AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Aishwarya Rai Bachchan: ‘ಪೊನ್ನಿಯಿನ್​ ಸೆಲ್ವನ್​ 2’ಸಿನಿಮಾಗೆ ಐಶ್ವರ್ಯಾ ರೈ ಪಡೆದ ಸಂಭಾವನೆ ಎಷ್ಟು? ಬಚ್ಚನ್​ ಸೊಸೆಗೆ ಭಾರಿ ಬೇಡಿಕೆ

Aishwarya Rai Bachchan Remuneration: ‘ಪೊನ್ನಿಯಿನ್​ ಸೆಲ್ವನ್​’ ಸಿನಿಮಾ ಎರಡು ಪಾರ್ಟ್​ನಲ್ಲಿ ಮೂಡಿಬಂತು. ಈ ಎರಡೂ ಪಾರ್ಟ್​ಗಳಿಗೆ ಐಶ್ವರ್ಯಾ ರೈ ಅವರು ಪ್ರತ್ಯೇಕವಾಗಿ ಸಂಭಾವನೆ ಪಡೆದರು. ಮೊದಲ ಮತ್ತು ಎರಡನೇ ಪಾರ್ಟ್​ ಸೇರಿ ಅವರಿಗೆ ಸಿಕ್ಕ ಹಣ ಎಷ್ಟು ಕೋಟಿ ರೂಪಾಯಿ?

Aishwarya Rai Bachchan: ‘ಪೊನ್ನಿಯಿನ್​ ಸೆಲ್ವನ್​ 2’ಸಿನಿಮಾಗೆ ಐಶ್ವರ್ಯಾ ರೈ ಪಡೆದ ಸಂಭಾವನೆ ಎಷ್ಟು? ಬಚ್ಚನ್​ ಸೊಸೆಗೆ ಭಾರಿ ಬೇಡಿಕೆ
ಅಭಿಷೇಕ್​ ಬಚ್ಚನ್​, ಐಶ್ವರ್ಯಾ ರೈ ಬಚ್ಚನ್​
ಮದನ್​ ಕುಮಾರ್​
|

Updated on: May 28, 2023 | 7:51 AM

Share

ನಟಿ ಐಶ್ವರ್ಯಾ ರೈ ಬಚ್ಚನ್​ (Aishwarya Rai Bachchan) ಅವರು ಸಿನಿಮಾಗಳ ಆಯ್ಕೆಯಲ್ಲಿ ಚ್ಯೂಸಿ ಆಗಿದ್ದಾರೆ. ತಮಗೆ ಇಷ್ಟವಾದ ಪ್ರಾಜೆಕ್ಟ್​ಗಳನ್ನು ಮಾತ್ರ ಅವರು ಆಯ್ಕೆ ಮಾಡಿಕೊಳ್ಳುತ್ತಾರೆ. ಈ ವರ್ಷ ಅವರು ನಟಿಸಿದ ‘ಪೊನ್ನಿಯಿನ್​ ಸೆಲ್ವನ್​ 2’ (Ponniyin Selvan 2) ಸಿನಿಮಾ ಬಿಡುಗಡೆಯಾಗಿ ಗಮನ ಸೆಳೆಯಿತು. ಬಹುತಾರಾಗಣದ ಆ ಸಿನಿಮಾದಲ್ಲಿ ಐಶ್ವರ್ಯಾ ರೈ ಕೂಡ ಪ್ರಮುಖ ಪಾತ್ರ ಮಾಡಿದ್ದರು. ಅವರಿಗೆ ಚಿತ್ರರಂಗದಲ್ಲಿ ಸಖತ್ ಬೇಡಿಕೆ ಇದೆ. ಬಾಲಿವುಡ್​ ಮಾತ್ರವಲ್ಲದೇ ಸೌತ್​ ಸಿನಿಮಾ ಇಂಡಸ್ಟ್ರೀಯಲ್ಲೂ ಅವರ ಕಾಲ್​ ಶೀಟ್​ಗಾಗಿ ನಿರ್ಮಾಪಕರು ಕಾದು ಕುಳಿತಿರುತ್ತಾರೆ. ಇಷ್ಟೆಲ್ಲ ಡಿಮ್ಯಾಂಡ್​ ಇರುವ ಐಶ್ವರ್ಯಾ ರೈ ಅವರು ‘ಪೊನ್ನಿಯಿನ್​ ಸೆಲ್ವನ್​ 2’ ಚಿತ್ರಕ್ಕೆ ಪಡೆದ ಸಂಭಾವನೆ (Aishwarya Rai Bachchan Remuneration) ಎಷ್ಟು ಎಂಬ ಬಗ್ಗೆ ಕೆಲವು ಮಾಧ್ಯಮಗಳಲ್ಲಿ ವರದಿ ಪ್ರಕಟ ಆಗಿದೆ. ಆ ಪ್ರಕಾರ, ಅವರಿಗೆ ಸಿಕ್ಕ ಸಂಭಾವನೆ ಬರೋಬ್ಬರಿ ಬರೋಬ್ಬರಿ 10 ಕೋಟಿ ರೂಪಾಯಿ.

