Suhana Khan: ಶಾರುಖ್​ ಖಾನ್​ ಮಗಳು ಸುಹಾನಾ ಖಾನ್​ ವ್ಯಕ್ತಿತ್ವ ಹೇಗಿದೆ? ಎಲ್ಲವನ್ನೂ ವಿವರಿಸಿದ ನೃತ್ಯ ನಿರ್ದೇಶಕ

Shah Rukh Khan daughter: ಶಾರುಖ್​ ಪುತ್ರಿ ಸುಹಾನಾ ಖಾನ್​ ಅವರು ಈಗತಾನೇ ಬಣ್ಣದ ಲೋಕಕ್ಕೆ ಕಾಲಿಡುತ್ತಿದ್ದಾರೆ. ಈಗ ಅವರಿಗೆ 23 ವರ್ಷ ವಯಸ್ಸು. ಅವರು ನಟಿಸಿದ ಮೊದಲ ಸಿನಿಮಾ ‘ದಿ ಆರ್ಚೀಸ್​’ ಇನ್ನಷ್ಟೇ ಬಿಡುಗಡೆ ಆಗಬೇಕಿದೆ.

Suhana Khan: ಶಾರುಖ್​ ಖಾನ್​ ಮಗಳು ಸುಹಾನಾ ಖಾನ್​ ವ್ಯಕ್ತಿತ್ವ ಹೇಗಿದೆ? ಎಲ್ಲವನ್ನೂ ವಿವರಿಸಿದ ನೃತ್ಯ ನಿರ್ದೇಶಕ
ಸುಹಾನಾ ಖಾನ್​
Follow us
|

Updated on: May 28, 2023 | 7:13 AM

ಸ್ಟಾರ್​ ನಟ-ನಟಿಯರ ಮಕ್ಕಳಿಗೆ ಸುಲಭವಾಗಿಯೇ ಅವಕಾಶಗಳು ಸಿಗುತ್ತವೆ. ಚಿತ್ರರಂಗದಲ್ಲಿ ಗುರುತಿಸಿಕೊಳ್ಳಲು ಅವರು ಹೆಚ್ಚೇನೂ ಕಷ್ಟಪಡಬೇಕಾಗಿಲ್ಲ. ಆದರೆ ಗೆಲುವು ಪಡೆಯಬೇಕು ಎಂದರೆ ಕಷ್ಟಪಡಲೇಬೇಕು. ಅದು ಶಾರುಖ್​ ಖಾನ್​ (Shah Rukh Khan) ಮಕ್ಕಳಿಗೂ ಅನ್ವಯ. ಅಂದಹಾಗೆ, ಶಾರುಖ್​ ಪುತ್ರಿ ಸುಹಾನಾ ಖಾನ್​ (Suhana Khan) ಅವರು ಈಗತಾನೇ ಬಣ್ಣದ ಲೋಕಕ್ಕೆ ಕಾಲಿಡುತ್ತಿದ್ದಾರೆ. ಈಗ ಅವರಿಗೆ 23 ವರ್ಷ ವಯಸ್ಸು. ಅವರು ನಟಿಸಿದ ಮೊದಲ ಸಿನಿಮಾ ‘ದಿ ಆರ್ಚೀಸ್​’ ಇನ್ನಷ್ಟೇ ಬಿಡುಗಡೆ ಆಗಬೇಕಿದೆ. ಈ ಸಿನಿಮಾಗೆ ಜೋಯಾ ಅಖ್ತರ್​ ನಿರ್ದೇಶನ ಮಾಡಿದ್ದಾರೆ. ಈ ಚಿತ್ರದ ಬಿಡುಗಡೆಗೂ ಮುನ್ನವೇ ಸುಹಾನಾ ಖಾನ್​ ಬಗ್ಗೆ ಒಳ್ಳೆಯ ಅಭಿಪ್ರಾಯ ಮೂಡಿದೆ. ನೃತ್ಯ ನಿರ್ದೇಶಕ ಬಾಸ್ಕೋ ಮಾರ್ಟಿಸ್​ (Bosco Martis) ಅವರು ಸುಹಾನಾ ಖಾನ್​ ಬಗ್ಗೆ ಮಾತನಾಡಿದ್ದಾರೆ. ‘ಅವರಿಗೆ ತಾನು ಶಾರುಖ್​ ಖಾನ್​ ಮಗಳು ಎಂಬ ಗರ್ವ ಇಲ್ಲ’ ಎಂದು ಅವರು ಹೇಳಿದ್ದಾರೆ.

