AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Amitabh Bachchan: ಹೆಲ್ಮೆಟ್​ ಇಲ್ಲದೇ ಬೈಕ್​ ಸವಾರಿ ಮಾಡಿದರೂ ‘ನಂದೇನೂ ತಪ್ಪಿಲ್ಲ’ ಎಂದು ವಾದಿಸಿದ ಅಮಿತಾಭ್​

‘ಚಿತ್ರೀಕರಣಕ್ಕಾಗಿ ರಸ್ತೆಯ ಒಂದು ಭಾಗವನ್ನು ಪೊಲೀಸರು ನಿರ್ಬಂಧಿಸಿದ್ದರು. ಆ ದಾರಿ ಇರುವುದು 30ರಿಂದ 40 ಮೀಟರ್​ ಮಾತ್ರ’ ಎಂದು ಅಮಿತಾಭ್​ ಬಚ್ಚನ್​ ಅವರು ಸ್ಪಷ್ಟನೆ ನೀಡಿದ್ದಾರೆ.

Amitabh Bachchan: ಹೆಲ್ಮೆಟ್​ ಇಲ್ಲದೇ ಬೈಕ್​ ಸವಾರಿ ಮಾಡಿದರೂ ‘ನಂದೇನೂ ತಪ್ಪಿಲ್ಲ’ ಎಂದು ವಾದಿಸಿದ ಅಮಿತಾಭ್​
ಅಮಿತಾಭ್ ಬಚ್ಚನ್ ಬೈಕ್​ ಸವಾರಿ ಫೋಟೋ
ಮದನ್​ ಕುಮಾರ್​
|

Updated on: May 17, 2023 | 11:24 AM

Share

ನಟ ಅಮಿತಾಭ್​ ಬಚ್ಚನ್​ (Amitabh Bachchan) ಅವರಿಗೆ ಈಗ 80 ವರ್ಷ ವಯಸ್ಸು. ಈ ವಯಸ್ಸಿನಲ್ಲೂ ಅವರು ಸಖತ್​ ಆ್ಯಕ್ಟೀವ್​ ಆಗಿದ್ದಾರೆ. ಇತ್ತೀಚೆಗೆ ಅವರಿಗೆ ಶೂಟಿಂಗ್ ವೇಳೆ ಗಾಯವಾಗಿತ್ತು. ಆದರೆ ಈಗ ಸಂಪೂರ್ಣ ಚೇತರಿಸಿಕೊಂಡು ಮತ್ತೆ ಕೆಲಸಕ್ಕೆ ಮರಳಿದ್ದಾರೆ. ಅದರ ಜೊತೆಗೆ ಒಂದು ಕಿರಿಕ್​ ಮಾಡಿಕೊಂಡಿದ್ದಾರೆ. ಮುಂಬೈನ ಬೀದಿಯಲ್ಲಿ ಅವರು ಹೆಲ್ಮೆಟ್​ (Helmet) ಇಲ್ಲದೇ ಬೈಕ್​ ಸವಾರಿ ಮಾಡಿದ್ದಾರೆ. ಆ ಸಂದರ್ಭದ ಫೋಟೋ ಕೂಡ ವೈರಲ್​ ಆಗಿದೆ. ಆದರೆ ಈಗ ಅಮಿತಾಭ್​ ಬಚ್ಚನ್​ ಅವರು ‘ನಂದೇನೂ ತಪ್ಪಿಲ್ಲ’ ಎಂದು ವಾದಿಸುತ್ತಿದ್ದಾರೆ. ಈ ಫೋಟೋ ಹಿಂದಿನ ಅಸಲಿಯತ್ತು ಏನು ಎಂಬುದನ್ನು ಅಮಿತಾಭ್​ ಬಚ್ಚನ್​ ವಿವರಿಸಿದ್ದಾರೆ. ಅಷ್ಟಕ್ಕೂ ಅಮಿತಾಭ್​ ಬಚ್ಚನ್​ ಅವರು ಹೆಲ್ಮೆಟ್​ ಇಲ್ಲದೇ ಬೈಕ್​ ಸವಾರಿ ಮಾಡಿದ್ದು ಒಂದು ಶೂಟಿಂಗ್​ ಸಲುವಾಗಿ.

