ಸಿದ್ದಗಂಗಾ ಶ್ರೀಗಳ ಪಾತ್ರದಲ್ಲಿ ಅಮಿತಾಭ್ ಬಚ್ಚನ್​?; ಸಿದ್ಧವಾಗುತ್ತಿದೆ ಮಿನಿ ಸಿನಿ ಸೀರಿಸ್​

ಸಿದ್ದಗಂಗಾ ಶ್ರೀಗಳ 115 ಜಯಂತೋತ್ಸವದ ಪ್ರಯುಕ್ತ ಶ್ರೀಗಳ ಜೀವನ ಚರಿತ್ರೆಯನ್ನು ಸಾರುವ ಸಿನಿ ಸೀರಿಸ್ ಸಿದ್ಧವಾಗುತ್ತಿದೆ. ಡಾ. ಹಂಸಲೇಖ ಅವರುಸಾರಥ್ಯದಲ್ಲಿ ಒಟ್ಟು 52 ಎಪಿಸೋಡ್​​ಗಳನ್ನು ಸಿರೀಸ್​​ಗಳನ್ನಾಗಿ ಮಾಡಲಾಗುತ್ತಿದೆ.

ಸಿದ್ದಗಂಗಾ ಶ್ರೀಗಳ ಪಾತ್ರದಲ್ಲಿ ಅಮಿತಾಭ್ ಬಚ್ಚನ್​?; ಸಿದ್ಧವಾಗುತ್ತಿದೆ ಮಿನಿ ಸಿನಿ ಸೀರಿಸ್​
Follow us
| Updated By: ರಾಜೇಶ್ ದುಗ್ಗುಮನೆ

Updated on:Mar 29, 2022 | 9:33 PM

ಸಿದ್ದಗಂಗಾ ಶ್ರೀಗಳು (siddaganga sri) ಮಾಡಿದ ಸಾಮಾಜಿಕ ಕೆಲಸಗಳು ತುಂಬಾನೇ ದೊಡ್ಡದು. ಈಗ ಅವರ ಕುರಿತು ಮಿನಿ ಸಿನಿ ಸೀರಿಸ್ (Mini Series) ಸಿದ್ಧವಾಗುತ್ತಿದೆ. ಸಿದ್ಧಗಂಗಾ ಶ್ರೀಗಳ ಪಾತ್ರದಲ್ಲಿ ಅಮಿತಾಭ್ ಬಚ್ಚನ್ ಅವರು ನಟಿಸಬೇಕು ಎಂಬುದು ಚಿತ್ರತಂಡದ ಆಶಯ. ಈ ಕಾರಣಕ್ಕೆ ಅವರ ಕಾಲ್​ಶೀಟ್​ಅನ್ನು ಕೇಳಲಾಗಿದೆ. ಅವರು ಒಪ್ಪಿದರೆ ಅವರು ಪೂರ್ಣಪ್ರಮಾಣದಲ್ಲಿ ಕನ್ನಡದಲ್ಲಿ (Kannada) ನಟಿಸಿದಂತೆ ಆಗಲಿದೆ. ಈ ಮೊದಲು ‘ಅಮೃತಧಾರೆ’ ಸಿನಿಮಾದಲ್ಲಿ ಅಮಿತಾಭ್​ ಅತಿಥಿ ಪಾತ್ರ ಮಾಡಿದ್ದರು. ಇದಾದ ಬಳಿಕ ಅವರು ಕನ್ನಡಕ್ಕೆ ಮರಳಿಲ್ಲ.

‘ಅಮಿತಾಭ್ ಬಚ್ಚನ್ ಅವರು ಸಿದ್ದಗಂಗಾ ಶ್ರೀಗಳ ಪಾತ್ರವನ್ನ ಮಾಡಲು ಈಗಾಗಲೇ ಅಪ್ರೋಚ್ ಮಾಡಲಾಗಿದೆ. ಅವರು ಕಥೆಯನ್ನು ಕೇಳಿದ್ದಾರೆ. ಆದರೆ, ಸದ್ಯ ಅಮಿತಾಭ್ ಅವರ ಆರೋಗ್ಯದಲ್ಲಿ ಏರುಪೇರಾಗಿರೋ ಕಾರಣ ಗ್ರೀನ್ ಸಿಗ್ನಲ್​ಗಾಗಿ ಕಾಯುತ್ತಿದ್ದೇವೆ’ ಎಂದು ಹಂಸಲೇಖ ಹೇಳಿದ್ದಾರೆ.

