AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸುಶಾಂತ್ ಸಿಂಗ್ ಮನೆ ಖರೀದಿ ವಿಚಾರ: ‘ಅಂದುಕೊಂಡಂತೆ ಆದ್ರೆ ಮೊದಲು ನಿಮಗೆ ಸಿಹಿ ಹಂಚ್ತೀನಿ’ ಎಂದ ಅದಾ ಶರ್ಮಾ

ನಟಿ ಅದಾ ಶರ್ಮಾ ಅವರು ಬೇರೆ ಯಾವುದಾರೂ ಮನೆ ಖರೀದಿಸಿದ್ದರೆ ಇಷ್ಟು ಸುದ್ದಿ ಆಗುತ್ತಿರಲಿಲ್ಲ. ಆದರೆ ಅವರು ಕಣ್ಣಿಟ್ಟಿರುವುದು ಸಾಕಷ್ಟು ವಿವಾದದಿಂದ ಕೂಡಿರುವ ಜಾಗದ ಮೇಲೆ. ಸುಶಾಂತ್​ ಸಿಂಗ್​ ರಜಪೂತ್​ ವಾಸವಾಗಿದ್ದ ಮನೆಗೆ ಅದಾ ಶರ್ಮಾ ಶಿಫ್ಟ್​ ಆಗುತ್ತಾರೆ ಎಂಬ ಸುದ್ದಿ ಹರಡಿದೆ. ಆ ಬಗ್ಗೆ ನಟಿಯಿಂದ ಪ್ರತಿಕ್ರಿಯೆ ಸಿಕ್ಕಿದೆ.

ಸುಶಾಂತ್ ಸಿಂಗ್ ಮನೆ ಖರೀದಿ ವಿಚಾರ: ‘ಅಂದುಕೊಂಡಂತೆ ಆದ್ರೆ ಮೊದಲು ನಿಮಗೆ ಸಿಹಿ ಹಂಚ್ತೀನಿ’ ಎಂದ ಅದಾ ಶರ್ಮಾ
ಸುಶಾಂತ್​ ಸಿಂಗ್ ರಜಪೂತ್​, ಅದಾ ಶರ್ಮಾ
TV9 Web
| Edited By: |

Updated on: Aug 28, 2023 | 4:29 PM

Share

‘ಎಂ.ಎಸ್. ಧೋನಿ: ದಿ ಅನ್​ಟೋಲ್ಡ್​ ಸ್ಟೋರಿ’ ಸಿನಿಮಾ ಖ್ಯಾತಿಯ ನಟ ಸುಶಾಂತ್ ಸಿಂಗ್ ರಜಪೂತ್​ (Sushant Singh Rajput) ಅವರು ಅಭಿಮಾನಿಗಳ ನೆಚ್ಚಿನ ನಟರಾಗಿದ್ದರು. ಹಲವಾರು ಹಿಟ್ ಸಿನಿಮಾಗಳನ್ನು ನೀಡುವ ಮೂಲಕ ಸಖತ್ ಸುದ್ದಿಯಲ್ಲಿದ್ದರು. ಅವರ ಸಾವಿನ ನೋವು ಇನ್ನೂ ಅವರ ಅಭಿಮಾನಿಗಳಲ್ಲಿ ಮಾಸದಂತಿದೆ. ಆದರೆ ಈಗ ಅವರು ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಅದು ಅವರ ಹಳೆಯ ಸಿನಿಮಾಗಳ ಕಾರಣಕ್ಕಲ್ಲ. ಬದಲಾಗಿ, ಅವರ ಮನೆಯ ವಿಚಾರಕ್ಕೆ. ‘ದಿ ಕೇರಳ ಸ್ಟೋರಿ’ ಖ್ಯಾತಿಯ ನಟಿ ಅದಾ ಶರ್ಮ ಅವರು ಈ ಹಿಂದೆ ಸುಶಾಂತ್ ವಾಸವಾಗಿದ್ದ ಮನೆಯನ್ನು (Sushant Singh Rajput Flat) ಖರೀದಿಸುತ್ತಾರೆ ಎಂಬ ಸುದ್ದಿ ಎಲ್ಲೆಡೆ ಹಬ್ಬಿತ್ತು. ಆ ವಿಚಾರಕ್ಕೆ ಸಂಬಂಧಿಸಿದಂತೆ ಈಗ ಅದಾ ಶರ್ಮಾ (Adah Sharma) ಅವರು ಪ್ರತಿಕ್ರಿಯೆ ನೀಡಿದ್ದಾರೆ. ಆದರೆ ಅವರು ಎಲ್ಲವನ್ನೂ ಸ್ಪಷ್ಟವಾಗಿ ಹೇಳಿಲ್ಲ. ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಮಾತನಾಡಿದ್ದಾರೆ.

