ರಿಲೀಸ್ಗೆ ತಿಂಗಳು ಬಾಕಿ ಇರುವಾಗಲೇ ‘ದಿ ವ್ಯಾಕ್ಸಿನ್ ವಾರ್’ ನೋಡಿ ವಿಮರ್ಶೆ ತಿಳಿಸಿದ ಆರ್ ಮಾಧವನ್
ಅಮೆರಿಕದ ನ್ಯೂಯಾರ್ಕ್ ನಗರದಲ್ಲಿ ‘ದಿ ವ್ಯಾಕ್ಸಿನ್ ವಾರ್’ನ ವಿಶೇಷ ಶೋ ಏರ್ಪಡಿಸಲಾಗಿತ್ತು. ಈ ಚಿತ್ರವನ್ನು ನೋಡುವ ಅವಕಾಶ ಆರ್. ಮಾಧವನ್ ಅವರಿಗೆ ಸಿಕ್ಕಿದೆ. ಅವರು ಸಿನಿಮಾ ಹೇಗಿದೆ ಎಂಬುದನ್ನು ವಿವರಿಸಿದ್ದಾರೆ, ಜೊತೆಗೆ ಪ್ರತಿ ಕಲಾವಿದರ ನಟನೆಯ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ.
‘ದಿ ಕಾಶ್ಮೀರ್ ಫೈಲ್ಸ್’ (The Kashmir Files Movie) ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರ ಮುಂದಿನ ಸಿನಿಮಾಗಳ ಬಗ್ಗೆ ಸಾಕಷ್ಟು ನಿರೀಕ್ಷೆ ಸೃಷ್ಟಿ ಆಗಿದೆ. ಕೊವಿಡ್ ಸಂದರ್ಭದಲ್ಲಿ ಭಾರತ ವ್ಯಾಕ್ಸಿನ್ ಕಂಡು ಹಿಡಿಯಿತು. ಇದೇ ವಿಚಾರ ಇಟ್ಟುಕೊಂಡು ವಿವೇಕ್ ಅಗ್ನಿಹೋತ್ರಿ ‘ದಿ ವ್ಯಾಕ್ಸಿನ್ ವಾರ್’ (The Vaccine War) ಸಿನಿಮಾ ನಿರ್ದೇಶನ ಮಾಡಿದ್ದಾರೆ. ಈ ಚಿತ್ರ ರಿಲೀಸ್ ಆಗೋಕೆ ಸರಿಯಾಗಿ ಒಂದು ತಿಂಗಳು (ಸೆಪ್ಟೆಂಬರ್ 28) ಬಾಕಿ ಉಳಿದುಕೊಂಡಿದೆ. ಈಗ ಸಿನಿಮಾ ನೋಡಿದ ನಟ ಆರ್. ಮಾಧವನ್ ಅವರು ಅಭಿಪ್ರಾಯ ತಿಳಿಸಿದ್ದಾರೆ.
‘ದಿ ಕಾಶ್ಮೀರ್ ಫೈಲ್ಸ್’ ಚಿತ್ರವನ್ನು ಅನೇಕರು ಟೀಕೆ ಮಾಡಿದ್ದರು. ಇದೊಂದು ಪ್ರೊಪೊಂಗಾಡ ಸಿನಿಮಾ ಎಂದು ಅನೇಕರು ಅಭಿಪ್ರಾಯಪಟ್ಟಿದ್ದರು. ಆದಾಗ್ಯೂ ಈ ಚಿತ್ರ ನೂರಾರು ಕೋಟಿ ರೂಪಾಯಿ ಬಿಸ್ನೆಸ್ ಮಾಡಿತು. ಈ ಚಿತ್ರದ ಯಶಸ್ಸಿನ ಬಳಿಕ ಅವರ ನಿರ್ದೇಶನದ ‘ದಿ ವ್ಯಾಕ್ಸಿನ್ ವಾರ್’ ಸಿನಿಮಾ ರಿಲೀಸ್ ಆಗುತ್ತಿದೆ. ಈ ಚಿತ್ರದಲ್ಲಿ ಪಲ್ಲವಿ ಜೋಶಿ, ಅನುಪಮ್ ಖೇರ್, ನಾನಾ ಪಾಟೇಕರ್, ಕನ್ನಡದ ಸಪ್ತಮಿ ಗೌಡ ಮೊದಲಾದವರು ನಟಿಸಿದ್ದಾರೆ. ಈ ಚಿತ್ರವನ್ನು ಮಾಧವನ್ ವೀಕ್ಷಿಸಿದ್ದಾರೆ.
