ಬಜರಂಗದಳ ಕಾರ್ಯಕರ್ತ ಹರ್ಷನ ಕಗ್ಗೊಲೆ ಹೇಗಾಯ್ತು? ಭಾನುವಾರ ರಾತ್ರಿ ಶಿವಮೊಗ್ಗದಲ್ಲಿ ನಡೆದ ಕೊಲೆಯ ಕಂಪ್ಲೀಟ್ ಡಿಟೇಲ್ಸ್

ಈ ಒಂದು ಹತ್ಯೆಯಿಂದ ಶಿವಮೊಗ್ಗದಲ್ಲಿ ಬೆಂಕಿಯೇ ಹೊತ್ತಿಕೊಂಡಿದೆ. ಮಲೆನಾಡ ಜಿಲ್ಲೆ ನಿಗಿ ನಿಗಿ ಕೆಂಡವಾಗಿದೆ. ಹರ್ಷನ ಹತ್ಯೆ, ಶಿವಮೊಗ್ಗದ ಉದ್ವಿಗ್ನ ಪರಿಸ್ಥಿತಿ ಬಗ್ಗೆ ದೇಶಾದ್ಯಂತ ಬಿಸಿ ಬಿಸಿ ಚರ್ಚೆಯಾಗ್ತಿದೆ. ಅಷ್ಟಕ್ಕೂ ಇಷ್ಟೆಲ್ಲಾ ರಾದ್ಧಾಂತ ಸೃಷ್ಟಿಸಿರೋ ಹರ್ಷನ ಕೊಲೆ ನಡೆದಿದ್ದು ಹೇಗೆ?

ಬಜರಂಗದಳ ಕಾರ್ಯಕರ್ತ ಹರ್ಷನ ಕಗ್ಗೊಲೆ ಹೇಗಾಯ್ತು? ಭಾನುವಾರ ರಾತ್ರಿ ಶಿವಮೊಗ್ಗದಲ್ಲಿ ನಡೆದ ಕೊಲೆಯ ಕಂಪ್ಲೀಟ್ ಡಿಟೇಲ್ಸ್
ಬಜರಂಗದಳ ಕಾರ್ಯಕರ್ತ ಹರ್ಷ
Follow us
TV9 Web
| Updated By: ಆಯೇಷಾ ಬಾನು

Updated on:Feb 22, 2022 | 8:46 AM

ಶಿವಮೊಗ್ಗ: ಫೆಬ್ರವರಿ 20ರ ರಾತ್ರಿ ಬಜರಂಗದಳ(Bajrang Dal) ಕಾರ್ಯಕರ್ತ ಹರ್ಷನನ್ನು ನಡು ರಸ್ತೆಯಲ್ಲೇ ಕೊಚ್ಚಿ ಕೊಲೆ ಮಾಡಲಾಗಿತ್ತು. ಅದು ಅಕ್ಷರಶ: ಭೀಕರ ಕಗ್ಗೊಲೆ. ಈ ಸಂಬಂಧ ಈಗಾಗಲೇ ಶಿವಮೊಗ್ಗದ ಜೆ.ಪಿ.ನಗರ ನಿವಾಸಿ ಸೈಯದ್ ನದೀಮ್‌(20) ಮತ್ತು ಶಿವಮೊಗ್ಗದ ಬುದ್ಧಾನಗರ ನಿವಾಸಿ ಕಾಸಿಫ್(30) ಬಂಧನವಾಗಿದೆ. ಈ ಒಂದು ಹತ್ಯೆಯಿಂದ ಶಿವಮೊಗ್ಗದಲ್ಲಿ ಬೆಂಕಿಯೇ ಹೊತ್ತಿಕೊಂಡಿದೆ. ಮಲೆನಾಡ ಜಿಲ್ಲೆ ನಿಗಿ ನಿಗಿ ಕೆಂಡವಾಗಿದೆ. ಹರ್ಷನ ಹತ್ಯೆ, ಶಿವಮೊಗ್ಗದ ಉದ್ವಿಗ್ನ ಪರಿಸ್ಥಿತಿ ಬಗ್ಗೆ ದೇಶಾದ್ಯಂತ ಬಿಸಿ ಬಿಸಿ ಚರ್ಚೆಯಾಗ್ತಿದೆ. ಅಷ್ಟಕ್ಕೂ ಇಷ್ಟೆಲ್ಲಾ ರಾದ್ಧಾಂತ ಸೃಷ್ಟಿಸಿರೋ ಹರ್ಷನ ಕೊಲೆ ನಡೆದಿದ್ದು ಹೇಗೆ? ಯಾರು ಏನ್ ಮಾಡಿದ್ರು? ಯಾವಾಗ ಏನೆಲ್ಲಾ ಆಯ್ತು ಅನ್ನೋ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ.

