Vicky Kaushal: ರೋಹಿತ್​ ಶೆಟ್ಟಿ ಕಾಪ್​ ಯೂನಿವರ್ಸ್​ನಲ್ಲಿ ವಿಕ್ಕಿ ಕೌಶಲ್​? ಬಾಲಿವುಡ್​ ಅಂಗಳದಲ್ಲಿ ಕೇಳಿಬರ್ತಿದೆ ಗಾಸಿಪ್​

Rohit Shetty Cop Universe: ಜೊತೆಯಾಗಿ ಒಂದು ಸಿನಿಮಾ ಮಾಡಬೇಕು ಎಂದು ರೋಹಿತ್​ ಶೆಟ್ಟಿ ಮತ್ತು ವಿಕ್ಕಿ ಕೌಶಲ್​ ಅವರು ಲಾಕ್​ಡೌನ್​ಗಿಂತಲೂ ಮುನ್ನವೇ ಪ್ಲ್ಯಾನ್​ ಮಾಡುತ್ತಿದ್ದರು. ಅದಕ್ಕೆ ಈಗ ಕಾಲ ಕೂಡಿಬಂದಿದೆ.

Vicky Kaushal: ರೋಹಿತ್​ ಶೆಟ್ಟಿ ಕಾಪ್​ ಯೂನಿವರ್ಸ್​ನಲ್ಲಿ ವಿಕ್ಕಿ ಕೌಶಲ್​? ಬಾಲಿವುಡ್​ ಅಂಗಳದಲ್ಲಿ ಕೇಳಿಬರ್ತಿದೆ ಗಾಸಿಪ್​
ವಿಕ್ಕಿ ಕೌಶಲ್, ರೋಹಿತ್ ಶೆಟ್ಟಿ
Follow us
ಮದನ್​ ಕುಮಾರ್​
|

Updated on: May 17, 2023 | 2:46 PM

ನಿರ್ದೇಶಕ ರೋಹಿತ್​ ಶೆಟ್ಟಿ (Rohit Shetty) ಅವರು ಮಾಸ್​ ಸಿನಿಮಾಗಳನ್ನು ಮಾಡುವಲ್ಲಿ ಸಖತ್​ ಫೇಮಸ್​. ಅವರು ಹಿಂದಿ ಚಿತ್ರರಂಗದಲ್ಲಿ ತಮ್ಮದೇ ಆದ ಕಾಪ್​ ಯೂನಿವರ್ಸ್​ (Cop Universe) ಸೃಷ್ಟಿ ಮಾಡಿದ್ದಾರೆ. ‘ಸಿಂಘಂ’ ಚಿತ್ರದಲ್ಲಿ ಅಜಯ್​ ದೇವಗನ್​, ‘ಸಿಂಬಾ’ ಸಿನಿಮಾದಲ್ಲಿ ರಣವೀರ್​ ಸಿಂಗ್​ ಹಾಗೂ ‘ಸೂರ್ಯವಂಶಿ’ ಸಿನಿಮಾದಲ್ಲಿ ಅಕ್ಷಯ್​ ಕುಮಾರ್ ಅವರು ಪೊಲೀಸ್​ ಪಾತ್ರಗಳನ್ನು ಮಾಡಿ ಜನರ ಗಮನ ಸೆಳೆದಿದ್ದಾರೆ. ಈಗ ಈ ಸಾಲಿಗೆ ಹೊಸ ಹೊಸ ಕಲಾವಿದರು ಸೇರ್ಪಡೆ ಆಗುತ್ತಿದ್ದಾರೆ. ಆ ಪೈಕಿ ನಟ ವಿಕ್ಕಿ ಕೌಶಲ್​ ಹೆಸರು ಮುಂಚೂಣಿಯಲ್ಲಿ ಕೇಳಿಬರುತ್ತಿದೆ. ರೋಹಿತ್​ ಶೆಟ್ಟಿ ಅವರ ಕಾಪ್​ ಯೂನಿವರ್ಸ್​ನಲ್ಲಿ ವಿಕ್ಕಿ ಕೌಶಲ್​ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ರೋಹಿತ್​ ಶೆಟ್ಟಿ ಅವರಾಗಲೀ, ವಿಕ್ಕಿ ಕೌಶಲ್​ (Vicky Kaushal) ಅವರಾಗಲೀ ಅಧಿಕೃತವಾಗಿ ಏನನ್ನೂ ಹೇಳಿಲ್ಲ. ಬೆಂಕಿ ಇಲ್ಲದೇ ಹೊಗೆ ಆಡುವುದಿಲ್ಲ ಎನ್ನುತ್ತಿದ್ದಾರೆ ಗಾಸಿಪ್​ ಮಂದಿ.