ಅಮಿತಾಭ್ ಬಚ್ಚನ್​ ಅವರು ಬ್ಲಾಗ್​ ಮೂಲಕ ಅನೇಕ ವಿಚಾರಗಳನ್ನು ಹಂಚಿಕೊಳ್ಳುತ್ತಾರೆ. ಅದೇ ರೀತಿ ಅವರೀಗ ತಮ್ಮ ಹೆಲ್ಮೆಟ್​ ವಿವಾದದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ‘ಅದು ಭಾನುವಾರ. ಚಿತ್ರೀಕರಣಕ್ಕೆ ಸೂಕ್ತ ಅನುಮತಿಯನ್ನು ತೆಗೆದುಕೊಳ್ಳಲಾಗಿತ್ತು. ಎಲ್ಲಾ ಕಚೇರಿಗಳು ಮುಚ್ಚಿರುವುದರಿಂದ ಮತ್ತು ಸಾರ್ವಜನಿಕರ ಓಡಾಟ ಮತ್ತು ಟ್ರಾಫಿಕ್​ ಇಲ್ಲದ ಕಾರಣ ಭಾನುವಾರ ಅನುಮತಿ ಕೋರಲಾಯಿತು. ಚಿತ್ರೀಕರಣಕ್ಕಾಗಿ ರಸ್ತೆಯ ಒಂದು ಭಾಗವನ್ನು ಪೊಲೀಸರು ನಿರ್ಬಂಧಿಸಿದ್ದರು. ಆ ದಾರಿ ಇರುವುದು 30ರಿಂದ 40 ಮೀಟರ್​ ಮಾತ್ರ. ನಾನು ಧರಿಸಿದ್ದ ಆ ಡ್ರೆಸ್​ ಸಿನಿಮಾದ ಕಾಸ್ಟ್ಯೂಮ್​. ಬೈಕ್​ ಹತ್ತಿ ಹಿಂಬದಿಯಲ್ಲಿ ಕುಳಿತ ರೀತಿಯಲ್ಲಿ ನಾನು ನಟಿಸಿದೆ. ಸವಾರಿ ಮಾಡಲಿಲ್ಲ. ನನ್ನ ಬಗ್ಗೆ ಕಾಳಜಿ ತೋರಿಸಿದ್ದಕ್ಕಾಗಿ ಧನ್ಯವಾದಗಳು’ ಎಂದು ಅಮಿತಾಭ್​ ಬಚ್ಚನ್​ ಬರೆದುಕೊಂಡಿದ್ದಾರೆ.

ಇದನ್ನೂ ಓದಿ
Image
ಸಿದ್ದಗಂಗಾ ಶ್ರೀಗಳ ಪಾತ್ರದಲ್ಲಿ ಅಮಿತಾಭ್ ಬಚ್ಚನ್​?; ಸಿದ್ಧವಾಗುತ್ತಿದೆ ಮಿನಿ ಸಿನಿ ಸೀರಿಸ್​
Image
ಅಮಿತಾಭ್​ ಬಚ್ಚನ್​ ಸಿನಿಮಾಗೆ ತಡೆಕೋರಿ ಅರ್ಜಿ ಸಲ್ಲಿಸಿದ ವ್ಯಕ್ತಿಗೆ 10 ಲಕ್ಷ ರೂಪಾಯಿ ದಂಡ ವಿಧಿಸಿದ ಕೋರ್ಟ್​
Image
79ರ ಪ್ರಾಯದ ಅಮಿತಾಭ್​ ಆರೋಗ್ಯದ ಬಗ್ಗೆ ಮೂಡಿದೆ ಆತಂಕ; ಒಂದೇ ಟ್ವೀಟ್​ನಿಂದ ಗಾಬರಿಗೊಳಿಸಿದ ಬಿಗ್​ ಬಿ
Image
ಅಮಿತಾಭ್​ ಬಚ್ಚನ್​ ವ್ಯಕ್ತಿತ್ವ ಎಂಥದ್ದು? ಇಂಚಿಂಚು ವಿವರಿಸಿದ ರಶ್ಮಿಕಾ ಮಂದಣ್ಣ

