Lucky Man Review: ದೇವರಾಗಿ ಬಂದು ನಗಿಸುವ ಅಪ್ಪು; ಭಾವುಕವಾಗಿ ಕಣ್ಣೀರು ಹಾಕುವ ಅಭಿಮಾನಿ

Puneeth Rajkumar: ‘ಲಕ್ಕಿ ಮ್ಯಾನ್​’ ಚಿತ್ರದಲ್ಲಿ ಹಲವು ಭಾವನೆಗಳ ಕಹಾನಿ ಇದೆ. ಪುನೀತ್​ ರಾಜ್​ಕುಮಾರ್​ ನಟಿಸಿದ ಕೊನೇ ಸಿನಿಮಾ ಇದು. ಆ ಕಾರಣದಿಂದ ಭಾವುಕತೆ ಇಮ್ಮಡಿ ಆಗುತ್ತದೆ.

Lucky Man Review: ದೇವರಾಗಿ ಬಂದು ನಗಿಸುವ ಅಪ್ಪು; ಭಾವುಕವಾಗಿ ಕಣ್ಣೀರು ಹಾಕುವ ಅಭಿಮಾನಿ
‘ಲಕ್ಕಿ ಮ್ಯಾನ್’ ಸಿನಿಮಾ ಪೋಸ್ಟರ್​
Follow us
ಮದನ್​ ಕುಮಾರ್​
| Updated By: Vinay Bhat

Updated on:Sep 09, 2022 | 10:07 AM

ಚಿತ್ರ: ಲಕ್ಕಿ ಮ್ಯಾನ್​

ನಿರ್ದೇಶನ: ಎಸ್​. ನಾಗೇಂದ್ರ ಪ್ರಸಾದ್​

ನಿರ್ಮಾಣ: ಪಿ.ಆರ್​. ಮೀನಾಕ್ಷಿ ಸುಂದರಂ, ಆರ್​. ಸುಂದರ ಕಾಮರಾಜ್​

ಇದನ್ನೂ ಓದಿ
Image
Puneeth Rajkumar: ‘ಲಕ್ಕಿ ಮ್ಯಾನ್’ ರಿಲೀಸ್​; ಪುನೀತ್​ ನಟನೆಯ ಈ ಚಿತ್ರ ನೋಡಲು ಇಲ್ಲಿವೆ 5 ಮುಖ್ಯ ಕಾರಣಗಳು
Image
ಸೆ.9ಕ್ಕೆ ‘ಲಕ್ಕಿ ಮ್ಯಾನ್​’ ವರ್ಸಸ್​ ‘ಬ್ರಹ್ಮಾಸ್ತ್ರ’: ಬುಕ್​ ಮೈ ಶೋನಲ್ಲಿ ಹೇಗಿದೆ ಬಲಾಬಲ?
Image
Lucky Man: ಒಂದು ದಿನ ಮೊದಲೇ ‘ಲಕ್ಕಿ ಮ್ಯಾನ್​’ ನೋಡುವ ಚಾನ್ಸ್; ಪುನೀತ್ ಚಿತ್ರದ ಟಿಕೆಟ್​ ಸೋಲ್ಡ್​ ಔಟ್​
Image
‘ಲಕ್ಕಿ ಮ್ಯಾನ್​​ ಸಿನಿಮಾವನ್ನು ಎಲ್ಲರೂ ತಬ್ಬಿಕೊಳ್ಳಿ,​ ಮತ್ತೆ ಬೇಕು ಅಂದ್ರೂ ಇದು ಸಿಗಲ್ಲ’; ಕಿಚ್ಚ ಸುದೀಪ್​

ಪಾತ್ರವರ್ಗ: ಪುನೀತ್​ ರಾಜ್​ಕುಮಾರ್​, ಡಾರ್ಲಿಂಗ್​ ಕೃಷ್ಣ, ಸಂಗೀತಾ ಶೃಂಗೇರಿ, ರೋಷಿನಿ ಪ್ರಕಾಶ್​, ಸಾಧು ಕೋಕಿಲ, ನಾಗಭೂಷಣ್, ರಂಗಾಯಣ ರಘು​ ಮುಂತಾದವರು.

