AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಕಿಸಿ ಕ ಭಾಯ್ ಕಿಸಿ ಕಿ ಜಾನ್​’ ಚಿತ್ರಕ್ಕೆ ಸಿಕ್ಕ ರೇಟಿಂಗ್ ಎಷ್ಟು? ಇಲ್ಲಿಯೂ ಸಲ್ಲುಗೆ ನಿರಾಸೆ

Kisi Ka Bhai Kisi Ki Jaan Rating: ಸ್ಟಾರ್ ನಟರ ಸಿನಿಮಾ ಎಂದಾಗ ನಿರೀಕ್ಷೆ ಜಾಸ್ತಿ ಇರುತ್ತದೆ. ಆ ನಿರೀಕ್ಷೆಗೆ ತಕ್ಕಂತೆ ಸಿನಿಮಾ ಇಲ್ಲದಿದ್ದರೆ ಪ್ರೇಕ್ಷಕರಿಗೆ ಬೇಸರ ಆಗುತ್ತದೆ. ಸಲ್ಲು ಫ್ಯಾನ್ಸ್​ಗೂ ಬೇಸರ ಆಗಿದೆ.

‘ಕಿಸಿ ಕ ಭಾಯ್ ಕಿಸಿ ಕಿ ಜಾನ್​’ ಚಿತ್ರಕ್ಕೆ ಸಿಕ್ಕ ರೇಟಿಂಗ್ ಎಷ್ಟು? ಇಲ್ಲಿಯೂ ಸಲ್ಲುಗೆ ನಿರಾಸೆ
ಪೂಜಾ-ಶಾರುಖ್
TV9 Web
| Updated By: ರಾಜೇಶ್ ದುಗ್ಗುಮನೆ|

Updated on:Apr 22, 2023 | 11:46 AM

Share

ಬಾಲಿವುಡ್​​ಗೆ 2022 ನಿರಾಶಾದಾಯಕವಾಗಿತ್ತು. ಆ ವರ್ಷ ಗೆದ್ದಿದ್ದು ಕೆಲವೇ ಕೆಲವು ಸಿನಿಮಾ ಮಾತ್ರ. ಆದರೆ, 2023ರ ಆರಂಭದಲ್ಲೇ ಶಾರುಖ್ ಖಾನ್ ನಟನೆಯ ‘ಪಠಾಣ್’ ಸಿನಿಮಾ (Pathaan Movie) ಗೆದ್ದು ಬೀಗಿತು. ಈ ಸಿನಿಮಾ ಸಾವಿರ ಕೋಟಿ ರೂಪಾಯಿ ಕಲೆಕ್ಷನ್ ಮಾಡಿತು. ಎಲ್ಲರೂ ಬಾಲಿವುಡ್ (Bollywood)​ ಚೇತರಿಕೆ ಕಂಡಿದೆ ಎಂದು ಹಿಗ್ಗಿದರು. ಆದರೆ, ಅದು ಸುಳ್ಳಾಗಿದೆ. ಆ ಸಿನಿಮಾ ಬಳಿಕ ಬಾಲಿವುಡ್​ನಲ್ಲಿ ಯಾವುದೇ ಚಿತ್ರ ಗೆದ್ದಿಲ್ಲ. ಸಲ್ಮಾನ್ ಖಾನ್ ನಟನೆಯ ‘ಕಿಸಿ ಕ ಭಾಯ್ ಕಿಸಿ ಕಿ ಜಾನ್’ ಸಿನಿಮಾ ಕೂಡ ಕಳಪೆ ಕಲೆಕ್ಷನ್ ಮಾಡಿದೆ. ಒಳ್ಳೆಯ ರೇಟಿಂಗ್ ಪಡೆಯುವಲ್ಲೂ ಸಿನಿಮಾ ಎಡವಿದೆ.

ಸ್ಟಾರ್ ನಟರ ಸಿನಿಮಾ ಎಂದಾಗ ನಿರೀಕ್ಷೆ ಜಾಸ್ತಿ ಇರುತ್ತದೆ. ಆ ನಿರೀಕ್ಷೆಗೆ ತಕ್ಕಂತೆ ಸಿನಿಮಾ ಇಲ್ಲದಿದ್ದರೆ ಪ್ರೇಕ್ಷಕರಿಗೆ ಬೇಸರ ಆಗುತ್ತದೆ. ಮೊದಲ ದಿನವೇ ಸಿನಿಮಾ ಹೇಗಿದೆ ಎನ್ನುವ ರಿಪೋರ್ಟ್ ಸಿಗುತ್ತದೆ. ವಿಮರ್ಶೆ ನೋಡಿ ಸಿನಿಮಾ ನೋಡಬೇಕೋ ಅಥವಾ ಬೇಡವೋ ಎನ್ನುವ ನಿರ್ಧಾರಕ್ಕೆ ಪ್ರೇಕ್ಷಕರು ಬರುತ್ತಾರೆ. ಸಿನಿಮಾ ಟಿಕೆಟ್ ಬುಕಿಂಗ್ ಆ್ಯಪ್ ‘ಬುಕ್ ಮೈ ಶೋ’ ಹಾಗೂ ಸಿನಿಮಾ ಬಗ್ಗೆ ಮಾಹಿತಿ ನೀಡಲು ಇರುವ ಐಎಂಡಿಬಿಯಲ್ಲಿ ಸಿಗೋ ರೇಟಿಂಗ್ ನೋಡಿ ಸಿನಿಮಾ ಮಂದಿರಕ್ಕೆ ಹೋಗುವ ಅನೇಕರಿದ್ದಾರೆ. ಎರಡೂ ಕಡೆಗಳಲ್ಲಿ ‘ಕಿಸಿ ಕ ಭಾಯ್ ಕಿಸಿ ಕಿ ಜಾನ್’ ಚಿತ್ರಕ್ಕೆ ಸಿಕ್ಕ ರೇಟಿಂಗ್ ನಿರಾಶಾದಾಯಕವಾಗಿದೆ.

