‘ಡಾರ್ಲಿಂಗ್’ ಕೃಷ್ಣ ಜತೆ ಬಂದು ‘ಲಕ್ಕಿ ಮ್ಯಾನ್’ ಚಿತ್ರ ನೋಡಿದ ಮಿಲನಾ ನಾಗರಾಜ್; ಇಲ್ಲಿದೆ ವಿಡಿಯೋ
‘ಲಕ್ಕಿ ಮ್ಯಾನ್’ ಕಲಾವಿದರ ಜೊತೆ ಕುಳಿತು ಮಿಲನಾ ನಾಗರಾಜ್ ಅವರು ಸಿನಿಮಾ ವೀಕ್ಷಿಸಿದ್ದಾರೆ. ಈ ಚಿತ್ರಕ್ಕೆ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಡಾರ್ಲಿಂಗ್ ಕೃಷ್ಣ ಅಭಿನಯದ ‘ಲಕ್ಕಿ ಮ್ಯಾನ್’ (Lucky Man) ಸಿನಿಮಾ ಇಂದು (ಸೆ.9) ಬಿಡುಗಡೆ ಆಗಿದೆ. ಪತಿಯ ಸಿನಿಮಾ ನೋಡಲು ಮಿಲನಾ ನಾಗರಾಜ್ (Milana Nagaraj) ಅವರು ಚಿತ್ರಮಂದಿರಕ್ಕೆ ಬಂದಿದ್ದಾರೆ. ಅಭಿಮಾನಿಗಳ ಜೊತೆ ಕುಳಿತು ಅವರು ಚಿತ್ರ ವೀಕ್ಷಿಸಿದ್ದಾರೆ. ‘ಲಕ್ಕಿ ಮ್ಯಾನ್’ ಕಲಾವಿದರಾದ ನಾಗಭೂಷಣ್, ಸಂಗೀತಾ ಶೃಂಗೇರಿ, ಡಾರ್ಲಿಂಗ್ ಕೃಷ್ಣ (Darling Krishna) ಮುಂತಾದವರು ಮಿಲನಾಗೆ ಸಾಥ್ ನೀಡಿದ್ದಾರೆ. ಈ ಚಿತ್ರದಲ್ಲಿ ‘ಪವರ್ ಸ್ಟಾರ್’ ಪುನೀತ್ ರಾಜ್ಕುಮಾರ್ ಒಂದು ವಿಶೇಷ ಪಾತ್ರ ಮಾಡಿದ್ದಾರೆ. ಅದರಿಂದಾಗಿ ಅಭಿಮಾನಿಗಳಿಗೆ ಈ ಸಿನಿಮಾ ಹೆಚ್ಚು ಇಷ್ಟವಾಗುತ್ತಿದೆ. ಈ ಚಿತ್ರಕ್ಕೆ ಎಸ್. ನಾಗೇಂದ್ರ ಪ್ರಸಾದ್ ನಿರ್ದೇಶನ ಮಾಡಿದ್ದಾರೆ.
Published on: Sep 09, 2022 01:32 PM
Latest Videos