ಇದನ್ನೂ ಓದಿ: ಮಾವನ ಜತೆ ಮುದ್ದು ಸೊಸೆಯ ತರಲೆ-ತಮಾಷೆ; ಐಶ್​-ಅಮಿತಾಭ್​ ಬಚ್ಚನ್​ ಕ್ಯೂಟ್​ ವಿಡಿಯೋ ನೋಡಿ

‘ಸಮಯ ಪಾಲನೆಯ ಮಾಡಬೇಕು ಎಂದಾದರೆ ನಾನು ಹೀಗೆ ಮಾಡುತ್ತೇನೆ ಎಂಬುದು ನಿಜ. ಆದರೆ ಹೆಲ್ಮೆಟ್​ ಧರಿಸಿ ಟ್ರಾಫಿಕ್​ ನಿಯಮಗಳನ್ನು ಪಾಲಿಸುತ್ತೇನೆ. ನಾನೊಬ್ಬನೇ ಈ ರೀತಿ ಮಾಡಿದ್ದಲ್ಲ. ಅಕ್ಷಯ್​ ಕುಮಾರ್​ ಕೂಡ ಶೂಟಿಂ​ಗ್​ ಸೆಟ್​ಗೆ ಸರಿಯಾದ ಸಮಯಕ್ಕೆ ಬರಲು ಹೆಲ್ಮೆಟ್​ ಧರಿಸಿ ತಮ್ಮ ಸೆಕ್ಯೂರಿಟಿ ಸಿಬ್ಬಂದಿಯ ಬೈಕ್​ ಏರಿದ್ದರು’ ಎಂದಿದ್ದಾರೆ ಬಿಗ್​-ಬಿ.

