ಶಾಸಕ ಅರವಿಂದ ಲಿಂಬಾವಳಿಯಿಂದ ಅವಮಾನಕ್ಕೆ ಗುರಿಯಾದ ಮಹಿಳೆ ಸಿದ್ದರಾಮಯ್ಯ ಬಳಿ ನೋವು ತೋಡಿಕೊಂಡರು

ಧಾರಾಕಾರ ಮಳೆಯಿಂದ ಹಾನಿಗೊಳಗಾಗಿರುವ ಪ್ರದೇಶಗಳಿಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸುವಾಗ ಅವರನ್ನು ಭೇಟಿಯಾದ ಸದರಿ ಮಹಿಳೆ ಶಾಸಕರ ದುರ್ವರ್ತನೆಯನ್ನು ವಿವರಿಸಿದರು.

TV9kannada Web Team

| Edited By: Arun Belly

Sep 08, 2022 | 4:43 PM

Bengaluru: ಇತ್ತೀಚಿಗೆ ಮಹದೇವಪುರ ಶಾಸಕ ಅರವಿಂದ ಲಿಂಬಾವಳಿ (Arvind Limbavali) ತಮ್ಮ ಕ್ಷೇತ್ರದ ಮಹಿಳೆಯೊಬ್ಬರು ಸರ್ಕಾರೀ ಜಾಗವನ್ನು ಒತ್ತುವರಿ (Encroachment) ಮಾಡಿಕೊಂಡಿರುವರೆಂದು ಆರೋಪಿಸಿ ಸಾರ್ವಜನಿಕವಾಗಿ ಅವರ ವಿರುದ್ಧ ರೇಗಾಡಿದ್ದು ಕನ್ನಡಿಗರಿಗೆಲ್ಲ ಗೊತ್ತಿದೆ. ಧಾರಾಕಾರ ಮಳೆಯಿಂದ ಹಾನಿಗೊಳಗಾಗಿರುವ ಪ್ರದೇಶಗಳಿಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು (Siddaramaiah) ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸುವಾಗ ಅವರನ್ನು ಭೇಟಿಯಾದ ಸದರಿ ಮಹಿಳೆ ಶಾಸಕರ ದುರ್ವರ್ತನೆಯನ್ನು ವಿವರಿಸಿದರು. ಶಾಸಕರು ಹಂಗೆಲ್ಲ ಮಾತಾಡಿದರಾ ಅಂತ ಸಿದ್ದರಾಮಯ್ಯ ಪ್ರಶ್ನಿಸಿದರು

Follow us on

Click on your DTH Provider to Add TV9 Kannada