Adah Sharma: ‘ಅಂಥವರ ಜತೆ ಕೆಲಸ ಮಾಡೋಕೆ ನಂಗೆ ಇಷ್ಟ ಇಲ್ಲ’: ಕೆಟ್ಟ ನಿರ್ದೇಶಕರ ಬಣ್ಣ ಬಯಲು ಮಾಡಿದ ‘ದಿ ಕೇರಳ ಸ್ಟೋರಿ’ ನಟಿ ಅದಾ ಶರ್ಮಾ

The Kerala Story: ‘ಎಲ್ಲ ಜಾಗದಲ್ಲೂ ನಾನು ಒಳ್ಳೆಯ, ಕೆಟ್ಟ ಮತ್ತು ಅತೀ ಕೆಟ್ಟ ಜನರನ್ನು ನೋಡಿದ್ದೇನೆ. ಮೊದಲು ಸೆಟ್​ಗೆ ನಟಿಯನ್ನು ಕರೆಯುತ್ತಾರೆ. ಆಮೇಲೆ..’ ಎಂದು ತಮ್ಮ ಅನುಭವವನ್ನು ಅದಾ ಶರ್ಮಾ ವಿವರಿಸಿದ್ದಾರೆ.

Adah Sharma: ‘ಅಂಥವರ ಜತೆ ಕೆಲಸ ಮಾಡೋಕೆ ನಂಗೆ ಇಷ್ಟ ಇಲ್ಲ’: ಕೆಟ್ಟ ನಿರ್ದೇಶಕರ ಬಣ್ಣ ಬಯಲು ಮಾಡಿದ ‘ದಿ ಕೇರಳ ಸ್ಟೋರಿ’ ನಟಿ ಅದಾ ಶರ್ಮಾ
ಅದಾ ಶರ್ಮಾ
Follow us
ಮದನ್​ ಕುಮಾರ್​
|

Updated on: May 28, 2023 | 8:23 AM

ಕನ್ನಡ, ತಮಿಳು, ತೆಲುಗು, ಹಿಂದಿ ಭಾಷೆಯ ಚಿತ್ರರಂಗದಲ್ಲಿ ನಟಿ ಅದಾ ಶರ್ಮಾ ಅವರು ನಟಿಸಿದ್ದಾರೆ. ಪವನ್​ ಒಡೆಯರ್​, ಸುದೀಪ್ತೋ ಸೇನ್​ (Sudipto Sen) ಸೇರಿದಂತೆ ಅನೇಕ ಪ್ರತಿಭಾವಂತ ನಿರ್ದೇಶಕರ ಜೊತೆ ಅವರು ಕೆಲಸ ಮಾಡಿದ್ದಾರೆ. ಪ್ರತಿಯೊಬ್ಬರ ಜೊತೆಗೂ ಅವರಿಗೆ ಬೇರೆ ಬೇರೆ ರೀತಿಯ ಅನುಭವ ಆಗಿದೆ. ಆ ಬಗ್ಗೆ ಅವರೀಗ ಬಾಯಿ ಬಿಟ್ಟಿದ್ದಾರೆ. ‘ದಿ ಕೇರಳ ಸ್ಟೋರಿ’ (The Kerala Story) ಸಿನಿಮಾದಿಂದ ಅದಾ ಶರ್ಮಾ ಅವರ ಖ್ಯಾತಿ ಹೆಚ್ಚಾಗಿದೆ. 200 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್​ ಮಾಡಿರುವ ಈ ಸಿನಿಮಾದಿಂದ ಅವರ ವೃತ್ತಿ ಜೀವನಕ್ಕೆ ದೊಡ್ಡ ಮೈಲೇಜ್​ ಸಿಕ್ಕಂತಾಗಿದೆ. ಈಗ ಅವರು ತಮ್ಮ ಅನಿಸಿಕೆಗಳನ್ನು ಮುಕ್ತವಾಗಿ ಹಂಚಿಕೊಳ್ಳುತ್ತಿದ್ದಾರೆ. ಚಿತ್ರರಂಗದಲ್ಲಿ ಲಿಂಗ ತಾರತಮ್ಯ ಇದೆ ಎಂದು ಅದಾ ಶರ್ಮಾ (Adah Sharma) ಹೇಳಿದ್ದಾರೆ. ನಟ ಮತ್ತು ನಟಿಯರ ಮಧ್ಯೆ ಭೇದ-ಭಾವ ಮಾಡುವ ನಿರ್ದೇಶಕರ ಜೊತೆ ಕೆಲಸ ಮಾಡಲು ತಮಗೆ ಇಷ್ಟ ಇಲ್ಲ ಎಂದು ಅವರು ಹೇಳಿದ್ದಾರೆ.