ಈ ಮೊದಲು ‘ಸರ್ಕಸ್‌’ ಸಿನಿಮಾದ ಪ್ರಚಾರದ ವೇಳೆ ದೀಪಿಕಾ ಪಡುಕೋಣೆ ಅವರು ಕಾಪ್​ ಯೂನಿವರ್ಸ್​ ಸೇರಿಕೊಳ್ಳುತ್ತಾರೆ ಎಂದು ರೋಹಿತ್ ಶೆಟ್ಟಿ ಅವರು ಖಚಿತಪಡಿಸಿದ್ದರು. ಈಗ ವಿಕ್ಕಿ ಕೌಶಲ್ ಮತ್ತು ರೋಹಿತ್ ಶೆಟ್ಟಿ ‘ಸಿಂಘಂ ಅಗೇನ್’ ಸಿನಿಮಾಗಾಗಿ ಮಾತುಕತೆ ನಡೆಸುತ್ತಿದ್ದಾರೆ ಎಂದು ‘ಬಾಲಿವುಡ್​ ಹಂಗಾಮಾ’ ವರದಿ ಮಾಡಿದೆ.

ಇದನ್ನೂ ಓದಿ: Vicky Kaushal: ಕತ್ರಿನಾ ಕೈಫ್​-ವಿಕ್ಕಿ ಕೌಶಲ್​ ವಿಚ್ಛೇದನದ ಬಗ್ಗೆ ನೇರ ಪ್ರಶ್ನೆ; ಎಲ್ಲರ ಎದುರು ನಟ ನೀಡಿದ ಉತ್ತರ ಏನು?

ವಿಕ್ಕಿ ಕೌಶಲ್​ ಅವರಿಗಾಗಿ ರೋಹಿತ್​ ಶೆಟ್ಟಿ ಅವರು ಒಂದು ಒಳ್ಳೆಯ ಪಾತ್ರವನ್ನು ಸೃಷ್ಟಿಸುತ್ತಿದ್ದಾರೆ. ಈ ಪಾತ್ರ ಈ ಹಿಂದಿನ ಅವರ ಸಿನಿಮಾಗಳಿಗಿಂತಲೂ ಸಂಪೂರ್ಣ ಭಿನ್ನವಾಗಿ ಇರಲಿದೆ. ವಿಕ್ಕಿ ಕೌಶಲ್​ ಅವರಲ್ಲಿ ಇರುವ ಹೀರೋಯಿಸಂ​ ಗುಣವನ್ನು ಈ ಸಿನಿಮಾದಲ್ಲಿ ತೋರಿಸಬೇಕು ಎಂದು ರೋಹಿತ್​ ಶೆಟ್ಟಿ ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: Katrina Kaif: ಕತ್ರಿನಾ-ವಿಕ್ಕಿ ಕೌಶಲ್​ ಮದುವೆಯ ರಾತ್ರಿ ನಡೆದಿತ್ತು ಜೋರು ಗಲಾಟೆ; ಕಾರಣ ವಿವರಿಸಿದ ನಟಿ

ಜೊತೆಯಾಗಿ ಒಂದು ಸಿನಿಮಾ ಮಾಡಬೇಕು ಎಂದು ರೋಹಿತ್​ ಶೆಟ್ಟಿ ಮತ್ತು ವಿಕ್ಕಿ ಕೌಶಲ್​ ಅವರು ಲಾಕ್​ಡೌನ್​ಗಿಂತಲೂ ಮುನ್ನವೇ ಪ್ಲ್ಯಾನ್​ ಮಾಡುತ್ತಿದ್ದರು. ಅಂತಿಮವಾಗಿ ಅದು ಈಗ ‘ಸಿಂಘಂ ಅಗೇನ್​’ ಚಿತ್ರದ ಮೂಲಕ ಸಾಧ್ಯವಾಗುತ್ತಿದೆ. ಸ್ಕ್ರಿಪ್ಟ್​ ಪೂರ್ಣಗೊಂಡ ಬಳಿಕ ಅವರಿಬ್ಬರು ಈ ಸಿನಿಮಾಗೆ ಸಹಿ ಮಾಡಲಿದ್ದಾರೆ ಎಂದು ವರದಿ ಆಗಿದೆ. ಈ ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಅಭಿಮಾನಿಗಳು ಕಾದಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