ಸ್ಟಾರ್​: 4/5

‘ಪವರ್​ ಸ್ಟಾರ್​’ ಪುನೀತ್​ ರಾಜ್​ಕುಮಾರ್​ (Puneeth Rajkumar) ಭೌತಿಕವಾಗಿ ನಮ್ಮೊಂದಿಗಿಲ್ಲ ಎಂಬ ನೋವು ಯಾವಾಗಲೂ ಅಭಿಮಾನಿಗಳನ್ನು ಕಾಡುತ್ತಲೇ ಇರುತ್ತದೆ. ಆದರೆ ಸಿನಿಮಾಗಳ ಮೂಲಕ ಅಪ್ಪು ಶಾಶ್ವತವಾಗಿ ನೆಲೆಸಿರುತ್ತಾರೆ. ಅಪ್ಪು ನಟಿಸಿದ ‘ಲಕ್ಕಿ ಮ್ಯಾನ್​’ ಸಿನಿಮಾ (Lucky Man) ಈಗ ಬಿಡುಗಡೆ ಆಗಿದೆ. ಈ ಚಿತ್ರದಲ್ಲಿ ಅವರು ವಿಶೇಷ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಹೀರೋ ಆಗಿ ಡಾರ್ಲಿಂಗ್​ ಕೃಷ್ಣ (Darling Krishna) ಮಿಂಚಿದ್ದಾರೆ. ಮೊದಲ ನಿರ್ದೇಶನದ ಪ್ರಯತ್ನದಲ್ಲಿ ಎಸ್​. ನಾಗೇಂದ್ರ ಪ್ರಸಾದ್​ ಗಮನ ಸೆಳೆದಿದ್ದಾರೆ. ನಗು-ಅಳು ತುಂಬಿದ ಭಾವುಕ ಪಯಣದಂತೆ ಪ್ರೇಕ್ಷಕರನ್ನು ‘ಲಕ್ಕಿ ಮ್ಯಾನ್​’ ಸಿನಿಮಾ ಆವರಿಸಿಕೊಳ್ಳುತ್ತದೆ. ಒಟ್ಟಾರೆ ಸಿನಿಮಾ ಹೇಗಿದೆ ಎಂಬುದು ತಿಳಿಯಲು ಈ ವಿಮರ್ಶೆ ಓದಿ.

ಪುನೀತ್​ ರಾಜ್​ಕುಮಾ​ರ್​ ಅವರನ್ನು ಅಭಿಮಾನಿಗಳು ದೇವರಂತೆ ಕಾಣುತ್ತಾರೆ. ಅವರು ಮಾಡಿದ ಸಾಮಾಜಿಕ ಕಳಕಳಿಯ ಕಾರ್ಯಗಳೇ ಅದಕ್ಕೆ ಕಾರಣ. ನಿಧನರಾಗುವುದಕ್ಕೂ ಮುನ್ನ ‘ಲಕ್ಕಿ ಮ್ಯಾನ್​’ ಸಿನಿಮಾದಲ್ಲಿ ಅಪ್ಪು ದೇವರ ಪಾತ್ರ ಮಾಡಿದ್ದರು. ಅವರು ಇಹಲೋಕ ತ್ಯಜಿಸಿದ ನಂತರ ಈ ಚಿತ್ರ ಬಿಡುಗಡೆ ಆಗಿದ್ದರಿಂದ ಆ ದೇವರ ಪಾತ್ರ ಅವರಿಗೆ ತುಂಬ ಚೆನ್ನಾಗಿ ಹೊಂದಿಕೆ ಆಗುತ್ತಿರುವುದು ಕಾಕತಾಳೀಯ. ಆ ಕಾರಣದಿಂದಾಗಿ ಪ್ರೇಕ್ಷಕರಿಗೆ ಈ ಚಿತ್ರ ಹೆಚ್ಚು ಆಪ್ತ ಎನಿಸುತ್ತದೆ.

