‘ಅನುಮತಿ ಪಡೆಯದೆಯೂ ವಿದೇಶಕ್ಕೆ ತೆರಳಬಹುದು’; ಕೋರ್ಟ್ ಆದೇಶದಿಂದ ಜಾಕ್ವೆಲಿನ್ ನಿರಾಳ
ದೆಹಲಿ ಹೈಕೋರ್ಟ್ನಲ್ಲಿ ಜಾಕ್ವೆಲಿನ್ ಫರ್ನಾಂಡಿಸ್ ಅವರು ಸಲ್ಲಿಕೆ ಮಾಡಿದ ಅರ್ಜಿ ವಿಚಾರಣೆಗೆ ಬಂದಿದೆ. ಈ ವೇಳೆ ವಿಶೇಷ ನ್ಯಾಯಮೂರ್ತಿ ಶೈಲೇಂದ್ರ ಮಲಿಕ್ ಅವರು ಹೊಸ ಆದೇಶ ನೀಡಿದ್ದಾರೆ. ‘ಇನ್ನುಮುಂದೆ ವಿದೇಶಕ್ಕೆ ತೆರಳಬೇಕಾದರೆ ಜಾಕ್ವೆಲಿನ್ ಒಪ್ಪಿಗೆ ಪಡೆಯಬೇಕು ಎಂದಿಲ್ಲ’ ಎಂದು ಅವರು ಹೇಳಿದ್ದಾರೆ.
ನಟಿ ಜಾಕ್ವೆಲಿನ್ ಫರ್ನಾಂಡಿಸ್ (Jacqueline Fernandez) ಅವರು ಇತ್ತೀಚೆಗೆ ಸಾಕಷ್ಟು ಸುದ್ದಿಯಲ್ಲಿದ್ದಾರೆ. 200 ಕೋಟಿ ರೂಪಾಯಿ ವಂಚನೆ ಪ್ರಕರಣದ ಪ್ರಮುಖ ರುವಾರಿ ಸುಕೇಶ್ ಚಂದ್ರಶೇಖರ್ (Sukesh Chandrashekhar) ಜೊತೆ ಜಾಕ್ವೆಲಿನ್ ಆತ್ಮೀಯತೆ ಬೆಳೆಸಿಕೊಂಡಿದ್ದರು. ಈತನಿಂದ ಜಾಕ್ವೆಲಿನ್ ಉಡುಗೊರೆ ಕೂಡ ಪಡೆದಿದ್ದರು. ಇದು ಅವರಿಗೆ ಮುಳುವಾಗಿದೆ. ಈ ಪ್ರಕರಣದಲ್ಲಿ ಜಾಕ್ವೆಲಿನ್ ಕೂಡ ವಿಚಾರಣೆ ಎದುರಿಸುತ್ತಿದ್ದಾರೆ. ಆರಂಭದಲ್ಲಿ ಅವರಿಗೆ ವಿದೇಶಕ್ಕೆ ತೆರಳಲು ನಿರ್ಬಂಧ ಇತ್ತು. ಬಳಿಕ ಒಪ್ಪಿಗೆ ಪಡೆದು ವಿದೇಶಕ್ಕೆ ಹೋಗಲು ಅವಕಾಶ ನಿಡಲಾಯಿತು. ಈಗ ಒಪ್ಪಿಗೆ ಇಲ್ಲದೆಯೂ ಅವರು ವಿದೇಶಕ್ಕೆ ತೆರಳಬಹುದು ಎಂದು ಕೋರ್ಟ್ ಆದೇಶ ನೀಡಿದೆ. ಇದರಿಂದ ಜಾಕ್ವೆಲಿನ್ ಫರ್ನಾಂಡಿಸ್ ಅವರು ನಿರಾಳ ಆಗಿದ್ದಾರೆ.
