AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಾರುಖ್ ಖಾನ್ ನಟನೆಯ ಹೊಸ ಸಿನಿಮಾದ ಬಿಡುಗಡೆ ದಿನಾಂಕ ಘೋಷಣೆ

Shah Rukh Khan: ಬಾಲಿವುಡ್ ಬಾದ್​ಶಾ ಶಾರುಖ್ ಖಾನ್ ನಟನೆಯ ಮುಂದಿನ ಸಿನಿಮಾ ಜವಾನ್ ಬಿಡುಗಡೆ ದಿನಾಂಕ ಘೋಷಣೆಯಾಗಿದೆ.

ಶಾರುಖ್ ಖಾನ್ ನಟನೆಯ ಹೊಸ ಸಿನಿಮಾದ ಬಿಡುಗಡೆ ದಿನಾಂಕ ಘೋಷಣೆ
ಜವಾನ್
ಮಂಜುನಾಥ ಸಿ.
|

Updated on: Apr 26, 2023 | 8:00 AM

Share

ಪಠಾಣ್ (Pathaan) ಸಿನಿಮಾ ಮೂಲಕ 1000 ಕೋಟಿ ಕ್ಲಬ್ ಸೇರಿರುವ ಶಾರುಖ್ ಖಾನ್ (Shah Rukh Khan), ತಾವೇಕೆ ಬಾಲಿವುಡ್​ನ (Bollywood) ಬಾದ್​ಶಾ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಕಳೆದ ಆರೇಳು ವರ್ಷಗಳಿಂದ ಹಿಟ್ ಇಲ್ಲದೆ ಬಸವಳಿದಿದ್ದ ಶಾರುಖ್ ಖಾನ್​ಗೂ ಸಹ ಪಠಾಣ್ (Pathaan) ನಿರಾಳತೆ ಮೂಡಿಸಿರುವ ಜೊತೆಗೆ ಏಕಾಏಕಿ ಶಾರುಖ್ ಖಾನ್ ಅನ್ನು ಗ್ಲೋಬಲ್ ಸ್ಟಾರ್ ಅನ್ನಾಗಿಸಿದೆ. ಪಠಾಣ್ ಸೂಪರ್-ಡೂಪರ್ ಹಿಟ್ ಆಗಿರುವ ಬೆನ್ನಲ್ಲೆ ಅವರ ಮುಂದಿನ ಸಿನಿಮಾಗಳ ಬಗ್ಗೆ ಭಾರಿ ನಿರೀಕ್ಷೆಗಳು ಗರಿಗೆದರಿವೆ.

ಪಠಾಣ್ ಚಿತ್ರೀಕರಣ ನಡೆಯುತ್ತಿರುವಾಗಲೇ ಶಾರುಖ್ ಖಾನ್, ಆಕ್ಷನ್-ಮಾಸ್ ಎಂಟರ್ಟ್ರೈನ್​ಮೆಂಟ್ ಸಿನಿಮಾ ಒಂದನ್ನು ಒಪ್ಪಿಕೊಂಡಿದ್ದರು. ಅದುವೇ ಜವಾನ್. ತಮಿಳಿನ ಜನಪ್ರಿಯ ನಿರ್ದೇಶಕ ಅಟ್ಲಿ ನಿರ್ದೇಶಿಸುತ್ತಿರುವ ಈ ಸಿನಿಮಾದ ಬಿಡುಗಡೆ ದಿನಾಂಕವನ್ನು ಘೋಷಿಸಲಾಗಿದೆ. ಜೊತೆಗೆ ಸಿನಿಮಾದ ಪ್ರಚಾರ ಯಾವಾಗಿನಿಂದ ಪ್ರಾರಂಭವಾಗಲಿದೆ ಎಂಬುದನ್ನೂ ಸಹ ಘೋಷಣೆ ಮಾಡಲಾಗಿದೆ.

