ಶಿವಮೊಗ್ಗದಲ್ಲಿ ಹರ್ಷ ಕೊಲೆ ಪ್ರಕರಣ; ಹತ್ಯೆ ಖಂಡಿಸಿ ಮೈಸೂರಿನಲ್ಲಿ ಬೃಹತ್ ಪ್ರತಿಭಟನೆಗೆ ಸಿದ್ಧತೆ
ಕೊಲೆಯಾದ ಹರ್ಷ, ಅವರ ತಾಯಿ ಹಾಗೂ ಸಹೋದರಿ ಭಾವಚಿತ್ರದ ಪೋಸ್ಟರ್ ಸಿದ್ಧಪಡಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ಪೋಸ್ಟರ್ ಹಾಕಿ ಪ್ರತಿಭಟನೆಗೆ ಕರೆ ನೀಡಲಾಗಿದೆ. ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಸೇರುವ ನಿರೀಕ್ಷೆ ಇದೆ.
ಮೈಸೂರು: ಬಜರಂಗದಳದ ಕಾರ್ಯಕರ್ತ ಹರ್ಷನನ್ನು ಶಿವಮೊಗ್ಗದಲ್ಲಿ ಕೊಲೆ(Murder) ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹತ್ಯೆ ಖಂಡಿಸಿ ಮೈಸೂರಿನಲ್ಲಿ ಬೃಹತ್ ಪ್ರತಿಭಟನೆಗೆ(Protest) ಸಿದ್ಧತೆ ಮಾಡಿಕೊಳ್ಳಲಾಗಿದೆ. ಫೆಬ್ರವರಿ 23 ರಂದು ಪ್ರತಿಭಟನೆಗೆ ಹಿಂದೂಪರ ಸಂಘಟನೆಗಳು(Hindu Sanghatane) ಕರೆ ನೀಡಿವೆ. ಮೈಸೂರಿನ ಚಿಕ್ಕಗಡಿಯಾರದ ಬಳಿ ಜಮಾವಣೆಯಾಗಲು ಸಂದೇಶ ರವಾನಿಸಲಾಗಿದೆ. ಫೆಬ್ರವರಿ 23 ರಂದು ಬೆಳಗ್ಗೆ 11 ಗಂಟೆಗೆ ಪ್ರತಿಭಟನೆಗೆ ಭಾಗಿಯಾಗಲು ಹಿಂದೂಪರ ಸಂಘಟನೆಗಳು ಕರೆ ನೀಡಿವೆ.
ಕೊಲೆಯಾದ ಹರ್ಷ, ಅವರ ತಾಯಿ ಹಾಗೂ ಸಹೋದರಿ ಭಾವಚಿತ್ರದ ಪೋಸ್ಟರ್ ಸಿದ್ಧಪಡಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ಪೋಸ್ಟರ್ ಹಾಕಿ ಪ್ರತಿಭಟನೆಗೆ ಕರೆ ನೀಡಲಾಗಿದೆ. ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಸೇರುವ ನಿರೀಕ್ಷೆ ಇದೆ.
ಪ್ರತಿ ಮನೆಯಲ್ಲಿಯೂ ಹರ್ಷನಂತಹ ಮಕ್ಕಳು ಹುಟ್ಟಬೇಕು; ಅಬ್ಬರಿಸಿದ ಹರ್ಷನ ತಾಯಿ ಪದ್ಮ
ಈ ಮಧ್ಯೆ, ಹತ್ಯೆಗೀಡಾದ ಹರ್ಷನ ತಾಯಿ ಪದ್ಮ ಅವರು ಶಿವಮೊಗ್ಗದಲ್ಲಿ ಟಿವಿ9 ಜೊತೆ ಮಾತನಾಡುತ್ತಾ, ನನ್ನ ಮಗನ ಕೊಲೆ ಮಾಡಿದವರನ್ನು ತುಂಡುತುಂಡು ಮಾಡಬೇಕು. ಎನ್‌ಕೌಂಟರ್ ಮಾಡಿದ್ರೆ ಸಾಲಲ್ಲ, ತುಂಡುತುಂಡು ಮಾಡಬೇಕು. ಪ್ರತಿ ಮನೆಯಲ್ಲಿಯೂ ಹರ್ಷನಂತಹ ಮಕ್ಕಳು ಹುಟ್ಟಬೇಕು ಎಂದು ಅಬ್ಬರಿಸಿದ್ದಾರೆ. ನಮ್ಮ ಸಮಾಜ ಉಳಿಯಲಿ ಎಂದ ಹರ್ಷ ತಾಯಿ. ನನ್ನ ಮಗನಿಗೆ ಯೋಗಿ ಆಥಿತ್ಯಾನಾಥ್ ಅಂದ್ರೆ ತುಂಬಾ ಇಷ್ಟ. ಬೈಕ್ನಲ್ಲಿ ಅವರ ಪೋಟೋ ಹಾಕಿಕೊಂಡು ಓಡಾಡುತ್ತಿದ್ದ ಎಂದು ಅವರು ತಿಳಿಸಿದ್ದಾರೆ.
ನಾಳೆ ಬೆಳಗ್ಗೆ 6 ಗಂಟೆವರೆಗೆ ಶಿವಮೊಗ್ಗದಲ್ಲಿ ನಿಷೇಧಾಜ್ಞೆ
ಹತ್ಯೆಯಾದ ಯುವಕ ಹರ್ಷನ ಮನೆ ಇರುವ ಸಿಗಿಹಟ್ಟಿ ಪ್ರದೇಶದಲ್ಲಿ ಈಗಾಗಲೇ ಹೈ ಅಲರ್ಟ್ ಮಾಡಲಾಗಿದೆ. ಇದಕ್ಕೆ ಪೂರಕವಾಗಿ ಆರ್ಎಎಫ್ ತಂಡ ನಿಯೋಜನೆ ಮಾಡಲಾಗಿದೆ. ಇದರ ಜತೆಗೆ ನಾಳೆ (ಫೆಬ್ರವರಿ 23) ಬೆಳಿಗ್ಗೆ ಆರು ಗಂಟೆಯ ವರೆಗೆ ಕಲಂ 144 ಅನ್ವಯ ಶಿವಮೊಗ್ಗ ನಗರ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ ಎಂದು ಪೂರ್ವ ವಲಯದ ಐಜಿಪಿ ತ್ಯಾಗರಾಜನ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:
ಬಜರಂಗದಳ ಕಾರ್ಯಕರ್ತ ಹರ್ಷನ ಕಗ್ಗೊಲೆ ಹೇಗಾಯ್ತು? ಭಾನುವಾರ ರಾತ್ರಿ ಶಿವಮೊಗ್ಗದಲ್ಲಿ ನಡೆದ ಕೊಲೆಯ ಕಂಪ್ಲೀಟ್ ಡಿಟೇಲ್ಸ್
ಹರ್ಷನ ಹತ್ಯೆ ಹಿಂದೆ ಯಾವುದೇ ಸಂಘಟನೆ ಕೈವಾಡವಿಲ್ಲ, ಹಳೇ ವೈಷಮ್ಯದ ಹಿನ್ನೆಲೆಯಲ್ಲಿ ಕೊಲೆಯಾಗಿದೆ: ಸಚಿವ ನಾರಾಯಣಗೌಡ
Harsha Murder Case: ನನ್ನ ಮಗನನ್ನ ಕೊಲೆ ಮಾಡಿದವರನ್ನ ಎನ್‌ಕೌಂಟರ್ ಮಾಡಿದ್ರೆ ಸಾಲಲ್ಲ
Published On - 9:47 am, Tue, 22 February 22