Bigg Boss Kannada OTT: ಫಿನಾಲೆ ವಾರಕ್ಕೆ ನೇರ ಟಿಕೆಟ್ ಪಡೆದ ರಾಕೇಶ್, ಸಾನ್ಯಾ, ರೂಪೇಶ್
Roopesh Shetty | BBK: ಐದನೇ ವಾರದಲ್ಲಿ ಯಾರು ಎಲಿಮಿನೇಟ್ ಆಗುತ್ತಾರೆ ಎಂಬ ಕೌತುಕ ನಿರ್ಮಾಣ ಆಗಿದೆ. ರಾಕೇಶ್ ಅಡಿಗ, ಸಾನ್ಯಾ ಐಯ್ಯರ್, ರೂಪೇಶ್ ಶೆಟ್ಟಿ ಸೇಫ್ ಆಗಿದ್ದಾರೆ.
‘ಬಿಗ್ ಬಾಸ್ ಕನ್ನಡ ಒಟಿಟಿ’ (Bigg Boss Kannada OTT) ಶೋ ಮುಗಿಯಲು ಇನ್ನು ಕೆಲವೇ ದಿನಗಳ ಮಾತ್ರ ಬಾಕಿ ಉಳಿದಿವೆ. ಈ ಅಂತಿಮ ಘಟ್ಟದಲ್ಲಿ ಆಟದ ಮಜಾ ಹೆಚ್ಚುತ್ತಿದೆ. ಸ್ಪರ್ಧಿಗಳ ನಡುವಿನ ಪೈಪೋಟಿ ಕೂಡ ಇನ್ನೊಂದು ಹಂತಕ್ಕೆ ಏರಿದೆ. ಸದ್ಯ ಬಿಗ್ ಬಾಸ್ ಮನೆಯಲ್ಲಿ 9 ಸ್ಪರ್ಧಿಗಳು ಇದ್ದಾರೆ. ಐದನೇ ವಾರಕ್ಕೆ ಶೋ ಕಾಲಿಟ್ಟಿದೆ. ಆರನೇ ವಾರದಲ್ಲಿ ಫಿನಾಲೆ ನಡೆಯಲಿದೆ. ಅಲ್ಲಿಯವರೆಗೂ ಯಾರು ತಮ್ಮ ಸ್ಥಾನ ಉಳಿಸಿಕೊಳ್ಳುತ್ತಾರೆ ಎಂಬುದು ಕೌತುಕದ ಪ್ರಶ್ನೆ. ವಿಶೇಷ ಏನೆಂದರೆ, ರಾಕೇಶ್ ಅಡಿಗ (Rakesh Adiga), ರೂಪೇಶ್ ಶೆಟ್ಟಿ ಮತ್ತು ಸಾನ್ಯಾ ಐಯ್ಯರ್ (Sanya Iyer) ಅವರು ನೇರವಾಗಿ ಫಿನಾಲೆ ವಾರಕ್ಕೆ ಟಿಕೆಟ್ ಪಡೆದಿದ್ದಾರೆ. ಇನ್ನುಳಿದ ಸ್ಪರ್ಧಿಗಳಿಗೆ ಸವಾಲು ಎದುರಾಗಿದೆ. ಐದನೇ ವಾರದಲ್ಲಿ ಎಲ್ಲರೂ ಹೆಚ್ಚು ಶ್ರಮ ಹಾಕಿ ಆಡಬೇಕಿದೆ.
ಆರ್ಯವರ್ಧನ್ ಗುರೂಜಿ, ಜಯಶ್ರೀ ಆರಾಧ್ಯ, ಸೋನು ಶ್ರೀನಿವಾಸ್ ಗೌಡ, ರಾಕೇಶ್ ಅಡಿಗ, ರೂಪೇಶ್ ಶೆಟ್ಟಿ, ಸಾನ್ಯಾ ಅಯ್ಯರ್, ಸೋಮಣ್ಣ ಮಾಚಿಮಾಡ, ನಂದಿನಿ, ಜಶ್ವಂತ್ ಅವರ ನಡುವೆ ಪೈಪೋಟಿ ಮುಂದುವರಿದಿದೆ. ಆದರೆ ಪ್ರೇಕ್ಷಕರು ಆಯ್ಕೆ ಮಾಡಿರುವಂತೆ ರಾಕೇಶ್ ಅಡಿಗ ಅವರು ನೇರವಾಗಿ ಫಿನಾಲೆ ವಾರಕ್ಕೆ ಎಂಟ್ರಿ ಪಡೆದಿದ್ದಾರೆ. ಕ್ಯಾಪ್ಟನ್ ಆದ ಕಾರಣಕ್ಕೆ ರೂಪೇಶ್ ಕೂಡ ಫಿನಾಲೆ ವಾರಕ್ಕೆ ಅರ್ಹತೆ ಪಡೆದಿದ್ದಾರೆ. ಇನ್ನೊಬ್ಬರನ್ನು ಆಯ್ಕೆ ಮಾಡುವ ಅವಕಾಶ ಕ್ಯಾಪ್ಟನ್ಗೆ ನೀಡಲಾಯಿತು. ಆಗ ರೂಪೇಶ್ ಅವರು ಸಾನ್ಯಾ ಐಯ್ಯರ್ ಹೆಸರನ್ನು ಆಯ್ಕೆ ಮಾಡಿದರು.
ಇನ್ನುಳಿದ ಸ್ಪರ್ಧಿಗಳಾದ ನಂದಿನಿ, ಜಶ್ವಂತ್, ಸೋನು ಶ್ರೀನಿವಾಸ್ ಗೌಡ, ಆರ್ಯವರ್ಧನ್ ಗುರೂಜಿ, ಸೋಮಣ್ಣ ಮಾಚಿಮಾಡ, ಜಯಶ್ರೀ ಆರಾಧ್ಯ ಅವರು ನಾಮಿನೇಟ್ ಆಗಿದ್ದಾರೆ. ಐದನೇ ವಾರದಲ್ಲಿ ಯಾರು ಎಲಿಮಿನೇಟ್ ಆಗುತ್ತಾರೆ ಎಂಬ ಕೌತುಕ ನಿರ್ಮಾಣ ಆಗಿದೆ.
ನಾಲ್ಕನೇ ವಾರದಲ್ಲಿ ಡಬಲ್ ಎಲಿಮಿನೇಷನ್ ನಡೆಯಿತು. ಅಕ್ಷತಾ ಕುಕ್ಕಿ ಮತ್ತು ಚೈತ್ರಾ ಹಳ್ಳಿಕೇರಿ ಅವರು ಎಲಿಮಿನೇಟ್ ಆದರು. ‘ಬಿಗ್ ಬಾಸ್ ಕನ್ನಡ ಒಟಿಟಿ’ ಶೋ ಮುಗಿದ ಬಳಿಕ ಟಿವಿಯಲ್ಲಿ ‘ಬಿಗ್ ಬಾಸ್ ಕನ್ನಡ 9ನೇ ಸೀಸನ್’ ಆರಂಭ ಆಗಲಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.