AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಾರುಖ್ ಖಾನ್ ‘ಜವಾನ್’ ಸಿನಿಮಾ ಬಿಡುಗಡೆ ದಿನಾಂಕ ಘೋಷಣೆ, ಕನ್ನಡ ನಿರ್ಲಕ್ಷ್ಯ

Shah Rukh Khan: ಶಾರುಖ್ ಖಾನ್ ನಟನೆಯ ಜವಾನ್ ಸಿನಿಮಾ ಬಿಡುಗಡೆ ದಿನಾಂಕ ಘೋಷಿಸಲಾಗಿದೆ. ಸಿನಿಮಾವನ್ನು ಹಿಂದಿಯ ಜೊತೆಗೆ ತಮಿಳು ಹಾಗೂ ತೆಲುಗು ಭಾಷೆಗಳಲ್ಲಿ ಬಿಡುಗಡೆ ಆಗಲಿದೆ. ಕನ್ನಡದಲ್ಲಿ ಡಬ್ ಮಾಡಲಾಗುತ್ತಿಲ್ಲ.

ಶಾರುಖ್ ಖಾನ್ 'ಜವಾನ್' ಸಿನಿಮಾ ಬಿಡುಗಡೆ ದಿನಾಂಕ ಘೋಷಣೆ, ಕನ್ನಡ ನಿರ್ಲಕ್ಷ್ಯ
ಜವಾನ್
ಮಂಜುನಾಥ ಸಿ.
|

Updated on:May 06, 2023 | 10:21 PM

Share

ಶಾರುಖ್ ಖಾನ್ (Shah Rukh Khan) ನಟನೆಯ ಪಠಾಣ್ (Pathaan) ಸಿನಿಮಾ ಸೂಪರ್-ಡೂಪರ್ ಹಿಟ್ ಆಗಿದೆ. ಇದರ ಬೆನ್ನಲ್ಲೆ ಇದೀಗ ಶಾರುಖ್ ಖಾನ್ ನಟನೆಯ ಹೊಸ ಸಿನಿಮಾ ಜವಾನ್​ ಮೇಲೆ ನಿರೀಕ್ಷೆಗಳು ಹೆಚ್ಚಾಗಿವೆ. ಪಠಾಣ್ ರೀತಿಯಲ್ಲಿಯೇ ಜವಾನ್ ಸಹ ಪಕ್ಕಾ ಆಕ್ಷನ್ ಸಿನಿಮಾ ಆಗಿದ್ದು, ತಮಿಳಿನ ಜನಪ್ರಿಯ ನಿರ್ದೇಶಕ ಅಟ್ಲಿ ಈ ಸಿನಿಮಾ ನಿರ್ದೇಶಿಸಿದ್ದಾರೆ. ಜವಾನ್ ಸಿನಿಮಾದ ಬಿಡುಗಡೆ ಬಗ್ಗೆ ಹಲವು ಗೊಂದಲಗಳಿದ್ದವು. ಸಿನಿಮಾವು ಜೂನ್ ಮೊದಲ ವಾರದಲ್ಲಿ ಬಿಡುಗಡೆ ಆಗಲಿದೆ ಎನ್ನಲಾಗಿತ್ತು. ಆದರೆ ಇದೀಗ ಚಿತ್ರತಂಡವೇ ಅಧಿಕೃತ ಮಾಹಿತಿ ನೀಡಿದೆ.

ಇಂದು ‘ಜವಾನ್’ ಸಿನಿಮಾದ ಕಿರು ಟೀಸರ್ ಬಿಡುಗಡೆ ಆಗಿದ್ದು, ಸಿನಿಮಾ ಬಿಡುಗಡೆ ದಿನಾಂಕ ಘೋಷಣೆಗೆಂದೇ ಈ ಟೀಸರ್ ಬಿಡುಗಡೆ ಮಾಡಲಾಗಿದೆ. ಜವಾನ್ ಸಿನಿಮಾವು ಸೆಪ್ಟೆಂಬರ್ ಏಳನೇ ತಾರೀಖಿನಂದು ತಮಿಳು, ತೆಲುಗು ಹಾಗೂ ಹಿಂದಿ ಭಾಷೆಗಳಲ್ಲಿ ಬಿಡುಗಡೆ ಆಗಲಿದೆ. ಮಲಯಾಳಂ ಹಾಗೂ ಕನ್ನಡ ಭಾಷೆಗಳಲ್ಲಿ ಜವಾನ್ ಸಿನಿಮಾ ಬಿಡುಗಡೆ ಆಗುತ್ತಿಲ್ಲ.

