ಬಿಜೆಪಿ ನಾಯಕರು ಚೆಕ್ ಮೂಲಕ ಮತ್ತು ಅಧಿಕೃತವಾಗಿ ಭ್ರಷ್ಟಾಚಾರ ನಡೆಸಿದವರು: ಬಿಕೆ ಹರಿಪ್ರಸಾದ್

ಬಿಜೆಪಿ ನಾಯಕರು ಚೆಕ್ ಮೂಲಕ ಮತ್ತು ಅಧಿಕೃತವಾಗಿ ಭ್ರಷ್ಟಾಚಾರ ನಡೆಸಿದವರು: ಬಿಕೆ ಹರಿಪ್ರಸಾದ್

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Sep 08, 2022 | 7:38 PM

ಅಷ್ಟೆಲ್ಲ ಮಾಡಿಯೂ ಆ ಪಕ್ಷದ ನಾಯಕರು ತಮ್ಮನ್ನು ತಾವು ಸತ್ಯ ಹರಿಶ್ಚಂದ್ರನಂತೆ ಬಿಂಬಿಸಿಕೊಳ್ಳುವುದು ಹಾಸ್ಯಾಸ್ಪದವಾಗಿದೆ ಎಂದು ಅವರು ಹೇಳಿದರು.

Bengaluru:  ವಿಧಾನ ಪರಿಷತ್ ನಲ್ಲಿ ವಿಪಕ್ಷ ನಾಯಕನಾಗಿರುವ ಕಾಂಗ್ರೆಸ್ ಪಕ್ಷದ ಬಿಕೆ ಹರಿಪ್ರಸಾದ್ (BK Hari Prasad) ಅವರು ಗುರುವಾರ ಬೆಂಗಳೂರಲ್ಲಿ ಮಾಜಿ ಮುಖ್ಯಮಂತ್ರಿ ಮತ್ತು ಬಿಜೆಪಿ ಹಿರಿಯ ಮುಖಂಡ ಬಿಎಸ್ ಯಡಿಯೂರಪ್ಪನವರ (BS Yediyurappa) ಮೇಲೆ ಭ್ರಷ್ಟಾಚಾರಕ್ಕೆ (bribe) ಸಂಬಂಧಿಸಿದಂತೆ ಪರೋಕ್ಷ ದಾಳಿ ನಡೆಸಿದರು. ಭಾರತೀಯ ಜನತಾ ಪಕ್ಷಕ್ಕೆ ಭ್ರಷ್ಟಾಚಾರ ಹೊಸದೇನೂ ಅಲ್ಲ, ಪಕ್ಷದ ನಾಯಕರು ಚೆಕ್ ಮೂಲಕ ಭ್ರಷ್ಟಾಚಾರ ನಡೆಸಿದವರು, ಜೈಲಿಗೂ ಹೋಗಿ ಬಂದವರು, ಅಧಿಕೃತವಾಗಿ ಭ್ರಷ್ಟಾಚಾರ ನಡೆಸಿದವರು, ಭ್ರಷ್ಟಾಚಾರವನ್ನು ಶೇಕಡ 40 ರಿಂದ ಶೇಕಡ 50ಕ್ಕೆ ತೆಗೆದುಕೊಂಡು ಹೋದವರು ಅಂತ ಹರಿಪ್ರಸಾದ ವಾಗ್ದಾಳಿ ನಡೆಸಿದರು. ಅಷ್ಟೆಲ್ಲ ಮಾಡಿಯೂ ಆ ಪಕ್ಷದ ನಾಯಕರು ತಮ್ಮನ್ನು ತಾವು ಸತ್ಯ ಹರಿಶ್ಚಂದ್ರನಂತೆ ಬಿಂಬಿಸಿಕೊಳ್ಳುವುದು ಹಾಸ್ಯಾಸ್ಪದವಾಗಿದೆ ಎಂದು ಅವರು ಹೇಳಿದರು.