ಉಡುಪಿಯ ಹಿರಿಯಡ್ಕದಲ್ಲಿ ದಿನವಿಡೀ ಕಾರ್ಯಾಚರಣೆಯ ನಂತರ ಸೆರೆಸಿಕ್ಕ ಚಿರತೆ
ಅರಣ್ಯ ಇಲಾಖೆಯವರು ಇದನ್ನು ತುರ್ತು ಕಾರ್ಯಾಚರಣೆ ಅಂತ ಹೇಳಿದರಾದರೂ ಚಿರತೆ ಸೆರೆ ಹಿಡಿಯಲು ಸಾಕಷ್ಟು ಸಮಯ ಬೇಕಾಯಿತು.
ಉಡುಪಿ (Udupi) ಜಿಲ್ಲೆ ಕಾಪು ತಾಲ್ಲೂಕಿನ ಹಿರಿಯಡ್ಕದಲ್ಲಿರುವ ಮನೆಯೊಂದರಲ್ಲಿ ಅವಿತುಕೊಂಡಿದ್ದ ಚಿರತೆಯನ್ನು (leopard) ದಿನವಿಡೀ ನಡೆದ ಕಾರ್ಯಾಚರಣೆ ನಂತರ ಸೆರೆಹಿಡಿಯಲಾಗಿದೆ. ಅರಣ್ಯ ಇಲಾಖೆ ಸಿಬ್ಬಂದಿಯು ಅರವಳಿಕೆ ತಜ್ಞರೊಬ್ಬರ ನೆರವಿನಿಂದ ವ್ಯಾಘ್ರನನ್ನು ಪ್ರೊಜೆಕ್ಟೈಲ್ (ಟ್ರಾಂಕ್ವಿಲೈಜರ್ ಗನ್) (Tranquillizer Gun) ಮೂಲಕ ಪ್ರಜ್ಞೆ ತಪ್ಪಿಸಿದ ಬಳಿಕ ಅದನ್ನು ಬೋನ್ ನೊಳಗೆ ಶಿಫ್ಟ್ ಮಾಡಿದರು. ಅರಣ್ಯ ಇಲಾಖೆಯವರು ಇದನ್ನು ತುರ್ತು ಕಾರ್ಯಾಚರಣೆ ಅಂತ ಹೇಳಿದರಾದರೂ ಚಿರತೆ ಸೆರೆ ಹಿಡಿಯಲು ಸಾಕಷ್ಟು ಸಮಯ ಬೇಕಾಯಿತು.
Latest Videos