IIFA 2023: ಅತ್ಯುತ್ತಮ ನಟ-ನಟಿ ಪ್ರಶಸ್ತಿ ಪಡೆದ ಹೃತಿಕ್ ರೋಷನ್-ಆಲಿಯಾ ಭಟ್; ಈ ಬಾರಿ ಐಫಾ ಗೆದ್ದವರ ಪೂರ್ತಿ ಲಿಸ್ಟ್ ಇಲ್ಲಿದೆ..
IIFA Awards 2023 winners Full List: ‘ಗಂಗೂಬಾಯಿ ಕಾಠಿಯಾವಾಡಿ’ ಸಿನಿಮಾ ಹಲವು ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ಅತ್ಯುತ್ತಮ ಚಿತ್ರಕಥೆ, ಅತ್ಯುತ್ತಮ ಸಂಭಾಷಣೆ, ಅತ್ಯುತ್ತಮ ಛಾಯಾಗ್ರಹಣ ಪ್ರಶಸ್ತಿಗಳು ಈ ಸಿನಿಮಾದ ಪಾಲಾಗಿವೆ.
ಅಬುಧಾಬಿಯಲ್ಲಿ ಐಫಾ ಪ್ರಶಸ್ತಿ (IIFA Awards 2023) ಪ್ರದಾನ ಸಮಾರಂಭ ನಡೆದಿದೆ. ಈ ಕಾರ್ಯಕ್ರಮಕ್ಕೆ ಬಾಲಿವುಡ್ನ ಅನೇಕ ಸೆಲೆಬ್ರಿಟಿಗಳು ಹಾಜರಿ ಹಾಕಿದ್ದಾರೆ. ಖ್ಯಾತ ನಟ ಹೃತಿಕ್ ರೋಷನ್ (Hrithik Roshan) ಅವರಿಗೆ ‘ಅತ್ಯುತ್ತಮ ನಟ’ ಪ್ರಶಸ್ತಿ ಸಿಕ್ಕಿದೆ. ಹಿಂದಿಯ ‘ವಿಕ್ರಂ ವೇದ’ ಸಿನಿಮಾದಲ್ಲಿನ ಅವರ ನಟನೆಗೆ ಈ ಪ್ರಶಸ್ತಿ ನೀಡಲಾಗಿದೆ. ಹಾಗೆಯೇ, ನಟಿ ಆಲಿಯಾ ಭಟ್ (Alia Bhatt) ಅವರು ‘ಗಂಗೂಬಾಯಿ ಕಾಠಿಯಾವಾಡಿ’ ಚಿತ್ರದ ಅಭಿನಯಕ್ಕಾಗಿ ‘ಅತ್ಯುತ್ತಮ ನಟಿ’ ಐಫಾ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಅವರಿಗೆ ಅಭಿಮಾನಿಗಳು, ಆಪ್ತರು ಮತ್ತು ಅನೇಕ ಸೆಲೆಬ್ರಿಟಿಗಳು ಅಭಿನಂದನೆ ತಿಳಿಸುತ್ತಿದ್ದಾರೆ. ಬಹಳ ಅದ್ದೂರಿಯಾಗಿ ಈ ಸಮಾರಂಭ ನಡೆದಿದೆ. ಸಲ್ಮಾನ್ ಖಾನ್, ಕಮಲ್ ಹಾಸನ್, ವಿಕ್ಕಿ ಕೌಶಲ್, ಇಶಾ ಗುಪ್ತಾ, ವರುಣ್ ಧವನ್, ಎ.ಆರ್. ರೆಹಮಾನ್, ಕೃತಿ ಸನೋನ್, ಶ್ರೀಯಾ ಶರಣ್, ನೋರಾ ಫತೇಹಿ, ಮೌನಿ ರಾಯ್, ಜಾಕ್ವೆಲಿನ್ ಫರ್ನಾಂಡಿಸ್ ಸೇರಿದಂತೆ ಅನೇಕ ಸೆಲೆಬ್ರಿಟಿಗಳು 2023ನೇ ಸಾಲಿನ ಐಫಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗಿಯಾಗಿ ಮೆರುಗು ಹೆಚ್ಚಿಸಿದ್ದಾರೆ.
ಆಲಿಯಾ ಭಟ್ ಪರವಾಗಿ ನಿರ್ಮಾಪಕ ಜಯಂತಿ ಲಾಲ್ ಗಡಾ ಅವರು ಐಫಾ ಪ್ರಶಸ್ತಿ ಸ್ವೀಕರಿಸಿದರು. ಕಾರಣಾಂತರಗಳಿಂದ ಆಲಿಯಾ ಅವರು ಐಫಾ ಸಮಾರಂಭದಲ್ಲಿ ಭಾಗಿಯಾಗಲು ಸಾಧ್ಯವಾಗಿಲ್ಲ. ‘ಜುಗ್ ಜುಗ್ ಜಿಯೋ’ ಸಿನಿಮಾದಲ್ಲಿನ ಅಭಿನಯಕ್ಕಾಗಿ ಅನಿಲ್ ಕಪೂರ್ ಅವರು ಅತ್ಯುತ್ತಮ ‘ಪೋಷಕ ನಟ’ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಭಾರತೀಯ ಚಿತ್ರರಂಗದಲ್ಲಿನ ಅಭೂತಪೂರ್ವ ಸಾಧನೆಗಾಗಿ ಕಮಲ್ ಹಾಸನ್ ಅವರಿಗೆ ಐಫಾ ಪ್ರಶಸ್ತಿ ನೀಡಲಾಗಿದೆ. ಎಲ್ಲರೂ ಎದ್ದು ನಿಂತು ಅವರಿಗೆ ಗೌರವ ಸಲ್ಲಿಸಿದ್ದಾರೆ. ಕಮಲ್ ಹಾಸನ್ ಅವರಿಗೆ ಎ.ಆರ್. ರೆಹಮಾನ್ ಅವರು ಪ್ರಶಸ್ತಿ ಪ್ರದಾನ ಮಾಡಿದರು.