ಮಣಿರತ್ನಂ ನಿರ್ದೇಶನ ಮಾಡಿದ ‘ಪೊನ್ನಿಯಿನ್​ ಸೆಲ್ವನ್​’ ಸಿನಿಮಾ ಎರಡು ಪಾರ್ಟ್​ನಲ್ಲಿ ಮೂಡಿಬಂತು. ಈ ಎರಡೂ ಪಾರ್ಟ್​ಗಳಿಗೆ ಐಶ್ವರ್ಯಾ ರೈ ಅವರು ಪ್ರತ್ಯೇಕವಾಗಿ ಸಂಭಾವನೆ ಪಡೆದರು. ಮೊದಲ ಮತ್ತು ಎರಡನೇ ಪಾರ್ಟ್​ ಸೇರಿ ಅವರಿಗೆ ಸಿಕ್ಕ ಹಣ ಒಟ್ಟು 20 ಕೋಟಿ ರೂಪಾಯಿ ಎಂದು ಹೇಳಲಾಗುತ್ತಿದೆ. ‘ಪೊನ್ನಿಯಿನ್​ ಸೆಲ್ವನ್​ 2’ ಸಿನಿಮಾದಲ್ಲಿ ನಟಿಸಿದ್ದ ಕಾಲಿವುಡ್​ನ ಸ್ಟಾರ್​ ನಟ ವಿಕ್ರಮ್​ ಅವರು 12 ಕೋಟಿ ರೂಪಾಯಿ ಪಡೆದಿದ್ದಾರೆ ಎಂಬ ಸುದ್ದಿ ಪ್ರಕಟ ಆಗಿದೆ. ಈ ಅಂಕಿ ಅಂಶಗಳ ಬಗ್ಗೆ ಚಿತ್ರತಂಡದವರು ಅಧಿಕೃತವಾಗಿ ಮಾತನಾಡಿಲ್ಲ.

ಇದನ್ನೂ ಓದಿ: ಬಾಲಿವುಡ್​ನವರು ಒಳ್ಳೆಯ ಅವಕಾಶಗಳನ್ನು ನೀಡುತ್ತಿಲ್ಲ: ಐಶ್ವರ್ಯಾ ರೈ

ಐಶ್ವರ್ಯಾ ರೈ ಬಚ್ಚನ್​ ಅವರು ಈ ರೀತಿಯ ಸಿನಿಮಾ ಮಾಡಿದ್ದಕ್ಕೆ ಅವರ ಪತಿ ಅಭಿಷೇಕ್​ ಬಚ್ಚನ್​ಗೆ ಖುಷಿ ಇದೆ. ಇತ್ತೀಚೆಗೆ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಈ ಬಗ್ಗೆ ಮಾತನಾಡಿದ್ದರು. ‘ಈವರೆಗೂ ಐಶ್ವರ್ಯಾ ರೈ ಮಾಡಿದ ಪಾತ್ರಗಳಲ್ಲಿ ಇದೇ ಬೆಸ್ಟ್​ ಆಗಿದೆ. ಇಂಥ ಪಾತ್ರದಲ್ಲಿ ಅಭಿನಯಿಸುವುದು ಬಹಳ ಕಷ್ಟ’ ಎಂದು ಅವರು ಹೇಳಿದ್ದರು. ಇತ್ತೀಚಿನ ವರ್ಷಗಳಲ್ಲಿ ಐಶ್ವರ್ಯಾ ರೈ ಬಚ್ಚನ್​ ಅವರು ಹೆಚ್ಚಿನ ಸಿನಿಮಾಗಳನ್ನು ಮಾಡುತ್ತಿಲ್ಲ. ಸಂಸಾರದ ಕಡೆಗೆ ಅವರು ಹೆಚ್ಚು ಗಮನ ಹರಿಸಿದ್ದಾರೆ. ಮಗಳು ಆರಾಧ್ಯಳ ಆರೈಕೆಯಲ್ಲಿ ಅವರು ತೊಡಗಿಕೊಂಡಿದ್ದಾರೆ. ಕೆಲವೇ ದಿನಗಳ ಹಿಂದೆ ಅವರು ಕಾನ್ ಚಿತ್ರೋತ್ಸವದ ರೆಡ್​ ಕಾರ್ಪೆಟ್​ ಮೇಲೆ ಹೆಜ್ಜೆ ಹಾಕಿ ಗಮನ ಸೆಳೆದರು.

