The Kerala Story Review: ಐಸಿಸ್ ಸಂಚಿನ ಕುರಿತು ಎಚ್ಚರಿಕೆ ಸಂದೇಶ ಸಾರುವ ‘ದಿ ಕೇರಳ ಸ್ಟೋರಿ’

The Kerala Story: ಅದಾ ಶರ್ಮಾ ಅವರ ನಟನೆಗೆ ‘ದಿ ಕೇರಳ ಸ್ಟೋರಿ’ ಸಿನಿಮಾದಲ್ಲಿ ಹೆಚ್ಚು ಸ್ಕೋಪ್​ ಸಿಕ್ಕಿದೆ. ಪ್ರೇಕ್ಷಕರಿಗೆ ಅವರ ಅಭಿನಯ ಇಷ್ಟವಾಗುತ್ತದೆ.

The Kerala Story Review: ಐಸಿಸ್ ಸಂಚಿನ ಕುರಿತು ಎಚ್ಚರಿಕೆ ಸಂದೇಶ ಸಾರುವ ‘ದಿ ಕೇರಳ ಸ್ಟೋರಿ’
ದಿ ಕೇರಳ ಸ್ಟೋರಿ
Follow us
ಮದನ್​ ಕುಮಾರ್​
|

Updated on: May 05, 2023 | 3:12 PM

ಚಿತ್ರ: ದಿ ಕೇರಳ ಸ್ಟೋರಿ

ನಿರ್ಮಾಣ: ವಿಪುಲ್​ ಅಮೃತ್​ ಲಾಲ್​ ಶಾ

ನಿರ್ದೇಶನ: ಸುದೀಪ್ತೋ ಸೇನ್​

ಇದನ್ನೂ ಓದಿ
Image
Triple Riding Movie Review: ‘ತ್ರಿಬಲ್​ ರೈಡಿಂಗ್​’ ರೇಸ್​ನಲ್ಲಿ ಓವರ್​ಟೇಕ್​ ಮಾಡಿದ ಸಾಧುಕೋಕಿಲ, ರಂಗಾಯಣ ರಘು
Image
Shubhamangala: ‘ಶುಭಮಂಗಳ’ ಸಿನಿಮಾ ವಿಮರ್ಶೆ; ಇದು ಆರು ಪ್ರೇಮಕಥೆಗಳ ಸುಂದರ ಸಂಕಲನ
Image
Kantara Review: ಹಲವು ಸಂಘರ್ಷಗಳ ‘ಕಾಂತಾರ’; ರಿಷಬ್​ ಶೆಟ್ಟಿಯ ಹೊಸ ಅವತಾರ
Image
Guru Shishyaru Review: ರೋಚಕ ಖೊಖೊ ಪಂದ್ಯದ ಜೊತೆ ಹಿತ-ಮಿತವಾದ ಕಾಮಿಡಿ

ಪಾತ್ರವರ್ಗ: ಅದಾ ಶರ್ಮಾ, ಸೋನಿಯಾ ಬಲಾನಿ, ಯೋಗಿತಾ ಬಿಹಾನಿ, ಸಿದ್ಧಿ ಇದ್ನಾನಿ, ವಿಜಯ್​ ಕೃಷ್ಣ ಮುಂತಾದವರು.