‘ದಕ್ಷಿಣ ಭಾರತ ಮತ್ತು ಉತ್ತರ ಭಾರತದ ನಿರ್ದೇಶಕರ ಜೊತೆ ನಾನು ಕೆಲಸ ಮಾಡಿದ್ದೇನೆ. ಅದರಲ್ಲಿ ಕೆಲವರು ಉತ್ತಮರು. ಇನ್ನೂ ಕೆಲವರು ಉತ್ತಮರಲ್ಲ. ಎಲ್ಲವೂ ಆ ವ್ಯಕ್ತಿಯ ಮೇಲೆ ನಿರ್ಧಾರ ಆಗಿರುತ್ತದೆ ಎಂಬುದು ನನಗೆ ತಿಳಿಯಿತು. ಭಾಷೆ ಯಾವುದೇ ಆಗಿರಲಿ, ನಿರ್ದೇಶಕರು ಒಳ್ಳೆಯವರಾಗಿದ್ದರೆ ಎಲ್ಲವೂ ಸರಿ ಆಗುತ್ತದೆ. ನಿರ್ದೇಶಕ ಕೆಟ್ಟವನಾಗಿದ್ದರೆ ಎಲ್ಲವೂ ಕೆಟ್ಟದಾಗುತ್ತದೆ’ ಎಂದು ಅದಾ ಶರ್ಮಾ ಹೇಳಿದ್ದಾರೆ.

ಇದನ್ನೂ ಓದಿ: ‘ದಿ ಕೇರಳ ಸ್ಟೋರಿ’ ನಟಿ ಅದಾ ಶರ್ಮಾ ಫೋನ್​ ನಂಬರ್​ ಲೀಕ್​; ಕಿರುಕುಳ ನೀಡಿದ ಸೈಬರ್​ ಕಿಡಿಗೇಡಿ

‘ಎಲ್ಲ ಜಾಗದಲ್ಲೂ ನಾನು ಒಳ್ಳೆಯ, ಕೆಟ್ಟ ಮತ್ತು ಅತೀ ಕೆಟ್ಟ ಜನರನ್ನು ನೋಡಿದ್ದೇನೆ. ಮೊದಲು ಸೆಟ್​ಗೆ ನಟಿಯನ್ನು ಕರೆಯುತ್ತಾರೆ. ಆಮೇಲೆ ಕಾಯಲು ಹೇಳುತ್ತಾರೆ. ನಂತರ ನಟನ ಮ್ಯಾನೇಜರ್​ನನ್ನು ಕರೆಯುತ್ತಾರೆ. ಹುಡುಗಿ ಕಾಯುತ್ತಿದ್ದಾಳೆ ಅಂತ ಹೀರೋಗೆ ಹೇಳಿಕಳಿಸುತ್ತಾರೆ. ಹೀಗೆ ಪುರುಷ-ಮಹಿಳೆ ಎಂಬ ಲಿಂಗ ತಾರತಮ್ಯ ಇರುವ ಕಡೆಗಳಲ್ಲಿ ನನಗೆ ಕೆಲಸ ಮಾಡಲು ಇಷ್ಟ ಇಲ್ಲ’ ಎಂದು ಅದಾ ಶರ್ಮಾ ಹೇಳಿದ್ದಾರೆ. ಸದ್ಯ ಅವರು ‘ದಿ ಕೇರಳ ಸ್ಟೋರಿ’ ಸಿನಿಮಾದ ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದಾರೆ.

