AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Shah Rukh Khan: ‘ಅವರು ನನ್ನ ಕೈ ಕತ್ತರಿಸುತ್ತಾರೆ ಎನ್ನುವ ಭಯ ಈಗಲೂ ಇದೆ‘; ಶಾರುಖ್ ಖಾನ್​ಗೆ ಇದೆ ಫೋಬಿಯಾ

ಶಾರುಖ್ ಖಾನ್ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೂ ಅವರಿಗೆ ಇರುವ ಫೋಬಿಯಾ ಕಡಿಮೆ ಆಗಿಲ್ಲ. ಈ ಬಗ್ಗೆ ಅವರು ಸಂದರ್ಶನದಲ್ಲಿ ಅವರು ಮಾತನಾಡಿದ್ದರು.

Shah Rukh Khan: ‘ಅವರು ನನ್ನ ಕೈ ಕತ್ತರಿಸುತ್ತಾರೆ ಎನ್ನುವ ಭಯ ಈಗಲೂ ಇದೆ‘; ಶಾರುಖ್ ಖಾನ್​ಗೆ ಇದೆ ಫೋಬಿಯಾ
ಶಾರುಖ್ ಖಾನ್
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Apr 23, 2023 | 6:30 AM

ಶಾರುಖ್ ಖಾನ್ ಅವರು ಬಾಲಿವುಡ್ ಚಿತ್ರರಂಗವನ್ನು ಆಳುತ್ತಿದ್ದಾರೆ. ಅವರ ನಟನೆಯ ‘ಪಠಾಣ್’ ಸಿನಿಮಾ (Pathaan Movie) ಇತ್ತೀಚೆಗೆ ರಿಲೀಸ್ ಆಗಿ ಗೆದ್ದು ಬೀಗಿದೆ. ನಾಲ್ಕು ವರ್ಷಗಳ ಬಳಿಕ ದೊಡ್ಡ ಪರದೆಗೆ ಮರಳಿದ ಅವರು ಸಾಕಷ್ಟು ಸದ್ದು ಮಾಡಿದ್ದಾರೆ. ಶಾರುಖ್ ಖಾನ್ (Shah Rukh Khan) ಜೀರೋದಿಂದ ಹೀರೋ ಆದವರು. ಮೊದಲ ಬಾರಿಗೆ ಮುಂಬೈಗೆ ಬಂದಾಗ ಅವರ ಬಳಿ ಮರಳಿ ಹೋಗಲು ಹಣ ಇರಲಿಲ್ಲ. ಈಗ ಅವರು ಸಾವಿರಾರು ಕೋಟಿ ರೂಪಾಯಿ ಒಡೆಯ. ಶಾರುಖ್ ಖಾನ್ ಇಷ್ಟು ದೊಡ್ಡ ಸ್ಟಾರ್ ಆದರೂ ಅವರಿಗೆ ಒಂದು ಭಯ ಈಗಲೂ ಕಾಡುತ್ತದೆ. ಆ ಫೋಬಿಯಾದಿಂದ ಹೊರ ಬರೋಕೆ ಅವರಿಗೆ ಸಾಧ್ಯವಾಗಲೇ ಇಲ್ಲ.

ಶಾರುಖ್ ಖಾನ್ ಅವರು ಚಿತ್ರರಂಗಕ್ಕೆ ಕಾಲಿಟ್ಟಿದ್ದು ಕಿರುತೆರೆ ಮೂಲಕ. ನಟಿಸಿದ ಮೊದಲ ಧಾರಾವಾಹಿ ‘ಫೌಜಿ’ ಅವರಿಗೆ ಸಾಕಷ್ಟು ಜನಪ್ರಿಯತೆ ತಂದುಕೊಟ್ಟಿತು. ನಂತರ ಹಲವು ಧಾರಾವಾಹಿಗಳಲ್ಲಿ ನಟಿಸಿದರು. 1992ರಲ್ಲಿ ಹಿರಿತೆರೆಗೆ ಕಾಲಿಟ್ಟರು. ಅಲ್ಲಿಂದ ಇಲ್ಲಿವರೆಗೆ ಶಾರುಖ್ ಖಾನ್ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೂ ಅವರಿಗೆ ಇರುವ ಫೋಬಿಯಾ ಕಡಿಮೆ ಆಗಿಲ್ಲ. ಈ ಬಗ್ಗೆ ಅವರು ಸಂದರ್ಶನದಲ್ಲಿ ಅವರು ಮಾತನಾಡಿದ್ದರು.

