ಪ್ರಾಣಿಗಳ ಭಾಷೆಯಲ್ಲಿ ಮಾತಾಡಿಕೊಂಡ ನಂದಿನಿ, ಜಶ್ವಂತ್​; ಬಿಗ್​ ಬಾಸ್​ನಲ್ಲಿ ಪ್ರೇಮಿಗಳ ಸಲ್ಲಾಪ

Bigg Boss Kannada OTT: ಆರನೇ ವಾರ ‘ಬಿಗ್​ ಬಾಸ್​ ಕನ್ನಡ ಒಟಿಟಿ’ ಫಿನಾಲೆ ನಡೆಯಲಿದೆ. ಫಿನಾಲೆ ವಾರಕ್ಕೆ ನಂದಿನಿ ಮತ್ತು ಜಶ್ವಂತ್​ ಎಂಟ್ರಿ ಪಡೆಯುತ್ತಾರೋ ಇಲ್ಲವೋ ಎಂಬ ಕೌತುಕ ಮನೆ ಮಾಡಿದೆ.

TV9kannada Web Team

| Edited By: Madan Kumar

Sep 08, 2022 | 4:05 PM

ವೂಟ್​ ಸೆಲೆಕ್ಟ್​ ಮೂಲಕ ಪ್ರಸಾರ ಆಗುತ್ತಿರುವ ‘ಬಿಗ್​ ಬಾಸ್​ ಕನ್ನಡ ಒಟಿಟಿ’ (Bigg Boss Kannada OTT) ಶೋ ಹಲವು ಕಾರಣಗಳಿಂದ ಗಮನ ಸೆಳೆಯುತ್ತಿದೆ. ಈ ಕಾರ್ಯಕ್ರಮದಲ್ಲಿ ಈಗ 9 ಸ್ಪರ್ಧಿಗಳು ಉಳಿದುಕೊಂಡಿದ್ದಾರೆ. ನಂದಿನಿ (Nandini) ಮತ್ತು ಜಶ್ವಂತ್​ ಅವರು ರಿಯಲ್​ ಲೈಫ್​ನಲ್ಲಿ ಪ್ರೇಮಿಗಳು. ಬಿಗ್​ ಬಾಸ್​ ಮನೆಯಲ್ಲಿ ಈ ಪ್ರೇಮಿಗಳ ಸಲ್ಲಾಪ ಮುಂದುವರಿದಿದೆ. ಯೋಗ ಮಾಡುವ ವೇಳೆ ಇವರಿಬ್ಬರು ಪ್ರಾಣಿಗಳ ಭಾಷೆಯಲ್ಲಿ ಮಾತನಾಡಿಕೊಂಡಿದ್ದಾರೆ. ಆರನೇ ವಾರ ಫಿನಾಲೆ ನಡೆಯಲಿದೆ. ಫಿನಾಲೆ ವಾರಕ್ಕೆ ನಂದಿನಿ ಮತ್ತಿ ಜಶ್ವಂತ್​ (Jashwanth Bopanna) ಎಂಟ್ರಿ ಪಡೆಯುತ್ತಾರೋ ಇಲ್ಲವೋ ಎಂಬ ಕೌತುಕ ಮನೆ ಮಾಡಿದೆ.

 

Follow us on

Click on your DTH Provider to Add TV9 Kannada