AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Kubbra Sait: ‘ಗಮನ ಸೆಳೆಯಲು ಹಿಂಭಾಗಕ್ಕೆ ಮದ್ಯ ಚೆಲ್ಲಿದ್ದ’; ಕರಾಳ ಘಟನೆ ಬಗ್ಗೆ ಹೇಳಿದ ನಟಿ ಕುಬ್ರಾ ಸೇಠ್

ವಿಲಕ್ಷಣ ಸ್ಥಳದಲ್ಲಿ ಮದುವೆ ಆಯೋಜನೆ ಮಾಡಲಾಗಿತ್ತು. ಅದನ್ನು ಹೋಸ್ಟ್ ಮಾಡಲು ಕುಬ್ರಾ ಅವರನ್ನು ಸಂಪರ್ಕಿಸಲಾಯಿತು.

Kubbra Sait: ‘ಗಮನ ಸೆಳೆಯಲು ಹಿಂಭಾಗಕ್ಕೆ ಮದ್ಯ ಚೆಲ್ಲಿದ್ದ’; ಕರಾಳ ಘಟನೆ ಬಗ್ಗೆ ಹೇಳಿದ ನಟಿ ಕುಬ್ರಾ ಸೇಠ್
ಕುಬ್ರಾ ಸೇಠ್
ರಾಜೇಶ್ ದುಗ್ಗುಮನೆ
|

Updated on:Apr 12, 2023 | 2:29 PM

Share

ಮುಖ್ಯಾಂಶಗಳು

  • ವೆಬ್ ಸೀರಿಸ್​ನಲ್ಲಿ ನಟಿಸಿ ಹೆಚ್ಚು ಫೇಮಸ್ ಆದ ನಟಿ ಕುಬ್ರಾ ಸೇಠ್
  • ಚಿಕ್ಕವಯಸ್ಸಿನಲ್ಲೇ ನಟಿಗೆ ಆಗಿದೆ ಹಲವು ಕಹಿ ಅನುಭವ
  • ಎಲ್ಲವನ್ನೂ ಓಪನ್ ಆಗಿ ಹೇಳಿಕೊಂಡ ನಟಿ

ನಟಿ ಕುಬ್ರಾ ಸೇಠ್ (Kubbra Sait) ಅವರು ವೆಬ್ ಸೀರಿಸ್​ನಲ್ಲಿ ನಟಿಸಿ ಹೆಚ್ಚು ಫೇಮಸ್ ಆಗಿದ್ದಾರೆ. 2018ರ ‘ಸೆಕ್ರೇಡ್ ಗೇಮ್ಸ್​’ ಸೀರಿಸ್​ನಲ್ಲಿ ಅವರು ಮಾಡಿದ ಪಾತ್ರ ಎಲ್ಲರ ಗಮನ ಸೆಳೆದಿತ್ತು. ಅವರ ಬಾಳಲ್ಲಿ ಹಲವು ಅಹಿತಕರ ಘಟನೆಗಳು ನಡೆದಿವೆ. ಆದರೆ, ಅವೆಲ್ಲವನ್ನು ಎದುರಿಸಿ ಅವರು ಜೀವನ ಕಟ್ಟಿಕೊಂಡಿದ್ದಾರೆ. ಆಗಾಗ ಸಂದರ್ಶನಗಳಲ್ಲಿ ಅವರು ತಮ್ಮ ಜೀವನದ ಬಗ್ಗೆ ಹೇಳಿಕೊಳ್ಳುತ್ತಾರೆ. ಈಗ ಅವರು ಮಾಲ್ಡೀವ್ಸ್​ನಲ್ಲಿ (Maldives) ನಡೆದ ಘಟನೆ ಬಗ್ಗೆ ಹೇಳಿಕೊಂಡಿದ್ದಾರೆ. ಆ ಘಟನೆ ಅದೆಷ್ಟು ಹಾರಿಬಲ್ ಆಗಿತ್ತು ಎಂಬುದನ್ನು ಕುಬ್ರಾ ಸೇಠ್​ ವಿವರಿಸಿದ್ದಾರೆ.

