Sudipto Sen: ‘ದಿ ಕೇರಳ ಸ್ಟೋರಿ 2’ ಮಾಡಲು ನಿರ್ದೇಶಕರಿಗೆ ಆಫರ್; ಇದರಲ್ಲಿ ತೋರಿಸಲಿರುವ ವಿಷಯ ಏನು?
The Kerala Story 2: ‘ದಿ ಕೇರಳ ಸ್ಟೋರಿ’ ಸಿನಿಮಾಗೆ ನಿರ್ದೇಶನ ಮಾಡಿದ ಬಳಿಕ ಸುದೀಪ್ತೋ ಸೇನ್ ಅವರ ಜನಪ್ರಿಯತೆ ಹೆಚ್ಚಾಗಿದೆ. ಇತ್ತೀಚೆಗೆ ಅವರು ಚಲಿಸುತ್ತಿದ್ದ ವಾಹನ ಅಪಘಾತಕ್ಕೆ ಒಳಗಾದ ಬಗ್ಗೆ ವರದಿ ಆಗಿತ್ತು.
ದೇಶಾದ್ಯಂತ ಚರ್ಚೆ ಹುಟ್ಟುಹಾಕಿರುವ ‘ದಿ ಕೇರಳ ಸ್ಟೋರಿ’ (The Kerala Story) ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ನೂರಾರು ಕೋಟಿ ರೂಪಾಯಿ ಗಳಿಸಿ ಮುನ್ನುತ್ತಿದೆ. ಚಿತ್ರಮಂದಿರಗಳಲ್ಲಿ ಹೌಸ್ಫುಲ್ ಪ್ರದರ್ಶನ ಕಾಣುತ್ತಿದೆ. ಅಷ್ಟರಲ್ಲಾಗಲೇ ಈ ಸಿನಿಮಾದ ಸೀಕ್ವೆಲ್ ಬಗ್ಗೆ ಸುದ್ದಿ ಕೇಳಿಬಂದಿದೆ. ಅದಾ ಶರ್ಮಾ (Adah Sharma) ನಟನೆಯ ‘ದಿ ಕೇರಳ ಸ್ಟೋರಿ’ ಚಿತ್ರದಲ್ಲಿ ಕೇವಲ ಮಹಿಳೆಯರ ಬ್ರೇನ್ವಾಶ್ ಬಗ್ಗೆ ತೋರಿಸಲಾಗಿದೆ. ಆದರೆ ಹುಡುಗರ ಬ್ರೇನ್ವಾಶ್ ಬಗ್ಗೆ ಯಾಕೆ ತೋರಿಸಿಲ್ಲ ಎಂದು ಅನೇಕರು ಪ್ರಶ್ನೆ ಎತ್ತಿದ್ದಾರೆ. ನಿರ್ದೇಶಕ ಸುದೀಪ್ತೋ ಸೇನ್ (Sudipto Sen) ಅವರನ್ನು ಈ ಕುರಿತು ಕೆಲವರು ಪ್ರಶ್ನಿಸಿದ್ದಾರಂತೆ. ಹುಡುಗರನ್ನು ಬ್ರೇನ್ವಾಶ್ ಮಾಡಿದ್ದರ ಕುರಿತು ಸೀಕ್ವೆಲ್ ಮಾಡುವಂತೆ ಅವರಿಗೆ ಆಫರ್ ನೀಡಲಾಗಿದೆ. ಹಾಗಾಗಿ ‘ದಿ ಕೇರಳ ಸ್ಟೋರಿ 2’ ಬಗ್ಗೆ ನಿರೀಕ್ಷೆ ಸೃಷ್ಟಿ ಆಗಿದೆ.
‘ದಿ ಕೇರಳ ಸ್ಟೋರಿ’ ಸಿನಿಮಾಗೆ ನಿರ್ದೇಶನ ಮಾಡಿದ ಬಳಿಕ ಸುದೀಪ್ತೋ ಸೇನ್ ಅವರ ಜನಪ್ರಿಯತೆ ಹೆಚ್ಚಾಗಿದೆ. ಇತ್ತೀಚೆಗೆ ಅವರು ಚಲಿಸುತ್ತಿದ್ದ ವಾಹನ ಅಪಘಾತಕ್ಕೆ ಒಳಗಾದ ಬಗ್ಗೆ ವರದಿ ಆಗಿತ್ತು. ಆ ಸುದ್ದಿ ಕೇಳಿ ಅಭಿಮಾನಿಗಳಿಗೆ ಶಾಕ್ ಆಯಿತು. ಆದರೆ ನಟಿ ಅದಾ ಶರ್ಮಾ ಮತ್ತು ನಿರ್ದೇಶಕ ಸುದೀಪ್ತೋ ಸೇನ್ ಅವರಿಗೆ ಯಾವುದೇ ಗಂಭೀರ ಗಾಯ ಆಗಿಲ್ಲ ಎಂದು ತಿಳಿದುಬಂದಿದೆ.
