ಮನೆ, ಆಸ್ತಿಗಳನ್ನೆಲ್ಲ ಮಾರಿ ಈಗ ಬಾಡಿಗೆ ಮನೆಯಲ್ಲಿದ್ದೇನೆ: ಹಿರಿಯ ನಟ ಶ್ರೀನಿವಾಸಮೂರ್ತಿ

Shrinivasa Murthy: ಹಲವು ದಶಕಗಳಿಂದ ಕನ್ನಡ ಚಿತ್ರರಂಗದಲ್ಲಿರುವ ಶ್ರೀನಿವಾಸ ಮೂರ್ತಿಯವರು, ಚಿತ್ರರಂಗದಿಂದ ತಾವು ಗಳಿಸಿದ ಆಸ್ತಿಯನ್ನು ಕಳೆದುಕೊಂಡು ಈಗ ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವ ಸಂಗತಿ ಬಿಚ್ಚಿಟ್ಟಿದ್ದಾರೆ.

ಮನೆ, ಆಸ್ತಿಗಳನ್ನೆಲ್ಲ ಮಾರಿ ಈಗ ಬಾಡಿಗೆ ಮನೆಯಲ್ಲಿದ್ದೇನೆ: ಹಿರಿಯ ನಟ ಶ್ರೀನಿವಾಸಮೂರ್ತಿ
ಶ್ರೀನಿವಾಸ ಮೂರ್ತಿ
Follow us
ಮಂಜುನಾಥ ಸಿ.
|

Updated on: May 04, 2023 | 11:10 PM

ಹಿರಿಯ ನಟ ಶ್ರೀನಿವಾಸಮೂರ್ತಿಯವರ (Shirinvasa Murthy) ಪರಿಚಯ ಇಲ್ಲದ ಕನ್ನಡ ಸಿನಿಮಾ ಪ್ರೇಮಿಗಳಿಲ್ಲ. ಹಲವು ದಶಕಗಳಿಂದಲೂ ಚಿತ್ರರಂಗದಲ್ಲಿರುವ ಶ್ರೀನಿವಾಸಮೂರ್ತಿಯವರು ಕನ್ನಡ ಚಿತ್ರರಂಗ ಕಂಡ ಅತ್ಯಂತ ಯಶಸ್ವಿ ಪೋಷಕ ನಟ. ಕವಿರತ್ನ ಕಾಳಿದಾಸ (Kavirathna Kalidasa) ಸಿನಿಮಾದ ಭೋಜರಾಜನ ಪಾತ್ರವನ್ನು ಸಿನಿಮಾ ಪ್ರೇಮಿಗಳು ಮರೆಯುವಂತಿಲ್ಲ. ಇದೀಗ ಶ್ರೀನಿವಾಸ ಮೂರ್ತಿಯವರು ಕನ್ನಡ ಚಿತ್ರರಂಗ ಪ್ರವೇಶಿಸಿ 50 ವರ್ಷಗಳಾಗಿದ್ದು ಈ ಸಂದರ್ಭ ಆಯೋಜಿಸಲಾಗಿರುವ ವಿಶೇಷ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಲು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ತಮ್ಮ ಸಿನಿಜೀವನದ ಬಗ್ಗೆ ಅವರು ಮಾತನಾಡಿದ್ದಾರೆ. ಈ ಸಂದರ್ಭ, ತಾವು ಗಳಿಸಿದ್ದ ಆಸ್ತಿಯನ್ನೆಲ್ಲ ಸಿನಿಮಾ ಕಾರಣಕ್ಕಾಗಿ ಕಳೆದುಕೊಂಡ ವಿಚಾರವನ್ನು ಯಾವುದೇ ಉದ್ವೇಗ, ಪಶ್ಚಾಪಗಳಿಲ್ಲದೆ ಹೇಳಿಕೊಂಡಿದ್ದಾರೆ.

”ನಾನು ಬೆಂಗಳೂರಿಗೆ ಬಂದಾಗ ನನ್ನ ಬಳಿ ಹಳೆ ಸೂಟ್​ಕೇಸ್​ನಲ್ಲಿ ಕೆಲವು ಜೊತೆ ಬಟ್ಟೆಗಳ ಹೊರತಾಗಿ ಇನ್ನೇನೂ ಇರಲಿಲ್ಲ. ಇಲ್ಲಿಗೆ ಬಂದು ಕೇವಲ ಕಲಾವಿದನಾಗಿ ಸಾಕಷ್ಟು ದುಡಿದಿದ್ದೆ ಗಳಿಸಿದ್ದೆ. ಕತ್ರಿಗುಪ್ಪೆಯಲ್ಲಿ ದೊಡ್ಡ ಮನೆಯೊಂದನ್ನು ಕಟ್ಟಿಸಿದ್ದೆ. ಎಂಪಿ ಪ್ರಕಾಶ್ ಅವರು ಸಚಿವರಾಗಿದ್ದಾಗ ನಮಗೆಲ್ಲ ಬಿಡಿಎ ಸೈಟ್​ಗಳನ್ನು ನೀಡಿದ್ದರೂ ನನಗೂ ದೊಡ್ಡ 50-80 ಸೈಟ್ ಒಂದು ನೀಡಿದ್ದರು. ಅದರಲ್ಲಿ ದೊಡ್ಡದಾದ ಮನೆ ಕಟ್ಟಿಸಿದ್ದೆ. ಅದರ ಜೊತೆಗೆ ಬೆಂಗಳೂರಿನ ಅಲ್ಲಲ್ಲಿ ಏಳು ಸೈಟ್​ಗಳನ್ನೂ ನಾನು ಖರೀದಿ ಮಾಡಿದ್ದೆ. ಕಲಾವಿದನಾಗಿ ದುಡಿದ ಹಣದಲ್ಲಿ ನಾನು ಅಷ್ಟೆಲ್ಲ ಸಂಪಾದನೆ ಮಾಡಿದ್ದೆ” ಎಂದು ನೆನಪು ಮಾಡಿಕೊಂಡಿದ್ದಾರೆ ಶ್ರೀನಿವಾಸ ಮೂರ್ತಿ.

