ಅರ್ಬನ್ ರೆಸಾರ್ಟ್ ಬಳಿ ಸ್ಕೂಟಿಯಲ್ಲಿ ಬಂದ ಮೂವರು ಕಿಡಿಗೇಡಿಗಳು ವಿದ್ಯಾರ್ಥಿ ಭೀಮಾಶಂಕರನ ಮೊಬೈಲನ್ನು ಕಸಿದುಕೊಳ್ಳಲು ಯತ್ನಿಸಿದ್ದಾರೆ. ಈ ವೇಳೆ ಭೀಮಾಶಂಕರ ಮೊಬೈಲ್ ಕೊಡದೇ ಇದ್ದಾಗ ಆತನ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾರೆ. ಈ ವೇಳೆ ವಿದ್ಯಾರ್ಥಿಯ ಕೈಗೆ ಗಾಯವಾಗಿದ್ದು, ಕಿಡಿಗೇಡಿಗಳು ಮೊಬೈಲ್ ಕಸಿದು ಪರಾರಿಯಾಗಿದ್ದಾರೆ.
ಹಲ್ಲೆಗೊಳಗಾದ ವಿದ್ಯಾರ್ಥಿ ಬಿಜಾಪುರ ಮೂಲದವನು. ಗಾಯಾಳು ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು, ಮಠದಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾನೆ. ಹಾಡಹಗಲೇ ಈ ಘಟನೆ ನಡೆದಿರುವುದು ಸ್ಥಳೀಯರಲ್ಲಿ ಭೀತಿ ಹುಟ್ಟಿಸಿದೆ.
ಕೆಎಸ್ಆರ್ಟಿಸಿ ಬಸ್ ಡಿಕ್ಕಿ, ಇಬ್ಬರ ದುರ್ಮರಣ
ಕಾಶಪುರ ಬಳಿ ಕೆಎಸ್ಆರ್ಟಿಸಿ ಬಸ್ ಡಿಕ್ಕಿ ಹೊಡೆದು, ಇಬ್ಬರ ದುರ್ಮರಣ ಹೊಂದಿದ್ದಾರೆ. ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಕಾಶಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಬಸ್ ಡಿಕ್ಕಿಯಾಗಿ ರೈತ ಗೋಪಾಲ ನಾಯ್ಕ ಮತ್ತು ಭಿಕ್ಷುಕನೊಬ್ಬ ಸಾವನ್ನಪ್ಪಿದ್ದಾರೆ. ಅಪಘಾತದಲ್ಲಿ ಬಸ್ ಕಂಡಕ್ಟರ್ ಕಾಲು ಮುರಿದಿದ್ದು. ಚಾಲಕನ ನಿಯಂತ್ರಣ ತಪ್ಪಿ ಈ ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ.
ಸರ್ಕಾರಿ ಬಸ್ ಇಬ್ಬರಿಗೆ ಗುದ್ದಿದ ಬಳಿಕ ಮರಕ್ಕೆ ಡಿಕ್ಕಿಯಾಗಿದೆ. 10 ಪ್ರಯಾಣಿಕರಿಗೆ ಗಾಯವಾಗಿದ್ದು, ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದ ಬಳಿಕ ಬಸ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ.
ಇದನ್ನೂ ಓದಿ
ಆರೂವರೆ ತಿಂಗಳಿಗೆ ಜನಿಸಿತಾ ಪ್ರಿಯಾಂಕಾ ಚೋಪ್ರಾ ಮಗು? ಹಲವು ಸತ್ಯಗಳನ್ನು ಮುಚ್ಚಿಟ್ಟ ನಟಿ
ಅಪ್ರಾಪ್ತ ಮಗಳ ಮೇಲೆ ರೇಪ್ ಮಾಡಿದ್ದವನನ್ನು ಗೋರಖ್ಪುರ ಕೋರ್ಟ್ ಆವರಣದಲ್ಲಿಯೇ ಕೊಂದ ಮಾಜಿ ಬಿಎಸ್ಎಫ್ ಯೋಧ