Alia Bhatt: ಪ್ರತಿಷ್ಠಿತ ಐಫಾ ಪ್ರಶಸ್ತಿ ಪಡೆಯಲು ಹೋಗಲೇ ಇಲ್ಲ ಆಲಿಯಾ ಭಟ್; ಗೈರಾಗಲು ಕಾರಣ ಏನು?
Narendra Razdan: ಐಫಾ ಸಮಾರಂಭಕ್ಕೆ ತೆರಳಬೇಕು ಎಂಬುದು ಆಲಿಯಾ ಭಟ್ ಅವರ ಪ್ಲ್ಯಾನ್ ಆಗಿತ್ತು. ಆದರೆ ಕುಟುಂಬದಲ್ಲಿ ಇಂಥ ಸಂಕಷ್ಟದ ಪರಿಸ್ಥಿತಿ ನಿರ್ಮಾಣ ಆಗಿದ್ದರಿಂದ ಅವರು ಫಾರಿನ್ ಟ್ರಿಪ್ ಕ್ಯಾನ್ಸಲ್ ಮಾಡಿಕೊಳ್ಳುವುದು ಅನಿವಾರ್ಯ ಆಯಿತು.
ನಟಿ ಆಲಿಯಾ ಭಟ್ (Alia Bhatt) ಅವರ ಅಭಿಮಾನಿಗಳು ಖುಷಿಯಾಗಿದ್ದಾರೆ. ಯಾಕೆಂದರೆ ಅವರಿಗೆ ‘ಅತ್ಯುತ್ತಮ ನಟಿ’ ಐಫಾ ಪ್ರಶಸ್ತಿ (IIFA Awards) ಸಿಕ್ಕಿದೆ. ಅಬುಧಾಬಿಯಲ್ಲಿ ನಡೆದ ಅದ್ದೂರಿ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿ ಘೋಷಣೆ ಮಾಡಲಾಗಿದೆ. ಆದರೆ ಅದನ್ನು ಸ್ವೀಕರಿಸಲು ಆಲಿಯಾ ಭಟ್ ಅಲ್ಲಿಗೆ ಹೋಗಲೇ ಇಲ್ಲ. ಇದು ಕೊಂಚ ಬೇಸರ ಮೂಡಿಸುವ ವಿಚಾರ. ಅಷ್ಟಕ್ಕೂ ಆಲಿಯಾ ಭಟ್ ಅವರು ಗೈರಾಗಲು ಕಾರಣ ಏನು ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತಿದೆ. ಅಸಲಿ ವಿಚಾರ ಏನೆಂದರೆ ಆಲಿಯಾ ಭಟ್ ಅವರ ಅಜ್ಜ ನರೇಂದ್ರ ರಾಜ್ದಾನ್ (Narendra Razdan) ಆರೋಗ್ಯ ಕೈಕೊಟ್ಟಿದೆ. ಹಾಗಾಗಿ ಅವರ ಕುಟುಂಬದಲ್ಲಿ ಆತಂಕದ ವಾತಾವರಣ ಮನೆ ಮಾಡಿದೆ. ನರೇಂದ್ರ ಅವರ ಪರಿಸ್ಥಿತಿ ತೀರಾ ಹದಗೆಟ್ಟಿರುವಂತಿದೆ. ಆ ಕಾರಣದಿಂದ ಕುಟುಂಬದ ಸದಸ್ಯರು ಸದ್ಯಕ್ಕೆ ಫಾರಿನ್ ಟ್ರಿಪ್ಗಳನ್ನು ಕ್ಯಾನ್ಸಲ್ ಮಾಡಿಕೊಂಡಿದ್ದಾರೆ. ಹಾಗಾಗಿ ಆಲಿಯಾ ಭಟ್ ಕೂಡ ಐಫಾ ಪ್ರಶಸ್ತಿ ಪ್ರಧಾನ ಸಮಾರಂಭಕ್ಕೆ ತೆರಳದೇ ಮನೆಯಲ್ಲೇ ಉಳಿದುಕೊಂಡಿದ್ದಾರೆ.
ಅದ್ದೂರಿ ವೇದಿಕೆಯಲ್ಲಿ ಆಲಿಯಾ ಭಟ್ ಹೆಸರನ್ನು ಘೋಷಿಸಲಾಯಿತು. ‘ಗಂಗೂಬಾಯಿ ಕಾಠಿಯಾವಾಡಿ’ ಸಿನಿಮಾದಲ್ಲಿನ ಅವರ ಅಭಿನಯಕ್ಕೆ ‘ಅತ್ಯುತ್ತಮ ನಟಿ’ಪ್ರಶಸ್ತಿ ನೀಡಲಾಯಿತು. ಅವರ ಪರವಾಗಿ ಸಿನಿಮಾದ ನಿರ್ಮಾಪಕ ಜಯಂತಿ ಲಾಲ್ ಗಡಾ ಅವರು ಪ್ರಶಸ್ತಿ ಸ್ವೀಕರಿಸಿದರು. ಈ ಸಿನಿಮಾಗೆ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನ ಮಾಡಿದ್ದಾರೆ. ರಿಯಲ್ ಲೈಫ್ ಘಟನೆಗಳನ್ನು ಆಧರಿಸಿ ಈ ಸಿನಿಮಾ ಸಿದ್ಧಗೊಂಡಿದೆ. ಬಾಕ್ಸ್ ಆಫೀಸ್ನಲ್ಲಿ ಕಮಾಲ್ ಮಾಡಿದ್ದ ಈ ಚಿತ್ರ ಈಗ ಐಫಾ ಸಮಾರಂಭದಲ್ಲೂ ಹಲವು ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ಅತ್ಯುತ್ತಮ ಚಿತ್ರಕಥೆ, ಅತ್ಯುತ್ತಮ ಸಂಭಾಷಣೆ, ಅತ್ಯುತ್ತಮ ಛಾಯಾಗ್ರಹಣ ಪ್ರಶಸ್ತಿಗಳು ಈ ಸಿನಿಮಾದ ಪಾಲಾಗಿವೆ. ಆಲಿಯಾ ಭಟ್ ಅವರಿಗೆ ಅಭಿಮಾನಿಗಳು, ಆಪ್ತರು ಮತ್ತು ಅನೇಕ ಸೆಲೆಬ್ರಿಟಿಗಳು ಅಭಿನಂದನೆ ತಿಳಿಸುತ್ತಿದ್ದಾರೆ.