ಅಮೆರಿಕದ ನ್ಯೂಯಾರ್ಕ್ ನಗರದಲ್ಲಿ ‘ದಿ ವ್ಯಾಕ್ಸಿನ್ ವಾರ್’ನ ವಿಶೇಷ ಶೋ ಏರ್ಪಡಿಸಲಾಗಿತ್ತು. ಈ ಚಿತ್ರವನ್ನು ನೋಡುವ ಅವಕಾಶ ಆರ್. ಮಾಧವನ್ ಅವರಿಗೆ ಸಿಕ್ಕಿದೆ. ಅವರು ಸಿನಿಮಾ ಹೇಗಿದೆ ಎಂಬುದನ್ನು ವಿವರಿಸಿದ್ದಾರೆ, ಜೊತೆಗೆ ಪ್ರತಿ ಕಲಾವಿದರ ನಟನೆಯ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ.
‘ದಿ ವ್ಯಾಕ್ಸಿನ್ ವಾರ್ ಸಿನಿಮಾ ವೀಕ್ಷಿಸಿದೆ. ಇದೊಂದು ಅದ್ಭುತ ಸಿನಿಮಾ. ಭಾರತೀಯ ವೈಜ್ಞಾನಿಕ ಸಮುದಾಯ ಮಾಡಿದ ತ್ಯಾಗ ಮತ್ತು ಸಾಧನೆಗಳ ಬಗ್ಗೆ ತಿಳಿದು ಅಚ್ಚರಿ ಆಯಿತು. ಅತ್ಯಂತ ಸವಾಲಿನ ಸಮಯದಲ್ಲಿ ಭಾರತದ ಮೊಟ್ಟಮೊದಲ ಲಸಿಕೆಯನ್ನು ತಯಾರಿಸಿ ರಾಷ್ಟ್ರವನ್ನು ಸುರಕ್ಷಿತವಾಗಿರಿಸುವ ಕೆಲಸ ನಡೆದಿತ್ತು. ಕಥೆ ಹೇಳುವುದರಲ್ಲಿ ಮಾಸ್ಟರ್ ಆಗಿರುವ ವಿವೇಕ್ ಅಗ್ನಿಹೋತ್ರಿಗೆ ಒಂದು ಸಲಾಂ’ ಎಂದು ಮಾಧವನ್ ಬರೆದುಕೊಂಡಿದ್ದಾರೆ.
Brilliant audience in a jam packed house today at Atlanta. Congressman Dr. Rich McCormick and his wonderful wife enjoying the movie. Thanks @RichforGA for your overwhelming appreciation of #TheVaccineWar #ATrueStory. Apologies to those who couldn’t be accommodated. pic.twitter.com/5EdxvI6Mbm
— Vivek Ranjan Agnihotri (@vivekagnihotri) August 27, 2023
Just saw “THE VACCINE WAR” and totally blown out of my mind by the spectacular sacrifices and achievements of the Indian scientific community, which made India’s very first vaccine and kept the nation safe during the most challenging period, told by a Master Storyteller who… pic.twitter.com/eeWqTO3QJQ
— Ranganathan Madhavan (@ActorMadhavan) August 28, 2023
ಇದನ್ನೂ ಓದಿ: ‘ಪ್ರಭಾಸ್ ಜೊತೆ ನಾನು ಸ್ಪರ್ಧಿಸಲ್ಲ, ನನ್ನನ್ನು ಬಿಟ್ಟುಬಿಡಿ’; ಬೇಡಿಕೊಂಡ ವಿವೇಕ್ ಅಗ್ನಿಹೋತ್ರಿ
‘ಪಲ್ಲವಿ ಜೋಶಿ, ಅನುಪಮ್ ಖೇರ್, ನಾನಾ ಪಾಟೇಕರ್ ಸೇರಿ ಎಲ್ಲರೂ ಅದ್ಭುತ ನಟನೆ ತೋರಿದ್ದಾರೆ’ ಎಂದು ಮಾಧವನ್ ಟ್ವೀಟ್ ಮಾಡಿದ್ದಾರೆ. ಈ ಚಿತ್ರದಲ್ಲಿ ‘ಕಾಂತಾರ’ ನಟಿ ಸಪ್ತಮಿ ಗೌಡ ಕೂಡ ನಟಿಸಿದ್ದಾರೆ. ಆದರೆ, ಅವರ ಬಗ್ಗೆ ಮಾಧವನ್ ಮಾತನಾಡಿಲ್ಲ. ಹೀಗಾಗಿ, ಸಪ್ತಮಿ ಪಾತ್ರ ಎಷ್ಟು ಹೊತ್ತು ಬರಲಿದೆ ಎನ್ನುವ ಪ್ರಶ್ನೆ ಮೂಡಿದೆ. ಸೆಪ್ಟೆಂಬರ್ 28ರಂದು ‘ದಿ ವ್ಯಾಕ್ಸಿನ್ ವಾರ್’ ಸಿನಿಮಾ ರಿಲೀಸ್ ಆಗುತ್ತಿದೆ. ಈ ಚಿತ್ರ ಹಿಂದಿ, ಕನ್ನಡ ಸೇರಿ 11 ಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ ಅನ್ನೋದು ವಿಶೇಷ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