ಮಾವನ ಜತೆ ಮುದ್ದು ಸೊಸೆಯ ತರಲೆ-ತಮಾಷೆ; ಐಶ್​-ಅಮಿತಾಭ್​ ಬಚ್ಚನ್​ ಕ್ಯೂಟ್​ ವಿಡಿಯೋ ನೋಡಿ

ಈ ವಿಡಿಯೋ ಕುರಿತಂತೆ ನೆಟ್ಟಿಗರು ಅನಿಸಿಕೆ ತಿಳಿಸಿದ್ದಾರೆ. ಇದು ತುಂಬ ಕ್ಯೂಟ್​ ಆಗಿದೆ ಎಂದು ಐಶ್ವರ್ಯಾ ರೈ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ. ಆದರೆ ಕೆಲವರು ಟ್ರೋಲ್​ ಮಾಡಿದ್ದಾರೆ.

ಮಾವನ ಜತೆ ಮುದ್ದು ಸೊಸೆಯ ತರಲೆ-ತಮಾಷೆ; ಐಶ್​-ಅಮಿತಾಭ್​ ಬಚ್ಚನ್​ ಕ್ಯೂಟ್​ ವಿಡಿಯೋ ನೋಡಿ
ಅಮಿತಾಭ್ ಬಚ್ಚನ್, ಐಶ್ವರ್ಯಾ ರೈ
Follow us
ಮದನ್​ ಕುಮಾರ್​
|

Updated on:Apr 12, 2023 | 6:17 PM

ಐಶ್ವರ್ಯಾ ರೈ ಮತ್ತು ಅಮಿತಾಭ್ ಬಚ್ಚನ್​ (Amitabh Bachchan) ಅವರು ‘ಮೊಹಬ್ಬತೇ’, ‘ಖಾಕಿ’ ಮುಂತಾದ ಸಿನಿಮಾಗಳಲ್ಲಿ ತೆರೆ ಹಂಚಿಕೊಂಡಿದ್ದಾರೆ. ಆ ಮೂಲಕ ಇಬ್ಬರ ನಡುವೆ ಉತ್ತಮ ಬಾಂಧವ್ಯ ಬೆಳೆಯಿತು. 2007ರಲ್ಲಿ ಅಮಿತಾಭ್​ ಪುತ್ರ ಅಭಿಷೇಕ್​ ಬಚ್ಚನ್​ ಜೊತೆ ಐಶ್ವರ್ಯಾ ರೈ (Aishwarya Rai) ವಿವಾಹ ನೆರವೇರಿತು. ಬಚ್ಚನ್​ ಕುಟುಂಬಕ್ಕೆ ಐಶ್​ ಸೊಸೆಯಾದ ಬಳಿಕ ಬಿಗ್​-ಬಿ ಜೊತೆಗಿನ ಬಾಂಧವ್ಯ ಇನ್ನಷ್ಟು ಹೆಚ್ಚಾಯಿತು. ಇಬ್ಬರ ನಡುವೆ ತುಂಬ ಆಪ್ತತೆ ಇದೆ. ಅದಕ್ಕೆ ಸಾಕ್ಷಿ ಎಂಬಂತೆ ಒಂದು ವಿಡಿಯೋ ವೈರಲ್​ ಆಗಿದೆ. ಈ ವಿಡಿಯೋದಲ್ಲಿ ಐಶ್ವರ್ಯಾ ರೈ ಅವರು ಚಿಕ್ಕ ಹುಡುಗಿಯಂತೆ ಮಾವನನ್ನು ಗೋಳು ಹೊಯ್ದುಕೊಂಡಿದ್ದಾರೆ. ಎಲ್ಲರ ಎದುರು ತರಲೆ ಮಾಡಿದ ಸೊಸೆಗೆ ಅಮಿತಾಭ್​ ಬಚ್ಚನ್​ ಅವರು ಪ್ರೀತಿಯಿಂದ ಗದರಿದ್ದಾರೆ. ಈ ವಿಡಿಯೋ (Viral Video) ನೋಡಿ ನೆಟ್ಟಿಗರು ಬಗೆಬಗೆಯಲ್ಲಿ ಕಮೆಂಟ್​ ಮಾಡುತ್ತಿದ್ದಾರೆ.

ವೈರಲ್​ ವಿಡಿಯೋದಲ್ಲಿ ಏನಿದೆ?

ಮಾಧ್ಯಮಗಳ ಕ್ಯಾಮೆರಾ ಎದುರಿನಲ್ಲಿ ಐಶ್ವರ್ಯಾ ರೈ ಅವರು ಮಾವನನ್ನು ತಬ್ಬಿಕೊಂಡು ‘ಇವರೇ ದಿ ಬೆಸ್ಟ್’ ಎಂದು ನಗುತ್ತಾರೆ. ‘ಆರಾಧ್ಯ ರೀತಿ ಆಡುವುದನ್ನು ನಿಲ್ಲಿಸು’ ಅಂತ ಅಮಿತಾಭ್​ ಬಚ್ಚನ್​ ಗದರುತ್ತಾರೆ. ‘ಅದು ಎಲ್ಲರಿಗೂ ಗೊತ್ತು’ ಎಂದು ಐಶ್ ಕೂಗುತ್ತಾರೆ. ಅಷ್ಟಕ್ಕೇ ಸುಮ್ಮನಾಗದೇ ಮಾವನ ಗಲ್ಲವನ್ನು ಮುಟ್ಟಿ ಮುದ್ದು ಮಾಡುತ್ತಾರೆ. ಅಂದಹಾಗೆ ಇದು ಹೊಸ ವಿಡಿಯೋ ಅಲ್ಲ. ಹಳೇ ವಿಡಿಯೋ ವೈರಲ್​ ಆಗಿದೆ.