ಇದನ್ನು ಓದಿ: The Kerala Story: ‘ದಿ ಕೇರಳ ಸ್ಟೋರಿ’ ಕಲೆಕ್ಷನ್ನಲ್ಲಿ ದಿಢೀರ್ ಏರಿಕೆ; 113 ಕೋಟಿ ರೂಪಾಯಿ ತಲುಪಿದ ಒಟ್ಟು ಗಳಿಕೆ
‘ದಿ ಕೇರಳ ಸ್ಟೋರಿ’ ಚಿತ್ರದ ಬಗ್ಗೆ ಕೊಲ್ಲೂರಿನಲ್ಲಿ ಪ್ರಚಾರ
ಅನೇಕ ಕಾರಣಗಳಿಂದಾಗಿ ‘ದಿ ಕೇರಳ ಸ್ಟೋರಿ’ ಸಿನಿಮಾ ವಿವಾದ ಸೃಷ್ಟಿ ಮಾಡಿದೆ. ಹಿಂದೂಪರ ಸಂಘಟನೆಗಳು ಈ ಚಿತ್ರಕ್ಕೆ ಬೆಂಬಲ ಸೂಚಿಸಿವೆ. ಆದರೆ ಇದೊಂದು ಪ್ರೊಪೊಗಾಂಡ ಸಿನಿಮಾ ಎಂದು ಅನೇಕರು ಟೀಕಿಸಿದ್ದಾರೆ. ಗಲ್ಲಾಪೆಟ್ಟಿಗೆಯಲ್ಲಿ ಈ ಸಿನಿಮಾ ನೂರಾರು ಕೋಟಿ ರೂಪಾಯಿ ಗಳಿಸಿದೆ. ‘ದಿ ಕೇರಳ ಸ್ಟೋರಿ’ ಚಿತ್ರದ ಬಗ್ಗೆ ಕೊಲ್ಲೂರಿನಲ್ಲಿ ಪ್ರಚಾರ ಮಾಡಲಾಗುತ್ತಿದೆ. ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಆವರಣದಲ್ಲಿ ಈ ಚಿತ್ರಕ್ಕೆ ಸಂಬಂಧಿಸಿದ ಬ್ಯಾನರ್ ಇರಿಸಲಾಗಿದೆ. ಇಂಗ್ಲಿಷ್ ಮತ್ತು ಮಲಯಾಳಂ ಭಾಷೆಯಲ್ಲಿ ಬರೆದಿರುವ ಬ್ಯಾನರ್ಗಳನ್ನು ಇರಿಸಲಾಗಿದ್ದು, ಕೊಲ್ಲೂರಿಗೆ ಬರುವ ಪ್ರವಾಸಿಗರ ಗಮನ ಸೆಳೆಯಲಾಗುತ್ತಿದೆ. ಸೋಶಿಯಲ್ ಮೀಡಿಯಾದಲ್ಲೂ ಈ ಬ್ಯಾನರ್ಗಳು ವೈರಲ್ ಆಗಿವೆ.
ಇದನ್ನು ಓದಿ: The Kerala Story: ವಿದೇಶದಲ್ಲೂ ‘ದಿ ಕೇರಳ ಸ್ಟೋರಿ’ ಸಿನಿಮಾ ಬಿಡುಗಡೆ; ಆಸ್ಟ್ರೇಲಿಯಾದಲ್ಲಿ ಭರ್ಜರಿ ಓಪನಿಂಗ್
‘ದಿ ಕೇರಳ ಸ್ಟೋರಿ’ ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಬಂಗಾರದ ಬೆಳೆ ತೆಗೆದಿದೆ. ಈ ಸಿನಿಮಾದ ಬಾಕ್ಸ್ ಆಫೀಸ್ ಬೇಟೆ ಮುಂದುವರಿದಿದೆ. ಸತತ 11 ದಿನಗಳ ಕಾಲ ಈ ಚಿತ್ರ ಯಶಸ್ವಿ ಪ್ರದರ್ಶನ ಕಂಡಿದೆ. ಇಂದಿಗೂ ಕೂಡ ಹಲವು ಕಡೆಗಳಲ್ಲಿ ಹೌಸ್ಫುಲ್ ಆಗುತ್ತಿದೆ. ಅದರ ಪರಿಣಾಮವಾಗಿ ಚಿತ್ರಕ್ಕೆ ಉತ್ತಮ ಕಮಾಯಿ ಆಗಿದೆ. ಅಚ್ಚರಿ ಎಂದರೆ 2ನೇ ಭಾನುವಾರ ಈ ಸಿನಿಮಾಗೆ ಅತಿ ಹೆಚ್ಚು ಹಣ ಹರಿದುಬಂದಿದೆ. ಮೇ 14ರಂದು ಬರೋಬ್ಬರಿ 23 ಕೋಟಿ ರೂಪಾಯಿ ಗಳಿಸಿದೆ. ಅಲ್ಲಿಗೆ ಚಿತ್ರದ ಒಟ್ಟು ಕಲೆಕ್ಷನ್ 136.74 ಕೋಟಿ ರೂಪಾಯಿ ತಲುಪಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.