ಆದರೆ ಸಿನಿಮಾವನ್ನು ತಡವಾಗಿ ಬಿಡುಗಡೆ ಮಾಡುತ್ತಿರುವ ಬಗ್ಗೆ ಶಾರುಖ್ ಖಾನ್ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ”100-200 ರು ಹೆಚ್ಚು ಹಣ ತೆಗೆದುಕೊಳ್ಳಿ ಆದರೆ ಸಿನಿಮಾವನ್ನು ನಾಳೆಯೇ ಬಿಡುಗಡೆ ಮಾಡಿ” ಎಂದು ಶಾರುಖ್ ಖಾನ್​ಗೆ ಟ್ವೀಟ್ ಮಾಡಿರುವ ಅಭಿಮಾನಿ ಒಬ್ಬರಿಗೆ ಟ್ವಿಟ್ಟರ್ ಮೂಲಕ ಪ್ರತಿಕ್ರಿಯೆ ನೀಡಿರುವ ಶಾರುಖ್ ಖಾನ್, ”100-200 ರುಪಾಯಿಗೆ ಒಟಿಟಿ ಸಬ್​ಸ್ಕ್ರಿಪ್ಷನ್ ಬರುವುದಿಲ್ಲ, ಇನ್ನು ನಿನಗೆ ಪೂರ್ತಿ ಸಿನಿಮಾ ನೀಡಬೇಕಾ” ಎಂದು ತಮಾಷೆ ಮಾಡಿದ್ದಾರೆ.

ಇನ್ನು ಸಿನಿಮಾವನ್ನು ಕನ್ನಡ ಹಾಗೂ ಮಲಯಾಳಂನಲ್ಲಿ ಡಬ್ ಮಾಡದೇ ಇರುವ ಬಗ್ಗೆಯೂ ನೆಟ್ಟಿಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಎರಡೂ ಭಾಷೆಗಳನ್ನು ನಿರ್ಲಕ್ಷ್ಯ ಮಾಡಿರುವುದಕ್ಕೆ ಟೀಕೆಗಳು ವ್ಯಕ್ತವಾಗಿವೆ. ಕನ್ನಡದಲ್ಲಿಯೂ ಸಿನಿಮಾವನ್ನು ಡಬ್ ಮಾಡುವಂತೆ ಕೆಲವರು ಮನವಿ ಸಹ ಮಾಡಿದ್ದಾರೆ.

ಇದನ್ನೂ ಓದಿ:ಸಾವಿರಾರು ಕೋಟಿ ರೂಪಾಯಿ ಗಳಿಸಿದ ‘ಪಠಾಣ್​’ ಚಿತ್ರದಿಂದ ಶಾರುಖ್​ ಖಾನ್​ಗೆ ಸಿಕ್ಕ ಹಣ ಎಷ್ಟು?

ಜವಾನ್ ಸಿನಿಮಾವು ಮಾಜಿ ಸೈನಿಕನೊಬ್ಬನ ದ್ವೇಷದ ಕತೆಯನ್ನು ಒಳಗೊಂಡಿದೆ ಎನ್ನಲಾಗುತ್ತಿದೆ. ಈವರೆಗೆ ಬಿಡುಗಡೆ ಆಗಿರುವ ಜವಾನ್ ಸಿನಿಮಾದ ಪೋಸ್ಟರ್​ಗಳಲ್ಲಿ ಗಾಯಗೊಂಡಿರುವ ವ್ಯಕ್ತಿಯಾಗಿ ಶಾರುಖ್ ಖಾನ್ ಕಾಣಿಸಿಕೊಂಡಿದ್ದಾರೆ.

ಜವಾನ್ ಸಿನಿಮಾವನ್ನು ತಮಿಳಿನ ಜನಪ್ರಿಯ ನಿರ್ದೇಶಕ ಅಟ್ಲಿ ನಿರ್ದೇಶನ ಮಾಡಿದ್ದಾರೆ. ಸಿನಿಮಾದಲ್ಲಿ ನಯನತಾರಾ ನಾಯಕಿ. ತಮಿಳಿನ ಹಾಸ್ಯನಟ ಯೋಗಿಬಾಬು ಸೇರಿದಂತೆ ಇನ್ನೂ ಕೆಲವು ತಮಿಳು ನಟರಿದ್ದಾರೆ. ಸಿನಿಮಾದಲ್ಲಿ ತಮಿಳಿನ ಸ್ಟಾರ್ ನಟ ವಿಜಯ್, ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾವನ್ನು ಶಾರುಖ್ ಖಾನ್ ಪತ್ನಿ ಗೌರಿ ಖಾನ್ ನಿರ್ಮಾಣ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:19 pm, Sat, 6 May 23