ಇದನ್ನೂ ಓದಿ: Aishwarya Rai: ಕಾನ್ ಚಿತ್ರೋತ್ಸವದಲ್ಲಿ ಮಸ್ತ್​ ಆಗಿ ಕಾಣಿಸಿಕೊಂಡ ಐಶ್ವರ್ಯಾ ರೈ; ನಟಿಯ ಅಂದಕ್ಕೆ ಸೋತ ಫ್ಯಾನ್ಸ್

ಐಶ್ವರ್ಯಾ ರೈ ಬಚ್ಚನ್ ಅವರು 2023ರ ಕಾನ್​ ಚಿತ್ರೋತ್ಸವದ ರೆಡ್​ ಕಾರ್ಪೆಟ್​ ಮೇಲೆ ಹೆಜ್ಜೆ ಹಾಕಲು ತಮ್ಮಿಷ್ಟದ ಕಾಸ್ಟ್ಯೂಮ್​ ಆಯ್ಕೆ ಮಾಡಿಕೊಂಡಿದ್ದರು. ಆದರೆ ಅವರ ಉದ್ದದ ಬಟ್ಟೆಯನ್ನು ನಿಭಾಯಿಸಲು ಓರ್ವ ವ್ಯಕ್ತಿಯನ್ನು ಅವರು ನೇಮಿಸಿಕೊಂಡಿದ್ದರು. ಆ ರೀತಿಯ ಸಹಾಯಕರಿಗೆ ‘ಕಾಸ್ಟ್ಯೂಮ್ ಸ್ಲೇವ್ಸ್’ ಎಂದು ಕರೆಯಲಾಗುತ್ತದೆ. ಇಂಥ ಪದ್ಧತಿ ಸರಿಯಲ್ಲ ಎಂದು ವಿವೇಕ್​ ಅಗ್ನಿಹೋತ್ರಿ ಅವರು ಟೀಕೆ ಮಾಡಿದ್ದರು. ಅಲ್ಲದೇ ಇದನ್ನು ಮೂರ್ಖತನ ಎಂದು ಅವರು ಕರೆದಿದ್ದರು. ಇದು ಐಶ್ವರ್ಯಾ ರೈ ಬಚ್ಚನ್​ ಅವರ ಅಭಿಮಾನಿಗಳ ಕೋಪಕ್ಕೆ ಕಾರಣ ಆಯಿತು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಹೊಸ ವರ್ಷದ ಸಂಭ್ರಮದಲ್ಲೇ ಕರಾವಳಿ ಜಿಲ್ಲೆಗಳಿಗೆ ಸಿಹಿ ಸುದ್ದಿ ನೀಡಿದ ಡಿಕೆಶಿ
ಹೊಸ ವರ್ಷದ ಸಂಭ್ರಮದಲ್ಲೇ ಕರಾವಳಿ ಜಿಲ್ಲೆಗಳಿಗೆ ಸಿಹಿ ಸುದ್ದಿ ನೀಡಿದ ಡಿಕೆಶಿ
RSS ಅನ್ನು ಅಲ್ ಖೈದಾಗೆ ಹೋಲಿಸಿ ವಿವಾದ ಸೃಷ್ಟಿಸಿದ ಕಾಂಗ್ರೆಸ್ ನಾಯಕ
RSS ಅನ್ನು ಅಲ್ ಖೈದಾಗೆ ಹೋಲಿಸಿ ವಿವಾದ ಸೃಷ್ಟಿಸಿದ ಕಾಂಗ್ರೆಸ್ ನಾಯಕ
ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ರಿಚಾ ಘೋಷ್
ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ರಿಚಾ ಘೋಷ್
ಡ್ರಗ್ಸ್ ಫ್ಯಾಕ್ಟರಿ ಪತ್ತೆ: ನಮ್ಮ ಪೊಲೀಸರ ಬಗ್ಗೆ ಗೃಹ ಸಚಿವರು ಏನಂದ್ರು?
ಡ್ರಗ್ಸ್ ಫ್ಯಾಕ್ಟರಿ ಪತ್ತೆ: ನಮ್ಮ ಪೊಲೀಸರ ಬಗ್ಗೆ ಗೃಹ ಸಚಿವರು ಏನಂದ್ರು?
ಬೆಂಕಿ ಹೊತ್ತಿಕೊಂಡ ಅಪಾರ್ಟ್​​ಮೆಂಟ್​​ನೊಳಗೆ ಸಿಲುಕಿದ್ದ ನಾಯಿಯ ರಕ್ಷಣೆ
ಬೆಂಕಿ ಹೊತ್ತಿಕೊಂಡ ಅಪಾರ್ಟ್​​ಮೆಂಟ್​​ನೊಳಗೆ ಸಿಲುಕಿದ್ದ ನಾಯಿಯ ರಕ್ಷಣೆ
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