ಪಕ್ಕಾ ಆಕ್ಷನ್ ಸಿನಿಮಾ ಆಗಿರುವ ಜವಾನ್ ಜೂನ್ 2ರಂದು ವಿಶ್ವದಾದ್ಯಂತ ಬಿಡುಗಡೆ ಆಗಲಿದೆ. ಸಿನಿಮಾದ ಪ್ರಚಾರ ಕಾರ್ಯವನ್ನು ಮೇ ತಿಂಗಳ ಮೊದಲ ವಾರದಿಂದ ಶಾರುಖ್ ಖಾನ್ ಹಾಗೂ ತಂಡ ಪ್ರಾರಂಭಿಸಲಿದೆ. ಸಿನಿಮಾದ ಚಿತ್ರೀಕರಣ ಪೂರ್ಣಗೊಂಡಿದ್ದು ಪೋಸ್ಟ್ ಪ್ರೊಡಕ್ಷನ್ ಕಾರ್ಯಗಳು ಸಹ ಅಂತಿಮ ಹಂತದಲ್ಲಿವೆ. ಇವುಗಳು ಮುಗಿದ ಬಳಿಕ ಸಿನಿಮಾ ತಂಡವು ಪ್ರಚಾರಕ್ಕಾಗಿ ಹೊರಟುನಿಲ್ಲಲಿದೆ.

ಜವಾನ್ ಸಿನಿಮಾದಲ್ಲಿ ಶಾರುಖ್ ಖಾನ್ ಜೊತೆಗೆ ದಕ್ಷಿಣದ ಸ್ಟಾರ್ ನಟಿ ನಯನತಾರಾ ನಾಯಕಿಯಾಗಿ ನಟಿಸಿದ್ದಾರೆ. ಹಾಸ್ಯನಟ ಯೋಗಿ ಬಾಬು ಹಾಗೂ ಇನ್ನಿತರೆ ಕೆಲವು ತಮಿಳಿನ ನಟರು ಸಹ ಜವಾನ್ ಸಿನಿಮಾದಲ್ಲಿದ್ದಾರೆ. ಇವುಗಳೆಲ್ಲದರ ಜೊತೆಗೆ ತಮಿಳಿನ ಸ್ಟಾರ್ ನಟ ವಿಜಯ್ ಈ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ವಿಜಯ್ ಹಾಗೂ ಶಾರುಖ್ ಖಾನ್ ಒಟ್ಟಿಗೆ ದುಷ್ಟರ ವಿರುದ್ಧ ಫೈಟ್ ಮಾಡುವ ದೃಶ್ಯಗಳನ್ನು ಅಟ್ಲಿ ಸೆರೆಹಿಡಿದಿದ್ದಾರೆ.

ಜವಾನ್ ಸಿನಿಮಾದ ಚಿತ್ರೀಕರಣ ಮುಗಿಸಿರುವ ಶಾರುಖ್ ಖಾನ್ ಇದೀಗ ಡಂಕಿ ಹೆಸರಿನ ಸಿನಿಮಾದ ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದಾರೆ. ಡಂಕಿ ಸಿನಿಮಾವನ್ನು ಸೋಲೆ ಕಾಣದ ನಿರ್ದೇಶಕ ರಾಜ್​ಕುಮಾರ್ ಹಿರಾನಿ ನಿರ್ದೇಶನ ಮಾಡುತ್ತಿದ್ದಾರೆ. ವೀಸಾ, ಪಾಸ್​ಪೋರ್ಟ್​ಗಳಿಲ್ಲದೆ ಅಕ್ರಮವಾಗಿ ವಿದೇಶಕ್ಕೆ ವಲಸೆ ಹೋಗುವವರ ಕುರಿತಾದ ಕತೆಯುಳ್ಳ ಸಿನಿಮಾ ಇದಾಗಿದ್ದು ಸಿನಿಮಾದಲ್ಲಿ ಶಾರುಖ್ ಖಾನ್ ಜೊತೆಗೆ ತಾಪ್ಸಿ ಪನ್ನು ನಾಯಕಿಯಾಗಿ ನಟಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