‘ಸುಹಾನಾ ಖಾನ್​ ಅವರು ಇತರೆ ಸ್ಟಾರ್​ ಕಿಡ್​ಗಳ ರೀತಿ ಅಲ್ಲ. ಕೆಲಸದ ಬಗ್ಗೆ, ಕಲಿಕೆಯ ಬಗ್ಗೆ ಅವರಿಗೆ ಪಾಸಿಟಿವ್​ ಮನೋಭಾವ ಇದೆ. ತಾನು ಶಾರುಖ್​ ಖಾನ್​ರ ಮಗಳು ಎಂಬ ಗರ್ವದೊಂದಿಗೆ ಅವರು ಬರುವುದಿಲ್ಲ. ಎಲ್ಲದನ್ನೂ ಗಮನಿಸಿ ಅವರು ಕಲಿಯುತ್ತಾರೆ. ಅದು ಒಳ್ಳೆಯ ಕಲಾವಿದರ ಲಕ್ಷಣ. ಇದನ್ನು ಅವರು ತಮ್ಮ ತಂದೆಯಿಂದ ಕಲಿತಿರಬಹುದು’ ಎಂದು ಬಾಸ್ಕೋ ಮಾರ್ಟಿಸ್​​ ಹೇಳಿದ್ದಾರೆ. ಐಫಾ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದಾಗ ಅವರು ಈ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಪ್ರತಿಷ್ಠಿತ ಕಂಪನಿಗಳಿಗೆ ರಾಯಭಾರಿ ಆದ ಸುಹಾನಾ ಖಾನ್​

‘ಮಗಳನ್ನು ಸರಿಯಾಗಿ ಬೆಳೆಸಿದ್ದೇನೆ’ ಎಂದು ಹೆಮ್ಮೆಯಿಂದ ಹೇಳಿಕೊಂಡ ಶಾರುಖ್​ ಖಾನ್​:

ಸುಹಾನಾ ಖಾನ್​ ಅವರು ದೊಡ್ಡ ಪರದೆ ಮೇಲೆ ಕಾಣಿಸಿಕೊಳ್ಳುವುದಕ್ಕೂ ಮುನ್ನವೇ ದೊಡ್ಡ ದೊಡ್ಡ ಬ್ರ್ಯಾಂಡ್​ಗಳಿಗೆ ಪ್ರಚಾರ ರಾಯಭಾರಿ ಆಗಿದ್ದಾರೆ. ಅವರಿಗೆ ಒಳ್ಳೊಳ್ಳೆಯ ಅವಕಾಶಗಳು ಸಿಗುತ್ತಿವೆ. ತಂದೆಯಂತೆ ಸುಹಾನಾ ಖಾನ್​ ಕೂಡ ಸೆಲೆಬ್ರಿಟಿ ಆಗಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ಅವರನ್ನು ಹಿಂಬಾಲಿಸುವವರ ಸಂಖ್ಯೆ ಹೆಚ್ಚಾಗಿದೆ. ಎಲ್ಲರ ಎದುರು ಮಗಳು ನಡೆದುಕೊಳ್ಳುತ್ತಿರುವ ರೀತಿ ಕಂಡು ಶಾರುಖ್​ ಖಾನ್​ಗೆ ಹೆಮ್ಮೆ ಆಗಿದೆ. ಮಗಳನ್ನು ಸರಿಯಾದ ರೀತಿಯಲ್ಲಿ ಬೆಳೆಸಿದ್ದೇನೆ ಎಂದು ಅವರು ಹಿರಿಹಿರಿ ಹಿಗ್ಗುತ್ತಿದ್ದಾರೆ. ಈ ಕುರಿತು ಅವರು ಇತ್ತೀಚೆಗೆ ಮಾಡಿದ್ದ ಪೋಸ್ಟ್​ ವೈರಲ್​ ಆಗಿತ್ತು. ಅದಕ್ಕೆ ಅನೇಕ ಸೆಲೆಬ್ರಿಟಿಗಳು ಪ್ರತಿಕ್ರಿಯೆ ನೀಡಿದ್ದರು.

