Shah Rukh Khan: ಅಂದುಕೊಂಡಂತೆ ನಡೆಯಲೇ ಇಲ್ಲ ಶಾರುಖ್ ಖಾನ್ ಪ್ಲಾನ್; ‘ಜವಾನ್​’ಗೆ ಹಿನ್ನಡೆ

Jawan Movie: ಶಾರುಖ್ ಖಾನ್ ನಟನೆಯ ಈ ಚಿತ್ರಕ್ಕೆ ನಯನತಾರಾ ನಾಯಕಿ. ವಿಜಯ್ ಸೇತುಪತಿ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದ ಕೆಲಸಗಳು ವಿಳಂಬ ಆಗಿವೆ.

Shah Rukh Khan: ಅಂದುಕೊಂಡಂತೆ ನಡೆಯಲೇ ಇಲ್ಲ ಶಾರುಖ್ ಖಾನ್ ಪ್ಲಾನ್; ‘ಜವಾನ್​’ಗೆ ಹಿನ್ನಡೆ
ಶಾರುಖ್ ಖಾನ್
Follow us
ರಾಜೇಶ್ ದುಗ್ಗುಮನೆ
|

Updated on: May 05, 2023 | 7:18 AM

ದೊಡ್ಡ ಬಜೆಟ್​ ಚಿತ್ರಗಳನ್ನು ಅಂದುಕೊಂಡ ಡೇಟ್​ಗೆ ರಿಲೀಸ್ ಮಾಡೋದು ದೊಡ್ಡ ಚಾಲೆಂಜ್​. ಹೀರೋಗಳಿಗೆ ಇರುವ ಬೇರೆ ಕಮಿಟ್​ಮೆಂಟ್, ಶೂಟಿಂಗ್ ವೇಳೆ ಆಗುವ ತೊಂದರೆ ಮತ್ತಿತ್ಯಾದಿ ವಿಚಾರಗಳಿಂದ ರಿಲೀಸ್ ಡೇಟ್ ಮುಂದಕ್ಕೆ ಹಾಕಿಕೊಳ್ಳಬೇಕಾದ ಅನಿವಾರ್ಯತೆ ಬರುತ್ತದೆ. ಈಗ ಶಾರುಖ್ ಖಾನ್ (Shah Rukh Khan) ನಟನೆಯ ‘ಜವಾನ್’ (Jawan Movie) ಚಿತ್ರಕ್ಕೂ ಹಾಗೆಯೇ ಆಗಿದೆ. ಈ ಚಿತ್ರವನ್ನು ಜೂನ್ 2ರಂದು ತೆರೆಗೆ ತರಬೇಕು ಎಂದು ತಂಡ ಟಾರ್ಗೆಟ್ ಇಟ್ಟುಕೊಂಡಿತ್ತು. ಆದರೆ, ಅದು ತಲೆಕೆಳಗಾಗಿದೆ. ‘ಜವಾನ್​’ ಸಿನಿಮಾ ಅಂದುಕೊಂಡ ಡೇಟ್​ಗೆ ರಿಲೀಸ್ ಆಗುತ್ತಿಲ್ಲ.

ತಮಿಳಿನಲ್ಲಿ ದಳಪತಿ ವಿಜಯ್ ಜೊತೆ ಬ್ಯಾಕ್​ ಟು ಬ್ಯಾಕ್ ಸಿನಿಮಾ ಮಾಡಿ ಜನಪ್ರಿಯತೆ ಪಡೆದವರು ಅಟ್ಲೀ. ಅವರು ‘ಜವಾನ್’ ಸಿನಿಮಾ ಮೂಲಕ ಇದೇ ಮೊದಲ ಬಾರಿಗೆ ಬಾಲಿವುಡ್​ಗೆ ಕಾಲಿಡುತ್ತಿದ್ದಾರೆ. ಶಾರುಖ್ ಖಾನ್ ನಟನೆಯ ಈ ಚಿತ್ರಕ್ಕೆ ನಯನತಾರಾ ನಾಯಕಿ. ವಿಜಯ್ ಸೇತುಪತಿ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಶಾರುಖ್ ಒಡೆತನದ ರೆಡ್ ಚಿಲ್ಲೀಸ್​ ಎಂಟರ್​ಟೇನ್​ಮೆಂಟ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ. ಈ ಸಿನಿಮಾದ ಕೆಲಸಗಳು ವಿಳಂಬ ಆಗಿವೆ.

