ಶಾರುಖ್ ಖಾನ್ ನಿವಾಸದ ಎದುರು ಭಾರೀ ಪ್ರತಿಭಟನೆ; ಮನ್ನತ್ಗೆ ಬಿಗಿ ಭದ್ರತೆ ನೀಡಿದ ಪೊಲೀಸರು
ಶಾರುಖ್ ಖಾನ್ ಅವರು ಸ್ಟಾರ್ ಹೀರೋ. ಅವರು ಹಲವು ಜಾಹೀರಾತುಗಳಲ್ಲಿ ನಟಿಸುತ್ತಿದ್ದಾರೆ. ಕೆಲವು ಆನ್‌ಲೈನ್ ಗೇಮ್ಗಳ ಜಾಹೀರಾತಲ್ಲಿ ಕಾಣಿಸಿಕೊಂಡಿದ್ದಾರೆ. ಹಣಕ್ಕಾಗಿ ಅವರು ಈ ರೀತಿ ಮಾಡಬಾರದಿತ್ತು ಅನ್ನೋದು ಕೆಲವರ ಅಭಿಪ್ರಾಯ. ಹೀಗಾಗಿ, ಜೂಜಿನ ಪ್ರಚಾರವನ್ನು ಶಾರುಖ್ ಬೆಂಬಲಿಸಬಾರದು ಎಂದು ಕೆಲವರು ಒತ್ತಾಯಿಸಿದ್ದಾರೆ.
ಬಾಲಿವುಡ್‌ನ ನಟ ಶಾರುಖ್ ಖಾನ್ (Shah Rukh Khan) ಅವರು ಸದ್ಯ ‘ಜವಾನ್’ ಸಿನಿಮಾ (Jawan Movie) ಪ್ರಚಾರದಲ್ಲಿ ಬ್ಯುಸಿ ಆಗಿದ್ದಾರೆ. ಈ ಸಿನಿಮಾ ನೋಡಲು ಲಕ್ಷಾಂತರ ಅಭಿಮಾನಿಗಳು ಕಾಯುತ್ತಿದ್ದಾರೆ. ಈ ಚಿತ್ರದಲ್ಲಿ ಅವರು ಆ್ಯಕ್ಷನ್ ಅವತಾರ ತಾಳಲಿದ್ದಾರೆ. ಈ ಚಿತ್ರದ ಮೂಲಕ ಶಾರುಖ್ ಮತ್ತೊಮ್ಮೆ ಬೆಳ್ಳಿತೆರೆಯಲ್ಲಿ ಮಿಂಚಲು ರೆಡಿ ಆಗಿದ್ದಾರೆ. ಈ ಮಧ್ಯೆ ಅವರ ನಿವಾಸ ಮನ್ನತ್ ಹೊರಗೆ ಕೆಲವರು ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನಾಕಾರರನ್ನು ಮುಂಬೈ ಪೊಲೀಸರು ತಡೆದಿದ್ದು, ನಿವಾಸಕ್ಕೆ ಹೆಚ್ಚಿನ ಭದ್ರತೆ ನೀಡಲಾಗಿದೆ. ಶಾರುಖ್ ಖಾನ್ ಮನೆ ಎದುರು ಪ್ರತಿಭಟನೆ ನಡೆಸಿದ ಫೋಟೋ-ವಿಡಿಯೋ ವೈರಲ್ ಆಗುತ್ತಿದೆ.
ಶಾರುಖ್ ಖಾನ್ ಅವರು ಸ್ಟಾರ್ ಹೀರೋ. ಅವರು ಹಲವು ಜಾಹೀರಾತುಗಳಲ್ಲಿ ನಟಿಸುತ್ತಿದ್ದಾರೆ. ಕೆಲವು ಆನ್‌ಲೈನ್ ಗೇಮ್ಗಳ ಜಾಹೀರಾತಲ್ಲಿ ಕಾಣಿಸಿಕೊಂಡಿದ್ದಾರೆ. ಹಣಕ್ಕಾಗಿ ಅವರು ಈ ರೀತಿ ಮಾಡಬಾರದಿತ್ತು ಅನ್ನೋದು ಕೆಲವರ ಅಭಿಪ್ರಾಯ. ಹೀಗಾಗಿ, ಜೂಜಿನ ಪ್ರಚಾರವನ್ನು ಶಾರುಖ್ ಬೆಂಬಲಿಸಬಾರದು ಎಂದು ಕೆಲವರು ಒತ್ತಾಯಿಸಿದ್ದಾರೆ.