ಸ್ಟಾರ್​: 3/5

ಸುದೀಪ್ತೋ ಸೇನ್​ ನಿರ್ದೇಶನದ ‘ದಿ ಕೇರಳ ಸ್ಟೋರಿ’ ಸಿನಿಮಾ ಬಿಡುಗಡೆಗೂ ಮುನ್ನ ಭಾರಿ ವಿವಾದ ಸೃಷ್ಟಿಸಿತ್ತು. ಐಸಿಸ್​ ಉಗ್ರ ಸಂಘಟನೆಗಳ ಜೊತೆ ನಂಟು ಹೊಂದಿರುವವರು ಕೇರಳದಲ್ಲಿ ನಡೆಸಿದ ಮತಾಂತರವನ್ನು ಕೇಂದ್ರವಾಗಿಟ್ಟುಕೊಂಡು ಈ ಸಿನಿಮಾ ಸಿದ್ಧವಾಗಿದೆ ಎಂಬುದನ್ನು ಟ್ರೇಲರ್​ನಲ್ಲಿ ತೋರಿಸಲಾಗಿತ್ತು. ಇಡೀ ಸಿನಿಮಾ ಕೂಡ ಅದೇ ವಸ್ತು ವಿಷಯಕ್ಕೆ ಸೀಮಿತವಾಗಿದೆ. ಆ ಘಟನೆ ಹೇಗೆ ನಡೆಯಿತು ಎಂಬುದನ್ನು ಎಳೆಎಳೆಯಾಗಿ ವಿವರಿಸಲಾಗಿದೆ. ನಟಿ ಅದಾ ಶರ್ಮಾ ಅವರು ಮುಖ್ಯಭೂಮಿಕೆ ನಿಭಾಯಿಸಿದ್ದು, ಅತ್ಯುತ್ತಮವಾಗಿ ನಟಿಸಿದ್ದಾರೆ. ತಾಂತ್ರಿಕವಾಗಿಯೂ ಈ ಚಿತ್ರ ಉತ್ತಮವಾಗಿದೆ. ಒಟ್ಟಾರೆ ‘ದಿ ಕೇರಳ ಸ್ಟೋರಿ’ ಸಿನಿಮಾ ಹೇಗಿದೆ ತಿಳಿಯಲು ಈ ವಿಮರ್ಶೆ ಓದಿ..

ಧರ್ಮ ಮತ್ತು ದೇವರ ಹೆಸರಲ್ಲಿ ಭಯೋತ್ಪಾದನೆ ನಡೆಯುವುದು ಮುಚ್ಚುಮರೆಯಾಗಿ ಉಳಿದಿಲ್ಲ. ಆ ವಿಚಾರವೇ ‘ದಿ ಕೇರಳ ಸ್ಟೋರಿ’ ಸಿನಿಮಾದ ಮುಖ್ಯ ಕಥಾವಸ್ತು. ಕೇರಳದಲ್ಲಿ ನಡೆದಿದೆ ಎನ್ನಲಾದ ಕೆಲವು ನೈಜ ಘಟನೆಗಳನ್ನು ಆಧಾರವಾಗಿ ಇಟ್ಟುಕೊಂಡು ಈ ಸಿನಿಮಾವನ್ನು ಕಟ್ಟಿಕೊಡಲಾಗಿದೆ. ಕಾರಣಾಂತರಗಳಿಂದ ನೈಜ ಪಾತ್ರಗಳ ಹೆಸರನ್ನು ಬದಲಾಯಿಸಲಾಗಿದೆ. ಶಾಲಿನಿ ಉನ್ನಿಕೃಷ್ಣನ್​ ಎಂಬ ಯುವತಿ ಹೇಗೆ ಭಯೋತ್ಪಾದನೆಯ ಸುಳಿಯಲ್ಲಿ ಸಿಕ್ಕಿಕೊಳ್ಳುತ್ತಾಳೆ? ನಂತರದಲ್ಲಿ ಆಕೆ ಅನುಭವಿಸುವ ಕಷ್ಟಗಳೇನು? ಅಂತಿಮವಾಗಿ ಆಕೆ ಆ ನರಕದಿಂದ ಹೊರಬರುಲು ಸಾಧ್ಯವಾಗುತ್ತದೆಯೋ ಇಲ್ಲವೋ ಎಂಬ ವಿಷಯಗಳನ್ನು ‘ದಿ ಕೇರಳ ಸ್ಟೋರಿ’ ಸಿನಿಮಾ ವಿವರಿಸುತ್ತದೆ.