‘ಪಠಾಣ್’ ಸಿನಿಮಾ ಗೆದ್ದ ಬಳಿಕ ಶಾರುಖ್ ‘ಜವಾನ್​’ ಸಿನಿಮಾ ಚಿತ್ರೀಕರಣವನ್ನು ಪೂರ್ಣಮಾಡಿಕೊಟ್ಟಿದ್ದಾರೆ ಎನ್ನಲಾಗಿದೆ. ಆದರೆ, ಈ ಚಿತ್ರದ ವಿಎಫ್​ಎಕ್ಸ್ ಕೆಲಸಗಳು ಬಾಕಿ ಉಳಿದಿವೆ. ಅವನ್ನು ಇನ್ನೊಂದು ತಿಂಗಳಲ್ಲಿ ಪೂರ್ಣಗೊಳಿಸೋದು ಅಸಾಧ್ಯ. ಇಷ್ಟೇ ಅಲ್ಲ, ಈ ಮಧ್ಯೆ ಟ್ರೇಲರ್, ಸಾಂಗ್​ಗಳನ್ನು ರಿಲೀಸ್ ಮಾಡೋಕೆ ಆಗುವುದಿಲ್ಲ. ಹೀಗಾಗಿ, ರಿಲೀಸ್ ದಿನಾಂಕ ಮುಂದಕ್ಕೆ ಹೋಗುತ್ತಿದೆ. ‘ಪಠಾಣ್’ ರೀತಿಯೇ ‘ಜವಾನ್’ ಸಿನಿಮಾದಲ್ಲೂ ಭರ್ಜರಿ ಆ್ಯಕ್ಷನ್ ಇರಲಿದೆ.

ಇದನ್ನೂ ಓದಿ: Shah Rukh Khan: ಸೆಲ್ಫಿ ಕೇಳಲು ಬಂದ ಅಭಿಮಾನಿಯನ್ನು ತಳ್ಳಿದ ಶಾರುಖ್​ ಖಾನ್​; ‘ಪಠಾಣ್​’ ಗೆದ್ದ ಮೇಲೆ ಸೊಕ್ಕು ಬಂತಾ?

‘ಪಠಾಣ್​’ ದೇಶಪ್ರೇಮ ಇರುವ ಸಿನಿಮಾ ಆಗಿತ್ತು. ಗಣರಾಜ್ಯೋತ್ಸವದ ಸಂದರ್ಭದಲ್ಲಿ ಸಿನಿಮಾ ರಿಲೀಸ್ ಆಗಿದ್ದು ಚಿತ್ರಕ್ಕೆ ಸಹಕಾರಿ ಆಗಿತ್ತು. ಈಗ ‘ಜವಾನ್’ ಸಿನಿಮಾ ಕೂಡ ಆಗಸ್ಟ್ 15ರ ಸಂದರ್ಭದಲ್ಲಿ ರಿಲೀಸ್ ಮಾಡಿದರೆ ಉತ್ತಮ ಅನ್ನೋದು ಶಾರುಖ್ ಖಾನ್ ಪ್ಲ್ಯಾನ್. ಈ ಸಂದರ್ಭದಲ್ಲಿ ಹಲವು ಸಿನಿಮಾಗಳು ರಿಲೀಸ್​ಗೆ ರೆಡಿ ಇರುತ್ತವೆ. ಅವುಗಳ ಜೊತೆ ‘ಜವಾನ್​’ ಸ್ಪರ್ಧೆಗೆ ಇಳಿಯಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.

‘ಜವಾನ್’ ಸಿನಿಮಾ ದೊಡ್ಡ ಬಜೆಟ್​ನಲ್ಲಿ ಸಿದ್ಧಗೊಳ್ಳುತ್ತಿದೆ. ಈ ಚಿತ್ರದಲ್ಲಿ ಶಾರುಖ್ ಅವರು ಸೈನಿಕನ ಪಾತ್ರ ಮಾಡಿದ್ದಾರೆ. ಈ ಸಿನಿಮಾದಿಂದ ಶಾರುಖ್ ಖಾನ್ ಮತ್ತೊಂದು ಗೆಲುವು ಕಾಣುವ ಕನಸು ಕಾಣುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