ಬಾಲ್ಯದ ಸ್ನೇಹಿತೆಯನ್ನೇ ಮದುವೆ ಆಗುವ ಕಥಾನಾಯಕನಿಗೆ (ಡಾರ್ಲಿಂಗ್​ ಕೃಷ್ಣ) ದಾಂಪತ್ಯ ಜೀವನ ಕಷ್ಟ ಎನಿಸುತ್ತದೆ. ಕೆಲವೇ ದಿನಗಳಲ್ಲಿ ಡಿವೋರ್ಸ್​ಗಾಗಿ ಆತ ಕೋರ್ಟ್​ ಮೆಟ್ಟಿಲು ಏರುತ್ತಾನೆ. ಇನ್ನೇನು ವಿಚ್ಛೇದನ ಸಿಗಬೇಕು ಎಂಬಷ್ಟರಲ್ಲಿ ಆತನಿಗೆ ದೇವರು (ಪುನೀತ್​) ಸಿಕ್ಕಿಬಿಡುತ್ತಾರೆ. ಮಾಡಿದ ತಪ್ಪನ್ನು ಸರಿಪಡಿಸಿಕೊಂಡು, ಬೇರೆ ಹುಡುಗಿಯನ್ನು ಮದುವೆಯಾಗಲು ದೇವರು ಎರಡನೇ ಅವಕಾಶ ನೀಡುತ್ತಾರೆ. ಟೈಮ್​ ಟ್ರಾವೆಲಿಂಗ್​ ರೀತಿಯ ಈ ಕಥೆಯಲ್ಲಿ ದೇವರು ಕೊಟ್ಟ ಎರಡನೇ ಅವಕಾಶವನ್ನು ಕಥಾನಾಯಕ ಸರಿಯಾಗಿ ಉಪಯೋಗಿಸಿಕೊಳ್ಳುತ್ತಾನಾ? ಎರಡನೇ ಲೈಫ್​ನಲ್ಲಿ ಆತ ಯಾರನ್ನು ಮದುವೆ ಆಗ್ತಾನೆ? ಅಂತಿಮವಾಗಿ ಅವನಿಗೆ ಡಿವೋರ್ಸ್​ ಸಿಗುತ್ತಾ? ಈ ಎಲ್ಲ ಪ್ರಶ್ನೆಗಳಿಗೆ ಸಿನಿಮಾದ ಕ್ಲೈಮ್ಯಾಕ್ಸ್​ನಲ್ಲಿ ಉತ್ತರವಿದೆ.

ಸ್ನೇಹ, ಪ್ರೀತಿ, ಹೊಂದಾಣಿಕೆ, ನಂಬಿಕೆ ಮುಂತಾದ ವಿಚಾರಗಳ ಬಗ್ಗೆ ಈ ಸಿನಿಮಾ ಪಾಠ ಮಾಡುತ್ತದೆ. ಆದರೆ ಆ ಪಾಠಗಳು ಬೋರು ಹೊಡೆಸುವುದಿಲ್ಲ. ನಗುವಿನ ಮೂಲಕವೇ ಎಲ್ಲವನ್ನೂ ನಿರೂಪಿಸುವ ಗುಣ ಈ ಚಿತ್ರದ ಪ್ಲಸ್​ ಪಾಯಿಂಟ್​. ಒಬ್ಬನೇ ವ್ಯಕ್ತಿಯ ಎರಡು ಡಿಫರೆಂಟ್​ ಲವ್​ ಸ್ಟೋರಿಗಳು ಪ್ರೇಕ್ಷಕರಿಗೆ ಮಜಾ ನೀಡುತ್ತವೆ. ಅನಿರೀಕ್ಷಿತ ತಿರುವುಗಳು ಎದುರಾಗುತ್ತವೆ. ಈ ಎಲ್ಲ ಅಂಶಗಳು ಚಿತ್ರದ ಅಂದವನ್ನು ಹೆಚ್ಚಿಸಿವೆ.

ದೇವರಾಗಿ ಕಾಣಿಸಿಕೊಂಡಿರುವ ಪುನೀತ್​ ರಾಜ್​ಕುಮಾರ್​ ಅವರಿಗೆ ಸಾಧುಕೋಕಿಲ ಸಾಥ್​ ನೀಡಿದ್ದಾರೆ. ಇಬ್ಬರ ಕಾಂಬಿನೇಷನ್​ನಲ್ಲಿ ಮೂಡಿಬಂದ ಕಾಮಿಡಿ ದೃಶ್ಯಗಳು ಚೆನ್ನಾಗಿವೆ. ಪುನೀತ್​ ಭರಪೂರ ನಗಿಸುತ್ತಾರೆ ನಿಜ. ಆದರೆ ಅವರನ್ನು ಪರದೆ ಮೇಲೆ ನೋಡಿದ ಪ್ರೇಕ್ಷಕ ಖಂಡಿತವಾಗಿಯೂ ಭಾವುಕನಾಗುತ್ತಾನೆ. ಕಥಾನಾಯಕನಿಗೆ ಸೆಕೆಂಡ್​ ಚಾನ್ಸ್​ ಸಿಕ್ಕ ರೀತಿಯಲ್ಲೇ ರಿಯಲ್​ ಲೈಫ್​ನಲ್ಲಿ ಪುನೀತ್​ ರಾಜ್​ಕುಮಾರ್​ ಅವರಿಗೂ ಇನ್ನೊಂದು ಚಾನ್ಸ್​ ಸಿಗಲೇಬೇಕು ಎಂದು ಅಭಿಮಾನಿಗಳು ಮರುಗುತ್ತಾರೆ. ಅಪ್ಪು ನಟಿಸಿದ ಕೊನೇ ಸಿನಿಮಾ ಇದು. ಆ ಕಾರಣದಿಂದಲೂ ಭಾವುಕತೆ ಇಮ್ಮಡಿ ಆಗುತ್ತದೆ.