ಇದನ್ನೂ ಓದಿ: Adah Sharma: ‘ಮೊದಲು ಸಿನಿಮಾ ನೋಡಿ, ಆಮೇಲೆ ಮಾತಾಡಿ’: ‘ದಿ ಕೇರಳ ಸ್ಟೋರಿ’ ವಿವಾದಕ್ಕೆ ಅದಾ ಶರ್ಮಾ ಪ್ರತಿಕ್ರಿಯೆ

ಶಾಲಿನಿ ಉನ್ನಿಕೃಷ್ಣನ್​ ಪಾತ್ರದಲ್ಲಿ ಅದಾ ಶರ್ಮಾ ನಟಿಸಿದ್ದಾರೆ. ಶಾಲಿನಿ ಓರ್ವ ನರ್ಸಿಂಗ್​ ವಿದ್ಯಾರ್ಥಿನಿ. ತನ್ನದೇ ಕಾಲೇಜ್​ನಲ್ಲಿ ಓದುತ್ತಿರುವ ಓರ್ವ ಮುಸ್ಲಿಂ ಸ್ನೇಹಿತೆಗೆ ಐಸಿಸ್​ ಸಂಘಟನೆಯ ಜೊತೆ ನಂಟು ಇದೆ ಎಂಬ ವಿಚಾರ ಶಾಲಿನಿಗೆ ತಿಳಿಯುವುದಿಲ್ಲ. ಹಂತಹಂತವಾಗಿ ಆಕೆ ಇಸ್ಲಾಂ ವಿಚಾರಧಾರೆಯ ಕಡೆಗೆ ಆಕರ್ಷಿತಳಾಗುತ್ತಾಳೆ. ಆರಂಭದಲ್ಲಿ ಒಳ್ಳೆಯದನ್ನು ತೋರಿಸಿ, ಕೊನೆಯಲ್ಲಿ ಕರಾಳತೆಯ ದರ್ಶನ ಮಾಡಿಸುವ ಜಾಲದಲ್ಲಿ ಶಾಲಿನಿ ಸಿಕ್ಕಿಕೊಳ್ಳುತ್ತಾಳೆ. ಕಡೆಗೆ ಆಕೆ ಫಾತಿಮಾ ಆಗಿ ಬದಲಾಗುತ್ತಾಳೆ.

ಲವ್​ ಜಿಹಾದ್​ನಿಂದ ಮೋಸಕ್ಕೆ ಒಳಗಾದ ಶಾಲಿನಿ ಅನಿವಾರ್ಯವಾಗಿ ಸಿರಿಯಾಗೆ ಹೋಗಬೇಕಾಗುತ್ತದೆ. ಅಲ್ಲಿ ಆಕೆ ಏನೆಲ್ಲ ಚಿತ್ರಹಿಂಸೆ ಅನುಭವಿಸುತ್ತಾಳೆ ಎಂಬುದನ್ನು ಭಯಾನಕವಾಗಿ ತೋರಿಸಲಾಗಿದೆ. ಒಟ್ಟಾರೆಯಾಗಿ ಇದೊಂದು ಎಚ್ಚರಿಕೆ ಸಂದೇಶದ ರೀತಿಯಲ್ಲಿ ಮೂಡಿಬಂದ ಸಿನಿಮಾವಾಗಿದೆ. ಕಣ್ಮುಚ್ಚಿಕೊಂಡು ಯಾವುದೇ ಸಿದ್ಧಾಂತಗಳಿಗೆ ಮರುಳಾಗುವುದಕ್ಕೂ ಮುನ್ನ ವಿವೇಚನೆ ಇರಬೇಕು ಎಂಬುದನ್ನು ತಿಳಿಸುವ ಪ್ರಯತ್ನ ಈ ಚಿತ್ರದಲ್ಲಾಗಿದೆ.

