AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Puneeth Rajkumar: ‘ಲಕ್ಕಿ ಮ್ಯಾನ್’ ರಿಲೀಸ್​; ಪುನೀತ್​ ನಟನೆಯ ಈ ಚಿತ್ರ ನೋಡಲು ಇಲ್ಲಿವೆ 5 ಮುಖ್ಯ ಕಾರಣಗಳು

Lucky Man Kannada Movie: ‘ಲಕ್ಕಿ ಮ್ಯಾನ್​’ ಸಿನಿಮಾದಲ್ಲಿ ಪುನೀತ್​ ರಾಜ್​ಕುಮಾರ್​ ಅವರಿಗೆ ವಿಶೇಷ ಪಾತ್ರವಿದೆ. ಅವರನ್ನು ದೊಡ್ಡ ಪರದೆಯಲ್ಲಿ ನೋಡುವ ಅಭಿಮಾನಿಗಳೇ ನಿಜಕ್ಕೂ ಲಕ್ಕಿ.

Puneeth Rajkumar: ‘ಲಕ್ಕಿ ಮ್ಯಾನ್’ ರಿಲೀಸ್​; ಪುನೀತ್​ ನಟನೆಯ ಈ ಚಿತ್ರ ನೋಡಲು ಇಲ್ಲಿವೆ 5 ಮುಖ್ಯ ಕಾರಣಗಳು
ಪುನೀತ್​ ರಾಜ್​ಕುಮಾರ್​
TV9 Web
| Edited By: |

Updated on: Sep 09, 2022 | 7:00 AM

Share

ಈ ಶುಕ್ರವಾರಕ್ಕಾಗಿ (ಸೆ.9) ಸಿನಿಪ್ರಿಯರು ಬಹಳ ದಿನಗಳಿಂದ ಕಾದಿದ್ದರು. ಪುನೀತ್​ ರಾಜ್​ಕುಮಾರ್​ (Puneeth Rajkumar) ಅವರನ್ನು ಮತ್ತೊಮ್ಮೆ ದೊಡ್ಡ ಪರದೆ ಮೇಲೆ ನೋಡಿ ಕಣ್ತುಂಬಿಕೊಳ್ಳುವ ಅವಕಾಶ ಒದಗಿಬಂದಿದೆ. ಕಳೆದ ವರ್ಷ ಹೃದಯಾಘಾತದಿಂದ ನಿಧನರಾಗುವುದಕ್ಕೂ ಮುನ್ನ ‘ಲಕ್ಕಿ ಮ್ಯಾನ್​’ (Lucky Man) ಸಿನಿಮಾದಲ್ಲಿ ಅಪ್ಪು ನಟಿಸಿದ್ದರು. ಆ ಚಿತ್ರ ಇಂದು ಬಿಡುಗಡೆ ಆಗುತ್ತಿದೆ. ರಾಜ್ಯಾದ್ಯಂತ ನೂರಾರು ಥಿಯೇಟರ್​ಗಳಲ್ಲಿ ಸಿನಿಮಾ ಪ್ರದರ್ಶನ ಕಾಣಲಿದೆ. ಸೆ.8ರ ಸಂಜೆಯೇ ಆಯ್ದ ಕೆಲವು ಕಡೆಗಳಲ್ಲಿ ಪ್ರೀಮಿಯರ್​ ಶೋ ಏರ್ಪಡಿಸಲಾಗಿತ್ತು. ಚಿತ್ರ ನೋಡಿದ ಎಲ್ಲರಿಂದಲೂ ಮೆಚ್ಚುಗೆ ಮಾತುಗಳು ಕೇಳಿಬರುತ್ತಿವೆ. ಲಕ್ಕಿ ಮ್ಯಾನ್ ಸಿನಿಮಾವನ್ನು ನೋಡಲು ಇಲ್ಲಿವೆ 5 ಪ್ರಮುಖ ಕಾರಣಗಳು.