ನಟಿ ಅದಾ ಶರ್ಮಾ ಅವರು ಬೇರೆ ಯಾವುದಾರೂ ಮನೆ ಖರೀದಿಸಿದ್ದರೆ ಇಷ್ಟು ಸುದ್ದಿ ಆಗುತ್ತಿರಲಿಲ್ಲ. ಆದರೆ ಅವರು ಕಣ್ಣಿಟ್ಟಿರುವುದು ಸಾಕಷ್ಟು ವಿವಾದದಿಂದ ಕೂಡಿರುವ ಜಾಗದ ಮೇಲೆ. ಹೌದು, ಸುಶಾಂತ್​ ಸಿಂಗ್ ರಜಪೂತ್​ ಅವರು ನಿಧನರಾದ ಬಳಿಕ ಆ ಫ್ಲಾಟ್​ ಅನ್ನು ಬಾಡಿಗೆಗೆ ಪಡೆಯಲು ಯಾರೂ ಮುಂದೆ ಬಂದಿರಲಿಲ್ಲ. ಆದರೆ ಈಗ ಅದಾ ಶರ್ಮಾ ಅವರು ಅದೇ ಫ್ಲಾಟ್​ನಲ್ಲಿ ವಾಸಿಸಲು ಮುಂದೆ ಬಂದಿದ್ದು ಎಲ್ಲರ ಅಚ್ಚರಿಗೆ ಕಾರಣವಾಗಿದೆ. ಮುಂಬೈನ ಬಾಂದ್ರಾದಲ್ಲಿರುವ ಮೌಂಟ್ ಬ್ಲಾಂಕ್ ಫ್ಲಾಟ್​ಗೆ ಶೀಘ್ರದಲ್ಲೇ ಅವರು ಶಿಫ್ಟ್ ಆಗುತ್ತಾರೆ ಎಂದೂ ಹೇಳಲಾಗಿತ್ತು. ಈಗ ಅದಾ ಶರ್ಮಾ ಅವರು ಈ ಸುದ್ದಿಯ ಬಗ್ಗೆ ಖುದ್ದು ಸ್ಪಷ್ಟತೆ ನೀಡಿದ್ದಾರೆ.

