Shubhamangala: ‘ಶುಭಮಂಗಳ’ ಸಿನಿಮಾ ವಿಮರ್ಶೆ; ಇದು ಆರು ಪ್ರೇಮಕಥೆಗಳ ಸುಂದರ ಸಂಕಲನ

Shubhamangala Movie Review: ಸಿನಿಮಾ ಮುಗಿಯುವ ವೇಳೆಗೆ ಪ್ರೇಕ್ಷಕರು ಭಾವುಕತೆಯ ಮಳೆಯಲ್ಲಿ ಮಿಂದೆದ್ದ ಅನುಭವ ಪಡೆಯುತ್ತಾರೆ. ನಗು, ಅಳು, ಆತಂಕ, ಕಾತರ ಮುಂತಾದ ಭಾವಗಳನ್ನು ಮನಮುಟ್ಟುವಂತೆ ಕಟ್ಟಿಕೊಡಲಾಗಿದೆ.

Shubhamangala: ‘ಶುಭಮಂಗಳ’ ಸಿನಿಮಾ ವಿಮರ್ಶೆ; ಇದು ಆರು ಪ್ರೇಮಕಥೆಗಳ ಸುಂದರ ಸಂಕಲನ
‘ಶುಭಮಂಗಳ’ ಸಿನಿಮಾ
Follow us
| Updated By: ರಾಜೇಶ್ ದುಗ್ಗುಮನೆ

Updated on:Oct 15, 2022 | 8:25 AM

ಚಿತ್ರ: ಶುಭಮಂಗಳ

ನಿರ್ಮಾಣ: ಅವ್ಯಕ್ತ ಫಿಲ್ಮ್ಸ್​

ನಿರ್ದೇಶನ: ಸಂತೋಷ್​ ಗೋಪಾಲ್​​

ಇದನ್ನೂ ಓದಿ
Image
Kantara Review: ಹಲವು ಸಂಘರ್ಷಗಳ ‘ಕಾಂತಾರ’; ರಿಷಬ್​ ಶೆಟ್ಟಿಯ ಹೊಸ ಅವತಾರ
Image
Guru Shishyaru Review: ರೋಚಕ ಖೊಖೊ ಪಂದ್ಯದ ಜೊತೆ ಹಿತ-ಮಿತವಾದ ಕಾಮಿಡಿ
Image
Lucky Man Review: ದೇವರಾಗಿ ಬಂದು ನಗಿಸುವ ಅಪ್ಪು; ಭಾವುಕವಾಗಿ ಕಣ್ಣೀರು ಹಾಕುವ ಅಭಿಮಾನಿ
Image
Dollu Movie Review: ಜನಪದ ಕಲೆಗಳ ಅಳಿವು-ಉಳಿವಿಗೆ ಕನ್ನಡಿ ಹಿಡಿದ ‘ಡೊಳ್ಳು’ ಸಿನಿಮಾ

ಪಾತ್ರವರ್ಗ: ಸಿದ್ದಾರ್ಥ್​ ಮಾಧ್ಯಮಿಕ, ಹಿತಾ ಚಂದ್ರಶೇಖರ್​, ಮೇಘನಾ ಗಾಂವ್ಕರ್​, ರಾಕೇಶ್​ ಮಯ್ಯ ಮುಂತಾದವರು.

ಸ್ಟಾರ್​: 3.5/5

ದೊಡ್ಡ ಬಜೆಟ್​ನ ಪ್ಯಾನ್​ ಇಂಡಿಯಾ ಸಿನಿಮಾಗಳೇ ಹೆಚ್ಚು ಸದ್ದು ಮಾಡುತ್ತಿರುವ ಈ ಕಾಲದಲ್ಲಿ ಸಿಂಪಲ್​ ಆದರೂ ಸುಂದರವಾದಂತಹ ‘ಶುಭಮಂಗಳ’ ಸಿನಿಮಾ ವಿಶೇಷವಾಗಿ ಗುರುತಿಸಿಕೊಳ್ಳುತ್ತದೆ. ಈ ಸಿನಿಮಾದಲ್ಲಿ ಬಜೆಟ್​ಗಿಂತಲೂ ಭಾವನೆಗೆ ಹೆಚ್ಚು ಒತ್ತು ನೀಡಲಾಗಿದೆ. ರಿಲೀಸ್​ ವಿಚಾರದಲ್ಲಿ ಇದು ಪ್ಯಾನ್​ ಇಂಡಿಯಾ ಅಲ್ಲದಿರಬಹುದು. ಆದರೆ ಕಥಾವಸ್ತುವಿನ ಕಾರಣಕ್ಕೆ ಎಲ್ಲ ಪ್ರದೇಶಕ್ಕೂ ಸಲ್ಲುವಂತಹ ಸಿನಿಮಾ ಇದಾಗಿದೆ. ಹೊಸ ನಿರ್ದೇಶಕ ಸಂತೋಷ್​ ಗೋಪಾಲ್​ ಅವರು ತುಂಬ ಅಚ್ಚುಕಟ್ಟಾಗಿ ‘ಶುಭಮಂಗಳ’ ಸಿನಿಮಾವನ್ನು ತೆರೆಗೆ ತಂದಿದ್ದಾರೆ. ಪ್ರತಿ ದೃಶ್ಯದಲ್ಲಿಯೂ ಅವರು ತಮ್ಮ ಕಸುಬುದಾರಿಕೆಯನ್ನು ತೋರಿಸಿದ್ದಾರೆ. ಅವರ ಶ್ರಮಕ್ಕೆ ಎಲ್ಲ ಕಲಾವಿದರೂ ಅತ್ಯುತ್ತಮವಾಗಿ ಸಾಥ್​ ನೀಡಿದ್ದಾರೆ.

