‘ಆಂಜನೇಯನೇ ನನ್ನ ನೆಚ್ಚಿನ ಸೂಪರ್​ ಹೀರೋ’: ‘ದಿ ಕೇರಳ ಸ್ಟೋರಿ’ ನಟಿ ಅದಾ ಶರ್ಮಾ ಹೇಳಿಕೆ

ಬಾಲಿವುಡ್​ನಲ್ಲಿ ಮಾತ್ರವಲ್ಲದೇ ದಕ್ಷಿಣ ಭಾರತದಲ್ಲೂ ಅದಾ ಶರ್ಮಾ ಅವರ ಫೇಮಸ್​ ಆಗಿದ್ದಾರೆ. ಅವರಿಗೆ ದೊಡ್ಡ ಗೆಲುವು ಸಿಕ್ಕಿದ್ದು ‘ದಿ ಕೇರಳ ಸ್ಟೋರಿ’ ಸಿನಿಮಾದ ಮೂಲಕ. ಈಗ ಅವರೊಂದು ಸೂಪರ್​ ಹೀರೋ ಕಾನ್ಸೆಪ್ಟ್​ನ ಸಿನಿಮಾದಲ್ಲಿ ನಟಿಸುವ ಅವಕಾಶ ಪಡೆದುಕೊಂಡಿದ್ದಾರೆ. ಈ ವೇಳೆ ಅವರು ತಮ್ಮ ಸೂಪರ್​ ಹೀರೋ ಯಾರು ಎಂಬುದನ್ನು ತಿಳಿಸಿದ್ದಾರೆ.

‘ಆಂಜನೇಯನೇ ನನ್ನ ನೆಚ್ಚಿನ ಸೂಪರ್​ ಹೀರೋ’: ‘ದಿ ಕೇರಳ ಸ್ಟೋರಿ’ ನಟಿ ಅದಾ ಶರ್ಮಾ ಹೇಳಿಕೆ
ಅದಾ ಶರ್ಮಾ
Follow us
ಮದನ್​ ಕುಮಾರ್​
|

Updated on: Aug 24, 2023 | 2:56 PM

ನಟಿ ಅದಾ ಶರ್ಮಾ (Adah Sharma) ಅವರಿಗೆ ಭಾರಿ ಡಿಮ್ಯಾಂಡ್​ ಸೃಷ್ಟಿ ಆಗಿದೆ. ‘ದಿ ಕೇರಳ ಸ್ಟೋರಿ’ (The Kerala Story) ಸಿನಿಮಾದಲ್ಲಿ ಮುಖ್ಯ ಭೂಮಿಕೆ ಮಾಡಿದ ಅವರು ಈಗ ಅನೇಕ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಒಂದಕ್ಕಿಂತ ಮತ್ತೊಂದು ಒಳ್ಳೆಯ ಅವಕಾಶ ಅವರನ್ನು ಹುಡುಕಿಕೊಂಡು ಬರುತ್ತಿವೆ. ಈಗ ಅವರು ಜಾಗತಿಕ ಮಟ್ಟದ ಒಂದು ಪ್ರಾಜೆಕ್ಟ್​ಗೆ ಸಹಿ ಮಾಡಿದ್ದಾರೆ. ಅದರಲ್ಲಿ ಅವರು ಲೇಡಿ ಸೂಪರ್​ ಹೀರೋ ಪಾತ್ರವನ್ನು ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಸಂದರ್ಭದಲ್ಲಿ ತಮ್ಮ ಸೂಪರ್​ ಹೀರೋ ಯಾರು ಎಂಬುದನ್ನು ಅದಾ ಶರ್ಮಾ ಬಹಿರಂಗಪಡಿಸಿದ್ದಾರೆ. ಅವರಿಗೆ ಆಂಜನೇಯನ ಮೇಲೆ ಅಪಾರವಾದ ಭಕ್ತಿ ಇದೆ. ಹಾಗಾಗಿ ಆಂಜನೇಯನೇ (Hanuman) ತಮ್ಮ ಸೂಪರ್​ ಹೀರೋ ಎಂದು ಅವರು ಹೇಳಿದ್ದಾರೆ. ಅವರ ಈ ಹೇಳಿಕೆಗೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ.

‘ಮಾನವೀಯತೆ, ಅಗಾದವಾದ ಶಕ್ತಿ, ಏಕಾಗ್ರತೆ, ಜ್ಞಾನ ಮುಂತಾದ ಗುಣಗಳ ಮಿಶ್ರಣದಂತೆ ಆಂಜನೇಯ ವ್ಯಕ್ತಿತ್ವ ಇದೆ. ಆತ ಅದ್ಭುತ ಸಂಗೀತಗಾರ ಕೂಡ ಹೌದು. ಯಾವುದೇ ಆಕಾರವನ್ನು ಪಡೆಯಬಲ್ಲ ಶಕ್ತಿ ಆತನಿಗೆ ಇದೆ. ಅವನೇ ನನ್ನ ಸೂಪರ್​ ಹೀರೋ’ ಎಂದು ಹೇಳುವ ಮೂಲಕ ಅದಾ ಶರ್ಮಾ ಅವರು ಹನುಮಂತನ ಗುಣಗಾನ ಮಾಡಿದ್ದಾರೆ. ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ‘ದಿ ಕೇರಳ ಸ್ಟೋರಿ’ ಸಿನಿಮಾ ರಿಲೀಸ್​ ಆದ ಬಳಿಕ ಅದಾ ಶರ್ಮಾ ಅವರ ಖ್ಯಾತಿ ಹೆಚ್ಚಾಗಿದೆ. ಅವರ ಸೂಪರ್ ಹೀರೋ ಪ್ರಾಜೆಕ್ಟ್​ ಬಗ್ಗೆ ಇನ್ನಷ್ಟೇ ಹೆಚ್ಚಿನ ಮಾಹಿತಿ ಸಿಗಬೇಕಿದೆ.