ಪುನೀತ್​ ರಾಜ್​ಕುಮಾರ್ ಸಿನಿಮಾ ಎಂದಮೇಲೆ ಫೈಟಿಂಗ್​ ದೃಶ್ಯಗಳು ಇಲ್ಲದಿದ್ದರೆ ಹೇಗೆ? ಈ ಸಿನಿಮಾದಲ್ಲಿಯೂ ಅಪ್ಪು ಫೈಟ್​ ಮಾಡಿದ್ದಾರೆ. ಆದರೆ ಅದು ದೇವರ ರೂಪದಲ್ಲಿ! ಈ ಸಾಹಸ ಸನ್ನಿವೇಶ ತುಂಬ ಡಿಫರೆಂಟ್​ ಆಗಿದೆ. ಅದನ್ನು ತೆರೆಮೇಲೆ ನೋಡಿಯೇ ಎಂಜಾಯ್​ ಮಾಡಬೇಕು.

ಡಾರ್ಲಿಂಗ್​ ಕೃಷ್ಣ ತುಂಬ ಲವಲವಿಕೆಯಿಂದ ನಟಿಸಿದ್ದಾರೆ. ಹುಡುಗಾಟದ ಯುವಕನಾಗಿ, ನಂತರ ನಿಜವಾದ ಪ್ರೀತಿ ಅರಸುವ ಪ್ರೇಮಿಯಾಗಿ ಅವರು ಈ ಪಾತ್ರಕ್ಕೆ ಜೀವ ತುಂಬಿದ್ದಾರೆ. ನಟಿ ಸಂಗೀತಾ ಶೃಂಗೇರಿ ಕೂಡ ಹೆಚ್ಚು ಅಂಕ ಗಿಟ್ಟಿಸುತ್ತಾರೆ. ರೋಷಿನಿ ಪ್ರಕಾಶ್​ ಸಹಜಾಭಿನಯ ತೋರಿದ್ದಾರೆ. ಭರಪೂರ ನಗು ತರಿಸುವಲ್ಲಿ ರಂಗಾಯಣ ರಘು ಯಶಸ್ವಿ ಆಗಿದ್ದಾರೆ. ನಾಗಭೂಷಣ್​ ಕೂಡ ಸಿಕ್ಕಾಪಟ್ಟೆ ಕಾಮಿಡಿ ಕಚಗುಳಿ ಇಡುತ್ತಾರೆ.

ಚಿತ್ರದ ಪ್ರಮೋಷನಲ್​ ಹಾಡಿನಲ್ಲಿ ಪ್ರಭುದೇವ ಮತ್ತು ಪುನೀತ್​ ರಾಜ್​ಕುಮಾರ್ ಅವರು ಜೊತೆಯಾಗಿ ಡ್ಯಾನ್ಸ್​ ಮಾಡಿದ್ದಾರೆ. ಚಿತ್ರದ ಮ್ಯೂಸಿಕ್​ ಹೇಗಿದೆ? ಛಾಯಾಗ್ರಹಣ ಹೇಗಿದೆ, ಅಪ್ಪು ಪಾತ್ರದ ಧ್ವನಿ ಯಾಕೆ ಕಡಿಮೆ ಕೇಳಿಸುತ್ತೆ ಎಂದೆಲ್ಲ ಆಲೋಚಿಸಲು ಅವಕಾಶವೇ ನೀಡದ ರೀತಿಯಲ್ಲಿ ಪ್ರೇಕ್ಷಕರನ್ನು ಈ ಚಿತ್ರದ ಕಥೆ ಆವರಿಸಿಕೊಳ್ಳುತ್ತದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 9:45 am, Fri, 9 September 22