1: ಬೆಳ್ಳಿ ಪರದೆಯಲ್ಲಿ ಅಪ್ಪು ದರ್ಶನ

‘ಲಕ್ಕಿ ಮ್ಯಾನ್​’ ಸಿನಿಮಾದಲ್ಲಿ ಪುನೀತ್​ ರಾಜ್​ಕುಮಾರ್​ ಅವರು ದೇವರ ಪಾತ್ರ ಮಾಡಿದ್ದಾರೆ. ಎಷ್ಟೋ ಜನರ ಪಾಲಿಗೆ ಅಪ್ಪು ದೇವರಾಗಿದ್ದಾರೆ. ಅಂಥ ಪಾತ್ರದಲ್ಲಿ ಅವರನ್ನು ನೋಡುವುದೇ ಒಂದು ಹಬ್ಬ. ಅವರನ್ನು ಬೆಳ್ಳಿ ಪರದೆಯಲ್ಲಿ ನೋಡಲು ಸಿಗುತ್ತಿರುವ ಕಡೆಯ ಕೆಲವೇ ಅವಕಾಶಗಳಲ್ಲಿ ಇದು ಕೂಡ ಒಂದು.

ಇದನ್ನೂ ಓದಿ
Image
‘ಲಕ್ಕಿ ಮ್ಯಾನ್​​ ಸಿನಿಮಾವನ್ನು ಎಲ್ಲರೂ ತಬ್ಬಿಕೊಳ್ಳಿ,​ ಮತ್ತೆ ಬೇಕು ಅಂದ್ರೂ ಇದು ಸಿಗಲ್ಲ’; ಕಿಚ್ಚ ಸುದೀಪ್​
Image
‘ದೇವರ ಪಾತ್ರದಲ್ಲಿ ದೇವ್ರನ್ನೇ ನೋಡಲು ಕಾಯ್ತಿದೀನಿ’: ಪುನೀತ್​ ಬಗ್ಗೆ ಯುವ ರಾಜ್​ಕುಮಾರ್​ ಭಾವುಕ ನುಡಿ
Image
ಪುನೀತ್ ನಟನೆಯ ‘ಲಕ್ಕಿ ಮ್ಯಾನ್​’ ಚಿತ್ರದ ಆಡಿಯೋ ರಿಲೀಸ್ ಲೈವ್ ನೋಡಿ
Image
Puneeth Rajkumar: ‘ಲಕ್ಕಿ ಮ್ಯಾನ್​’ ಚಿತ್ರದಲ್ಲಿನ ಪುನೀತ್​ ಪೋಟೋಗಳು; ‘ನಮ್ಮ ಬಾಸ್​ ಸೂಪರ್​’ ಎಂದ ಫ್ಯಾನ್ಸ್​

2: ಪ್ರಭುದೇವ-ಪುನೀತ್​ ಕಾಂಬಿನೇಷನ್​

ಖ್ಯಾತ ನೃತ್ಯ ನಿರ್ದೇಶಕ, ನಟ ಪ್ರಭುದೇವ ಅವರ ಜೊತೆ ಕೆಲಸ ಮಾಡಬೇಕು ಎಂಬುದು ಸ್ವತಃ ಪುನೀತ್​ ಅವರ ಆಸೆ ಆಗಿತ್ತು. ಅದು ‘ಲಕ್ಕಿ ಮ್ಯಾನ್​’ ಚಿತ್ರದಲ್ಲಿ ಈಡೇರಿದೆ. ಇವರಿಬ್ಬರೂ ಈ ಚಿತ್ರದ ಒಂದು ಸ್ಪೆಷಲ್​ ಸಾಂಗ್​ನಲ್ಲಿ ಡ್ಯಾನ್ಸ್​ ಮಾಡಿದ್ದಾರೆ. ಇಂಥ ಬೆಸ್ಟ್​ ಡ್ಯಾನ್ಸರ್​ಗಳನ್ನು ಒಂದೇ ಫ್ರೇಮ್​ನಲ್ಲಿ ನೋಡುವ ಅಭಿಮಾನಿಗಳೇ ಲಕ್ಕಿ.