ಇದನ್ನೂ ಓದಿ: The Kerala Story Review: ವಿವಾದ ಎಬ್ಬಿಸಿದ ‘ದಿ ಕೇರಳ ಸ್ಟೋರಿ’ ಸಿನಿಮಾದ ಮೊದಲಾರ್ಧದಲ್ಲಿ ಏನಿದೆ? ಇಲ್ಲಿದೆ ರಿಪೋರ್ಟ್​

ಆರಂಭದಲ್ಲಿ ತುಂಬ ಸಹಜವಾಗಿ ಮೂಡಿಬಂದ ನಿರೂಪಣೆಯು ದ್ವಿತೀಯಾರ್ದದಲ್ಲಿ ಮೆಲೋಡ್ರಾಮಾ ಶೈಲಿಗೆ ತಿರುಗಿಕೊಂಡಿದೆ. ಹಿನ್ನೆಲೆ ಸಂಗೀತದ ಮೂಲಕ ಭಾವತೀವ್ರತೆಯನ್ನು ಹೆಚ್ಚಿಸುವ ಕೆಲಸ ಆಗಿದೆ. ಅಂದಹಾಗೆ, ಇದು ‘ಎ’ ಪ್ರಮಾಣಪತ್ರ ಪಡೆದ ಸಿನಿಮಾ. ಕೊಲೆ, ಹಿಂಸಾಚಾರ, ಅತ್ಯಾಚಾರ, ಬೈಗುಳಗಳು ಹೇರಳವಾಗಿವೆ.

ಅದಾ ಶರ್ಮಾ ಅವರ ನಟನೆಗೆ ‘ದಿ ಕೇರಳ ಸ್ಟೋರಿ’ ಸಿನಿಮಾದಲ್ಲಿ ಹೆಚ್ಚು ಸ್ಕೋಪ್​ ಸಿಕ್ಕಿದೆ. ಅಜ್ಜಿ ಮತ್ತು ಅಮ್ಮನ ಅಗಾಧ ಪ್ರೀತಿಯ ನೆರಳಲ್ಲಿ ಬೆಳೆದ ಕೇರಳದ ಮುಗ್ಧ ಹುಡುಗಿಯಾಗಿ ಅವರು ಕ್ಯೂಟ್​ ಎನಿಸುತ್ತಾರೆ. ಐಸಿಸ್​ ಉಗ್ರರ ಕೈಯಲ್ಲಿ ಸಿಕ್ಕು ನಲುಗುವಾಗ ನೋಡುಗರ ಕಣ್ಣುಗಳನ್ನು ಒದ್ದೆಯಾಗಿಸುವ ರೀತಿಯಲ್ಲಿ ಅವರು ಅಭಿನಯಿಸಿದ್ದಾರೆ. ಈ ರೀತಿಯ ಭಿನ್ನ ಶೇಡ್​ಗಳನ್ನು ಅವರು ಯಶಸ್ವಿಯಾಗಿ ನಿಭಾಯಿಸಿದ್ದಾರೆ. ಅವರ ಜೊತೆ ಪ್ರಣಯ್​, ಪ್ರಣವ್​ ಮಿಶ್ರಾ, ವಿಜಯ್​ ಕೃಷ್ಣ, ಸೋನಿಯಾ ಬಲಾನಿ, ಯೋಗಿತಾ ಬಿಹಾನಿ, ಸಿದ್ಧಿ ಇದ್ನಾನಿ ಮುಂತಾದವರ ನಟನೆ ಕೂಡ ಮೆಚ್ಚುವಂತಿದೆ.

ಇದನ್ನೂ ಓದಿ: The Kerala Story: ‘ದಿ ಕೇರಳ ಸ್ಟೋರಿ’ ಚಿತ್ರದಲ್ಲಿನ ಮಾಹಿತಿ ನಿಜ ಅಂತ ಸಾಬೀತು ಮಾಡಿದ್ರೆ 1 ಕೋಟಿ ರೂ. ಬಹುಮಾನ