ಇದನ್ನೂ ಓದಿ: ಶಾರುಖ್​ ಪುತ್ರಿ ಸುಹಾನಾ ಖಾನ್​ ಹಾಟ್​ ಫೋಟೋಶೂಟ್ ವೈರಲ್​; ಅಪ್ಪನ ಕಮೆಂಟ್​ ಏನು?​

ಸೆಲೆಬ್ರಿಟಿಗಳ ಮಕ್ಕಳು ಹೋದಲ್ಲಿ ಬಂದಲ್ಲಿ ಕಿರಿಕ್​ ಮಾಡಿಕೊಳ್ಳುವುದು ಕಾಮನ್​. ಆದರೆ ಸುಹಾನಾ ಖಾನ್​ ಅವರು ಅಂಥವರ ಪಟ್ಟಿಗೆ ಸೇರಿಲ್ಲ. ಇತ್ತೀಚೆಗೆ ಅವರು ಜಾಗತಿಕ ಮಟ್ಟದ ಫ್ಯಾಷನ್​ ಬ್ರ್ಯಾಂಡ್​ಗೆ ರಾಯಭಾರಿಯಾಗಿ ಆಯ್ಕೆಯಾದರು. ಅದರ ಕಾರ್ಯಕ್ರಮದಲ್ಲಿ ಎಲ್ಲರ ಜೊತೆ ಅವರು ಗೌರವದಿಂದ ನಡೆದುಕೊಂಡ ರೀತಿ ಗಮನ ಸೆಳೆದಿದೆ. ಸುಹಾನಾ ಆಡಿದ ಮಾತುಗಳು ಸಹ ಎಲ್ಲರಿಗೂ ಮೆಚ್ಚುಗೆ ಆಯಿತು. ಇನ್ನು ಅವರು ಡ್ರೆಸ್​ ಮಾಡಿಕೊಂಡ ಪರಿಯೂ ಪ್ರಶಂಸೆಗೆ ಒಳಗಾಯಿತು. ಮಗಳ ಈ ಬೆಳವಣಿಗೆ ಕಂಡು ಶಾರುಖ್​ ಖಾನ್​ಗೆ ಖುಷಿ ಆಯಿತು.

ಖಾಸಗಿ ಕಾರ್ಯಕ್ರಮದಲ್ಲಿ ಸುಹಾನಾ ಖಾನ್​ ಅವರು ಭಾಗವಹಿಸಿದ ಫೋಟೋ ಮತ್ತು ವಿಡಿಯೋವನ್ನು ಇನ್​ಸ್ಟಾಗ್ರಾಮ್​ನಲ್ಲಿ ಶಾರುಖ್​ ಖಾನ್​ ಶೇರ್​ ಮಾಡಿಕೊಂಡಿದ್ದರು. ‘ಈ ಅವಕಾಶ ಪಡೆದಿದ್ದಕ್ಕಾಗಿ ಅಭಿನಂದನೆಗಳು ಮಗಳೆ. ಬಟ್ಟೆ, ನಡೆ-ನುಡಿ ಎಲ್ಲವೂ ಚೆನ್ನಾಗಿದೆ. ಸರಿಯಾಗಿ ಬೆಳೆಸಿದ್ದಕ್ಕೆ ನಾನು ಕ್ರಿಡಿಟ್​ ತೆಗೆದುಕೊಳ್ಳಲೇ? ಲವ್​ ಯೂ’ ಎಂದು ಶಾರುಖ್​ ಖಾನ್​ ಪೋಸ್ಟ್​ ಮಾಡಿದ್ದರು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