ಅನ್‌ಟಚ್ ಯೂತ್ ಫೌಂಡೇಶನ್ ಈ ಪ್ರತಿಭಟನೆ ನಡೆಸಿದೆ. ಆನ್‌ಲೈನ್ ಜೂಜನ್ನು ಅವರು ಉತ್ತೇಜಿಸುತ್ತಿದ್ದಾರೆ ಎಂದು ಈ ಫೌಂಡೇಷನ್ ಆರೋಪಿಸಿದೆ. ಈ ರೀತಿಯ ಅಪ್ಲಿಕೇಷನ್ಗಳನ್ನು ಪ್ರಚಾರದಿಂದ ಯುವ ಪೀಳಿಗೆಗೆ ತಪ್ಪು ಸಂದೇಶ ರವಾನೆಯಾಗುತ್ತಿದೆ ಎಂದು ಪ್ರತಿಭಟನಕಾರರು ಅಭಿಪ್ರಾಯಪಟ್ಟಿದ್ದಾರೆ. ಈ ಕಾರಣಕ್ಕೆ ಕೆಲವರು ಶಾರುಖ್ ಖಾನ್ ಅವರ ಮನೆ (ಮನ್ನತ್) ಹೊರಗೆ ಪ್ರತಿಭಟಿಸಲು ಪ್ರಯತ್ನಿಸಿದ್ದಾರೆ. ‘ಮನ್ನತ್’ ಹೊರಗೆ ಭದ್ರತೆ ಹೆಚ್ಚಿಸಲಾಗಿದೆ.
View this post on Instagram
ಇದನ್ನೂ ಓದಿ: ಹೆಚ್ಚಿತು ಶಾರುಖ್ ಖಾನ್ ನಟನೆಯ ‘ಜವಾನ್’ ಸಿನಿಮಾ ಕ್ರೇಜ್; 21 ದಿನ ಮೊದಲೇ ಬುಕಿಂಗ್ ಓಪನ್
ಈ ಬಗ್ಗೆ ಮಾತನಾಡಿರುವ ಅನ್‌ಟಚ್ ಯೂತ್ ಫೌಂಡೇಶನ್ ಅಧ್ಯಕ್ಷ ಕೃಷ್ಣ ಚಂದ್ರ ಅಡಾಲ್, ‘ಶಾರುಖ್ ಅವರಂತಹ ದೊಡ್ಡ ಸ್ಟಾರ್ಗಳ ಮಾತುಗಳನ್ನು ಜನ ಕೇಳುತ್ತಾರೆ. ಅವರು ಅನೇಕ ಜೂಜಿನ ಅಪ್ಲಿಕೇಶನ್‌ಗಳನ್ನು ಪ್ರಚಾರ ಮಾಡುತ್ತಿದ್ದಾರೆ. ಇದು ಯುವ ಪೀಳಿಗೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಇಂತಹ ಜೂಜಿನ ಅಪ್ಲಿಕೇಶನ್‌ಗಳನ್ನು ಅವರು ಪ್ರಚಾರ ಮಾಡಬಾರದು. ಇದನ್ನು ನಿಲ್ಲಿಸದಿದ್ದರೆ ನಾವು ಮತ್ತೆ ಮತ್ತೆ ಪ್ರತಿಭಟನೆ ಮಾಡಬೇಕಾಗುತ್ತದೆ. ಅಪ್ರಾಪ್ತರು ಜೂಜಾಡುವುದನ್ನು ಪೊಲೀಸರು ಕಂಡರೆ ಬಂಧಿಸುತ್ತಾರೆ. ದೊಡ್ಡ ತಾರೆಯರು ಇದು ತಪ್ಪು ಎಂದು ತಿಳಿದೂ ಅದನ್ನು ಪ್ರೋತ್ಸಾಹಿಸುತ್ತಾರೆ’ ಕೃಷ್ಣಚಂದ್ರ ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:55 am, Mon, 28 August 23