ವಿಲಕ್ಷಣ ಸ್ಥಳದಲ್ಲಿ ಮದುವೆ ಆಯೋಜನೆ ಮಾಡಲಾಗಿತ್ತು. ಅದನ್ನು ಹೋಸ್ಟ್ ಮಾಡಲು ಕುಬ್ರಾ ಅವರನ್ನು ಸಂಪರ್ಕಿಸಲಾಯಿತು. ಉಳಿದುಕೊಳ್ಳಲು ಖಾಸಗಿ ಕೋಣೆ ನೀಡುತ್ತಾರೆ ಎಂದು ಭಾವಿಸಿ ವಾಸ್ತವ್ಯದ ಬಗ್ಗೆ ಅವರು ಚರ್ಚಿಸಲಿಲ್ಲ. ವಿಮಾನ ಇಳಿದ ಬಳಿಕ ಅವರು ಮದುವೆ ನಡೆಯುವ ಸ್ಥಳಕ್ಕೆ ಹೋದರು. ಬೋಟ್​ನಲ್ಲಿ ಅವರಿಗೆ ಉಳಿದುಕೊಳ್ಳಲು ಹೇಳಲಾಯಿತು. ಇನ್ನೂ ಕೆಲವರ ಜೊತೆ ಅವರು ಹೊಂದಿಕೊಳ್ಳಬೇಕಿತ್ತು. ನಟಿ ಅದನ್ನು ನಿರಾಕರಿಸಿದರು. ಅವರು ಹಿಂದಿರುಗಿ ಹೋಗೋದಾಗಿ ಎಚ್ಚರಿಕೆ ನೀಡಿದರು. ಆ ಬಳಿಕವೇ ಅವರಿಗೆ ಪ್ರತ್ಯೇಕ ರೂಂ ನೀಡಲಾಯಿತು.

‘ಸಂಗೀತ ಸಮಾರಂಭದಲ್ಲಿ ಸಾಕಷ್ಟು ಅತಿಥಿಗಳಿದ್ದರು. ಅದು ವಯಸ್ಕರ ಸ್ಟ್ರಿಪ್ಟೀಸ್ ಶೋ ರೀತಿ ಇತ್ತು. ನನ್ನ ಹಿಂಭಾಗಕ್ಕೆ ಒಬ್ಬ ವಯಸ್ಸಾದ ವ್ಯಕ್ತಿ ಪಾನೀಯ ಎರಚಿದ. ಶಾಂಪೇನ್ ಚೆಲ್ಲಿ ಗಮನ ಸೆಳೆಯೋದು ಅವನ ಉದ್ದೇಶ ಆಗಿತ್ತು. ನನಗೆ ಸಿಟ್ಟು ಬಂತು. ಗ್ಲಾಸ್ ಅನ್ನು ನೆಲದ ಮೇಲೆ ಎಸೆದು ಅವನಿಗೆ ಎಚ್ಚರಿಕೆ ನೀಡಿದೆ’ ಎಂದಿದ್ದಾರೆ ಕುಬ್ರಾ.