ಪ್ರೀತಿ ಚಿಗುರಲು ಯಾವುದೇ ವಯಸ್ಸಿನ ಹಂಗಿಲ್ಲ. ಯಾವ ಘಳಿಗೆಯಲ್ಲೂ ಅನುರಾಗ ಅರಳಬಹುದು. ಮನಸ್ಸು ಯಾವ ಪರಿಸ್ಥಿತಿಯಲ್ಲೂ ಹೊಸ ಸಂಗಾತಿಯ ಸೆಳೆತಕ್ಕೆ ಸಿಕ್ಕಬಹುದು. ಅಂತಹ 6 ಜೋಡಿಗಳ ಕಥೆಯನ್ನು ‘ಶುಭಮಂಗಳ’ ಸಿನಿಮಾದಲ್ಲಿ ತೋರಿಸಲಾಗಿದೆ. ಒಂದು ಮದುವೆ ಮನೆಯ ಹಿನ್ನೆಲೆಯಲ್ಲಿ, ಕೆಲವೇ ಗಂಟೆಗಳ ಕಾಲ ನಡೆಯುವ ಸನ್ನಿವೇಶಗಳ ಮೂಲಕ 6 ಪ್ರೇಮಕಥೆಯನ್ನು ಕಣ್ಣಿಗೆ ಕಟ್ಟುವಂತೆ ಬಿತ್ತರಿಸಿರುವುದು ಈ ಸಿನಿಮಾದ ಪ್ರಮುಖ ಆಕರ್ಷಣೆ.

‘ಶುಭಮಂಗಳ’ ಸಿನಿಮಾದ ನಿರೂಪಣೆ ಸ್ವಲ್ಪ ನಿಧಾನಗತಿಯಲ್ಲಿ ಸಾಗುತ್ತದೆ. ಅದರಿಂದ ಆರಂಭದಲ್ಲಿ ಪ್ರೇಕ್ಷಕರ ತಾಳ್ಮೆ ಪರೀಕ್ಷೆ ಮಾಡಿದಂತೆ ಅನಿಸುತ್ತದೆ. ಆದರೆ ಮಧ್ಯಂತರದ ಬಳಿಕ ವೇಗ ಹೆಚ್ಚುತ್ತದೆ. ಪ್ರೀ-ಕ್ಲೈಮ್ಯಾಕ್ಸ್​ ವೇಳೆಗೆ ತೀವ್ರತೆ ಇನ್ನೂ ಜಾಸ್ತಿ ಆಗುತ್ತದೆ. ಸಿನಿಮಾ ಮುಗಿಯುವ ವೇಳೆಗೆ ಪ್ರೇಕ್ಷಕರು ಭಾವುಕತೆಯ ಮಳೆಯಲ್ಲಿ ಮಿಂದೆದ್ದ ಅನುಭವ ಪಡೆಯುತ್ತಾರೆ. ನಗು, ಅಳು, ಆತಂಕ, ಕಾತರ ಮುಂತಾದ ಭಾವಗಳನ್ನು ಮನಮುಟ್ಟುವಂತೆ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕರು.

