AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಾರುಖ್ ಖಾನ್ ಮ್ಯಾನೇಜರ್ ಪೂಜಾ ಆಗರ್ಭ ಶ್ರೀಮಂತೆ; ವರ್ಷಕ್ಕೆ ಸಿಗೋ ಸಂಭಾವನೆ ಇಷ್ಟೊಂದಾ?

Pooja Dadlani: ಶಾರುಖ್ ಖಾನ್ ಅವರಿಗೆ ಮ್ಯಾನೇಜರ್ ಆಗಿರುವ ಪೂಜಾ ದದ್ಲಾನಿ ಕೇವಲ ಮ್ಯಾನೇಜರ್ ಕೆಲಸ ಮಾಡುತ್ತಿಲ್ಲ. ಅವರು ಶಾರುಖ್ ಕುಟುಂಬದಲ್ಲಿ ಒಬ್ಬರಾಗಿದ್ದಾರೆ.

ಶಾರುಖ್ ಖಾನ್ ಮ್ಯಾನೇಜರ್ ಪೂಜಾ ಆಗರ್ಭ ಶ್ರೀಮಂತೆ; ವರ್ಷಕ್ಕೆ ಸಿಗೋ ಸಂಭಾವನೆ ಇಷ್ಟೊಂದಾ?
ಶಾರುಖ್ ಜೊತೆ ಪೂಜಾ
TV9 Web
| Updated By: ರಾಜೇಶ್ ದುಗ್ಗುಮನೆ|

Updated on: May 05, 2023 | 6:30 AM

Share

ನಟ ಶಾರುಖ್ ಖಾನ್ (Shah Rukh Khan) ಜೀವನದಲ್ಲಿ ಎಲ್ಲವು ಒಳ್ಳೆಯದಾಗುತ್ತಿದೆ. ಅವರ ನಟನೆಯ ‘ಪಠಾಣ್’ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ 1000 ಕೋಟಿ ರೂಪಾಯಿ ಬಾಚಿಕೊಂಡಿತು. ಶಾರುಖ್ ಮಗ ಆರ್ಯನ್ ಖಾನ್ ಆರಂಭಿಸಿದ ಬಟ್ಟೆ ಬಿಸ್ನೆಸ್ ಒಳ್ಳೆಯ ರೀತಿಯಲ್ಲಿ ಸಾಗುತ್ತಿದೆ. ಮಗಳು ಸುಹಾನಾ ಖಾನ್ (Suhana Khan) ಚಿತ್ರರಂಗಕ್ಕೆ ಬರೋದಕ್ಕೆ ಮೊದಲೇ ಬ್ರ್ಯಾಂಡ್ ಒಂದಕ್ಕೆ ರಾಯಭಾರಿ ಆಗಿದ್ದಾರೆ. ಶಾರುಖ್ ಖಾನ್ ಅವರು ಸಾವಿರಾರು ಕೋಟಿಯ ಒಡೆಯ. ಕೇವಲ ಶಾರುಖ್ ಖಾನ್ ಮಾತ್ರ ಅಲ್ಲ ಅವರ ಮ್ಯಾನೇಜರ್ ಪೂಜಾ ದದ್ಲಾನಿ ಕೂಡ ಆಗರ್ಭ ಶ್ರೀಮಂತೆ.

ಶಾರುಖ್ ಖಾನ್ ಅವರಿಗೆ ಮ್ಯಾನೇಜರ್ ಆಗಿರುವ ಪೂಜಾ ದದ್ಲಾನಿ ಕೇವಲ ಮ್ಯಾನೇಜರ್ ಕೆಲಸ ಮಾಡುತ್ತಿಲ್ಲ. ಅವರು ಶಾರುಖ್ ಕುಟುಂಬದಲ್ಲಿ ಒಬ್ಬರಾಗಿದ್ದಾರೆ. ಸ್ವತಃ ಶಾರುಖ್ ಖಾನ್ ಮ್ಯಾನೇಜ್ ಮಾಡಬೇಕಾದ ವಿಚಾರಗಳನ್ನು ಪೂಜಾ ನೋಡಿಕೊಳ್ಳುತ್ತಾರೆ. ಪೂಜಾ ಮೇಲೆ ಶಾರುಖ್ ಅಷ್ಟು ವಿಶ್ವಾಸ ಇಟ್ಟುಕೊಂಡಿದ್ದಾರೆ. ಇದಕ್ಕೆ ಪ್ರತಿಯಾಗಿ ಅವರಿಗೆ ವರ್ಷಕ್ಕೆ ಸಿಗುತ್ತಿರುವ ಸಂಭಾವನೆ 7-9 ಕೋಟಿ ರೂಪಾಯಿ. ಅವರ ಒಟ್ಟೂ ಆಸ್ತಿ 45 ಕೋಟಿ ರೂಪಾಯಿ ಮೇಲಿದೆ ಎನ್ನಲಾಗುತ್ತಿದೆ. ಪೂಜಾ ಆಸ್ತಿ ಹಾಗೂ ವರ್ಷದ ಸಂಬಳ ಕೇಳಿ ಅನೇಕರಿಗೆ ಅಚ್ಚರಿ ಆಗಿದೆ.