ಇದನ್ನೂ ಓದಿ: Adah Sharma: ‘ದಿ ಕೇರಳ ಸ್ಟೋರಿ ಕೇವಲ ಸಿನಿಮಾ ಅಲ್ಲ, ಇದೊಂದು ಆಂದೋಲನ’: ನಟಿ ಅದಾ ಶರ್ಮಾ

‘ಗಾಂಧಾರ್​ ಫಿಲ್ಮ್ಸ್​ ಆ್ಯಂಡ್​ ಸ್ಟುಡಿಯೋ ಪ್ರೈವೇಟ್​ ಲಿಮಿಡೆಟ್​’ ಸಂಸ್ಥೆ ಮೂಲಕ ‘ದಿ ಗೇಮ್​ ​ಆಫ್​​ ಗಿರ್ಗಿಟ್​’ ಸಿನಿಮಾ ಮೂಡಿಬರುತ್ತಿದೆ. ಅದಾ ಶರ್ಮಾ ಅವರ ಬರ್ತ್​ಡೇ (ಮೇ 11) ಪ್ರಯುಕ್ತ ‘ದಿ ಗೇಮ್​ ಆಫ್​​ ಗಿರ್ಗಿಟ್​’ ಸಿನಿಮಾದ ಪೋಸ್ಟರ್​ ಬಿಡುಗಡೆ ಮಾಡಲಾಯಿತು. ಈ ಸಿನಿಮಾದಲ್ಲಿ ಅದಾ ಶರ್ಮಾ ಅವರು ಪೊಲೀಸ್​ ಪಾತ್ರ ಮಾಡಲಿದ್ದಾರೆ. ಈ ಸಿನಿಮಾದಲ್ಲಿ ಬಾಲಿವುಡ್​ನ ಖ್ಯಾತ ನಟ ಶ್ರೇಯಸ್​ ತಲ್ಪಡೆ ಕೂಡ ನಟಿಸುತ್ತಿದ್ದಾರೆ. ಒಂದಷ್ಟು ವರ್ಷಗಳ ಹಿಂದೆ ಭಾರಿ ಕುಖ್ಯಾತಿ ಪಡೆದಿದ್ದ ಬ್ಲೂ ವೇಲ್​ ಗೇಮ್​ ಕುರಿತು ಈ ಸಿನಿಮಾ ಸಿದ್ಧವಾಗಲಿದೆ ಎಂಬುದು ವಿಶೇಷ.

ಇದನ್ನೂ ಓದಿ: Adah Sharma: ‘ದಿ ಕೇರಳ ಸ್ಟೋರಿ’ ನಟಿ ಅದಾ ಶರ್ಮಾಗೆ ಅಪಘಾತ; ನಿರ್ದೇಶಕನಿಗೂ ಗಾಯ

2008ರಿಂದಲೂ ಅದಾ ಶರ್ಮಾ ಅವರು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಕನ್ನಡದಲ್ಲಿ ಅವರು ನಟಿಸಿದ ಏಕೈಕ ಸಿನಿಮಾ ‘ರಣವಿಕ್ರಮ’. 2015ರಲ್ಲಿ ತೆರೆಕಂಡಿದ್ದ ಆ ಚಿತ್ರಕ್ಕೆ ಪುನೀತ್​ ರಾಜ್​ಕುಮಾರ್​ ಹೀರೋ ಆಗಿದ್ದರು. ಪುನೀತ್​ಗೆ ಜೋಡಿಯಾಗಿ ಅದಾ ಶರ್ಮಾ ಅಭಿನಯಿಸಿದ್ದರು. ಆ ಬಳಿಕ ಅವರು ಕನ್ನಡದಲ್ಲಿ ಬೇರೆ ಯಾವುದೇ ಸಿನಿಮಾ ಒಪ್ಪಿಕೊಳ್ಳಲಿಲ್ಲ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