ಐಎಂಡಿಬಿಯಲ್ಲಿ ‘ಕಿಸಿ ಕ ಭಾಯ್ ಕಿಸಿ ಕಿ ಜಾನ್’ ಚಿತ್ರಕ್ಕೆ ಕೇವಲ 10ಕ್ಕೆ 6.5 ರೇಟಿಂಗ್ ಸಿಕ್ಕಿದೆ. ಈ ಮೂಲಕ ಸಿನಿಮಾ ಸಾಧಾರಣ ಎನಿಸಿಕೊಂಡಿದೆ. ಬುಕ್ ಮೈ ಶೋನಲ್ಲಿ 7.1 ರೇಟಿಂಗ್ ಸಿಕ್ಕಿದೆ. ಸಿನಿಮಾದ ಗಳಿಕೆ ತಗ್ಗಲು ಈ ರೇಟಿಂಗ್ ಕೂಡ ಪ್ರಮುಖ ಕಾರಣ.

ಇದನ್ನೂ ಓದಿ:  ‘ವಯಸ್ಸಾದವರ ಮೇಲೆ ಸಲ್ಮಾನ್​ ಖಾನ್​ ಕೈ ಎತ್ತಲ್ಲ’: ಜಗಪತಿ ಬಾಬು

‘ಕಿಸಿ ಕ ಭಾಯ್ ಕಿಸಿ ಕಿ ಜಾನ್’ ಸಿನಿಮಾ 2014ರಲ್ಲಿ ರಿಲೀಸ್ ಆದ ತಮಿಳಿನ ‘ವೀರಂ’ ಚಿತ್ರದ ರಿಮೇಕ್. ಅಂದಿನ ಕಾಲಕ್ಕೆ ಈ ಚಿತ್ರದ ಕಥೆ ಪ್ರೇಕ್ಷಕರಿಗೆ ಇಷ್ಟ ಆಗಿತ್ತು. ಆದರೆ, ಇದೇ ಕಥೆಯನ್ನು ದಶಕದ ಬಳಿಕ ಹೇಳಿದಾಗ ಸಹಜವಾಗಿಯೇ ಪ್ರೇಕ್ಷಕರಿಗೆ ಕಥೆ ಹಳೆಯದು ಎನಿಸುತ್ತದೆ. ಒಟಿಟಿ ಹಾಗೂ ಯೂಟ್ಯೂಬ್​ನಲ್ಲಿ ಸಿನಿಮಾಗಳು ಲಭ್ಯ ಇರುವ ಈ ಕಾಲದಲ್ಲಿ ರಿಮೇಕ್ ತಂತ್ರದ ಮೊರೆ ಹೋದರೆ ಆ ಚಿತ್ರವನ್ನು ಪ್ರೇಕ್ಷಕರು ಕೈ ಹಿಡಿಯುವುದಿಲ್ಲ.

ಇದನ್ನೂ ಓದಿ: ಕುಗ್ಗಿತು ಸಲ್ಮಾನ್ ಖಾನ್ ಚಾರ್ಮ್​; ಕಳಪೆ ಕಲೆಕ್ಷನ್ ಮಾಡಿದ ‘ಕಿಸಿ ಕ ಭಾಯ್ ಕಿಸಿ ಕಿ ಜಾನ್’ ಸಿನಿಮಾ

‘ಕಿಸಿ ಕ ಭಾಯ್ ಕಿಸಿ ಕಿ ಜಾನ್’ ಸಿನಿಮಾ ಬಾಕ್ಸ್ ಆಫೀಸ್​ನಲ್ಲೂ ಕಳಪೆ ಕಲೆಕ್ಷನ್ ಮಾಡಿದೆ. ಮೊದಲ ದಿನ (ಏಪ್ರಿಲ್ 22) ಸಿನಿಮಾ 12.5 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಬಾಕ್ಸ್ ಆಫೀಸ್ ಓಟಕ್ಕೆ ಸಿನಿಮಾ ಬ್ರೇಕ್ ನೀಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 11:17 am, Sat, 22 April 23