ಶಾರುಖ್ ಖಾನ್ ಅವರ ಐಕಾನಿಕ್ ಸ್ಟೈಲ್ ಒಂದಿದೆ. ಅಪ್ಪುಗೆ ನೀಡುವ ರೀತಿಯಲ್ಲಿ ಕೈ ಮೇಲೆತ್ತುತ್ತಾರೆ. ಅನೇಕ ಸಿನಿಮಾಗಳಲ್ಲಿ ಈ ಸ್ಟೈಲ್​ನ ಅವರು ಮಾಡಿದ್ದಾರೆ. ಆದರೆ, ಇದನ್ನು ಮಾಡೋಕೆ ಅವರಿಗೆ ಭಯ ಇದೆಯಂತೆ. ಅನುಪಮ್ ಖೇರ್ ಶೋನಲ್ಲಿ ಈ ಬಗ್ಗೆ ಶಾರುಖ್ ಮಾತನಾಡಿದ್ದರು.  ‘ನನಗೆ ಕತ್ತಲೆ ಬಗ್ಗೆ ಭಯ ಇಲ್ಲ. ಎತ್ತರದಲ್ಲಿ ನಿಂತರೆ, ಆಳ ನೋಡಿದರೆ ನನಗೆ ಭಯ ಆಗುವುದಿಲ್ಲ. ಆದರೆ, ಕೈ ಮೇಲೆತ್ತಿದಾಗ ಭಯ ಆಗುತ್ತದೆ. ಯಾರಾದರೂ ಅದನ್ನು ಕತ್ತರಿಸಿಬಿಟ್ಟರೆ ಅನಿಸುತ್ತದೆ. ಇದೊಂದು ವಿಚಿತ್ರ ಭಯ. ನನಗೆ ಈಗಲೂ ಅದು ಅತಿಯಾಗಿ ಕಾಡುತ್ತದೆ’ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ:ವಿಶ್ವದ 100 ಪ್ರಭಾವಿ ವ್ಯಕ್ತಿಗಳ ಸಾಲಿನಲ್ಲಿ ಸ್ಥಾನ ಪಡೆದ ಶಾರುಖ್ ಖಾನ್ ಹಾಗೂ ರಾಜಮೌಳಿ 