ಹಲವು ಸಿನಿಮಾಗಳಲ್ಲಿ ಅಮಿತಾಭ್ ಬಚ್ಚನ್ ಅವರು ನಟಿಸುತ್ತಿದ್ದಾರೆ. ಪ್ರಭಾಸ್​ ಅಭಿನಯದ ‘ಪ್ರಾಜೆಕ್ಟ್​ ಕೆ’ ಚಿತ್ರದಲ್ಲಿ ಅವರೊಂದು ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ಭಾರತೀಯ ಚಿತ್ರರಂಗದಲ್ಲಿ ಅವರಿಗೆ ಸಖತ್​ ಬೇಡಿಕೆ ಇದೆ. ಇಂದಿಗೂ ಅವರು ಹದಿಹರೆಯದ ಹುಡುಗನಂತೆ ಆ್ಯಕ್ಟೀವ್​ ಆಗಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಚಳಿಯೆಂದು ಹುತಾತ್ಮನಾದ ಸೈನಿಕನ ಪ್ರತಿಮೆಗೆ ಕಂಬಳಿ ಹೊದಿಸಿದ ಅಮ್ಮ
ಚಳಿಯೆಂದು ಹುತಾತ್ಮನಾದ ಸೈನಿಕನ ಪ್ರತಿಮೆಗೆ ಕಂಬಳಿ ಹೊದಿಸಿದ ಅಮ್ಮ
ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ: ಉಪನ್ಯಾಸಕನ ವಿರುದ್ಧ ಭುಗಿಲೆದ್ದ ಆಕ್ರೋಶ
ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ: ಉಪನ್ಯಾಸಕನ ವಿರುದ್ಧ ಭುಗಿಲೆದ್ದ ಆಕ್ರೋಶ
ಆರ್​ಸಿಬಿ ಪರ ಚೊಚ್ಚಲ ವಿಕೆಟ್ ಉರುಳಿಸಿದ ಲಾರೆನ್ ಬೆಲ್
ಆರ್​ಸಿಬಿ ಪರ ಚೊಚ್ಚಲ ವಿಕೆಟ್ ಉರುಳಿಸಿದ ಲಾರೆನ್ ಬೆಲ್
ಹಿಮಾಚಲ ಪ್ರದೇಶದಲ್ಲಿ ಭಾರೀ ಬಸ್ ಅಪಘಾತ; 9 ಜನ ಸಾವು, 40 ಮಂದಿಗೆ ಗಾಯ
ಹಿಮಾಚಲ ಪ್ರದೇಶದಲ್ಲಿ ಭಾರೀ ಬಸ್ ಅಪಘಾತ; 9 ಜನ ಸಾವು, 40 ಮಂದಿಗೆ ಗಾಯ
ಕಾಡು ಹಂದಿಗೆ ಹಾಕಿದ್ದ ಉರುಳಿಗೆ ಚಿರತೆ ಬಲಿ
ಕಾಡು ಹಂದಿಗೆ ಹಾಕಿದ್ದ ಉರುಳಿಗೆ ಚಿರತೆ ಬಲಿ
ಅಶ್ವಿನಿ ಗೌಡ ಎದುರಲ್ಲೇ ಧ್ರುವಂತ್ ಓವರ್ ಆ್ಯಕ್ಟಿಂಗ್; ವಿಡಿಯೋ ನೋಡಿ
ಅಶ್ವಿನಿ ಗೌಡ ಎದುರಲ್ಲೇ ಧ್ರುವಂತ್ ಓವರ್ ಆ್ಯಕ್ಟಿಂಗ್; ವಿಡಿಯೋ ನೋಡಿ
ಮಹಿಳೆಯರಿಗೆ ಬೆಂಗಳೂರು ಫುಲ್ ಸೇಫ್: ಸಿಲಿಕಾನ್ ಸಿಟಿಯನ್ನ ಕೊಂಡಾಡಿದ ಯುವತಿ
ಮಹಿಳೆಯರಿಗೆ ಬೆಂಗಳೂರು ಫುಲ್ ಸೇಫ್: ಸಿಲಿಕಾನ್ ಸಿಟಿಯನ್ನ ಕೊಂಡಾಡಿದ ಯುವತಿ
ಕೆಎಸ್‌ ಈಶ್ವರಪ್ಪಗೆ ವಿದೇಶದಿಂದ ಜೀವ ಬೆದರಿಕೆ , ದೂರು ದಾಖಲು!
ಕೆಎಸ್‌ ಈಶ್ವರಪ್ಪಗೆ ವಿದೇಶದಿಂದ ಜೀವ ಬೆದರಿಕೆ , ದೂರು ದಾಖಲು!
ಬಾವಿಗೆ ಬಿದ್ದು ಒದ್ದಾಡುತ್ತಿದ್ದ ಚಿರತೆ ರಕ್ಷಣೆ, ವಿಡಿಯೋ ನೋಡಿ
ಬಾವಿಗೆ ಬಿದ್ದು ಒದ್ದಾಡುತ್ತಿದ್ದ ಚಿರತೆ ರಕ್ಷಣೆ, ವಿಡಿಯೋ ನೋಡಿ
‘ಜನ ನಾಯಗನ್’ಗೆ ಹೈಕೋರ್ಟ್ ಶಾಕ್: ಬೆಳಿಗ್ಗೆ ನೀಡಿದ ಆದೇಶಕ್ಕೆ ಮಧ್ಯಾಹ್ನ ತಡೆ
‘ಜನ ನಾಯಗನ್’ಗೆ ಹೈಕೋರ್ಟ್ ಶಾಕ್: ಬೆಳಿಗ್ಗೆ ನೀಡಿದ ಆದೇಶಕ್ಕೆ ಮಧ್ಯಾಹ್ನ ತಡೆ