ಸಿನಿಮಾದ ಪ್ರತಿ ವಿಭಾಗವೂ ಸರಿಯಾದ ಹದದಲ್ಲಿದೆ. ರಾಕೇಶ್​ ಬಿ. ರಾಜ್​ ಅವರ ಛಾಯಾಗ್ರಹಣ ಅಚ್ಚುಕಟ್ಟಾಗಿದೆ. ಜೂಡಾ ಸ್ಯಾಂಡಿ ಅವರ ಸಂಗೀತದಲ್ಲಿ ಮೂಡಿಬಂದ ಹಾಡುಗಳು ಚಿತ್ರದ ಅಂದ ಹೆಚ್ಚಿಸಿವೆ. ಹಿನ್ನೆಲೆ ಸಂಗೀತದಲ್ಲಿ ಅವರು ಹೆಚ್ಚು ಅಂಕ ಗಿಟ್ಟಿಸಿದ್ದಾರೆ. ಭಾವುಕ ಸನ್ನಿವೇಶಗಳನ್ನು ಅವರು ಬೇರೊಂದು ಹಂತಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಚುರುಕಾದ ಸಂಭಾಷಣೆಗಳಿಂದ ಎಲ್ಲ ದೃಶ್ಯಗಳಲ್ಲೂ ಲವಲವಿಕೆ ತುಂಬಿದೆ.

‘ಶುಭ ಮಂಗಳ’ ಚಿತ್ರದಲ್ಲಿ ಹಲವು ಪಾತ್ರಗಳಿವೆ. ಅವುಗಳಲ್ಲಿ ಬಹುತೇಕ ಎಲ್ಲ ಪಾತ್ರಗಳಿಗೂ ಸಮಾನವಾಗಿ ಪ್ರಾಮುಖ್ಯತೆಯನ್ನು ನೀಡುತ್ತ, ಕಥೆಯನ್ನು ನಿರೂಪಿಸಲಾಗಿದೆ. ಗೊಂದಲಕ್ಕೆ ಬಿದ್ದ ಪ್ರೇಮಿಯ ಪಾತ್ರದಲ್ಲಿ ಸಿದ್ದಾರ್ಥ್​ ಮಾಧ್ಯಮಿಕ ಹೆಚ್ಚು ಗಮನ ಸೆಳೆಯುತ್ತಾರೆ. ಕೊನೇ ಕ್ಷಣದಲ್ಲಿ ತನ್ನ ಪ್ರೀತಿಯನ್ನು ದಕ್ಕಿಸಿಕೊಳ್ಳಲು ಬರುವ ಯುವತಿಯ ಪಾತ್ರದಲ್ಲಿ ಮೇಘನಾ ಸಹಜಾಭಿನಯ ನೀಡಿದ್ದಾರೆ. ಕ್ಲೈಮ್ಯಾಕ್ಸ್​ನಲ್ಲಿ ಹಿತಾ ಚಂದ್ರಶೇಖರ್​ ಅವರು ಪ್ರೇಕ್ಷಕರ ಚಪ್ಪಾಳೆ ಗಿಟ್ಟಿಸುತ್ತಾರೆ. ರಾಕೇಶ್​ ಮಯ್ಯ, ದೀಪ್ತಿ ನಾಗೇಂದ್ರ, ಬಿಂದೂ, ಗೋಪಾಲಕೃಷ್ಣ ದೇಶಪಾಂಡೆ, ಬಾಬು ಹಿರಣ್ಣಯ್ಯ ಸೇರಿದಂತೆ ಎಲ್ಲ ಕಲಾವಿದರು ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ.

ಒಟ್ಟಾರೆ ಈ ಸಿನಿಮಾ ಒಂದು ಎಮೋಷನಲ್​ ಪಯಣದಂತಿದೆ. ಮೊದಲ ಪ್ರೇಮವನ್ನು ಇದು ನೆನಪಿಸುತ್ತದೆ. ಫಲಿಸದ ಪ್ರೀತಿಯನ್ನು ಜ್ಞಾಪಿಸಿಕೊಂಡು ಮರುಗುವಂತೆ ಮಾಡುತ್ತದೆ. ಸಿಕ್ಕಿರುವ ಪ್ರೀತಿಯನ್ನು ಕಾಪಾಡಿಕೊಳ್ಳಬೇಕು ಎಂಬ ಪಾಠ ಕಲಿಸುತ್ತದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 8:24 am, Sat, 15 October 22