”ಅಷ್ಟೂ ಆಸ್ತಿಯನ್ನು ಕನ್ನಡ ಚಿತ್ರರಂಗ ನನಗೆ ಕೊಟ್ಟ ಬಳುವಳಿ ಆಗಿತ್ತು. ಕಲಾವಿದನಾಗಿ ಅಲ್ಲದೆ ಇನ್ಯಾವುದೇ ಆದಾಯದಿಂದ ನಾನು ಅವನ್ನು ಖರೀದಿಸಿರಲಿಲ್ಲ. ಆದರೆ ಎಂಟು ಸಿನಿಮಾಗಳ ನಿರ್ಮಾಣ ಮಾಡಿ ಆ ದೊಡ್ಡ ಮನೆ, ಏಳು ಸೈಟು ಎಲ್ಲವನ್ನೂ ಮಾರಿಕೊಂಡೆ. ಈಗ ನಾನು ಬಾಡಿಗೆ ಮನೆಯಲ್ಲಿದ್ದೀನಿ” ಎಂದು ನಗುತ್ತಲೇ ಹೇಳಿಕೊಂಡರು ಶ್ರೀನಿವಾಸ ಮೂರ್ತಿ.

”ನಾನು ಆಸ್ತಿ ಮಾರಿಕೊಂಡೆ ಎಂಬ ದುಃಖ ಗುಲಗಂಜಿಯಷ್ಟೂ ನನಗೆ ಇಲ್ಲ. ಏಕೆಂದರೆ ಬೆಂಗಳೂರಿಗೆ ಬಂದಾಗ ನನ್ನ ಹತ್ತಿರ ಏನೂ ಇರಲಿಲ್ಲ. ಆದರೆ ಇಷ್ಟೆಲ್ಲವನ್ನೂ ಸಂಪಾದನೆ ಮಾಡುವ ಶಕ್ತಿಯನ್ನು ನನಗೆ ಚಿತ್ರರಂಗ, ಅಭಿಮಾನಿಗಳು ಮಾಡಿಕೊಟ್ಟರು. ಅದೇ ನನಗೆ ಹೆಮ್ಮೆ. ದೇವರು ಕೊಟ್ಟ, ಅದೇ ದೇವರು ಕಿತ್ತುಕೊಂಡ. ಆದರೆ ನಾವು ಮಾಡುವ ಕೆಲಸ ಮಾಡುತ್ತಲೇ ಇರುತ್ತೇವೆ. ಕೊಟ್ಟರೆ ಸಂತೋಶ, ಕೊಡದೇ ಇದ್ದರೂ ಸಂತೋಶ” ಎಂದರು ಶ್ರೀನಿವಾಸ ಮೂರ್ತಿ.

ಇದನ್ನೂ ಓದಿ:Anasuya Bharadwaj: ಆ್ಯಂಕರ್​ಗೆ ಆಂಟಿ ಎಂದ ಪುಂಡರು; ಹಿರಿಯ ನಟಿ ಕೊಟ್ಟರು ತಿರುಗೇಟು

ಈಗಿನ ಚಿಕ್ಕಬಳ್ಳಾಪುರದ ಜಡಲತಿಮ್ಮನಹಳ್ಳಿಯವರಾದ ಶ್ರೀನಿವಾಸ ಮೂರ್ತಿ 1973 ರಲ್ಲಿ ಚಿತ್ರರಂಗ ಪ್ರವೇಶ ಮಾಡಿದರು. ಸುಂದರ ವದನರಾಗಿದ್ದ ಮೂರ್ತಿಯವರಿಗೆ ಹಲವು 1980 ರ ಬಳಿಕ ಹಲವು ಸಿನಿಮಾ ಅವಕಾಶಗಳು ದೊರೆತವು. ದೊಡ್ಡ ದೊಡ್ಡ ನಟರೊಟ್ಟಿಗೆ ಶ್ರೀನಿವಾಸ ಮೂರ್ತಿ ನಟಿಸಿದರು. ನಾಯಕ ನಟರಾಗಿಯೂ ಕೆಲವು ಸಿನಿಮಾಗಳಲ್ಲಿ ಕಾಣಿಸಿಕೊಂಡರು. ಆ ಬಳಿಕ ಪೋಷಕ ಪಾತ್ರಗಳಲ್ಲಿ ಹೆಚ್ಚು ನಟಿಸಿದರು. ಬಳಿಕ ಗೆಳೆಯ ಜೈ ಜಗದೀಶ್ ಅವರೊಟ್ಟಿಗೆ ಸೇರಿ ಕೆಲವು ಸಿನಿಮಾಗಳ ನಿರ್ಮಾಣ ಮಾಡಿದರು. ಆದರೆ ಸಿನಿಮಾ ನಿರ್ಮಾಣ ಅವರ ಕೈ ಹಿಡಿಯಲಿಲ್ಲ. ಅವರ ನಿರ್ಮಾಣದ ಸಿನಿಮಾಗಳು ಒಂದರ ಹಿಂದೊಂದು ಹಳ್ಳ ಹಿಡಿದವು. ಇದೀಗ ಶ್ರೀನಿವಾಸ ಮೂರ್ತಿಯವರು ಚಿತ್ರರಂಗ ಪ್ರವೇಶಿಸಿ 50 ವರ್ಷಗಳಾಗಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