ಬೆತ್ತಲೆ ದೃಶ್ಯವನ್ನು ಏಳು ಬಾರಿ ಶೂಟ್​ ಮಾಡಿಸಿದ್ದರು ಎಂದಿದ್ದ ಕುಬ್ರಾ

‘ಸೇಕ್ರೆಡ್​ ಗೇಮ್ಸ್​’ ವೆಬ್​ ಸರಣಿಯಲ್ಲಿ ಕುಬ್ರಾ ಸೇಠ್​ ಮಾಡಿದ್ದ ಕುಕೂ ಎಂಬ ಪಾತ್ರ ಗಮನ ಸೆಳೆದಿತ್ತು. ಅವರು ಆ ವೆಬ್​ ಸೀರಿಸ್​ನಲ್ಲಿ ಇಂಟಿಮೇಟ್​ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದರು. ಅವರ ಪಾತ್ರ ಕೂಡ ಎಲ್ಲರ ಗಮನ ಸೆಳೆದಿತ್ತು. ಆದರೆ, ಈ ದೃಶ್ಯ ಶೂಟ್​ ಮಾಡುವಾಗ ಅವರು ಪಟ್ಟ ಕಷ್ಟ ಅಷ್ಟಿಷ್ಟಲ್ಲ . ಈ ಬಗ್ಗೆ ಅವರು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.

ಇದನ್ನೂ ಓದಿ: ದಾನಿಶ್​ ಸೇಠ್​ ಸಹೋದರಿ ಕುಬ್ರಾ ಸೇಠ್​ಗೆ ‘ಫೌಂಡೇಶನ್​’ ಅವಕಾಶ; ಹಾಲಿವುಡ್​ ಕಲಾವಿದರ ಜತೆ ನಟನೆ

ಗಣೇಶ್​ ಕಾಯ್ತೊಂಡೆಗೆ (ನವಾಜುದ್ದೀನ್​ ಸಿದ್ಧಕಿ) ಕೂಕು (ಕುಬ್ರಾ ಸೇಟ್​​) ಮೇಲೆ ಪ್ರೀತಿ ಮೂಡುತ್ತದೆ. ಇಬ್ಬರೂ ಒಂದೆಡೆ ಸೇರುತ್ತಾರೆ. ಈ ವೇಳೆ ಇಬ್ಬರ ನಡುವೆ ಇಂಟಿಮೇಟ್​ ದೃಶ್ಯಗಳಿವೆ. ಇಬ್ಬರ ನಡುವೆ ಮೊಳೆತ ಪ್ರೀತಿಯನ್ನು ವ್ಯಕ್ತಪಡಿಸಲು ಈ ದೃಶ್ಯದ ಅವಶ್ಯಕತೆ ಇತ್ತು. ಆದರೆ, ಇದನ್ನು ಶೂಟ್​ ಮಾಡುವುದು ಅಷ್ಟು ಸುಲಭವಾಗಿರಲಿಲ್ಲ. ಈ ದೃಶ್ಯದ ಶೂಟ್​ ಮಾಡುವಾಗ ಬರೋಬ್ಬರಿ ಏಳು ಟೇಕ್​ ತೆಗೆದುಕೊಳ್ಳಲಾಗಿತ್ತು. ಇದರಿಂದ ಕುಬ್ರಾ ಆಘಾತಕ್ಕೆ ಒಳಗಾಗಿದ್ದರು. ಅಲ್ಲದೆ, ನೆಲದ ಮೇಲೆ ಬಿಕ್ಕಿಬಿಕ್ಕಿ ಅತ್ತಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 1:29 pm, Wed, 12 April 23