‘ಆಂಜನೇಯನೇ ನನ್ನ ನೆಚ್ಚಿನ ಸೂಪರ್​ ಹೀರೋ’: ‘ದಿ ಕೇರಳ ಸ್ಟೋರಿ’ ನಟಿ ಅದಾ ಶರ್ಮಾ ಹೇಳಿಕೆ

ಅದಾ ಶರ್ಮಾ ಅವರು ಮಾಧ್ಯಮದೊಂದಿಗೆ ಮಾತನಾಡುತ್ತಾ, ‘ನಾನಿನ್ನು ಅದರ ಬಗ್ಗೆ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ. ಎಲ್ಲವೂ ಅಂದುಕೊಂಡಂತೆ ಆದರೆ ನಿಮಗೆ (ಮಾಧ್ಯಮ) ಮೊದಲು ತಿಳಿಸುತ್ತೇನೆ ಮತ್ತು ಸಿಹಿ ಹಂಚುತ್ತೇನೆ’ ಎಂದು ಹೇಳಿದ್ದಾರೆ. ಸದ್ಯದ ಮಾಹಿತಿಗಳ ಪ್ರಕಾರ, 2020ರಲ್ಲಿ ಸುಶಾಂತ್ ಮರಣಕ್ಕೂ ಮೊದಲು ವಾಸವಿದ್ದ ಮನೆಯನ್ನೇ ಅದಾ ಶರ್ಮಾ ಕೊಂಡುಕೊಳ್ಳಲು ಬಯಸಿದ್ದಾರೆ ಎನ್ನಲಾಗಿದೆ. ಕೊಂಡುಕೊಳ್ಳುತ್ತಾರೋ ಅಥವಾ ಬಾಡಿಗೆಗೆ ಪಡೆಯುತ್ತಾರೋ ಎಂಬ ಬಗ್ಗೆ ಇನ್ನಷ್ಟೇ ಸ್ಪಷ್ಟನೆ ಸಿಗಬೇಕಿದೆ.

ಅದಾ ಶರ್ಮಾ ಪ್ರತಿಕ್ರಿಯೆ ನೀಡಿದ ವಿಡಿಯೋ:

ನಟಿ ಅದಾ ಶರ್ಮಾ ಅವರು ಅನೇಕ ವರ್ಷಗಳಿಂದ ಚಿತ್ರರಂಗದಲ್ಲಿ ತೊಡಗಿಕೊಂಡಿದ್ದಾರೆ. ಹಿಂದಿ, ಕನ್ನಡ, ತಮಿಳು, ತೆಲುಗು ಭಾಷೆಯ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ಆದರೂ ಕೂಡ ಅವರಿಗೆ ದೊಡ್ಡ ಮಟ್ಟದ ಯಶಸ್ಸು ಸಿಕ್ಕಿರಲಿಲ್ಲ. 2023ರ ಮೇ ತಿಂಗಳಲ್ಲಿ ಬಿಡುಗಡೆಯಾದ ‘ದಿ ಕೇರಳ ಸ್ಟೋರಿ’ ಸಿನಿಮಾ ಮೂಲಕ ಅವರು ಮನೆಮಾತಾದರು. ಆ ಸಿನಿಮಾ 240 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್​ ಮಾಡುವ ಮೂಲಕ ಜಯಭೇರಿ ಬಾರಿಸಿತು. ಆ ಬಳಿಕ ಅದಾ ಶರ್ಮಾ ಅವರಿಗೆ ಸಾಕಷ್ಟು ಆಫರ್​ಗಳು ಹರಿದುಬರಲು ಆರಂಭಿಸಿದವು. ಸದ್ಯ ಅವರ ‘ಗೇಮ್ ಆಫ್ ಗಿರ್ಗಿಟ್’, ‘ಸಿ.ಡಿ’ ಚಿತ್ರಗಳು ಅನೌನ್ಸ್ ಆಗಿವೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಆ ಪತ್ರವೇ ಸಾಕ್ಷಿ! ರಾಜಣ್ಣ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಆ ಪತ್ರವೇ ಸಾಕ್ಷಿ! ರಾಜಣ್ಣ
ಬಿಗ್ ಬಾಸ್ ಮುಗಿದ ಬಳಿಕ ಬರಲಿರೋ ಧಾರಾವಾಹಿ ಯಾವುದು? ಪ್ರೋಮೋ ರಿಲೀಸ್
ಬಿಗ್ ಬಾಸ್ ಮುಗಿದ ಬಳಿಕ ಬರಲಿರೋ ಧಾರಾವಾಹಿ ಯಾವುದು? ಪ್ರೋಮೋ ರಿಲೀಸ್