ಶಾರುಖ್ ಖಾನ್ ಅವರು ಸದ್ಯ ‘ಜವಾನ್​’ ಹಾಗೂ ‘ಡಂಕಿ’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ‘ಜವಾನ್’ ಸಿನಿಮಾಗೆ ಅಟ್ಲೀ ನಿರ್ದೇಶನ ಇದೆ. ಈ ಚಿತ್ರದಲ್ಲಿ ಅಲ್ಲು ಅರ್ಜುನ್ ಅವರು ಅತಿಥಿ ಪಾತ್ರ ಮಾಡಿದ್ದಾರೆ ಎನ್ನಲಾಗಿದೆ. ಈ ಚಿತ್ರಕ್ಕೆ ಭರದಿಂದ ಶೂಟಿಂಗ್ ನಡೆಯುತ್ತಿದೆ. ಈ ಚಿತ್ರಕ್ಕೆ ನಯನತಾರಾ ನಾಯಕಿ. ‘ಡಂಕಿ’ ಚಿತ್ರಕ್ಕೆ ರಾಜ್​ಕುಮಾರ್ ಹಿರಾನಿ ನಿರ್ದೇಶನ ಇದೆ. ಈ ಸಿನಿಮಾ ಕೂಡ ನಿರೀಕ್ಷೆ ಮೂಡಿಸಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಪದ್ಮ ಭೂಷಣ ಪ್ರಶಸ್ತಿ ಪಡೆಯಲು ಬಂದ ಬಾಲಯ್ಯ ಗತ್ತು ಹೇಗಿತ್ತು ನೋಡಿ..
ಪದ್ಮ ಭೂಷಣ ಪ್ರಶಸ್ತಿ ಪಡೆಯಲು ಬಂದ ಬಾಲಯ್ಯ ಗತ್ತು ಹೇಗಿತ್ತು ನೋಡಿ..
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಕೊಪ್ಪಳದ 96 ವರ್ಷದ ಭೀಮವ್ವ ಶಿಳ್ಳೆಕ್ಯಾತರ
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಕೊಪ್ಪಳದ 96 ವರ್ಷದ ಭೀಮವ್ವ ಶಿಳ್ಳೆಕ್ಯಾತರ
ಸ್ಪಿನ್ ಲೆಜೆಂಡ್ ಆರ್​. ಅಶ್ವಿನ್​ಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
ಸ್ಪಿನ್ ಲೆಜೆಂಡ್ ಆರ್​. ಅಶ್ವಿನ್​ಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
ಕಪ್ಪು ಬಾವುಟ ಪ್ರದರ್ಶಿಶಿದ ಮಹಿಳೆಯರ ವಿರುದ್ಧ ಕೇಸ್ ದಾಖಲಾಗಿದೆ: ಐಜಿಪಿ
ಕಪ್ಪು ಬಾವುಟ ಪ್ರದರ್ಶಿಶಿದ ಮಹಿಳೆಯರ ವಿರುದ್ಧ ಕೇಸ್ ದಾಖಲಾಗಿದೆ: ಐಜಿಪಿ
Pahalgam Attack: ಪ್ರವಾಸಿಗರೊಬ್ಬರ ಕ್ಯಾಮರಾದಲ್ಲಿ ದಾಳಿ ಭೀಕರ ದೃಶ್ಯ!
Pahalgam Attack: ಪ್ರವಾಸಿಗರೊಬ್ಬರ ಕ್ಯಾಮರಾದಲ್ಲಿ ದಾಳಿ ಭೀಕರ ದೃಶ್ಯ!
ಸಿಎಂ ವರ್ತನೆಯಿಂದ ಅಧಿಕಾರಿ ಮಾನಸಿಕ ಕ್ಷೋಭೆಗೊಳಗಾಗಿರುತ್ತಾರೆ: ಶೆಟ್ಟರ್
ಸಿಎಂ ವರ್ತನೆಯಿಂದ ಅಧಿಕಾರಿ ಮಾನಸಿಕ ಕ್ಷೋಭೆಗೊಳಗಾಗಿರುತ್ತಾರೆ: ಶೆಟ್ಟರ್
ಪ್ರಧಾನಿ ಹೇಳಿದಂತೆ ಪಾಕ್​ ಅನ್ನು ನುಗ್ಗಿ ವೈರಿಗಳನ್ನು ಸದೆಬಡಿಯಬೇಕು: ಅರುಣ್
ಪ್ರಧಾನಿ ಹೇಳಿದಂತೆ ಪಾಕ್​ ಅನ್ನು ನುಗ್ಗಿ ವೈರಿಗಳನ್ನು ಸದೆಬಡಿಯಬೇಕು: ಅರುಣ್
ಇದು ಮನವಿ ಅಲ್ಲ ಎಚ್ಚರಿಕೆ ಮತ್ತು ಕಾಂಗ್ರೆಸ್ ಪಕ್ಷದ ಪ್ರತಿಜ್ಞೆ ಎಂದ ಡಿಕೆಶಿ
ಇದು ಮನವಿ ಅಲ್ಲ ಎಚ್ಚರಿಕೆ ಮತ್ತು ಕಾಂಗ್ರೆಸ್ ಪಕ್ಷದ ಪ್ರತಿಜ್ಞೆ ಎಂದ ಡಿಕೆಶಿ
ಪ್ರವಾದಿ, ಬಸವಣ್ಣ ಬಗ್ಗೆ ಯತ್ನಾಳ್​ಗೇನು ಗೊತ್ತು: ಕಾಶಪ್ಪನವರ್, ಶಾಸಕ
ಪ್ರವಾದಿ, ಬಸವಣ್ಣ ಬಗ್ಗೆ ಯತ್ನಾಳ್​ಗೇನು ಗೊತ್ತು: ಕಾಶಪ್ಪನವರ್, ಶಾಸಕ
ಸಿಎಂ ಸಿದ್ದರಾಮಯ್ಯ ಪಾಕಿಸ್ತಾನಕ್ಕೆ ನಿಜವಾದ ರಾಯಭಾರಿ!: ಆರ್ ಅಶೋಕ್
ಸಿಎಂ ಸಿದ್ದರಾಮಯ್ಯ ಪಾಕಿಸ್ತಾನಕ್ಕೆ ನಿಜವಾದ ರಾಯಭಾರಿ!: ಆರ್ ಅಶೋಕ್