ಎಗ್ರೈಸ್ ತಿನ್ನಲು ಮನೆಯಿಂದ ಹೊರಟ ಹರ್ಷ ಫೆಬ್ರವರಿ 20 ಭಾನುವಾರ ರಾತ್ರಿ 8 ಗಂಟೆ ವೇಳೆಗೆ ಹರ್ಷ ಎಗ್ರೈಸ್ ತಿನ್ನೋಕೆ ಅಂತಾ ಶಿವಮೊಗ್ಗ ನಗರದ ಸಿಗೇಹಟ್ಟಿ ಬಡಾವಣೆ ಮನೆಯಿಂದ ಭಾರತಿ ಕಾಲೋನಿಗೆ ತೆರಳಿದ್ದ. ಸ್ನೇಹಿತರ ಜೊತೆ ಮಾತನಾಡುತ್ತಾ ರಸ್ತೆಯಲ್ಲಿ ನಿಂತಿದ್ದ. ಈ ವೇಳೆ ಕೊಂಚ ದೂರದಲ್ಲಿ ಯಾವುದೋ ವಿಚಾರಕ್ಕೆ ಗಲಾಟೆ ಕೂಡ ನಡೀತಿತ್ತು. ಈ ಸಂದರ್ಭ ಹರ್ಷ ಸ್ನೇಹಿತರ ಬಳಿ ಅದೇನು ಅಂತಾ ನೋಡಿಕೊಂಡು ಬರುವಂತೆ ಸೂಚಿಸಿದ್ದಾನೆ. ಸ್ನೇಹಿತರು ಗಲಾಟೆ ನಡೀತಿದ್ದ ಸ್ಥಳಕ್ಕೆ ತೆರಳಿದ್ದಾರೆ.

ಮಚ್ಚಿನಿಂದ ಹರ್ಷನ ಮೇಲೆ ಭೀಕರ ಅಟ್ಯಾಕ್ ಅತ್ತ ಸ್ನೇಹಿತರು ಗಲಾಟೆ ನಡೀತಿದ್ದ ಜಾಗಕ್ಕೆ ತೆರಳುತ್ತಲೇ ಹರ್ಷ ಊಟ ಮಾಡೋಕೆ ಅಂತಾ ಮುಂದೆ ಹೋಗ್ತಾನೆ. ಇದೇ ವೇಳೆ ನಾಲ್ಕು ಮಂದಿ ಸ್ವಿಫ್ಟ್ ಕಾರಿನಲ್ಲಿ ಹರ್ಷನ ಬಳಿ ಬಂದು ಇಳಿಯುತ್ತಾರೆ. ಮತ್ತೊಂದು ಕಡೆಯಿಂದ ಆಟೋದಲ್ಲಿ ಒಬ್ಬ ಬಂದು ಮಚ್ಚು ಹಿಡ್ಕೊಂಡು ಇಳಿಯುತ್ತಾನೆ. ಅಷ್ಟೇ ಹರ್ಷನನ್ನ ಸುತ್ತುವರಿದ ಕೊಲೆಗಡುಕರು ಮಾರಕಾಸ್ತ್ರಗಳಿಂದ ಮನಬಂದಂತೆ ದಾಳಿ ಮಾಡಿದ್ದಾರೆ. ಹರ್ಷನ ಮೇಲೆ ರಣಭಯಂಕರವಾಗಿ ಮಚ್ಚು ಬೀಸಿ, ಎಸ್ಕೇಪ್ ಆಗಿದ್ದಾರೆ. ಭಾನುವಾರ ರಾತ್ರಿ 8.45ರಿಂದ 9 ಗಂಟೆ ಹೊತ್ತಿನಲ್ಲಿ ಇಷ್ಟೆಲ್ಲಾ ನಡೆದು ಹೋಗಿದೆ.

