Viral : ‘ಈ ಕಸವನ್ನು ಮತ್ತು ಆ ‘ಆರೇಂಜ್​’ ಸಮವಸ್ತ್ರಧಾರಿಯನ್ನು ಎಡಿಟ್ ಮಾಡಬಹುದೆ?’

Photoshop : ಹೌದಾ ಬ್ರೋ? ಹಾಗಿದ್ದರೆ ಆ ಕಸ ಎತ್ತುವವರನ್ನು ಉಳಿಸಿ ಈಕೆಯನ್ನು ಕಸದೊಂದಿಗೆ ಮಾಯವಾಗಿಸಿದರೆ ಹೇಗೆ ಎಂದು ಬೆಂಜಾಮಿನ್​ ಎನ್ನುವವರು ರೀಎಡಿಟ್ ಮಾಡಿ ಟ್ವೀಟ್ ಮಾಡಿದ್ದಾರೆ!

Viral : 'ಈ ಕಸವನ್ನು ಮತ್ತು ಆ 'ಆರೇಂಜ್​' ಸಮವಸ್ತ್ರಧಾರಿಯನ್ನು ಎಡಿಟ್ ಮಾಡಬಹುದೆ?'
ಫೋಟೋ ಎಡಿಟ್ ಮಾಡಿದ ನಂತರ ಮತ್ತು ಮೊದಲು
Follow us
TV9 Web
| Updated By: ಶ್ರೀದೇವಿ ಕಳಸದ

Updated on:Jun 10, 2023 | 12:02 PM

Graphics : ಜೇಮ್ಡ್​ ಫ್ರಿಡ್​ಮನ್ ಎಂಬಾತ ಫೋಟೋಶಾಪ್​ ಪರಿಣತ. ಫೋಟೋಶಾಪ್ (Photoshop)​ ಕೌಶಲಗಳಿಂದ ಜನರ ಗಮನ ಸೆಳೆಯುತ್ತಿರುತ್ತಾನೆ. ಭಾರೀ ಪ್ರಸಿದ್ಧಿ ಪಡೆದಿರುವ ಈತನ ಬಳಿ ಜಾಲತಾಣಿಗರು ತಮ್ಮ ಭಾವಚಿತ್ರಗಳನ್ನು ಎಡಿಟ್ ಮಾಡಿಕೊಡಲು ಕೇಳಿಕೊಳ್ಳುತ್ತಿರುತ್ತಾರೆ. ಆಗವನು ಊಹೆಗೆ ನಿಲುಕಲಾರದಂತೆ ಕಲಾಕೌಶಲ ತೋರುತ್ತಿರುತ್ತಾನೆ. ಇದೀಗ ಒಬ್ಬ ಯುವತಿ ತನ್ನ ಫೋಟೋ ಒಂದನ್ನು ಕಳಿಸಿ, ತನ್ನನ್ನು ಸುತ್ತುವರಿದ ಕಸದ ರಾಶಿಯನ್ನು ಎಡಿಟ್ ಮಾಡಿಕೊಡು ಎಂದಿದ್ದಾಳೆ.

ಈಕೆ ಹೀಗೆ ಫೋಟೋ ತೆಗೆಸಿಕೊಳ್ಳುವಾಗ ಒಬ್ಬಾಕೆ ಕಸವನ್ನು ಸ್ವಚ್ಛಗೊಳಿಸುತ್ತಿದ್ದಳು. ನಂತರ ಜೇಮ್ಸ್​ ಬಳಿ ಕಸ ಮತ್ತು ಆರೇಂಜ್​ ಸಮವಸ್ತ್ರ ಧರಿಸಿದ ಕಸ ಸ್ವಚ್ಛಗೊಳಿಸುವವಳು ಇಲ್ಲದಂತೆ ಎಡಿಟ್ ಮಾಡಿಕೊಡಬಹುದೆ ಎಂದು ಕೇಳಿದಳು. ಆಗ ಕಸದ ಒಂದಿನಿತೂ ನಿಶಾನೆ ಇಲ್ಲದಂತೆ ಮತ್ತೆ ಸ್ವಚ್ಛಗೊಳಿಸುವವಳು ಇಲ್ಲದಂತೆ ಎಡಿಟ್ ಮಾಡಿಕೊಟ್ಟಿದ್ದಾನೆ.

