‘ಗದರ್​ 2’ ಘರ್ಜನೆಗೆ ‘ಕೆಜಿಎಫ್​ 2’ ಚಿತ್ರದ ದಾಖಲೆ ಉಡೀಸ್​; ಎಷ್ಟಾಯಿತು ಒಟ್ಟು ಕಲೆಕ್ಷನ್​?

ಯಶ್​ ನಟನೆಯ ‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾ ಹಿಂದಿಗೆ ಡಬ್​ ಆಗಿ ತೆರೆಕಂಡಿತ್ತು. ಹಿಂದಿ ವರ್ಷನ್​ನಿಂದ ಆ ಸಿನಿಮಾಗೆ ಬರೋಬ್ಬರಿ 434 ಕೋಟಿ ರೂಪಾಯಿ ಕಲೆಕ್ಷನ್​ ಆಗಿತ್ತು. ಈಗ ಆ ಚಿತ್ರದ ಗಳಿಕೆಯನ್ನೂ ಮೀರಿಸಿ ‘ಗದರ್​ 2’ ಸಿನಿಮಾ ಕಲೆಕ್ಷನ್​ ಮಾಡಿದೆ. ಆ ಮೂಲಕ ಸನ್ನಿ ಡಿಯೋಲ್​ ಅವರು ಜಯಭೇರಿ ಬಾರಿಸಿದ್ದಾರೆ.

‘ಗದರ್​ 2’ ಘರ್ಜನೆಗೆ ‘ಕೆಜಿಎಫ್​ 2’ ಚಿತ್ರದ ದಾಖಲೆ ಉಡೀಸ್​; ಎಷ್ಟಾಯಿತು ಒಟ್ಟು ಕಲೆಕ್ಷನ್​?
ಸನ್ನಿ ಡಿಯೋಲ್​, ಯಶ್​
Follow us
ಮದನ್​ ಕುಮಾರ್​
|

Updated on: Aug 27, 2023 | 3:36 PM

ನಟ ಸನ್ನಿ ಡಿಯೋಲ್ (Sunny Deol)​ ಅಭಿನಯದ ‘ಗದರ್​ 2’ ಸಿನಿಮಾ ಬಾಕ್ಸ್​ ಆಫೀಸ್​ನಲ್ಲಿ ಸುನಾಮಿ ಎಬ್ಬಿಸಿದೆ. ಈ ಚಿತ್ರ ಈ ಪರಿ ಅಬ್ಬರಿಸುತ್ತದೆ ಎಂದು ಬಹುತೇಕರು ಊಹಿಸಿರಲಿಲ್ಲ. ‘ಒಎಂಜಿ 2’ ಮತ್ತು ‘ಜೈಲರ್​’ ಸಿನಿಮಾದ ಎದುರಿನಲ್ಲಿ ‘ಗದರ್​ 2’ (Gadar 2) ಚಿತ್ರ ಬಿಡುಗಡೆಯಾಗಿ ಭರ್ಜರಿ ಪೈಪೋಟಿ ನೀಡಿದೆ. ಸತತ 16 ದಿನಗಳ ಕಾಲ ಗಲ್ಲಾಪೆಟ್ಟಿಗೆಯಲ್ಲಿ ಈ ಸಿನಿಮಾ ಅಬ್ಬರಿಸಿದೆ. ಇದರ ಮೋಡಿಗೆ ಜನರು ಮನ ಸೋತಿದ್ದಾರೆ. ಈ ಮೊದಲು ಸ್ಟಾರ್​ ನಟರ ಸಿನಿಮಾಗಳು ಮಾಡಿದ್ದ ದಾಖಲೆಗಳನ್ನು ‘ಗದರ್​ 2’ ಚಿತ್ರ ಮುರಿದುಹಾಕಿದೆ. ಅಚ್ಚರಿ ಎಂದರೆ ಹಿಂದಿ ಮಾರುಕಟ್ಟೆಯಲ್ಲಿ ‘ಕೆಜಿಎಫ್​: ಚಾಪ್ಟರ್​ 2’ (KGF: Chapter 2) ಸಿನಿಮಾದ ಗಳಿಕೆಯನ್ನೂ ಕೂಡ ‘ಗದರ್​ 2’ ಸಿನಿಮಾ ಮೀರಿಸಿದೆ. ಆ ಮೂಲಕ ಹಿಂದಿಯಲ್ಲಿ ಅತಿ ಹೆಚ್ಚು ಕಲೆಕ್ಷನ್​ ಮಾಡಿದ ಮೂರನೇ ಸಿನಿಮಾ ಎಂಬ ಖ್ಯಾತಿ ಈ ಚಿತ್ರಕ್ಕೆ ಸಿಕ್ಕಿದೆ.

