Vicky Kaushal: ಕತ್ರಿನಾ ಕೈಫ್​-ವಿಕ್ಕಿ ಕೌಶಲ್​ ವಿಚ್ಛೇದನದ ಬಗ್ಗೆ ನೇರ ಪ್ರಶ್ನೆ; ಎಲ್ಲರ ಎದುರು ನಟ ನೀಡಿದ ಉತ್ತರ ಏನು?

Katrina Kaif: ಪತ್ರಕರ್ತರೊಬ್ಬರು ವಿಕ್ಕಿ ಕೌಶಲ್​ ಅವರಿಗೆ ಈ ರೀತಿ ನೇರವಾಗಿ ವಿಚ್ಚೇದನದ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಈ ಪ್ರಶ್ನೆಯಿಂದ ಅಲ್ಲಿದ್ದ ಎಲ್ಲರಿಗೂ ಅಚ್ಚರಿ ಆಗಿದೆ.

Vicky Kaushal: ಕತ್ರಿನಾ ಕೈಫ್​-ವಿಕ್ಕಿ ಕೌಶಲ್​ ವಿಚ್ಛೇದನದ ಬಗ್ಗೆ ನೇರ ಪ್ರಶ್ನೆ; ಎಲ್ಲರ ಎದುರು ನಟ ನೀಡಿದ ಉತ್ತರ ಏನು?
ವಿಕ್ಕಿ ಕೌಶಲ್, ಕತ್ರಿನಾ ಕೈಫ್
Follow us
ಮದನ್​ ಕುಮಾರ್​
|

Updated on: May 15, 2023 | 9:45 PM

ಬಾಲಿವುಡ್​ ಕಲಾವಿದರಾದ ವಿಕ್ಕಿ ಕೌಶಲ್​ ಮತ್ತು ಕತ್ರಿನಾ ಕೈಫ್​ (Katrina Kaif) ಅವರು 2021ರ ಡಿಸೆಂಬರ್​ 9ರಂದು ಹಸೆಮಣೆ ಏರಿದ್ದರು. ಈಗ ಅವರಿಬ್ಬರು ಹಾಯಾಗಿ ಸಂಸಾರ ಮಾಡಿಕೊಂಡಿದ್ದಾರೆ. ಅದರ ನಡುವೆಯೂ ಅವರಿಗೆ ವಿಚ್ಛೇದನದ (Divorce) ಬಗ್ಗೆ ಪ್ರಶ್ನೆ ಎದುರಾಗಿದೆ. ಈ ಪ್ರಶ್ನೆಗೆ ಕೇಳಿ ವಿಕ್ಕಿ ಕೌಶಲ್​ ಅವರಿಗೆ ಗಾಬರಿ ಆಗಿದೆ. ಎಲ್ಲರ ಎದುರಲ್ಲಿ ಅವರು ಉತ್ತರ ನೀಡಿದ್ದಾರೆ. ಅಷ್ಟಕ್ಕೂ ಇಂಥ ಘಟನೆ ನಡೆಯಲು ಕಾರಣ ಏನು? ಅದಕ್ಕೆ ಉತ್ತರ ಇಲ್ಲಿದೆ. ವಿಕ್ಕಿ ಕೌಶಲ್​ ಅವರು ನಟಿಸಿದ ಹೊಸ ಸಿನಿಮಾ ‘ಜರಾ ಹಟ್ಕೆ ಜರಾ ಬಚ್ಕೆ’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಈ ಸಿನಿಮಾದಲ್ಲಿ ಮದುವೆ, ಡಿವೋರ್ಸ್​, ಮರು ಮದುವೆ ಮುಂತಾದ ವಿಷಯಗಳಿಗೆ ಸಂಬಂಧಿಸಿದ ಕಥೆ ಇದೆ. ಹಾಗಾಗಿ ಪತ್ರಕರ್ತರೊಬ್ಬರು ವಿಕ್ಕಿ ಕೌಶಲ್​ (Vicky Kaushal) ಅವರಿಗೆ ಈ ರೀತಿ ನೇರವಾಗಿ ವಿಚ್ಚೇದನದ ಬಗ್ಗೆ ಪ್ರಶ್ನೆ ಮಾಡಿದ್ದಾರೆ.

ವಿಕ್ಕಿ ಕೌಶಲ್​ಗೆ ಎದುರಾದ ಪ್ರಶ್ನೆ ಏನು?

‘ನಮ್ಮ ದೇಶದಲ್ಲಿ ಮದುವೆಗೆ ಹಲವು ಜನ್ಮಗಳ ಸಂಬಂಧ ಇರುತ್ತದೆ ಎಂದು ಹೇಳುತ್ತಾರೆ. ಒಂದು ವೇಳೆ ನಿಮಗೆ ಕತ್ರಿನಾ ಕೈಫ್​ಗಿಂತ ಉತ್ತಮವಾಗಿರುವ ಬೇರೆ ಹುಡುಗಿ ಸಿಕ್ಕರೆ ಮರು ಮದುವೆ ಆಗುತ್ತೀರಾ? ಕತ್ರಿನಾ ಕೈಫ್​ಗೆ ಡಿವೋರ್ಸ್​ ನೀಡುತ್ತೀರಾ?’ ಎಂದು ಕೇಳಲಾಯಿತು. ಈ ಪ್ರಶ್ನೆಯಿಂದ ಅಲ್ಲಿದ್ದ ಎಲ್ಲರಿಗೂ ಅಚ್ಚರಿ ಆಯಿತು.