ಧರ್ಮ, ದೇವರು, ಮತಾಂತರ ಮುಂತಾದ ವಿಷಯಗಳನ್ನು ಇಟ್ಟುಕೊಂಡು ಸಿನಿಮಾ ಮಾಡಿದಾಗ ಒಂದು ವರ್ಗದ ಪ್ರೇಕ್ಷಕರಲ್ಲಿ ಸಹಜವಾಗಿಯೇ ಉನ್ಮಾದ ನಿರ್ಮಾಣ ಆಗುತ್ತದೆ. ಇಂಥ ಸಿನಿಮಾಗಳ ಪ್ರಭಾವ ಕೂಡ ಹೆಚ್ಚಾಗಿಯೇ ಇರುವುದರಿಂದ ನಿರ್ದೇಶಕರಿಗೆ ಇರಬೇಕಾದ ಜವಾಬ್ದಾರಿ ಕೂಡ ದೊಡ್ಡದು. ಅದನ್ನು ನಿಭಾಯಿಸುವಲ್ಲಿ ‘ದಿ ಕೇರಳ ಸ್ಟೋರಿ’ ನಿರ್ದೇಶಕರು ಇನ್ನಷ್ಟು ಎಚ್ಚರಿಕೆ ವಹಿಸುವ ಅಗತ್ಯವಿತ್ತೇನೋ ಎನಿಸುತ್ತದೆ. ಒಂದು ಘಟನೆಯಿಂದಾಗಿ ನಮ್ಮ ಸುತ್ತಮುತ್ತಲಿನ ಎಲ್ಲರನ್ನೂ ಕೆಟ್ಟ ದೃಷ್ಟಿಯಲ್ಲಿ ನೋಡುವ ವಾತಾವರಣ ನಿರ್ಮಾಣ ಆಗಬಾರದು. ದೂರದ ಸಿರಿಯಾದಲ್ಲಿ ಕುಳಿತ ಐಸಿಸ್​ನವರು ಮಾಡಿದ ಸಂಚಿನಿಂದಾಗಿ ಭಾರತೀಯ ಪ್ರಜೆಗಳಾದ ನಮ್ಮ-ನಮ್ಮಲ್ಲೇ ಹುಟ್ಟಿಕೊಂಡ ದ್ವೇಷದ ವಾತಾವರಣವನ್ನು ಇನ್ನಷ್ಟು ಹೆಚ್ಚಿಸುವ ಬದಲು ಸರಿಯಾದ ರೀತಿಯಲ್ಲಿ ಇಂಥ ಸವಾಲುಗಳನ್ನು ಎದುರಿಸುವುದು ಹೇಗೆ ಎಂಬ ಯಾವುದೇ ಒಳನೋಟ ಕೂಡ ‘ದಿ ಕೇರಳ ಸ್ಟೋರಿ’ಯಲ್ಲಿ ಸಿಗುವುದಿಲ್ಲ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಜರ್ಮನಿಯಲ್ಲೇ ನ್ಯೂಸ್​9 ಜಾಗತಿಕ ಶೃಂಗಸಭೆ ನಡೆಯುತ್ತಿರುವುದೇಕೆ?
ಜರ್ಮನಿಯಲ್ಲೇ ನ್ಯೂಸ್​9 ಜಾಗತಿಕ ಶೃಂಗಸಭೆ ನಡೆಯುತ್ತಿರುವುದೇಕೆ?
ಜರ್ಮನಿಯಲ್ಲಿ ನ್ಯೂಸ್​9 ಗ್ಲೋಬಲ್ ಶೃಂಗಸಭೆಗೆ ಚಾಲನೆ
ಜರ್ಮನಿಯಲ್ಲಿ ನ್ಯೂಸ್​9 ಗ್ಲೋಬಲ್ ಶೃಂಗಸಭೆಗೆ ಚಾಲನೆ
