AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಡಾನ್ 3’ ಚಿತ್ರದಿಂದ ಹೊರನಡೆದ ಶಾರುಖ್ ಖಾನ್; ಸಂಭಾವನೆ ವಿಚಾರದಲ್ಲಿ ಕಿರಿಕ್?

ಶಾರುಖ್ ಖಾನ್ ‘ಡಾನ್ 3’ನ ಭಾಗವಾಗುತ್ತಿಲ್ಲ. ಫರ್ಹಾನ್ ಮತ್ತು ರಿತೇಶ್ ಅವರು ‘ಡಾನ್ 3' ಕುರಿತು ಅನೇಕ ಬಾರಿ ಚರ್ಚೆ ನಡೆಸಿದ್ದಾರೆ. ಆದರೆ ಈ ಫ್ರ್ಯಾಂಚೈಸ್‌ಗೆ ಹಿಂದಿರುಗಲು ಶಾರುಖ್ ಉತ್ಸಾಹ ತೋರಿಲ್ಲ.

‘ಡಾನ್ 3’ ಚಿತ್ರದಿಂದ ಹೊರನಡೆದ ಶಾರುಖ್ ಖಾನ್; ಸಂಭಾವನೆ ವಿಚಾರದಲ್ಲಿ ಕಿರಿಕ್?
ಶಾರುಖ್ ಖಾನ್
Follow us
ರಾಜೇಶ್ ದುಗ್ಗುಮನೆ
|

Updated on: May 17, 2023 | 12:43 PM

ಶಾರುಖ್ ಖಾನ್ ನಟನೆಯ ‘ಡಾನ್’ ಹಾಗೂ ‘ಡಾನ್ 2’ ಸಿನಿಮಾ ಸೂಪರ್ ಹಿಟ್ ಆಯಿತು. ಈ ಚಿತ್ರದಿಂದ ಶಾರುಖ್ ಖಾತಿ ಹೆಚ್ಚಿತು. ಈ ಚಿತ್ರಗಳನ್ನು ನಿರ್ದೇಶನ ಮಾಡಿದ್ದು ಫರ್ಹಾನ್ ಅಖ್ತರ್ (Farhan Akhtar). ಈಗ ಅವರು ‘ಡಾನ್ 3’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಈಗ ಈ ಸಿನಿಮಾ ಬಗ್ಗೆ ಹೊಸ ಅಪ್​ಡೇಟ್​ ಒಂದು ಕೇಳಿ ಬಂದಿದೆ. ‘ಡಾನ್ 3’ (Don 3)ಸಿನಿಮಾದಿಂದ ಶಾರುಖ್ ಖಾನ್ ಹೊರನಡೆದಿದ್ದಾರೆ ಎಂದು ವರದಿ ಆಗಿದೆ. ಇದಕ್ಕೆ ಕಾರಣ ಏನು ಎಂಬುದಕ್ಕೆ ಹಲವು ರೀತಿಯ ಚರ್ಚೆಗಳು ನಡೆಯುತ್ತಿವೆ.

ಫರ್ಹಾನ್ ಅಖ್ತರ್ ಹಾಗೂ ರಿತೇಶ್ ಸಿದ್ವಾನಿ ಸೇರಿ ‘ಎಕ್ಸೆಲ್ ಎಂಟರ್​ಟೇನ್​ಮೆಂಟ್’ ನಿರ್ಮಾಣ ಸಂಸ್ಥೆಯನ್ನು ಮುನ್ನಡೆಸುತ್ತಿದ್ದಾರೆ. ಇತ್ತೀಚೆಗೆ ಮಾತನಾಡಿದ್ದ ರಿತೇಶ್ ಅವರು ‘ಡಾನ್ 3’ ಬಗ್ಗೆ ಅಪ್​ಡೇಟ್ ನೀಡಿದ್ದರು. ಫರ್ಹಾನ್ ಅವರು ಸದ್ಯ ‘ಡಾನ್ 3’ ಕೆಲಸಗಳಲ್ಲಿ ಬ್ಯುಸಿ ಇರುವ ವಿಚಾರವನ್ನು ಅವರು ಖಚಿತಪಡಿಸಿದ್ದರು.