ಇದನ್ನೂ ಓದಿ: ‘ದಿ ಕೇರಳ ಸ್ಟೋರಿ’ ಖ್ಯಾತಿಯ ನಟಿ ಅದಾ ಶರ್ಮಾ ಮುಂದಿನ ಸಿನಿಮಾ ‘ಸಿ.ಡಿ’ ಪೋಸ್ಟರ್​ ವೈರಲ್​

ಬಾಲಿವುಡ್​ನಲ್ಲಿ ಮಾತ್ರವಲ್ಲದೇ ದಕ್ಷಿಣ ಭಾರತದಲ್ಲೂ ಅದಾ ಶರ್ಮಾ ಅವರು ಫೇಮಸ್​ ಆಗಿದ್ದಾರೆ. ಕನ್ನಡದ ‘ರಣವಿಕ್ರಮ’ ಸಿನಿಮಾದಲ್ಲಿ ಅವರು ಪುನೀತ್​ ರಾಜ್​ಕುಮಾರ್​ ಜೊತೆ ನಟಿಸಿದ್ದರು. ತೆಲುಗು ಮತ್ತು ತಮಿಳು ಸಿನಿಮಾಗಳಲ್ಲೂ ನಟಿಸಿ ಅವರು ಜನರನ್ನು ರಂಜಿಸಿದ್ದಾರೆ. ಅವರಿಗೆ ದೊಡ್ಡ ಗೆಲುವು ಸಿಕ್ಕಿದ್ದು ‘ದಿ ಕೇರಳ ಸ್ಟೋರಿ’ ಸಿನಿಮಾದ ಮೂಲಕ. ಈ ಚಿತ್ರದಲ್ಲಿ ಅವರು ಎರಡು ಶೇಡ್​ನ ಪಾತ್ರ ನಿಭಾಯಿಸಿದ್ದಾರೆ. ಇಸ್ಲಾಂ ಧರ್ಮಕ್ಕೆ ಮತಾಂತರ ಆಗುವ ಹಿಂದೂ ಹುಡುಗಿಯಾಗಿ ಅವರು ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ: ‘ಅಂಥವರ ಜತೆ ಕೆಲಸ ಮಾಡೋಕೆ ನಂಗೆ ಇಷ್ಟ ಇಲ್ಲ’: ಕೆಟ್ಟ ನಿರ್ದೇಶಕರ ಬಣ್ಣ ಬಯಲು ಮಾಡಿದ ‘ದಿ ಕೇರಳ ಸ್ಟೋರಿ’ ನಟಿ ಅದಾ ಶರ್ಮಾ

ಅದಾ ಶರ್ಮ ಅವರು ‘ದಿ ಗೇಮ್​ ​ಆಫ್​​ ಗಿರ್ಗಿಟ್​’ ಸಿನಿಮಾದಲ್ಲಿ ಮುಖ್ಯ ಭೂಮಿಕೆ ನಿಭಾಯಿಸುತ್ತಿದ್ದಾರೆ. ಇದು ಬ್ಲ್ಯೂ ವೇಲ್​ ಗೇಮ್​ ಕುರಿತ ಸಿನಿಮಾ ಆಗಿರಲಿದೆ. ಅದರಲ್ಲಿ ಅವರು ಪೊಲೀಸ್​ ಅಧಿಕಾರಿಯ ಪಾತ್ರ ಮಾಡುತ್ತಿದ್ದಾರೆ. ಆ ಚಿತ್ರ ಬಿಡುಗಡೆ ಆಗುವುದಕ್ಕಿಂತಲೂ ಮುನ್ನವೇ ‘ಸಿ.ಡಿ’ ಸಿನಿಮಾದ ಬಗ್ಗೆ ಮಾಹಿತಿ ಕೇಳಿಬಂದಿದೆ. ಈ ಸಿನಿಮಾದ ಫಸ್ಟ್​ ಲುಕ್​ ಪೋಸ್ಟರ್​ ವೈರಲ್​ ಆಗಿದೆ. ‘ಕ್ರಿಮಿನಲ್​ ಅಥವಾ ಡೆವಿಲ್​’ ಎಂಬ ಟ್ಯಾಗ್​ಲೈನ್​ ಈ ಪೋಸ್ಟರ್​ನಲ್ಲಿ ಕಾಣಿಸಿದೆ. ಸಿ ಎಂದರೆ ಕ್ರಿಮಿನಲ್​, ಡಿ ಎಂದರೆ ಡೆವಿಲ್​ ಎಂದು ನೆಟ್ಟಿಗರು ಅರ್ಥ ಮಾಡಿಕೊಂಡಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