ತುಮಕೂರು ಸಿದ್ದಗಂಗಾ ಮಠದಲ್ಲಿ ಐತಿಹಾಸಿಕ ದನಗಳ ಜಾತ್ರೆ; ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸಿ ರಾಸುಗಳ ಖರೀದಿ

ಪ್ರಸಿದ್ಧ ಪುಣ್ಯಕ್ಷೇತ್ರ ತುಮಕೂರಿನ ಸಿದ್ದಗಂಗಾ ಮಠದಲ್ಲಿ ನಡೆಯುವ ದನಗಳ ಜಾತ್ರೆ ಬಹಳ ಫೇಮಸ್. ಹೀಗಾಗಿಯೇ ಶಿವರಾತ್ರಿ ಹಬ್ಬಕ್ಕೂ 10-15 ದಿನಗಳ ಮುಂಚೆ ಆರಂಭವಾಗೋ ಜಾತ್ರೆಗೆ ರಾಜ್ಯದ ಮೂಲೆ ಮೂಲೆಯಿಂದಲೂ ಜನ ಬರ್ತಾರೆ.

ತುಮಕೂರು ಸಿದ್ದಗಂಗಾ ಮಠದಲ್ಲಿ ಐತಿಹಾಸಿಕ ದನಗಳ ಜಾತ್ರೆ; ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸಿ ರಾಸುಗಳ ಖರೀದಿ
ತುಮಕೂರು ಸಿದ್ದಗಂಗಾ ಮಠದಲ್ಲಿ ಐತಿಹಾಸಿಕ ದನಗಳ ಜಾತ್ರೆ
Follow us
TV9 Web
| Updated By: ಆಯೇಷಾ ಬಾನು

Updated on:Feb 22, 2022 | 10:13 AM

ತುಮಕೂರು: ಕಲ್ಪತರು ನಾಡಿನ ಸಿದ್ಧಪುರುಷರ ಪುಣ್ಯಕ್ಷೇತ್ರ ತುಮಕೂರು ಸಿದ್ದಗಂಗಾ ಮಠದಲ್ಲಿ(Siddaganga Mutt) ಐತಿಹಾಸಿಕ ದನಗಳ ಜಾತ್ರೆ ನಡೆದಿದೆ. ಇದು ದೇಶದಲ್ಲಿ ಪ್ರಖ್ಯಾತಿ ಪಡೆದಿರೋ ಸಿದ್ಧಪುರುಷರ ಪುಣ್ಯಕ್ಷೇತ್ರ. ಇಲ್ಲಿ ನಡೆಯೋ ಜಾನುವಾರುಗಳ ಜಾತ್ರೆಯೂ ಬಹಳ ಪ್ರಸಿದ್ಧ. ಜಾತ್ರೆವೇಳೆ ಒಂದೆರಡಲ್ಲ ಲಕ್ಷ ಲಕ್ಷ ರೂಪಾಯಿ ವ್ಯವಹಾರ ಕೂಡ ನಡೆಯುತ್ತೆ. 30 ಸಾವಿರದಿಂದ ಲಕ್ಷ ರೂಪಾಯಿವರೆಗೂ ದನಗಳ ಮಾರಾಟವಾಗುತ್ತೆ.