2021ರಲ್ಲಿ ಆರ್ಯನ್ ಖಾನ್ ಅವರು ಡ್ರಗ್ ಕೇಸ್​ನಲ್ಲಿ ಸಿಕ್ಕಿ ಬಿದ್ದರು. ಆರ್ಯನ್ ಖಾನ್​ಗೆ ಜಾಮೀನು ಕೊಡಿಸಲು ಮುಂದೆ ನಿಂತು ಪ್ರಯತ್ನಪಟ್ಟಿದ್ದು ಇದೇ ಪೂಜಾ. ಎಲ್ಲಾ ಸಂದರ್ಭದಲ್ಲೂ ಶಾರುಖ್ ಖಾನ್​ಗೆ ಕೋರ್ಟ್ ಹಾಗೂ ಪೊಲೀಸ್ ಠಾಣೆಗೆ ಹೋಗೋಕೆ ಸಾಧ್ಯವಾಗುತ್ತಿರಲಿಲ್ಲ. ಆಗ ಶಾರುಖ್ ಬದಲು ಕೋರ್ಟು-ಕಚೇರಿ ಓಡಾಡಿದ್ದು ಪೂಜಾ ದದ್ಲಾನಿ.

ಇದನ್ನೂ ಓದಿ: ಶಾರುಖ್ ಖಾನ್ ನಟನೆಯ ಹೊಸ ಸಿನಿಮಾದ ಬಿಡುಗಡೆ ದಿನಾಂಕ ಘೋಷಣೆ

ಶಾರುಖ್ ಖಾನ್ ಅವರು ಅನೇಕ ಬ್ರ್ಯಾಂಡ್​ಗಳಿಗೆ ಅಂಬಾಸಿಡರ್ ಆಗಿದ್ದಾರೆ. ಅದಕ್ಕೆ ಸಂಬಂಧಿಸಿದ ಎಲ್ಲಾ ವಿಚಾರಗಳನ್ನು ಪೂಜಾ ಅವರೇ ನೋಡಿಕೊಳ್ಳುತ್ತಾರೆ. ಶಾರುಖ್ ಖಾನ್ ಆಯೋಜಿಸುವ ಎಲ್ಲಾ ಪಾರ್ಟಿಗೆ ಪೂಜಾ ಹಾಜರಿ ಹಾಕುತ್ತಾರೆ.

ಇದನ್ನೂ ಓದಿ: ವಿಶ್ವದ 100 ಪ್ರಭಾವಿ ವ್ಯಕ್ತಿಗಳ ಸಾಲಿನಲ್ಲಿ ಸ್ಥಾನ ಪಡೆದ ಶಾರುಖ್ ಖಾನ್ ಹಾಗೂ ರಾಜಮೌಳಿ

ಇತ್ತೀಚೆಗೆ ಪೂಜಾ ಬಾಂದ್ರಾದಲ್ಲಿ ಮನೆ ಖರೀದಿಸಿದ್ದಾರೆ. ಈ ಮನೆಯ ಒಳಭಾಗವನ್ನು ಶಾರುಖ್ ಖಾನ್ ಪತ್ನಿ ಗೌರಿ ಖಾನ್ ಅವರೇ ಡಿಸೈನ್ ಮಾಡಿದ್ದಾರೆ. ಪೂಜಾ ಬಳಿ ಐಷಾರಾಮಿ ಕಾರು ಕೂಡ ಇದೆ. ಪೂಜಾ ಅವರು 2008ರಲ್ಲಿ ಹಿತೇಶ್ ಅವರನ್ನು ಮದುವೆ ಆಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