ತಾಜಾ ಸುದ್ದಿ
ಆಷಾಢ ಮಾಸದ ವಿಶೇಷ ರಾಶಿ ಭವಿಷ್ಯ 2024: ಯಾವ ರಾಶಿಗೆ ಏನು ಫಲ? ಇಲ್ಲಿದೆ ವಿವರ
ಆಷಾಢ ಮಾಸದ ವಿಶೇಷ ರಾಶಿ ಭವಿಷ್ಯ 2024: ಯಾವ ರಾಶಿಗೆ ಏನು ಫಲ? ಇಲ್ಲಿದೆ ವಿವರ
ಈ ರಾಶಿಯವರು ಮೇಲಿದ ಬಿದ್ದು ಕಾಲು ನೋವು ಮಾಡಿಕೊಳ್ಳುವ ಸಂಭವವಿದೆ, ಎಚ್ಚರ
ಈ ರಾಶಿಯವರು ಮೇಲಿದ ಬಿದ್ದು ಕಾಲು ನೋವು ಮಾಡಿಕೊಳ್ಳುವ ಸಂಭವವಿದೆ, ಎಚ್ಚರ
ಮಕ್ಕಳಿಗೆ ದೃಷ್ಠಿ ಬೊಟ್ಟುಇಡುವುದರ ಅರ್ಥವೇನು ಗೊತ್ತಾ?
ಮಕ್ಕಳಿಗೆ ದೃಷ್ಠಿ ಬೊಟ್ಟುಇಡುವುದರ ಅರ್ಥವೇನು ಗೊತ್ತಾ?
ಹೊಸ ಫೋಲ್ಡ್​ ಫೋನ್ ಪ್ರಿ ಬುಕಿಂಗ್ ಆರಂಭಿಸಿದ ಸ್ಯಾಮ್​ಸಂಗ್
ಹೊಸ ಫೋಲ್ಡ್​ ಫೋನ್ ಪ್ರಿ ಬುಕಿಂಗ್ ಆರಂಭಿಸಿದ ಸ್ಯಾಮ್​ಸಂಗ್
ಕಾಶಪ್ಪನವರ್ ಸಿಎಂ ಆಗಬೇಕೆಂದ ನಂದವಾಡಗಿ ವೀರಶೈವ ಲಿಂಗಾಯತ ಮಠದ ಸ್ವಾಮೀಜಿ
ಕಾಶಪ್ಪನವರ್ ಸಿಎಂ ಆಗಬೇಕೆಂದ ನಂದವಾಡಗಿ ವೀರಶೈವ ಲಿಂಗಾಯತ ಮಠದ ಸ್ವಾಮೀಜಿ
ಹಾವೇರಿ ಉಪ ಚುನಾವಣೆಗಾಗಿ ಈಗಿಂದಲೇ ಕೆಲಸ ಶುರುಮಾಡಿದ್ದೇವೆ:ಸತೀಶ್ ಜಾರಕಿಹೊಳಿ
ಹಾವೇರಿ ಉಪ ಚುನಾವಣೆಗಾಗಿ ಈಗಿಂದಲೇ ಕೆಲಸ ಶುರುಮಾಡಿದ್ದೇವೆ:ಸತೀಶ್ ಜಾರಕಿಹೊಳಿ
ಈ ನಟಿಯರು ಇಷ್ಟು ದಿನ ಯಾಕೆ ಸುಮ್ಮನಿದ್ರು? ರೇಣುಕಾ ಸ್ವಾಮಿ ತಂದೆ ಪ್ರಶ್ನೆ
ಈ ನಟಿಯರು ಇಷ್ಟು ದಿನ ಯಾಕೆ ಸುಮ್ಮನಿದ್ರು? ರೇಣುಕಾ ಸ್ವಾಮಿ ತಂದೆ ಪ್ರಶ್ನೆ
ದರ್ಶನ್ ₹22 ಕೋಟಿ ಸಂಭಾವನೆ ಪಡೆಯೋದು ಕೇಳಿ ಶಾಕ್ ಆಯ್ತು: ಸರಿಗಮ ವಿಜಿ
ದರ್ಶನ್ ₹22 ಕೋಟಿ ಸಂಭಾವನೆ ಪಡೆಯೋದು ಕೇಳಿ ಶಾಕ್ ಆಯ್ತು: ಸರಿಗಮ ವಿಜಿ
ಕುಡುಕ ಆಟೋರಿಕ್ಷಾ ಸೆಲ್ಫೀ ತೆಗೆಸಿಕೊಂಡ ಬಳಿಕ ಈಶ್ವರಪ್ಪ ಕುಡಿತ ಬಿಡು ಅಂದರು
ಕುಡುಕ ಆಟೋರಿಕ್ಷಾ ಸೆಲ್ಫೀ ತೆಗೆಸಿಕೊಂಡ ಬಳಿಕ ಈಶ್ವರಪ್ಪ ಕುಡಿತ ಬಿಡು ಅಂದರು
ಮಗನನ್ನು ನೋಡಲು ಜೈಲಿಗೆ ಬಂದ ರೇವಣ್ಣ ಮಾಧ್ಯಮದವರನ್ನು ಕಂಡು ಸಿಡುಕಿದರು!
ಮಗನನ್ನು ನೋಡಲು ಜೈಲಿಗೆ ಬಂದ ರೇವಣ್ಣ ಮಾಧ್ಯಮದವರನ್ನು ಕಂಡು ಸಿಡುಕಿದರು!