ಅಯ್ಯಪ್ಪ ಮಾಲೆಯ ವಸ್ತ್ರದ ಬಗ್ಗೆ ನಿಮಗೆ ಗೊತ್ತಿರದ ವಿಚಾರ
ಅಯ್ಯಪ್ಪ ಮಾಲೆಯ ವಸ್ತ್ರದ ಬಗ್ಗೆ ನಿಮಗೆ ಗೊತ್ತಿರದ ವಿಚಾರ
ಇಂದಿನ ರಾಶಿಫಲ: ಮೇಷ, ವೃಷಭ, ಮಿಥುನ ಸೇರಿದಂತೆ 12 ರಾಶಿಗಳ ದೈನಂದಿನ ಭವಿಷ್ಯ
ಇಂದಿನ ರಾಶಿಫಲ: ಮೇಷ, ವೃಷಭ, ಮಿಥುನ ಸೇರಿದಂತೆ 12 ರಾಶಿಗಳ ದೈನಂದಿನ ಭವಿಷ್ಯ
ಮ್ಯಾಂಗೋ ಲಸ್ಸಿಗೆ ಜರ್ಮನ್ ಸ್ನೇಹಿತರನ್ನು ಭಾರತಕ್ಕೆ ಆಹ್ವಾನಿಸಿದ ವೈಷ್ಣವ್
ಮ್ಯಾಂಗೋ ಲಸ್ಸಿಗೆ ಜರ್ಮನ್ ಸ್ನೇಹಿತರನ್ನು ಭಾರತಕ್ಕೆ ಆಹ್ವಾನಿಸಿದ ವೈಷ್ಣವ್
ಭಾರತದ ಬೆಳವಣಿಗೆಗೆ ಪ್ರಮುಖ 4 ಪಿಲ್ಲರ್​ಗಳನ್ನು ಬಹಿರಂಗಪಡಿಸಿದ ಎ ವೈಷ್ಣವ್
ಭಾರತದ ಬೆಳವಣಿಗೆಗೆ ಪ್ರಮುಖ 4 ಪಿಲ್ಲರ್​ಗಳನ್ನು ಬಹಿರಂಗಪಡಿಸಿದ ಎ ವೈಷ್ಣವ್
ಜರ್ಮನಿಯಲ್ಲೇ ನ್ಯೂಸ್​9 ಜಾಗತಿಕ ಶೃಂಗಸಭೆ ನಡೆಯುತ್ತಿರುವುದೇಕೆ?
ಜರ್ಮನಿಯಲ್ಲೇ ನ್ಯೂಸ್​9 ಜಾಗತಿಕ ಶೃಂಗಸಭೆ ನಡೆಯುತ್ತಿರುವುದೇಕೆ?
ಜರ್ಮನಿಯಲ್ಲಿ ನ್ಯೂಸ್​9 ಗ್ಲೋಬಲ್ ಶೃಂಗಸಭೆಗೆ ಚಾಲನೆ
ಜರ್ಮನಿಯಲ್ಲಿ ನ್ಯೂಸ್​9 ಗ್ಲೋಬಲ್ ಶೃಂಗಸಭೆಗೆ ಚಾಲನೆ
ಶಿಶಿರ್ ಬೇಕೇ ಬೇಕು: ಹಠ ಹಿಡಿದು ಕುಳಿತ ಭವ್ಯಾ, ಶೋಭಾ ಶೆಟ್ಟಿ
ಶಿಶಿರ್ ಬೇಕೇ ಬೇಕು: ಹಠ ಹಿಡಿದು ಕುಳಿತ ಭವ್ಯಾ, ಶೋಭಾ ಶೆಟ್ಟಿ
ಟಿವಿ9 ಕನ್ನಡದ ಸಹೋದರ ಸಂಸ್ಥೆ ನ್ಯೂಸ್ 9ನ ಗ್ಲೋಬಲ್ ಸಮ್ಮಿಟ್ ನೇರಪ್ರಸಾರ
ಟಿವಿ9 ಕನ್ನಡದ ಸಹೋದರ ಸಂಸ್ಥೆ ನ್ಯೂಸ್ 9ನ ಗ್ಲೋಬಲ್ ಸಮ್ಮಿಟ್ ನೇರಪ್ರಸಾರ
ಕೇರಳದಲ್ಲಿ ವೇಗವಾಗಿ ಬಂದ ಕಾರಿಗೆ ಡಿಕ್ಕಿ ಹೊಡೆದು ಬಸ್​ನ ಚಕ್ರವೇ ಛಿದ್ರ!
ಕೇರಳದಲ್ಲಿ ವೇಗವಾಗಿ ಬಂದ ಕಾರಿಗೆ ಡಿಕ್ಕಿ ಹೊಡೆದು ಬಸ್​ನ ಚಕ್ರವೇ ಛಿದ್ರ!
ಬಿಪಿಎಲ್ ಕಾರ್ಡುಗಳ ಶುದ್ಧೀಕರಣ ಅಗಲೇಬೇಕಿದೆ ಎಂದ ಪ್ರಲ್ಹಾದ ಜೋಶಿ
ಬಿಪಿಎಲ್ ಕಾರ್ಡುಗಳ ಶುದ್ಧೀಕರಣ ಅಗಲೇಬೇಕಿದೆ ಎಂದ ಪ್ರಲ್ಹಾದ ಜೋಶಿ