ತುಮಕೂರು ಸಿದ್ದಗಂಗಾ ಮಠದಲ್ಲಿ ಐತಿಹಾಸಿಕ ದನಗಳ ಜಾತ್ರೆ ಪ್ರಸಿದ್ಧ ಪುಣ್ಯಕ್ಷೇತ್ರ ತುಮಕೂರಿನ ಸಿದ್ದಗಂಗಾ ಮಠದಲ್ಲಿ ನಡೆಯುವ ದನಗಳ ಜಾತ್ರೆ ಬಹಳ ಫೇಮಸ್. ಹೀಗಾಗಿಯೇ ಶಿವರಾತ್ರಿ ಹಬ್ಬಕ್ಕೂ 10-15 ದಿನಗಳ ಮುಂಚೆ ಆರಂಭವಾಗೋ ಜಾತ್ರೆಗೆ ರಾಜ್ಯದ ಮೂಲೆ ಮೂಲೆಯಿಂದಲೂ ಜನ ಬರ್ತಾರೆ. ಸುಮಾರು ಐದಾರು ದಶಕಗಳ ಇತಿಹಾಸವಿರುವ ಈ ಜಾತ್ರೆಯಲ್ಲಿ ಭರ್ಜರಿ ವ್ಯಾಪಾರ-ವಹಿವಾಟು ಕೂಡ ನಡೆಯುತ್ವೆ. ಜಾತ್ರೆಯಲ್ಲಿ 30, 40 ಸಾವಿರದಿಂದ ಪ್ರಾರಂಭವಾಗುವ ದನಗಳ ವ್ಯಾಪಾರ 5ರಿಂದ 10 ಲಕ್ಷ ರೂಪಾಯಿವರೆಗೂ ನಡೆಯುತ್ವೆ. ದನಗಳ ವಯಸ್ಸು, ಹಲ್ಲು, ಆಕಾರ, ಶರೀರ ಎಲ್ಲವನ್ನೂ ನೋಡಿ ಹಣವನ್ನ ನಿಗದಿಮಾಡಲಾಗುತ್ತೆ. ಕೆಲವರು ದನಗಳನ್ನ ಸಿಂಗಾರ ಮಾಡಿ ಜಾತ್ರೆಗೆ ಕರೆತಂದ್ರೆ, ದುಬಾರಿ ದನಗಳನ್ನ ಮೆರವಣಿಗೆ ಮೂಲಕ ಕರೆತರೋರೂ ಇದ್ದಾರೆ. ಹೀಗಾಗಿ ಜಾತ್ರೆ ನೋಡೋಕಂತಲೇ ಹಲವರು ಬರ್ತಾರೆ.

ಇನ್ನು ಪ್ರತಿ ವರ್ಷದಂತೆ ಈ ಬಾರಿಯೂ ದನಗಳ ಜಾತ್ರೆ ಭರ್ಜರಿಯಾಗಿ ನಡೀತಿದೆ. ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ಆಗಮಿಸುವ ರೈತರು ತಾವು ತಂದಿರುವ ದನಗಳನ್ನ ಲಾಭಕ್ಕೆ ಮಾರಿ ಅದೇ ಹಣದಲ್ಲಿ ಮತ್ತೊಂದು ಜೋಡಿ ಕೊಂಡುಹೋಗ್ತಾರೆ. ಅದನ್ನ ಒಂದು ವರ್ಷ ಸಾಕಿ, ವ್ಯವಸಾಯಕ್ಕೆ ಬಳಸಿಕೊಂಡು ಮುಂದಿನ ಜಾತ್ರೆಯಲ್ಲಿ ಮತ್ತೆ ಅದನ್ನ ಮಾರೋದು ವಾಡಿಕೆ.

ಒಟ್ನಲ್ಲಿ ಕೊವಿಡ್ ಮೂರನೇ ಅಲೆ ಬಳಿಕ ನಡೀತಿರೋ ಜಾತ್ರೆ ಈ ಬಾರಿ ತುಸು ರಂಗೇರಿದೆ. ಹೊರ ಜಿಲ್ಲೆಗಳಿಂದ ಬರ್ತಿರೋ ರೈತರು ವ್ಯಾಪಾರ-ವಹಿವಾಟಿನಲ್ಲಿ ತೊಡಗಿಸಿಕೊಂಡು, ತಮಗೆ ಇಷ್ಟವಾದ ದನಗಳನ್ನ ಕೊಂಡೊಯ್ದು ಖುಷಿ ಪಡ್ತಿದ್ದಾರೆ.

ವರದಿ: ಮಹೇಶ್, ಟಿವಿ9 ತುಮಕೂರು

cattle fair

ದನಗಳ ಜಾತ್ರೆ

cattle fair ಇದನ್ನೂ ಓದಿ: ಮಗುವನ್ನು ದತ್ತು ಪಡೆಯಲು ಮದುವೆ ಪ್ರಮಾಣಪತ್ರ ಕಡ್ಡಾಯವಲ್ಲ ಎಂದ ಅಲಹಾಬಾದ್​ ಹೈಕೋರ್ಟ್​

ಶಿವಮೊಗ್ಗದಲ್ಲಿ ಹರ್ಷ ಕೊಲೆ ಪ್ರಕರಣ; ಹತ್ಯೆ ಖಂಡಿಸಿ ಮೈಸೂರಿನಲ್ಲಿ ಬೃಹತ್ ಪ್ರತಿಭಟನೆಗೆ ಸಿದ್ಧತೆ

Published On - 10:13 am, Tue, 22 February 22