3: ನಾಗೇಂದ್ರ ಪ್ರಸಾದ್​ ಮೊದಲ ನಿರ್ದೇಶನ:

ಡ್ಯಾನ್ಸ್​ ಮಾಸ್ಟರ್​ ಆಗಿ ಎಸ್​. ನಾಗೇಂದ್ರ ಪ್ರಸಾದ್​ ಗುರುತಿಸಿಕೊಂಡಿದ್ದಾರೆ. ನಟನಾಗಿಯೂ ಅವರು ಜನರ ಚಪ್ಪಾಳೆ ಗಿಟ್ಟಿಸಿದ್ದಾರೆ. ಈಗ ‘ಲಕ್ಕಿ ಮ್ಯಾನ್​’ ಚಿತ್ರದ ಮೂಲಕ ಅವರು ಮೊದಲ ಬಾರಿಗೆ ನಿರ್ದೇಶಕನಾಗಿ ಬಡ್ತಿ ಪಡೆದಿದ್ದಾರೆ. ಚೊಚ್ಚಲ ಪ್ರಯತ್ನದಲ್ಲಿ ಅವರು ಯಾವ ರೀತಿ ಕಥೆ ಹೇಳಿದ್ದಾರೆ ಎಂಬುದನ್ನು ತಿಳಿಯಲು ಈ ಸಿನಿಮಾ ನೋಡಲೇಬೇಕು.

4: ಡಾರ್ಲಿಂಗ್ ಕೃಷ್ಣ ಅಭಿಮಾನಿಗಳಿಗೆ ಮನರಂಜನೆ

‘ಲವ್​ ಮಾಕ್ಟೇಲ್​’ ಯಶಸ್ಸಿನ ಬಳಿಕ ನಟ ಡಾರ್ಲಿಂಗ್ ಕೃಷ್ಣ ಅವರ ಅಭಿಮಾನಿ ಬಳಗ ಹೆಚ್ಚಿತು. ‘ಲಕ್ಕಿ ಮ್ಯಾನ್​’ ಸಿನಿಮಾದಲ್ಲಿ ಅವರದ್ದೇ ಪ್ರಮುಖ ಪಾತ್ರ. ಈ ಚಿತ್ರದಲ್ಲಿ ಅವರ ಅಭಿಮಾನಿಗಳಿಗೆ ಭರ್ಜರಿ ಮನರಂಜನೆ ಸಿಗುವ ನಿರೀಕ್ಷೆ ಇದೆ. ಡಾರ್ಲಿಂಗ್​ ಕೃಷ್ಣ ಜೊತೆ ಸಂಗೀತಾ ಶೃಂಗೇರಿ ಮತ್ತು ರೋಷಿನಿ ಪ್ರಕಾಶ್​ ನಟಿಸಿದ್ದಾರೆ.