ದೆಹಲಿ ಹೈಕೋರ್ಟ್ನಲ್ಲಿ ಜಾಕ್ವೆಲಿನ್ ಫರ್ನಾಂಡಿಸ್ ಅವರು ಸಲ್ಲಿಕೆ ಮಾಡಿದ ಅರ್ಜಿ ವಿಚಾರಣೆಗೆ ಬಂದಿದೆ. ಈ ವೇಳೆ ವಿಶೇಷ ನ್ಯಾಯಮೂರ್ತಿ ಶೈಲೇಂದ್ರ ಮಲಿಕ್ ಅವರು ಹೊಸ ಆದೇಶ ನೀಡಿದ್ದಾರೆ. ‘ಜಾಮೀನಿನ ಷರತ್ತುಗಳನ್ನು ಜಾಕ್ವೆಲಿನ್ ದುರ್ಬಳಕೆ ಮಾಡಿಕೊಂಡಿಲ್ಲ. ಇನ್ನುಮುಂದೆ ವಿದೇಶಕ್ಕೆ ತೆರಳಬೇಕಾದರೆ ಜಾಕ್ವೆಲಿನ್ ಒಪ್ಪಿಗೆ ಪಡೆಯಬೇಕು ಎಂದಿಲ್ಲ. ಮೂರು ದಿನ ಮೊದಲು ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿದರೆ ಸಾಕು’ ಎಂದು ಶೈಲೇಂದ್ರ ಮಲಿಕ್ ಹೊಸ ಆದೇಶದಲ್ಲಿ ಹೇಳಿದ್ದಾರೆ.
‘ಕೆಲಸದ ಕಾರಣದಿಂದ ನಟಿ ತಕ್ಷಣಕ್ಕೆ ವಿದೇಶಕ್ಕೆ ತೆರಳುವ ಪರಿಸ್ಥಿತಿಗಳು ಬಂದೊದಗುತ್ತವೆ. ಈಗಿರುವ ತೊಡಕಿನಿಂದ ಅವರಿಗೆ ಅವಕಾಶ ಕೈತಪ್ಪಬಹುದು. ಹೀಗಾಗಿ, ಇನ್ನುಮುಂದೆ ಅವರು ಒಪ್ಪಿಗೆ ಪಡೆಯಬೇಕಿಲ್ಲ’ ಎಂದು ಶೈಲೇಂದ್ರ ಮಲಿಕ್ ಹೇಳಿದ್ದಾರೆ. ‘ಕೋರ್ಟ್ನ ಒಪ್ಪಿಗೆ ಇಲ್ಲದೆ ವಿದೇಶಕ್ಕೆ ತೆರಳಬಾರದು’ ಎಂದು ಜಾಮೀನು ನೀಡುವಾಗ ಆದೇಶಿಸಲಾಗಿತ್ತು.
ಇದನ್ನೂ ಓದಿ: ವಿವಾದಗಳನ್ನು ಮರೆತು ಮುಂಬೈನಲ್ಲಿ ಐಷಾರಾಮಿ ಮನೆ ಖರೀದಿಸಿದ ಜಾಕ್ವೆಲಿನ್ ಫರ್ನಾಂಡಿಸ್
‘ಜಾಕ್ವೆಲಿನ್ ಫರ್ನಾಂಡಿಸ್ ಶ್ರೀಲಂಕಾದ ಪೌರತ್ವ ಹೊಂದಿದ್ದಾರೆ. ಅವರು ಭಾರತದಲ್ಲಿ 2009ರಿಂದ ವಾಸಿಸುತ್ತಿದ್ದಾರೆ. ಅಲ್ಲಿಂದ ಇಲ್ಲಿಯವರೆಗೆ ಅವರು ತಪ್ಪದೇ ತೆರಿಗೆ ಪಾವತಿ ಮಾಡುತ್ತಿದ್ದಾರೆ’ ಎಂದು ಜಡ್ಜ್ ಹೇಳಿದ್ದಾರೆ.
ಸುಕೇಶ್ ಚಂದ್ರಶೇಖರ್ 200 ಕೋಟಿ ರೂಪಾಯಿ ವಂಚನೆ ಮಾಡಿದ್ದಾನೆ. ಆತನ ಜೊತೆ ಜಾಕ್ವೆಲಿನ್ ಹೆಸರು ಕೇಳಿ ಬಂದಿದ್ದರಿಂದ ನಟಿಗೆ ಸಾಕಷ್ಟು ತೊಂದರೆ ಆಗಿದೆ. ಹಲವು ಆಫರ್ಗಳನ್ನು ಅವರು ಕಳೆದುಕೊಂಡಿದ್ದಾರೆ. ಇತ್ತೀಚೆಗೆ ಬರ್ತ್ಡೇ ಪ್ರಯುಕ್ತ ಜಾಕ್ವೆಲಿನ್ಗೆ ಸುಕೇಶ್ ಪ್ರೇಮಪತ್ರ ಬರೆದಿದ್ದ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