ಯಶ್​ ನಟನೆಯ ‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾ ಹಿಂದಿಗೆ ಡಬ್​ ಆಗಿ ತೆರೆಕಂಡಿತ್ತು. ಹಿಂದಿ ವರ್ಷನ್​ನಿಂದ ಆ ಸಿನಿಮಾಗೆ ಬರೋಬ್ಬರಿ 434 ಕೋಟಿ ರೂಪಾಯಿ ಕಲೆಕ್ಷನ್​ ಆಗಿತ್ತು. ಈಗ ಆ ಚಿತ್ರದ ಗಳಿಕೆಯನ್ನೂ ಮೀರಿಸಿ ‘ಗದರ್​ 2’ ಸಿನಿಮಾ ಕಲೆಕ್ಷನ್​ ಮಾಡಿದೆ. ಆ ಮೂಲಕ ಸನ್ನಿ ಡಿಯೋಲ್​ ಅವರು ಜಯಭೇರಿ ಬಾರಿಸಿದ್ದಾರೆ. ಈ ಚಿತ್ರದ ಅಬ್ಬರ ಇನ್ನೂ ನಿಂತಿಲ್ಲ. ಇನ್ನೂ ಒಂದಷ್ಟು ದಿನಗಳ ಕಾಲ ಉತ್ತಮವಾಗಿ ಕಮಾಯಿ ಮಾಡುವ ಸಾಧ್ಯತೆ ದಟ್ಟವಾಗಿದೆ. ಮೂರನೇ ವೀಕೆಂಡ್​ನಲ್ಲಿ ಈ ಚಿತ್ರಕ್ಕೆ ಎರಡಂಕಿ ಕಲೆಕ್ಷನ್​ ಆಗಿರುವುದು ಗಮನಾರ್ಹ ವಿಚಾರ.

ಇದನ್ನೂ ಓದಿ: ಗದರ್ 2 ; ಪಾಕ್ ವಿರೋಧಿಯಲ್ಲ, ಪಾಕ್-ಭಾರತದ ಬಿಕ್ಕಟ್ಟಿಗೆ ರಾಜಕೀಯ ಕಾರಣ: ಸನ್ನಿ ಡಿಯೋಲ್

‘ಗದರ್​ 2’ ಸಿನಿಮಾದ ಒಟ್ಟು ಕಲೆಕ್ಷನ್​ ಈಗ 440 ಕೋಟಿ ರೂಪಾಯಿ ಆಗಿದೆ. ಭಾನುವಾರದ (ಆಗಸ್ಟ್​ 27) ಗಳಿಕೆ ಕೂಡ ಸೇರಿದರೆ 450 ಕೋಟಿ ರೂಪಾಯಿ ಮೀರುವ ಸಾಧ್ಯತೆ ಇದೆ. ಈಗ ಈ ಚಿತ್ರದ ಎದುರು ಇರುವ ಟಾರ್ಗೆಟ್​ ‘ಪಠಾಣ್​’ ಮತ್ತು ‘ಬಾಹುಬಲಿ 2’ ಸಿನಿಮಾಗಳು. ಈ ವರ್ಷ ತೆರೆಕಂಡ ‘ಪಠಾಣ್​’ ಸಿನಿಮಾ 525 ಕೋಟಿ ರೂಪಾಯಿ ಗಳಿಸಿತ್ತು. ‘ಬಾಹುಬಲಿ 2’ ಚಿತ್ರದ ಹಿಂದಿ ವರ್ಷನ್​ಗೆ 511 ಕೋಟಿ ರೂಪಾಯಿ ಕಲೆಕ್ಷನ್​ ಆಗಿತ್ತು. ಆ ಸಿನಿಮಾಗಳನ್ನು ಹಿಂದಿಕ್ಕಲು ‘ಗದರ್​ 2’ ಸಿನಿಮಾಗೆ ಸಾಧ್ಯವಾಗುತ್ತಾ ಎಂಬುದನ್ನು ಕಾದುನೋಡಬೇಕು.

ಇದನ್ನೂ ಓದಿ: ‘ಸಿನಿಮಾ ಹಿಟ್ ಆದ ಬಳಿಕ ಸನ್ನಿ ಡಿಯೋಲ್​ಗೆ ಸೊಕ್ಕು ಬಂತು’; ನಟನ ವರ್ತನೆಗೆ ಆಕ್ರೋಶ

ಅನಿಲ್​ ಶರ್ಮಾ ಅವರು ‘ಗದರ್​ 2’ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಸನ್ನಿ ಡಿಯೋಲ್​ ಮತ್ತು ಅಮೀಷಾ ಪಟೇಲ್​ ಅವರು ಜೋಡಿಯಾಗಿ ನಟಿಸಿದ್ದಾರೆ. ಆ್ಯಕ್ಷನ್​ ಪ್ರಿಯರಿಗೆ ಈ ಸಿನಿಮಾ ಸಖತ್​ ಇಷ್ಟ ಆಗಿದೆ. ‘ಒಎಂಜಿ 2’ ಮತ್ತು ‘ಜೈಲರ್​’ ಸಿನಿಮಾದ ಪೈಪೋಟಿ ಇದ್ದರೂ ಕೂಡ ‘ಗದರ್​ 2’ ಸಿನಿಮಾ ಅಬ್ಬರಿಸಿದೆ. ಆಗಸ್ಟ್​ 25ರಂದು ಹೊಸ ಸಿನಿಮಾಗಳು ರಿಲೀಸ್​ ಆಗಿದ್ದರೂ ಕೂಡ ಸನ್ನಿ ಡಿಯೋಲ್​ ಹವಾ ನಿಂತಿಲ್ಲ. ನಾಲ್ಕನೇ ವಾರವೂ ಈ ಸಿನಿಮಾ ಅನೇಕ ಕಡೆಗಳಲ್ಲಿ ಉತ್ತಮವಾಗಿ ಪ್ರದರ್ಶನ ಕಾಣುತ್ತಿದೆ. ಸನ್ನಿ ಡಿಯೋಲ್​ ಅವರ ವೃತ್ತಿಜೀವನದ ಬಹುದೊಡ್ಡ ಚಿತ್ರವಾಗಿ ‘ಗದರ್​ 2’ ಹೊರಹೊಮ್ಮಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