ಪ್ರತಿದಾಳಿ ಮಾಡಲು ಮುಂದಾಗಿದ್ದ ಹರ್ಷ ದುಷ್ಕರ್ಮಿಗಳು ನಡೆಸಿದ ಭೀಕರ ದಾಳಿಗೆ ಹರ್ಷ ರಕ್ತದ ಮಡುವಿನಲ್ಲಿ ಬಿದ್ದಿದ್ದ. ಹರ್ಷನ ಮೇಲೆ ಅಟ್ಯಾಕ್ ಆಗುತ್ತಲೇ ಸ್ಥಳೀಯರು ಕೂಡಲೇ ಆಗಮಿಸಿದ್ದಾರೆ. ಈ ವೇಳೆ ವಿಪರೀತ ಗಾಯಗೊಂಡಿದ್ರೂ, ಪ್ರತಿ ದಾಳಿ ಮಾಡಲು ನನಗೆ ಬ್ಯಾಟ್ ಕೊಡಿ ಎಂದು ಹರ್ಷ ಕೇಳಿಕೊಂಡಿದ್ದನಂತೆ.

ಹರ್ಷ ಆಸ್ಪತ್ರೆಗೆ ತೆರಳುತ್ತಲೇ ಕಲ್ಲು ತೂರಾಟ ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದ ಹರ್ಷನನ್ನ ಸ್ಥಳೀಯರು ಕೂಡಲೇ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅತ್ತ ಹರ್ಷನನ್ನ ಆಸ್ಪತ್ರೆಗೆ ಸಾಗಿಸುತ್ತಲೇ ಇತ್ತ ಕಲ್ಲು ತೂರಾಟ ಆರಂಭವಾಗಿತ್ತು. ಹರ್ಷನ ಮೇಲಿನ ದಾಳಿ ಶಿವಮೊಗ್ಗದಲ್ಲಿ ಕಾಡ್ಗಿಚ್ಚಿನಂತೆ ಕಾಬ್ಬಿತ್ತು. ರವಿವರ್ಮ ಬೀದಿ, ಶಾಮರಾವ್ ಬೀದಿ, ಕಲರ್ ಪೇಟೆ, ಸೀಗೆಹಟ್ಟಿ ಸೇರಿ ವಿವಿಧ ಬಡಾವಣೆಯಲ್ಲಿ 2 ಉದ್ರಿಕ್ತ ಗುಂಪುಗಳ ಮಧ್ಯೆ ಕಲ್ಲು ತೂರಾಟ ನಡೀತು.

ಉದ್ರಿಕ್ತರ ಮೇಲೆ ‘ಖಾಕಿ’ ಲಾಠಿಚಾರ್ಜ್ ಇನ್ನು ಎರಡು ಗುಂಪುಗಳ ಮಧ್ಯೆ ಕಲ್ಲು ತೂರಾಟ ಜೋರಾಗುತ್ತಲೇ ಪೊಲೀಸರ ಪಡೆಯೇ ಸ್ಥಳಕ್ಕೆ ಆಗಮಿಸಿತ್ತು. ಪರಿಸ್ಥಿತಿ ತಿಳಿಗೊಳಿಸಲು ಪೊಲೀಸರು ಉದ್ರಿಕ್ತರ ಮೇಲೆ ಲಾಠಿಚಾರ್ಜ್ ಮಾಡಿದ್ರು.

