AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Sitara: ಚಿಕ್ಕ ವಯಸ್ಸಿನಲ್ಲೇ ದೊಡ್ಡ ಡೀಲ್​ ಒಪ್ಪಿಕೊಂಡ ಮಹೇಶ್​ ಬಾಬು ಪುತ್ರಿ ಸಿತಾರಾ; ಸಿಗುತ್ತಿದೆ ಭರ್ಜರಿ ಸಂಭಾವನೆ

Mahesh Babu Daughter Sitara Ghattamaneni: ಚಿತ್ರರಂಗ ದೊಡ್ಡ ದೊಡ್ಡ ತಂತ್ರಜ್ಞರು ಇದರ ತೆರೆ ಹಿಂದೆ ಕೆಲಸ ಮಾಡಿದ್ದಾರೆ. ಬಹಳ ರಹಸ್ಯವಾಗಿ ಇದರ ಶೂಟಿಂಗ್​ ನಡೆದಿದೆ.

Sitara: ಚಿಕ್ಕ ವಯಸ್ಸಿನಲ್ಲೇ ದೊಡ್ಡ ಡೀಲ್​ ಒಪ್ಪಿಕೊಂಡ ಮಹೇಶ್​ ಬಾಬು ಪುತ್ರಿ ಸಿತಾರಾ; ಸಿಗುತ್ತಿದೆ ಭರ್ಜರಿ ಸಂಭಾವನೆ
ಸಿತಾರಾ ಘಟ್ಟಮನೇನಿ
ಮದನ್​ ಕುಮಾರ್​
|

Updated on: May 26, 2023 | 3:43 PM

Share

ಮಹೇಶ್​ ಬಾಬು (Mahesh Babu) ಅವರ ಇಡೀ ಕುಟುಂಬ ಚಿತ್ರರಂಗದಲ್ಲಿ ಸಕ್ರಿಯವಾಗಿದೆ. ಅವರ ಪುತ್ರಿ ಸಿತಾರಾ ಘಟ್ಟಮನೇನಿ (Sitara Ghattamaneni) ಈಗಾಗಲೇ ಫೇಮಸ್​ ಆಗಿದ್ದಾಳೆ. ಆಕೆಯ ಖ್ಯಾತಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹೊಸ ಜಾಹೀರಾತಿನಲ್ಲಿ ನಟಿಸಲು ಸಿತಾರಾಗೆ ಆಫರ್​ ಬಂದಿದೆ. ಅದನ್ನು ಆಕೆ ಒಪ್ಪಿಕೊಂಡಿದ್ದಾಳೆ. ಈ ಜಾಹೀರಾತಿನಲ್ಲಿ ನಟಿಸಿದ್ದಕ್ಕಾಗಿ ಸಿತಾರಾಗೆ ದೊಡ್ಡ ಮೊತ್ತದ ಸಂಭಾವನೆ ಸಿಗುತ್ತಿದೆ. ಭಾರತೀಯ ಚಿತ್ರರಂಗದಲ್ಲಿ ಬೇರೆ ಯಾವುದೇ ಸ್ಟಾರ್​ ಕಲಾವಿದರ ಮಕ್ಕಳು ಪಡೆಯದಂತಹ ದೊಡ್ಡ ಸಂಭಾವನೆಯನ್ನು (Remuneration) ಸಿತಾರಾಗೆ ನೀಡಲಾಗುತ್ತಿದೆ ಎಂದು ಟಾಲಿವುಡ್​ನ ಮಾಧ್ಯಮಗಳು ವರದಿ ಮಾಡಿವೆ. ಮೂಲಗಳ ಪ್ರಕಾರ ಇದೊಂದು ಆಭರಣ ಕಂಪನಿಯ ಜಾಹೀರಾತು. ಸತತ ಮೂರು ದಿನಗಳ ಕಾಲ ಇದನ್ನು ಚಿತ್ರೀಕರಿಸಲಾಗಿದೆ. ಚಿತ್ರರಂಗ ದೊಡ್ಡ ದೊಡ್ಡ ತಂತ್ರಜ್ಞರು ಇದರ ತೆರೆ ಹಿಂದೆ ಕೆಲಸ ಮಾಡಿದ್ದಾರೆ. ಬಹಳ ರಹಸ್ಯವಾಗಿ ಇದರ ಶೂಟಿಂಗ್​ ನಡೆದಿದೆ. ಚಿತ್ರೀಕರಣದ ಸ್ಥಳದ ಬಗ್ಗೆಯೂ ಮಾಹಿತಿ ಬಿಟ್ಟುಕೊಡಲಾಗಿಲ್ಲ. ಈ ಜಾಹೀರಾತು ಯಾವಾಗ ಹೊರಬರಲಿದೆ ಎಂಬ ಕೌತುಕ ಮೂಡಿದೆ.