5: ಗಮನ ಸೆಳೆದ ಟ್ರೇಲರ್​

ಯೂಟ್ಯೂಬ್​ನಲ್ಲಿ ‘ಲಕ್ಕಿ ಮ್ಯಾನ್​’ ಟ್ರೇಲರ್​ 7 ದಿನದಲ್ಲಿ 7 ಲಕ್ಷಕ್ಕೂ ಅಧಿಕ ವೀವ್ಸ್​ ಪಡೆದುಕೊಂಡಿದೆ. ಸಿನಿಮಾದಲ್ಲೊಂದು ಮಜವಾದ ಕಥೆ ಇದೆ ಎಂಬುದಕ್ಕೆ ಟ್ರೇಲರ್​ನಲ್ಲಿ ಸಾಕ್ಷಿ ಸಿಕ್ಕಿದೆ. ಸಾಧುಕೋಕಿಲ, ರಂಗಾಯಣ ರಘು, ನಾಗಭೂಷಣ್​ ಮುಂತಾದ ಕಲಾವಿದರ ಪಾತ್ರಗಳ ಝಲಕ್​ ಕೂಡ ಟ್ರೇಲರ್​ನಲ್ಲಿ ಕಾಣಿಸಿದೆ. ಆ ಮೂಲಕ ಚಿತ್ರದ ಬಗ್ಗೆ ನಿರೀಕ್ಷೆ ಹೆಚ್ಚಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಲಕ್ಕುಂಡಿಯಲ್ಲಿ ಸಿಕ್ಕ ನಿಧಿಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು?
ಲಕ್ಕುಂಡಿಯಲ್ಲಿ ಸಿಕ್ಕ ನಿಧಿಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು?
ಹಿಮಾಚಲದ ಕಟ್ಟಡದಲ್ಲಿ ಬೆಂಕಿ ಅವಘಡ; 8 ವರ್ಷದ ಮಗು ಸಾವು, ಹಲವರಿಗೆ ಗಾಯ
ಹಿಮಾಚಲದ ಕಟ್ಟಡದಲ್ಲಿ ಬೆಂಕಿ ಅವಘಡ; 8 ವರ್ಷದ ಮಗು ಸಾವು, ಹಲವರಿಗೆ ಗಾಯ
ಉಚ್ಛಾಟಿತ ಶಾಸಕ ಯತ್ನಾಳ್​ ಸಂಪರ್ಕದಲ್ಲಿದ್ಯಾ BJP ಹೈಕಮಾಂಡ್​?
ಉಚ್ಛಾಟಿತ ಶಾಸಕ ಯತ್ನಾಳ್​ ಸಂಪರ್ಕದಲ್ಲಿದ್ಯಾ BJP ಹೈಕಮಾಂಡ್​?
ತಮ್ಮ ಬಟ್ಟೆ ಬಗ್ಗೆ ಅಶ್ಲೀಲ ಕಾಮೆಂಟ್​ ಮಾಡಿದವರಿಗೆ ತಿರುಗೇಟು ಕೊಟ್ಟ ಶಾಸಕಿ
ತಮ್ಮ ಬಟ್ಟೆ ಬಗ್ಗೆ ಅಶ್ಲೀಲ ಕಾಮೆಂಟ್​ ಮಾಡಿದವರಿಗೆ ತಿರುಗೇಟು ಕೊಟ್ಟ ಶಾಸಕಿ
'ಐದನೇ ಒಂದು ಭಾಗದಷ್ಟು ನಿಧಿ ಕುಟುಂಬಕ್ಕೆ ಕೊಡ್ತೀವಿ'
'ಐದನೇ ಒಂದು ಭಾಗದಷ್ಟು ನಿಧಿ ಕುಟುಂಬಕ್ಕೆ ಕೊಡ್ತೀವಿ'
ಅರ್ಧ ಕೆಜಿ ಚಿನ್ನ ಸರ್ಕಾರಕ್ಕೆ ಕೊಟ್ಟಾಕೆಗೆ ಇರಲು ಮನೆಯೂ ಇಲ್ಲ: ಸಹೋದರ ಅಳಲು
ಅರ್ಧ ಕೆಜಿ ಚಿನ್ನ ಸರ್ಕಾರಕ್ಕೆ ಕೊಟ್ಟಾಕೆಗೆ ಇರಲು ಮನೆಯೂ ಇಲ್ಲ: ಸಹೋದರ ಅಳಲು
ತಮಿಳು ಮಾತನಾಡಿದ ರಾಹುಲ್: ಪಂದ್ಯದ ನಡುವೆ 'ರಾಷ್ಟ್ರಭಾಷೆ'ಯ ಚರ್ಚೆ!
ತಮಿಳು ಮಾತನಾಡಿದ ರಾಹುಲ್: ಪಂದ್ಯದ ನಡುವೆ 'ರಾಷ್ಟ್ರಭಾಷೆ'ಯ ಚರ್ಚೆ!
ಸಿದ್ದರಾಮಯ್ಯಗೆ ಶಕ್ತಿ ಇದೆ, ಡಿಕೆಶಿಗೆ ಏನಿದೆ? ಸಿಎಂ ಪರ ಯತ್ನಾಳ್ ಬ್ಯಾಟ್
ಸಿದ್ದರಾಮಯ್ಯಗೆ ಶಕ್ತಿ ಇದೆ, ಡಿಕೆಶಿಗೆ ಏನಿದೆ? ಸಿಎಂ ಪರ ಯತ್ನಾಳ್ ಬ್ಯಾಟ್
ರಾಜ್ಯ ಕಾಂಗ್ರೆಸ್​ನಲ್ಲಿ ಸಂಚಲನ: ದಿಢೀರ್​ ಖರ್ಗೆ ಭೇಟಿಯಾಗಿದ್ದೇಕೆ ಡಿಕೆಶಿ?
ರಾಜ್ಯ ಕಾಂಗ್ರೆಸ್​ನಲ್ಲಿ ಸಂಚಲನ: ದಿಢೀರ್​ ಖರ್ಗೆ ಭೇಟಿಯಾಗಿದ್ದೇಕೆ ಡಿಕೆಶಿ?