ಇದನ್ನೂ ಓದಿ : Viral Video: ಕೊಂಬೆಯಲ್ಲಿ ಸಿಲುಕಿದ್ದ ಗೂಬೆಯನ್ನು ರಕ್ಷಿಸಿದವನಿಗೆ ನೆಟ್ಟಿಗರಿಂದ ಧನ್ಯವಾದ

ಈ ಟ್ವೀಟ್​ ಅನ್ನು ಜೂನ್ 7ರಂದು ಮಾಡಲಾಗಿದೆ. ಈತನಕ 14.3 ಮಿಲಿಯನ್​ ಜನರು ನೋಡಿದ್ದಾರೆ. 2.7 ಲಕ್ಷ ಜನರು ಇಷ್ಟಪಟ್ಟಿದ್ದಾರೆ. ಸಾವಿರಾರು ಜನರು ರೀಟ್ವೀಟ್ ಮಾಡಿದ್ದಾರೆ. ಅಬ್ಬಾ! ಗ್ರಾಫಿಕ್ ಡಿಸೈನರ್​ ಕೈಚಳಕ ಅದ್ಭುತವಾಗಿದೆ. ಜೇಮ್ಸ್​ ಒಬ್ಬ ಅಸಾಧಾರಣ ಪ್ರತಿಭೆಯುಳ್ಳ ಕಲಾವಿದ  ಎಂದು ನೆಟ್ಟಿಗರೆಲ್ಲ ಶ್ಲಾಘಿಸುತ್ತಿದ್ದಾರೆ. ಆದರೆ ಕೆಲವರು, ಫೋಟೋ ತೆಗೆಸಿಕೊಳ್ಳುವವಳಿಗಿಂತ ಮತ್ತು ಫೋಟೋ ಎಡಿಟ್ ಮಾಡಿರುವವನಿಗಿಂತ ನಾನು ಕಸ ಎತ್ತುವವಳನ್ನೇ ಗೌರವಿಸುತ್ತೇನೆ ಎಂದಿದ್ದಾರೆ.

ಇದನ್ನೂ ಓದಿ : Viral Video: ‘ಡ್ರೀಮಮ್ ವೇಕಪಮ್ ಕ್ರಿಟಿಕಲ್ ಕಂಡೀಷನಮ್’ ಗಾಯಕಿ ಅಂಕಿತಾ ಕುಂಡು ಹೊಸ ರೀಲ್​ಗೆ ನೆಟ್ಟಿಗರ ಬೇಸರ

ಹೌದಾ ಬ್ರೋ? ಹಾಗಿದ್ದರೆ ಕಸ ಎತ್ತುವವಳನ್ನು ಉಳಿಸಿ ಈಕೆಯನ್ನು ಕಸದೊಂದಿಗೆ ಮಾಯವಾಗಿಸಿದರೆ ಹೇಗೆ ಎಂದು ಬೆಂಜಾಮಿನ್​ ಎನ್ನುವವರು ಎಡಿಟ್ ಮಾಡಿ ಮೇಲಿನ ಫೋಟೋ ಟ್ವೀಟ್ ಮಾಡಿದ್ಧಾರೆ. ಈಕೆಗೆ ಶ್ರೇಷ್ಠತೆಯ ವ್ಯಸನ ತಲೆಗೇರಿದೆ ಅದಕ್ಕೆ ಹೀಗಾಡುತ್ತಿದ್ದಾಳೆ ಎಂದು ಅನೇಕರು ಈಕೆಯನ್ನು ಬೈದಿದ್ದಾರೆ.

ನೀವೇನು ಹೇಳುತ್ತೀರಿ ಇದಕ್ಕೆ?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 11:49 am, Sat, 10 June 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