮರುಹಂಚಿಕೆ ಮಾಡಿದ್ದಾರೆ. ನನಗಿದು ಅರ್ಥವೇ ಆಗುತ್ತಿಲ್ಲ. ನೀಲಿ ಬಣ್ಣದ ಚಿಪ್ಪನ್ನು ಹೊಂದಿದ್ದು ವಿಶೇಷ ಬಸವನಹುಳುವೆ? ಅಂತೂ ನನಗೆ ಉತ್ತರ ಸಿಕ್ಕಿತು. ಆರನೇ ಸಾಲಿನಲ್ಲಿರುವ 5ನೇ ಬಸವನಹುಳು ಅಂತಿಮ ಉತ್ತರ. ಅಯ್ಯೋ ಇದು ನಿಜಕ್ಕೂ ಕಷ್ಟಕರವಾಗಿದೆ… ಅಂತೆಲ್ಲ ಪ್ರತಿಕ್ರಿಯಿಸಿದ್ದಾರೆ.

ನಿಮಗೆ ಉತ್ತರ ಹೊಳೆಯಿತೆ?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 1:35 pm, Fri, 16 June 23