ಟಿವಿ9 ಕನ್ನಡದ ಸಹೋದರ ಸಂಸ್ಥೆ ನ್ಯೂಸ್ 9ನ ಗ್ಲೋಬಲ್ ಸಮ್ಮಿಟ್ ನೇರಪ್ರಸಾರ
ಟಿವಿ9 ಕನ್ನಡದ ಸಹೋದರ ಸಂಸ್ಥೆ ನ್ಯೂಸ್ 9ನ ಗ್ಲೋಬಲ್ ಸಮ್ಮಿಟ್ ನೇರಪ್ರಸಾರ
ಕೇರಳದಲ್ಲಿ ವೇಗವಾಗಿ ಬಂದ ಕಾರಿಗೆ ಡಿಕ್ಕಿ ಹೊಡೆದು ಬಸ್​ನ ಚಕ್ರವೇ ಛಿದ್ರ!
ಕೇರಳದಲ್ಲಿ ವೇಗವಾಗಿ ಬಂದ ಕಾರಿಗೆ ಡಿಕ್ಕಿ ಹೊಡೆದು ಬಸ್​ನ ಚಕ್ರವೇ ಛಿದ್ರ!
ಬಿಪಿಎಲ್ ಕಾರ್ಡುಗಳ ಶುದ್ಧೀಕರಣ ಅಗಲೇಬೇಕಿದೆ ಎಂದ ಪ್ರಲ್ಹಾದ ಜೋಶಿ
ಬಿಪಿಎಲ್ ಕಾರ್ಡುಗಳ ಶುದ್ಧೀಕರಣ ಅಗಲೇಬೇಕಿದೆ ಎಂದ ಪ್ರಲ್ಹಾದ ಜೋಶಿ
ರೈತರ ಸಾಲ ಮಾಡುತ್ತೇನೆಂದಿದ್ದ ಆರ್ ಅಶೋಕ ಮಾಡಿದರೆ? ಸಿದ್ದರಾಮಯ್ಯ
ರೈತರ ಸಾಲ ಮಾಡುತ್ತೇನೆಂದಿದ್ದ ಆರ್ ಅಶೋಕ ಮಾಡಿದರೆ? ಸಿದ್ದರಾಮಯ್ಯ
ತಾಕತ್ ಇದ್ರೆ ತಡೆಯಿರಿ ನೋಡೋಣ: ಚೈತ್ರಾ ಕುಂದಾಪುರ ಸವಾಲು
ತಾಕತ್ ಇದ್ರೆ ತಡೆಯಿರಿ ನೋಡೋಣ: ಚೈತ್ರಾ ಕುಂದಾಪುರ ಸವಾಲು
ಬಿಪಿಎಲ್ ಕಾರ್ಡ್; ಬಿಜೆಪಿ ನಾಯಕರು ಮೊದಲು ಕೇಂದ್ರವನ್ನು ಪ್ರಶ್ನಿಸಲಿ: ಸಚಿವ
ಬಿಪಿಎಲ್ ಕಾರ್ಡ್; ಬಿಜೆಪಿ ನಾಯಕರು ಮೊದಲು ಕೇಂದ್ರವನ್ನು ಪ್ರಶ್ನಿಸಲಿ: ಸಚಿವ
‘ದರ್ಶನ್​ಗೆ ಬೇಲ್ ಕೊಡಬಾರದು, ಸುಪ್ರೀಂ ಕೋರ್ಟ್​ಗೆ ಹಾಕ್ತೀವಿ’: ಪರಮೇಶ್ವರ್
‘ದರ್ಶನ್​ಗೆ ಬೇಲ್ ಕೊಡಬಾರದು, ಸುಪ್ರೀಂ ಕೋರ್ಟ್​ಗೆ ಹಾಕ್ತೀವಿ’: ಪರಮೇಶ್ವರ್
ವಕ್ಫ್ ಹೋರಾಟ ಪ್ರಧಾನಿ ಮೋದಿ ಆರಂಭಿಸಿದ ಕೇಂದ್ರದ ಯೋಜನೆ: ವಿಜಯೇಂದ್ರ
ವಕ್ಫ್ ಹೋರಾಟ ಪ್ರಧಾನಿ ಮೋದಿ ಆರಂಭಿಸಿದ ಕೇಂದ್ರದ ಯೋಜನೆ: ವಿಜಯೇಂದ್ರ