Congratulations to the extremely talented #HrithikRoshan, the true embodiment of versatility, as he lifts the IIFA trophy under the category – “Performance In A Leading Role – Male” for his phenomenal portrayal in the action-packed film #VikramVedha.#IIFA2023 #IIFAONYAS pic.twitter.com/4FXvJhzMIz
— IIFA (@IIFA) May 27, 2023
2023ನೇ ಸಾಲಿನ ಐಫಾ ಪ್ರಶಸ್ತಿ ಪಡೆದವರ ಪಟ್ಟಿ:
ಅತ್ಯುತ್ತಮ ನಟ: ಹೃತಿಕ್ ರೋಷನ್ (ವಿಕ್ರಂ ವೇದ)
ಅತ್ಯುತ್ತಮ ನಟಿ: ಆಲಿಯಾ ಭಟ್ (ಗಂಗೂಬಾಯಿ ಕಾಠಿಯಾವಾಡಿ)
ಅತ್ಯುತ್ತಮ ಪೋಷಕ ನಟ: ಅನಿಲ್ ಕಪೂರ್ (ಜುಗ್ ಜುಗ್ ಜಿಯೋ)
ಅತ್ಯುತ್ತಮ ಗಾಯಕಿ: ಶ್ರೇಯಾ ಘೋಷಾಲ್ (ಬ್ರಹ್ಮಾಸ್ತ್ರ)
ಅತ್ಯುತ್ತಮ ಗಾಯಕ: ಅರಿಜಿತ್ ಸಿಂಗ್ (ಕೇಸರಿಯಾ..)
ಅತ್ಯುತ್ತಮ ಪೋಷಕ ನಟಿ: ಮೌನಿ ರಾಯ್ (ಬ್ರಹ್ಮಾಸ್ತ್ರ)
ಅತ್ಯುತ್ತಮ ಹೊಸ ನಟ: ಬಬಿಲ್ ಖಾನ್ (ಕಲಾ)
ಅತ್ಯುತ್ತಮ ಹೊಸ ನಟ: ಶಾಂತನು ಮಹೇಶ್ವರಿ (ಗಂಗೂಬಾಯಿ ಕಾಠಿಯಾವಾಡಿ)
ಅತ್ಯುತ್ತಮ ಸಿನಿಮಾ: ದೃಶ್ಯಂ 2
ಅತ್ಯುತ್ತಮ ನಿರ್ದೇಶನ: ಆರ್. ಮಾಧವನ್ (ರಾಕೆಟ್ರಿ ದಿ ನಂಬಿ ಎಫೆಕ್ಟ್)
ಅತ್ಯುತ್ತಮ ಸಂಗೀತ ನಿರ್ದೇಶಕ: ಪ್ರೀತಮ್ (ಬ್ರಹ್ಮಾಸ್ತ್ರ)
ಅತ್ಯುತ್ತಮ ಸಾಹಿತ್ಯ: ಅಮಿತಾಭ್ ಭಟ್ಟಾಚಾರ್ಯ (ಕೇಸರಿಯಾ..)
ತಾಂತ್ರಿಕ ವಿಭಾಗದಲ್ಲಿ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ‘ಗಂಗೂಬಾಯಿ ಕಾಠಿಯಾವಾಡಿ’ ಸಿನಿಮಾ ಹಲವು ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ಅತ್ಯುತ್ತಮ ಚಿತ್ರಕಥೆ, ಅತ್ಯುತ್ತಮ ಸಂಭಾಷಣೆ, ಅತ್ಯುತ್ತಮ ಛಾಯಾಗ್ರಹಣ ಪ್ರಶಸ್ತಿಗಳು ಈ ಸಿನಿಮಾದ ಪಾಲಾಗಿವೆ. ಅತ್ಯುತ್ತಮ ಹಿನ್ನೆಲೆ ಸಂಗೀತ ಪ್ರಶಸ್ತಿ ‘ವಿಕ್ರಂ ವೇದ’ ಚಿತ್ರಕ್ಕೆ ಸಿಕ್ಕಿದೆ. ಅತ್ಯುತ್ತಮ ಸಂಕಲನ ಪ್ರಶಸ್ತಿ ‘ದೃಶ್ಯಂ 2’ ಚಿತ್ರಕ್ಕೆ ಒಲಿದಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:14 am, Sun, 28 May 23