ಸಿತಾರಾ ಸೋಶಿಯಲ್​ ಮೀಡಿಯಾದಲ್ಲಿ ಸಖತ್​ ಆ್ಯಕ್ಟೀವ್ ಆಗಿದ್ದಾಳೆ. ಅವಳಿಗೆ ಇನ್ನೂ 10 ವರ್ಷ ವಯಸ್ಸು. ಈಗಲೇ ಆಕೆಯನ್ನು ಇನ್​ಸ್ಟಾಗ್ರಾಂನಲ್ಲಿ 12 ಲಕ್ಷ ಜನರು ಹಿಂಬಾಲಿಸುತ್ತಿದ್ದಾರೆ. ಸಿತಾರಾಗೆ ಯಾವುದೇ ಸಂಕೋಚ ಇಲ್ಲ. ಆಕೆ ಸೋಶಿಯಲ್ ಮೀಡಿಯಾದಲ್ಲಿ ಸಖತ್​ ಆ್ಯಕ್ಟೀವ್ ಆಗಿರುತ್ತಾಳೆ. ಅಭಿಮಾನಿಗಳ ಜತೆ ಸಂಪರ್ಕದಲ್ಲಿರೋಕೆ ಎಲ್ಲ ರೀತಿಯ ಪ್ರಯತ್ನವನ್ನೂ ಮಾಡುತ್ತಾಳೆ. ಆಗಾಗ ಸಿತಾರಾ ಹೊಸ ರೀಲ್ಸ್​ ಹಂಚಿಕೊಳ್ಳುತ್ತಾಳೆ. ಈ ಮೊದಲು ಮಹೇಶ್​ ಬಾಬು ನಟನೆಯ ‘ಸರ್ಕಾರು ವಾರಿ ಪಾಟ’ ಚಿತ್ರದ ಸೂಪರ್​ ಹಿಟ್​ ಹಾಡು ‘ಕಲಾವತಿ..’ಗೆ ಆಕೆ ಡ್ಯಾನ್ಸ್​ ಮಾಡಿದ್ದಳು. ಆ ವಿಡಿಯೋ ಲಕ್ಷಾಂತರ ಬಾರಿ ವೀಕ್ಷಣೆ ಕಂಡಿತ್ತು.