ಇದನ್ನೂ ಓದಿ: ಫ್ಯಾಮಿಲಿ ಪ್ಲಾನಿಂಗ್ ಬಗ್ಗೆ ಆಲೋಚಿಸಿದ ಕತ್ರಿನಾ-ವಿಕ್ಕಿ ಕೌಶಲ್; ಶೀಘ್ರದಲ್ಲೇ ತಾಯಿ ಆಗಲಿದ್ದಾರೆ ಕ್ಯಾಟ್?

ಇದನ್ನೂ ಓದಿ
Image
Katrina Kaif: ‘ಫಸ್ಟ್​ ನೈಟ್​ ಆಗಬೇಕಂತಲೇ ಏನಿಲ್ಲ, ಫಸ್ಟ್​ ಡೇ ಕೂಡ ಆಗಬಹುದು’; ಕತ್ರಿನಾ ಕೈಫ್​ ಬೋಲ್ಡ್​ ಮಾತು 
Image
ವಿಕ್ಕಿ ಕೌಶಲ್​-ಕತ್ರಿನಾ ಕೈಫ್​ಗೆ ಬೆದರಿಕೆವೊಡ್ಡಿದ್ದು ಕೂಡ ಓರ್ವ ನಟ; ಬಯಲಾಯ್ತು ಶಾಕಿಂಗ್ ವಿಚಾರ
Image
ಪೊಲೀಸರ ಮಿಂಚಿನ ಕಾರ್ಯಾಚರಣೆ; ಕತ್ರಿನಾ ಕೈಫ್​-ವಿಕ್ಕಿ ಕೌಶಲ್​ಗೆ ಬೆದರಿಕೆ ಒಡ್ಡಿದ್ದ ವ್ಯಕ್ತಿ ಅರೆಸ್ಟ್
Image
ಮಾಲ್ಡೀವ್ಸ್​​ನಲ್ಲಿ ಕತ್ರಿನಾ ಕೈಫ್ ಬರ್ತ್​ಡೇ ಸೆಲೆಬ್ರೇಷನ್; ಇಲ್ಲಿದೆ ಕ್ಯೂಟ್ ಫೋಟೋಸ್

ಡಿವೋರ್ಸ್ ಕುರಿತ ಪ್ರಶ್ನೆಗೆ ವಿಕ್ಕಿ ಕೌಶಲ್​ ಉತ್ತರ:

‘ನೀವು ಈಗ ಏನು ಕೇಳಿದ್ದೀರಿ? ನಾನು ಮನೆಗೆ ಹೋಗಬೇಕು. ನೀವು ಎಂತಹ ಕಷ್ಟ ಪ್ರಶ್ನೆಗಳನ್ನು ಕೇಳುತ್ತಿದ್ದೀರಿ. ಈ ವಿಷಯದಲ್ಲಿ ನಾನು ಇನ್ನೂ ಮಗು. ಈ ಅಪಾಯಕಾರಿ ಪ್ರಶ್ನೆಗೆ ನಾನು ಹೇಗೆ ಉತ್ತರಿಸಲಿ’ ಎಂದು ಹೇಳುವ ಮೂಲಕ ವಿಕ್ಕಿ ಕೌಶಲ್​ ಅವರು ನಗು ಚೆಲ್ಲಿದ್ದಾರೆ. ಅಲ್ಲದೇ ಮುಂದಿನ ಜನ್ಮದಲ್ಲೂ ಕತ್ರಿನಾ ಕೈಫ್​ ಅವರನ್ನು ಬಿಡುವುದಿಲ್ಲ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: Katrina Kaif: ಹೊಸ ವರ್ಷ ಸ್ವಾಗತಿಸಲು ವೆಕೇಶನ್​ಗೆ ಹಾರಿದ ವಿಕ್ಕಿ ಕೌಶಲ್​-ಕತ್ರಿನಾ ಕೈಫ್ ದಂಪತಿ

‘ಜರಾ ಹಟ್ಕೆ ಜರಾ ಬಚ್ಕೆ’ ಸಿನಿಮಾದಲ್ಲಿ ವಿಕ್ಕಿ ಕೌಶಲ್​ಗೆ ಜೋಡಿಯಾಗಿ ಸಾರಾ ಅಲಿ ಖಾನ್​ ನಟಿಸಿದ್ದಾರೆ. ಈ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿ ಎಲ್ಲರ ಗಮನ ಸೆಳೆಯುತ್ತಿದೆ. ಇದಲ್ಲದೇ ಇನ್ನೂ ಹಲವು ಪ್ರಾಜೆಕ್ಟ್​ಗಳಲ್ಲಿ ವಿಕ್ಕಿ ಕೌಶಲ್​ ಅವರು ಬ್ಯುಸಿ ಆಗಿದ್ದಾರೆ. ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್