ಇದನ್ನೂ ಓದಿ: Alia Bhatt: ಆಲಿಯಾ ಭಟ್ ನೋಡಿ ಐಶ್ವರ್ಯಾ ರೈ ಎಂದು ಕೂಗಿದ ಪಾಪರಾಜಿಗಳು; ನಟಿಯ ಪ್ರತಿಕ್ರಿಯೆ ಹೇಗಿತ್ತು?
ಐಫಾ ಸಮಾರಂಭಕ್ಕೆ ತೆರಳಬೇಕು ಎಂಬುದು ಆಲಿಯಾ ಭಟ್ ಅವರ ಪ್ಲ್ಯಾನ್ ಆಗಿತ್ತು. ಆದರೆ ಕುಟುಂಬದಲ್ಲಿ ಇಂಥ ಸಂಕಷ್ಟದ ಪರಿಸ್ಥಿತಿ ನಿರ್ಮಾಣ ಆಗಿದ್ದರಿಂದ ಅವರು ಫಾರಿನ್ ಟ್ರಿಪ್ ಕ್ಯಾನ್ಸಲ್ ಮಾಡಿಕೊಳ್ಳುವುದು ಅನಿವಾರ್ಯ ಆಯಿತು. ವಿಮಾನ ನಿಲ್ದಾಣಕ್ಕೆ ತೆರಳಿದ್ದು ಅವರು ಮತ್ತೆ ವಾಪಸ್ ಮನೆಗೆ ಬಂದರು. ಆಸ್ಪತ್ರೆಯಲ್ಲಿ ನರೇಂದ್ರ ರಾಜ್ದಾನ್ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಶ್ವಾಸಕೋಶದ ಇನ್ಫೆಕ್ಷನ್ನಿಂದ ಅವರು ಬಳಲುತ್ತಿದ್ದಾರೆ. ಸದ್ಯಕ್ಕೆ ಅವರನ್ನು ಐಸಿಯುಗೆ ಶಿಫ್ಟ್ ಮಾಡಲಾಗಿದೆ. ಅವರಿಗೆ 95 ವರ್ಷ ವಯಸ್ಸಾಗಿದೆ.
2023ನೇ ಸಾಲಿನ ಐಫಾ ಪ್ರಶಸ್ತಿ ಪಡೆದವರ ಪಟ್ಟಿ:
ಅತ್ಯುತ್ತಮ ನಟ: ಹೃತಿಕ್ ರೋಷನ್ (ವಿಕ್ರಂ ವೇದ)
ಅತ್ಯುತ್ತಮ ನಟಿ: ಆಲಿಯಾ ಭಟ್ (ಗಂಗೂಬಾಯಿ ಕಾಠಿಯಾವಾಡಿ)
ಅತ್ಯುತ್ತಮ ಪೋಷಕ ನಟ: ಅನಿಲ್ ಕಪೂರ್ (ಜುಗ್ ಜುಗ್ ಜಿಯೋ)
ಅತ್ಯುತ್ತಮ ಗಾಯಕಿ: ಶ್ರೇಯಾ ಘೋಷಾಲ್ (ಬ್ರಹ್ಮಾಸ್ತ್ರ)
ಅತ್ಯುತ್ತಮ ಗಾಯಕ: ಅರಿಜಿತ್ ಸಿಂಗ್ (ಕೇಸರಿಯಾ..)
ಅತ್ಯುತ್ತಮ ಪೋಷಕ ನಟಿ: ಮೌನಿ ರಾಯ್ (ಬ್ರಹ್ಮಾಸ್ತ್ರ)
ಅತ್ಯುತ್ತಮ ಹೊಸ ನಟ: ಬಬಿಲ್ ಖಾನ್ (ಕಲಾ)
ಅತ್ಯುತ್ತಮ ಹೊಸ ನಟ: ಶಾಂತನು ಮಹೇಶ್ವರಿ (ಗಂಗೂಬಾಯಿ ಕಾಠಿಯಾವಾಡಿ)
ಅತ್ಯುತ್ತಮ ಸಿನಿಮಾ: ದೃಶ್ಯಂ 2
ಅತ್ಯುತ್ತಮ ನಿರ್ದೇಶನ: ಆರ್. ಮಾಧವನ್ (ರಾಕೆಟ್ರಿ ದಿ ನಂಬಿ ಎಫೆಕ್ಟ್)
ಅತ್ಯುತ್ತಮ ಸಂಗೀತ ನಿರ್ದೇಶಕ: ಪ್ರೀತಮ್ (ಬ್ರಹ್ಮಾಸ್ತ್ರ)
ಅತ್ಯುತ್ತಮ ಸಾಹಿತ್ಯ: ಅಮಿತಾಭ್ ಭಟ್ಟಾಚಾರ್ಯ (ಕೇಸರಿಯಾ..)
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.