ಇದನ್ನೂ ಓದಿ: ಫ್ಯಾಮಿಲಿ ಜೊತೆ ವೆಕೇಶನ್ ತೆರಳಿದ ಮಹೇಶ್ ಬಾಬು; ಸಿತಾರಾ ಸಂತಸಕ್ಕೆ ಪಾರವೇ ಇಲ್ಲ

ಮಹೇಶ್ ಬಾಬು ಅವರು ತಮ್ಮ ಮಗಳಿಗೆ ಈಗಿನಿಂದಲೇ ಚಿತ್ರರಂಗದ ನಂಟನ್ನು ಬೆಳೆಸುತ್ತಿದ್ದಾರೆ. ಬಣ್ಣದ ಲೋಕದಲ್ಲಿ ಮಿಂಚಲು ಸಿತಾರಾ ರೆಡಿ ಆಗುತ್ತಿದ್ದಾಳೆ. ಸ್ಟಾರ್ ನಟನ ಮಗಳು ಎಂಬ ಕಾರಣಕ್ಕೆ ಲಕ್ಷಾಂತರ ಮಂದಿ ಅಕೆಯನ್ನು ಹಿಂಬಾಲಿಸುತ್ತಿದ್ದಾರೆ. ಸಿತಾರಾ ಸ್ವಂಥ ಯೂಟ್ಯೂಬ್ ಚಾನೆಲ್ ಹೊಂದಿದ್ದಾಳೆ. ಆ ಮೂಲಕ ವಿವಿಧ ಸೆಲೆಬ್ರಿಟಿಗಳನ್ನು ಆಕೆ ಸಂದರ್ಶನ ಮಾಡುತ್ತಿದ್ದಾಳೆ.

ಇದನ್ನೂ ಓದಿ:  Sitara Ghattamaneni: ಮಿರರ್​ ಸೆಲ್ಫಿಯಲ್ಲಿ ಸ್ಟೈಲಿಶ್ ಆಗಿ ಪೋಸ್ ಕೊಟ್ಟ ಸಿತಾರಾ-ನಮ್ರತಾ

ಮಹೇಶ್ ಬಾಬು ಅವರು ಟಾಲಿವುಡ್​ನ ಬೇಡಿಕೆಯ ನಟ. ಅವರಿಗೆ ಟಾಲಿವುಡ್​ನಲ್ಲಿ ಮಾತ್ರವಲ್ಲ ಇಡೀ ಭಾರತದಾದ್ಯಂತ ಫ್ಯಾನ್ಸ್ ಇದ್ದಾರೆ. ಈ ಕಾರಣಕ್ಕೆ ಜೀ ತೆಲುಗು ವಾಹಿನಿ ಮಹೇಶ್ ಬಾಬು ಅವರನ್ನು ಕಳೆದ ವರ್ಷ ಪ್ರಚಾರ ರಾಯಭಾರಿ ಆಗಿ ನೇಮಕ ಮಾಡಿಕೊಂಡಿತ್ತು. ಹಾಗಾಗಿ ಜೀ ಕನ್ನಡದಲ್ಲಿ ಪ್ರಸಾರ ಆಗುವ ರಿಯಾಲಿಟಿ ಶೋ, ಕಾರ್ಯಕ್ರಮಗಳನ್ನು ಮಹೇಶ್ ಬಾಬು ಪ್ರಮೋಟ್ ಮಾಡಿದ್ದರು. ಆಗ ಅವರು ಮಗಳ ಜತೆ ‘ಡ್ಯಾನ್ಸ್ ಇಂಡಿಯಾ ಡ್ಯಾನ್ಸ್​’ ಶೋಗೆ ಆಗಮಿಸಿದ್ದರು. ಮಹೇಶ್ ಹಾಗೂ ಸಿತಾರಾಗೆ ‘ಡ್ಯಾನ್ಸ್ ಇಂಡಿಯಾ ಡ್ಯಾನ್ಸ್​’ನಲ್ಲಿ ಅದ್ದೂರಿಯಾಗಿ ಸ್ವಾಗತ ನೀಡಲಾಗಿತ್ತು. ‘ಸರ್ಕಾರು ವಾರಿ ಪಾಟ’ ಚಿತ್ರದ ‘ಪೆನ್ನಿ..’ ಹಾಡಿಗೆ ಸಿತಾರಾ ಡ್ಯಾನ್ಸ್ ಮಾಡಿದ್ದಳು. ಮಗಳ ಜತೆ ರಿಯಾಲಿಟಿ ಶೋಗೆ ಬಂದಿದ್ದಕ್ಕೆ ಮಹೇಶ್ ಬಾಬು ಸಂತಸ ವ್ಯಕ್ತಪಡಿಸಿದ್ದರು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!