ಸಿದ್ದಗಂಗಾ ಶ್ರೀಗಳ 115 ಜಯಂತೋತ್ಸವದ ಪ್ರಯುಕ್ತ ಶ್ರೀಗಳ ಜೀವನ ಚರಿತ್ರೆಯನ್ನು ಸಾರುವ ಸಿನಿ ಸೀರಿಸ್ ಸಿದ್ಧವಾಗುತ್ತಿದೆ. ಡಾ. ಹಂಸಲೇಖ ಅವರ ಸಾರಥ್ಯದಲ್ಲಿ ಒಟ್ಟು 52 ಎಪಿಸೋಡ್​​ಗಳನ್ನು ಒಳಗೊಂಡ ಮಿನಿ ಸಿರೀಸ್​​ಗಳನ್ನಾಗಿ ಮಾಡಲಾಗುತ್ತಿದೆ. ದೊಡ್ಡ ಮೊತ್ತದಲ್ಲಿ ಕನ್ನಡ, ತಮಿಳು, ತೆಲುಗು, ಮಲಯಾಳಂ, ಹಿಂದಿ, ಇಂಗ್ಲಿಷ್​ ಹಾಗೂ ಸಂಸ್ಕೃತ  ಭಾಷೆಗಳಲ್ಲಿ ಈ ಸೀರಿಸ್ ಸಿದ್ಧವಾಗುತ್ತಿದೆ. ಏಳಕ್ಕೂ ಹೆಚ್ಚು ತಂಡಗಳಲ್ಲಿ, 300 ಅಧಿಕ ತಂತ್ರಜ್ಞರು ಈ ಮಿನಿ ಸೀರಿಸ್​ನಲ್ಲಿ ಕೆಲಸ ಮಾಡುತ್ತಿದ್ದಾರೆ.

ಈ ಸಿನಿ ಸಿರೀಸ್​ಅನ್ನು ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರ ಏಪ್ರಿಲ್ 1ರಂದು ತುಮಕೂರಿನ  ಸಿದ್ದಗಂಗಾ ಮಠದಲ್ಲಿ ಉದ್ಘಾಟನೆ ಮಾಡಲಿದ್ದಾರೆ. ಅಂದಿನ ಕಾರ್ಯಕ್ರಮದಲ್ಲಿ 115 ಜನ ಗಾಯಕರು ಹಂಸಲೇಖ ಅವರ ಸಾರಥ್ಯದಲ್ಲಿ 6 ಹಾಡುಗಳನ್ನ ಹಾಡಲಿದ್ದಾರೆ. ಅಮಿತ್ ಷಾ ಜೊತೆಗೆ ರಾಜ್ಯದ ನಾಯಕರು ಇರಲಿದ್ದಾರೆ. ಮಾಜಿ ಐಎಎಸ್ ಅಧಿಕಾರಿ ಡಾ. ಸೋಮಶೇಖರ್, ಎ.ಪಿ ರೇಣುಕಾಚಾರ್ಯ, ನಿರ್ಮಾಪಕ ಎಮ್.ರುದ್ರೇಶ್, ದೀಪಕ್, ಸದಾ ಶಿವಯ್ಯ ಈ ಸುದ್ದಿಗೋಷ್ಠಿಯಲ್ಲಿದ್ದಾರೆ.

ಇದನ್ನೂ ಓದಿ: ತುಮಕೂರು ಸಿದ್ದಗಂಗಾ ಮಠದ ವಿದ್ಯಾರ್ಥಿ ಮೇಲೆ ಅಪರಿಚಿತರಿಂದ ಹಲ್ಲೆ! ಮೊಬೈಲ್ ಕಸಿದು ಪರಾರಿ

ತುಮಕೂರು ಸಿದ್ದಗಂಗಾ ಮಠದಲ್ಲಿ ಐತಿಹಾಸಿಕ ದನಗಳ ಜಾತ್ರೆ; ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸಿ ರಾಸುಗಳ ಖರೀದಿ

Published On - 9:17 pm, Tue, 29 March 22