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
ಮೈಸೂರಿನಂತೆ ಹೇಮಗುಡ್ಡದಲ್ಲಿ ಅದ್ಧೂರಿಯಾಗಿ ಜರುಗಿದ ಜಂಬೂಸವಾರಿ
ಮೈಸೂರಿನಂತೆ ಹೇಮಗುಡ್ಡದಲ್ಲಿ ಅದ್ಧೂರಿಯಾಗಿ ಜರುಗಿದ ಜಂಬೂಸವಾರಿ
ಮತ್ತೋರ್ವ ರಾಜಕೀಯ ವೈರಿಯ ಭೇಟಿ:ಕುತೂಹಲ ಮೂಡಿಸಿದ ಯತ್ನಾಳ್ ನಡೆ
ಮತ್ತೋರ್ವ ರಾಜಕೀಯ ವೈರಿಯ ಭೇಟಿ:ಕುತೂಹಲ ಮೂಡಿಸಿದ ಯತ್ನಾಳ್ ನಡೆ
ಹಜರತ್ ಇಮಾಮ್ ಶಾ ವಲಿ ದರ್ಗಾದಲ್ಲಿ ಮೈಸೂರು ದಸರಾ ಆನೆಗಳಿಗೆ ವಿಶೇಷ ಪೂಜೆ
ಹಜರತ್ ಇಮಾಮ್ ಶಾ ವಲಿ ದರ್ಗಾದಲ್ಲಿ ಮೈಸೂರು ದಸರಾ ಆನೆಗಳಿಗೆ ವಿಶೇಷ ಪೂಜೆ
ರಾಮ್‌ಲೀಲಾ ಮೈದಾನದಲ್ಲಿ ಪ್ರಧಾನಿ ಮೋದಿಯಿಂದ ರಾವಣನ ಪ್ರತಿಕೃತಿ ದಹನ
ರಾಮ್‌ಲೀಲಾ ಮೈದಾನದಲ್ಲಿ ಪ್ರಧಾನಿ ಮೋದಿಯಿಂದ ರಾವಣನ ಪ್ರತಿಕೃತಿ ದಹನ
ಮದ್ವೆಯಾದ ಹತ್ತೇ ದಿನಕ್ಕೆ ಮನೆಬಿಟ್ಟು ಓಡಿ ಹೋದ ಗಂಡ: ಟವರ್ ಏರಿ ಪತ್ನಿ!
ಮದ್ವೆಯಾದ ಹತ್ತೇ ದಿನಕ್ಕೆ ಮನೆಬಿಟ್ಟು ಓಡಿ ಹೋದ ಗಂಡ: ಟವರ್ ಏರಿ ಪತ್ನಿ!
ದ್ವಾರಕಾದಲ್ಲಿ ಬಾಣ ಬಿಟ್ಟು ರಾವಣ ದಹನ ಮಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು
ದ್ವಾರಕಾದಲ್ಲಿ ಬಾಣ ಬಿಟ್ಟು ರಾವಣ ದಹನ ಮಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು
ಕುಂಭಕರ್ಣನ ಜೊತೆ 30 ಅಡಿ ಎತ್ತರದ ಬೃಹತ್ 'ಕಾಕ್ರೋಚ್' ದಹನ
ಕುಂಭಕರ್ಣನ ಜೊತೆ 30 ಅಡಿ ಎತ್ತರದ ಬೃಹತ್ 'ಕಾಕ್ರೋಚ್' ದಹನ
ವಿಡಿಯೋ ಮಾಡಿ, 1,700 ಅಡಿ ಆಳದ ಕಣಿವೆಗೆ ಹಾರಿದ ವ್ಯಕ್ತಿ!
ವಿಡಿಯೋ ಮಾಡಿ, 1,700 ಅಡಿ ಆಳದ ಕಣಿವೆಗೆ ಹಾರಿದ ವ್ಯಕ್ತಿ!
ಶೋ ರೂಮ್‌ನಿಂದ ಏಕಾಏಕಿ ರಸ್ತೆಗೆ ನುಗ್ಗಿದ ಹೊಸ ಕಾರು!
ಶೋ ರೂಮ್‌ನಿಂದ ಏಕಾಏಕಿ ರಸ್ತೆಗೆ ನುಗ್ಗಿದ ಹೊಸ ಕಾರು!
ಅಪ್ಪನ ಅಂಬಾಸಿಡರ್ ಕಾರಿನಲ್ಲಿ ಹೆಂಡ್ತಿ ಜೊತೆ ಡಿಸಿಎಂ ಜಾಲಿರೈಡು: ವಿಡಿಯೋ
ಅಪ್ಪನ ಅಂಬಾಸಿಡರ್ ಕಾರಿನಲ್ಲಿ ಹೆಂಡ್ತಿ ಜೊತೆ ಡಿಸಿಎಂ ಜಾಲಿರೈಡು: ವಿಡಿಯೋ