ಇದನ್ನೂ ಓದಿ
Image
ಸಿದ್ದಗಂಗಾ ಶ್ರೀಗಳ ಪಾತ್ರದಲ್ಲಿ ಅಮಿತಾಭ್ ಬಚ್ಚನ್​?; ಸಿದ್ಧವಾಗುತ್ತಿದೆ ಮಿನಿ ಸಿನಿ ಸೀರಿಸ್​
Image
ಅಮಿತಾಭ್​ ಬಚ್ಚನ್​ ಸಿನಿಮಾಗೆ ತಡೆಕೋರಿ ಅರ್ಜಿ ಸಲ್ಲಿಸಿದ ವ್ಯಕ್ತಿಗೆ 10 ಲಕ್ಷ ರೂಪಾಯಿ ದಂಡ ವಿಧಿಸಿದ ಕೋರ್ಟ್​
Image
79ರ ಪ್ರಾಯದ ಅಮಿತಾಭ್​ ಆರೋಗ್ಯದ ಬಗ್ಗೆ ಮೂಡಿದೆ ಆತಂಕ; ಒಂದೇ ಟ್ವೀಟ್​ನಿಂದ ಗಾಬರಿಗೊಳಿಸಿದ ಬಿಗ್​ ಬಿ
Image
ಅಮಿತಾಭ್​ ಬಚ್ಚನ್​ ವ್ಯಕ್ತಿತ್ವ ಎಂಥದ್ದು? ಇಂಚಿಂಚು ವಿವರಿಸಿದ ರಶ್ಮಿಕಾ ಮಂದಣ್ಣ

ಟ್ರೋಲ್​ ಆದ ಐಶ್ವರ್ಯಾ ರೈ ಬಚ್ಚನ್​:

ಈ ವಿಡಿಯೋ ಕುರಿತಂತೆ ನೆಟ್ಟಿಗರು ತಮ್ಮ ಅನಿಸಿಕೆ ತಿಳಿಸಿದ್ದಾರೆ. ಇದು ತುಂಬ ಕ್ಯೂಟ್​ ಆಗಿದೆ ಎಂದು ಐಶ್ವರ್ಯಾ ರೈ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ. ಆದರೆ ಅನೇಕರು ಇದನ್ನು ಓವರ್​ ಆ್ಯಕ್ಟಿಂಗ್​ ಮತ್ತು ಫೇಕ್​ ನಗು ಎಂದು ಟೀಕಿಸಿದ್ದಾರೆ. ‘ಐಶ್ವರ್ಯಾ ರೈ ಅವರ ವರ್ತನೆಯಿಂದ ಅಮಿತಾಭ್​ ಬಚ್ಚನ್​ಗೆ ಕಿರಿಕಿರಿ ಮತ್ತು ಮುಜುಗರ ಆಗಿದೆ. ಆದರೆ ಮಾಧ್ಯಮಗಳ ಮುಂದೆ ಏನನ್ನೂ ಹೇಳಲು ಅವರಿಗೆ ಸಾಧ್ಯವಾಗಿಲ್ಲ’ ಎಂದು ಕೆಲವರು ಕಮೆಂಟ್​ ಮಾಡಿದ್ದಾರೆ.

ಅಮಿತಾಭ್​ ಅವರ ಇಡೀ ಕುಟುಂಬ ಚಿತ್ರರಂಗದಲ್ಲಿ ಸಕ್ರಿಯವಾಗಿದೆ. ಐಶ್ವರ್ಯಾ ರೈ ಅವರು ‘ಪೊನ್ನಿಯಿನ್​ ಸೆಲ್ವನ್​ 2’ ಸಿನಿಮಾದ ಬಿಡುಗಡೆಗಾಗಿ ಕಾದಿದ್ದಾರೆ. ಇತ್ತೀಚೆಗೆ ಅವರು ಸಿನಿಮಾಗಳ ಆಯ್ಕೆಯಲ್ಲಿ ಹೆಚ್ಚು ಚ್ಯೂಸಿ ಆಗಿದ್ದಾರೆ. ಅಮಿತಾಭ್​ ಅವರಿಗೆ ಈಗ 80 ವರ್ಷ ವಯಸ್ಸು. ಈ ಪ್ರಾಯದಲ್ಲೂ ಕೂಡ ಅವರು ಆ್ಯಕ್ಟೀವ್​ ಆಗಿದ್ದಾರೆ. ‘ಪ್ರಾಜೆಕ್ಟ್​ ಕೆ’, ‘ಸೆಕ್ಷನ್​ 84’ ಮುಂತಾದ ಸಿನಿಮಾಗಳು ಅವರ ಕೈಯಲ್ಲಿವೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 4:52 pm, Wed, 12 April 23

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