ಹರ್ಷನ ಅಂತಿಮ ಮೆರವಣಿಗೆಯುದ್ದಕ್ಕೂ ಉದ್ರಿಕ್ತರ ಮಾರಾಮಾರಿ ಹರ್ಷನ ಮೇಲೆ ಭೀಕರ ಹಲ್ಲೆಯಾಗಿತ್ತು. ಹರ್ಷನನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರೂ ಯಾವುದೇ ಪ್ರಯೋಜನವಾಗಲಿಲ್ಲ. ಇನ್ನು ಮೃತದೇಹದ ಮೆರವಣಿಗೆಯುದ್ದಕ್ಕೂ ಜಟಾಪಟಿಯೇ ನಡೆದೋಗಿತ್ತು. ಹಗಲೊತ್ತಿನಲ್ಲೇ, ಪೊಲೀಸರ ಎದುರಿನಲ್ಲೇ ಸಿಕ್ಕ ಸಿಕ್ಕ ವಾಹನಗಳಿಗೆ ಬೆಂಕಿ ಹಚ್ಚಿ, ಎರಡು ಗುಂಪುಗಳ ನಡುವೆ ಕಲ್ಲು ತೂರಾಟ ನಡೆದು ದೊಡ್ಡ ದೊಂಬಿಯೇ ನಡೆದು ಹೋಗಿದೆ. ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಿಂದ ಸೀಗೇಹಟ್ಟಿಯಲ್ಲಿರೋ ನಿವಾಸಕ್ಕೆ ಹರ್ಷನ ಮೃತದೇಹ ತರಲಾಗಿತ್ತು. ಹರ್ಷನ ಮನೆ ಅಕ್ಕ ಪಕ್ಕದ ಏರಿಯಾದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಮೊರಾದ್ ನಗರದ 1ನೇ ಕ್ರಾಸ್ ಬಳಿ ಆ ಕಡೆ ಒಂದು ಗುಂಪು, ಈ ಕಡೆ ಒಂದು ಗುಂಪು ಅಕ್ಷರಶಃ ಕಾಳಗಕ್ಕೆ ಇಳಿದಿತ್ತು. ಅದ್ರಲ್ಲೂ ಉದ್ರಿಕ್ತರ ಒಂದು ಗುಂಪು ಕೈಯಲ್ಲಿ ತಲ್ವಾರ್, ದೊಣ್ಣೆ, ಲಾಂಗು ಮಚ್ಚು ಹಿಡಿದು ಅಬ್ಬರಿಸೋಕೆ ಶುರು ಮಾಡಿತ್ತು. ಹರ್ಷನ ಮೃತದೇಹದ ಮೆರವಣಿಗೆಯಿಂದ ಹಿಡಿದು ಅಂತ್ಯಸಂಸ್ಕಾರದ ವರೆಗೂ ಶಿವಮೊಗ್ಗದಲ್ಲಿ ಭಾರಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು.

ಬುಧವಾರ ಬೆಳಗ್ಗೆವರೆಗೂ ಶಿವಮೊಗ್ಗದಲ್ಲಿ ಕರ್ಫ್ಯೂ ಬೂದಿ ಮುಚ್ಚಿದ ಕೆಂಡದಂತಿರೋ ಶಿವಮೊಗ್ಗದಲ್ಲಿ ಪರಿಸ್ಥಿತಿ ತಿಳಿ ಮಾಡಲು ಪೊಲೀಸರು ಹರಸಾಹಸ ಪಡ್ತಿದ್ದಾರೆ. ಮುಂಜಾಗ್ರತ ಕ್ರಮವಾಗಿ ಶಿವಮೊಗ್ಗದಲ್ಲಿ ಫೆಬ್ರವರಿ 23ರ ಮುಂಜಾನೆ ವರೆಗೂ ಅಂದ್ರೆ ಬುಧವಾರದವರೆಗೂ ಕರ್ಫ್ಯೂ ಜಾರಿ ಮಾಡಿ ಆದೇಶ ಹೊರಡಿಸಲಾಗಿದೆ. ಇದ್ರ ಜೊತೆಗೆ ಇಂದು ಕೂಡ ಶಿವಮೊಗ್ಗದಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.

ಇದನ್ನೂ ಓದಿ: ಬಜರಂಗದಳ ಕಾರ್ಯಕರ್ತ ಹತ್ಯೆ ಪ್ರಕರಣ: ಶಿವಮೊಗ್ಗದ ಇಬ್ಬರು ಆರೋಪಿಗಳ ಬಂಧನ

Published On - 8:44 am, Tue, 22 February 22

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