ಇದನ್ನೂ ಓದಿ: ಅಂದುಕೊಂಡಂತೆ ನಡೆಯಲೇ ಇಲ್ಲ ಶಾರುಖ್ ಖಾನ್ ಪ್ಲಾನ್; ‘ಜವಾನ್​’ಗೆ ಹಿನ್ನಡೆ

ಶಾರುಖ್ ಖಾನ್ ‘ಡಾನ್ 3’ನ ಭಾಗವಾಗುತ್ತಿಲ್ಲ. ಫರ್ಹಾನ್ ಮತ್ತು ರಿತೇಶ್ ಅವರು ‘ಡಾನ್ 3′ ಕುರಿತು ಅನೇಕ ಬಾರಿ ಚರ್ಚೆ ನಡೆಸಿದ್ದಾರೆ. ಆದರೆ ಈ ಫ್ರ್ಯಾಂಚೈಸ್‌ಗೆ ಹಿಂದಿರುಗಲು ಶಾರುಖ್ ಉತ್ಸಾಹ ತೋರಿಲ್ಲ. ‘ಡಾನ್ 3’ ಕಥೆ ಸೂಕ್ತ ಅಲ್ಲ ಎಂದು ಅವರಿಗೆ ಅನಿಸಿದೆ. ಈ ಕಥೆ ಗಿಮಿಕ್ ಎನ್ನುವ ಅಭಿಪ್ರಾಯ ಮೂಡಿದೆ. ಈ ಕಾರಣಕ್ಕೆ ಅವರು ಹೊರ ನಡೆದಿದ್ದಾರೆ ಎಂದು ಹೇಳಲಾಗುತ್ತಿದೆ. ಕೆಲವು ವರದಿ ಪ್ರಕಾರ ಸಂಭಾವನೆ ವಿಚಾರ ಕೂಡ ಕಾರಣ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ಶಾರುಖ್ ಖಾನ್ ಮ್ಯಾನೇಜರ್ ಪೂಜಾ ಆಗರ್ಭ ಶ್ರೀಮಂತೆ; ವರ್ಷಕ್ಕೆ ಸಿಗೋ ಸಂಭಾವನೆ ಇಷ್ಟೊಂದಾ?

‘ಪಠಾಣ್’ ಗೆದ್ದ ಬಳಿಕ ಶಾರುಖ್ ಖಾನ್ ಖ್ಯಾತಿ ಹೆಚ್ಚಿದೆ. ಈ ಸಿನಿಮಾದಿಂದ ಬಂದ ಲಾಭದಲ್ಲಿ ಅವರು ಪರ್ಸಂಟೇಜ್ ಪಡೆದಿದ್ದರು. ಇದರಿಂದ ಅವರಿಗೆ ದೊಡ್ಡ ಲಾಭ ಆಗಿದೆ. ‘ಡಾನ್ 3’ ಚಿತ್ರಕ್ಕೂ ಅವರು ಇದೇ ರೀತಿಯ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಆದರೆ, ಇದಕ್ಕೆ ಫರ್ಹಾನ್ ಒಪ್ಪಿಗೆ ನೀಡಿಲ್ಲ. ಈ ಹಿನ್ನೆಲೆಯಲ್ಲಿ ಅವರು ‘ಡಾನ್ 3’ ಸಿನಿಮಾ ಮಾಡಲು ನಿರಾಕರಿಸಿದ್ದಾರೆ ಎಂಬ ವರದಿಯೂ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಪುರುಷರು ವಾಹನ ಓಡಿಸಲು ಪರದಾಡಿದ ರಸ್ತೇಲಿ ಸಲೀಸಾಗಿ ಸ್ಕೂಟರ್ ಓಡಿಸಿದ ಯುವತಿ
ಪುರುಷರು ವಾಹನ ಓಡಿಸಲು ಪರದಾಡಿದ ರಸ್ತೇಲಿ ಸಲೀಸಾಗಿ ಸ್ಕೂಟರ್ ಓಡಿಸಿದ ಯುವತಿ
ಪಾಕಿಸ್ತಾನ ಎಸೆದ ಜೀವಂತ ಶೆಲ್​ಗಳನ್ನು ನಿಷ್ಕ್ರಿಯಗೊಳಿಸಿದ ಭಾರತೀಯ ಸೇನೆ
ಪಾಕಿಸ್ತಾನ ಎಸೆದ ಜೀವಂತ ಶೆಲ್​ಗಳನ್ನು ನಿಷ್ಕ್ರಿಯಗೊಳಿಸಿದ ಭಾರತೀಯ ಸೇನೆ
ಮಳೆಗಾಲ ಸಮೀಪದಲ್ಲಿದೆ, ನಗರದಲ್ಲಿ ಮರ ಗಣತಿ ಶುರುಮಾಡಲು ಇದು ಸಕಾಲ
ಮಳೆಗಾಲ ಸಮೀಪದಲ್ಲಿದೆ, ನಗರದಲ್ಲಿ ಮರ ಗಣತಿ ಶುರುಮಾಡಲು ಇದು ಸಕಾಲ
ಮನೆಯೊಳಗೆ ನುಗ್ಗಿ ಕೊಲ್ಲುತ್ತೇವೆ; ಪಾಕಿಸ್ತಾನಕ್ಕೆ ಮೋದಿ ಖಡಕ್ ಎಚ್ಚರಿಕೆ
ಮನೆಯೊಳಗೆ ನುಗ್ಗಿ ಕೊಲ್ಲುತ್ತೇವೆ; ಪಾಕಿಸ್ತಾನಕ್ಕೆ ಮೋದಿ ಖಡಕ್ ಎಚ್ಚರಿಕೆ
ಹೊತ್ತಿ ಉರಿದ ಗೋದಾಮು, 60ಕ್ಕೂ ಹೆಚ್ಚು ಗಾಡಿ ನೀರು ಹಾಕಿದ್ರೂ ಆರದ ಬೆಂಕಿ
ಹೊತ್ತಿ ಉರಿದ ಗೋದಾಮು, 60ಕ್ಕೂ ಹೆಚ್ಚು ಗಾಡಿ ನೀರು ಹಾಕಿದ್ರೂ ಆರದ ಬೆಂಕಿ
ಸಾಮಾನ್ಯ ಸಂಗತಿಯೆಂಬಂತೆ ಘಟನೆ ವಿವರಿಸಿದ ಮೃತ ಬಾಲಕನ ತಂದೆ
ಸಾಮಾನ್ಯ ಸಂಗತಿಯೆಂಬಂತೆ ಘಟನೆ ವಿವರಿಸಿದ ಮೃತ ಬಾಲಕನ ತಂದೆ
ಮದುವೆಗೆಂದು ಮಂಗಳೂರಿಗೆ ಹೊರಟ್ಟಿದ್ದ ಬಸ್ ಶಿರಾಡಿ ಘಾಟಿನಲ್ಲಿ ಪಲ್ಟಿ
ಮದುವೆಗೆಂದು ಮಂಗಳೂರಿಗೆ ಹೊರಟ್ಟಿದ್ದ ಬಸ್ ಶಿರಾಡಿ ಘಾಟಿನಲ್ಲಿ ಪಲ್ಟಿ
ಆದಂಪುರ ಏರ್​ಬೇಸ್​​ ಭೇಟಿ ಬಳಿಕ ಮೋದಿ ಮಾತು: ಇಲ್ಲಿದೆ ನೇರಪ್ರಸಾರ
ಆದಂಪುರ ಏರ್​ಬೇಸ್​​ ಭೇಟಿ ಬಳಿಕ ಮೋದಿ ಮಾತು: ಇಲ್ಲಿದೆ ನೇರಪ್ರಸಾರ
ಇಡೀ ವಿಶ್ವವೇ ಭಾರತೀಯ ಸೈನಿಕರ ಕಾರ್ಯವನ್ನು ಕೊಂಡಾಡುತ್ತಿದೆ: ಶಾಸಕ
ಇಡೀ ವಿಶ್ವವೇ ಭಾರತೀಯ ಸೈನಿಕರ ಕಾರ್ಯವನ್ನು ಕೊಂಡಾಡುತ್ತಿದೆ: ಶಾಸಕ
ನಾಗರಿಕರ ಹೆಸರಿನಲ್ಲಿ ರಾಜ್ಯಾದ್ಯಂತ ತಿರಂಗಾ ಯಾತ್ರೆ: ಆರ್ ಅಶೋಕ್
ನಾಗರಿಕರ ಹೆಸರಿನಲ್ಲಿ ರಾಜ್ಯಾದ್ಯಂತ ತಿರಂಗಾ ಯಾತ್ರೆ: ಆರ್ ಅಶೋಕ್